ಶೀರ್ಷಿಕೆ : News and Photo Date: 01--11--2017
ಲಿಂಕ್ : News and Photo Date: 01--11--2017
News and Photo Date: 01--11--2017
ಯುವ ಮನಸುಗಳಲ್ಲಿ ಕನ್ನಡ ಕಟ್ಟುವ ಸಂಕಲ್ಪ ಅಗತ್ಯ
-ಸಚಿವ ಡಾ. ಶರಣಪ್ರಕಾಶ ಪಾಟೀಲ
ಕಲಬುರಗಿ,ನ.01.(ಕ.ವಾ.)-ಮಾತೃ ವಾತ್ಸಲ್ಯ ಹಾಗೂ ತಾಯಿ ನುಡಿಗಿಂತ ಮಿಗಿಲಾದುದು ಜಗತ್ತಿನಲ್ಲಿ ಬೇರೇನೂ ಇಲ್ಲ. ಕನ್ನಡಿಗರದು ವಿಶಾಲವಾದ ಹೃದಯ. ಬೇರೆ ಭಾಷೆಯನ್ನು ದ್ವೇಷಿಸುವುದಿಲ್ಲ. ಇಂದಿನ ಯುವಜನಾಂಗ ಜೀವನ ಸಾಗಿಸೋಕೆ ಅನ್ಯಭಾಷೆ ಅವಶ್ಯಕವಾಗಿದೆ. ಆದರೆ ಕನ್ನಡ ಭಾಷೆಯನ್ನು ಅಪ್ಪಿಕೊಂಡು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಕೊಡುಗೆ ನೀಡುವುದರ ಜೊತೆಗೆ ಯುವ ಮನಸುಗಳಲ್ಲಿ ಕನ್ನಡ ಭಾಷೆ ಕಟ್ಟುವ ಸಂಕಲ್ಪ ಪ್ರತಿಯೊಬ್ಬರೂ ಮಾಡಬೇಕಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ರಾಜ್ಯೋತ್ಸವ ಸಂದೇಶ ಸಾರಿದರು.
ಅವರು ಬುಧವಾರ ಕಲಬುರಗಿಯ ನೆಹರು ಗಂಜಿನ ನಗರೇಶ್ವರ ಬಾಲ ವಿಕಾಸ ಮಂದಿರದಲ್ಲಿ ಹಮ್ಮಿಕೊಳ್ಳಲಾದ 62ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಾಯಿ ಭುವನೇಶ್ವರಿ ಮಾತೆಯ ಭಾವಚಿತ್ರಕ್ಕೆ ಪೂಜೆ ಹಾಗೂ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಕನ್ನಡ ಭಾಷೆಯು ನಡೆ, ನುಡಿ, ಜನರ ಜತೆ ಬೆರೆತು ಸಹಬಾಳ್ವೆಯ ಜೀವನ ನಡೆಸುವುದನ್ನು ಕಲಿಸಿಕೊಡುತ್ತದೆ. ಇಂದು ಮಕ್ಕಳಿಗೆ ಕಾಯಕ ಹಾಗೂ ದಾಸೋಹದ ಮಹತ್ವವನ್ನು ತಿಳಿಸಿಕೊಡಬೇಕಾಗಿದೆ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಡೆಪ್ಯೂಟಿ ಚೆನ್ನಬಸಪ್ಪ ಕರ್ನಾಟಕ ಏಕೀಕರಣದ ಕನಸು ಕಂಡು 1856ರಲ್ಲಿ ಚಾಲನೆ ನೀಡಿದ ಬೀಜರೂಪದ ಕರ್ನಾಟಕ ಏಕೀಕರಣ ಚಳವಳಿ 100 ವರ್ಷಗಳವರೆಗೆ ನಿರಂತರ ಹೋರಾಟದ ಫಲಸ್ವರೂಪ ಹಾಗೂ ಅನೇಕ ಧೀಮಂತ ನಾಯಕರಿಂದ 1956ರ ನವೆಂಬರ್ 01 ರಂದು ಮೈಸೂರು ರಾಜ್ಯ ಉದಯವಾಯಿತು. ನವೆಂಬರ್ 01, 1973ರಲ್ಲಿ ಕರ್ನಾಟಕ ರಾಜ್ಯವೆಂದು ನಾಮಕರಣ ಮಾಡಿದ ಕೀರ್ತಿ ದೇವರಾಜ್ ಅರಸರಿಗೆ ಸಲ್ಲುತ್ತದೆ. ರಾಷ್ಟ್ರಕೂಟರ ಆಡಳಿತದಲ್ಲಿ ಅಮೋಘ ವರ್ಷ ನೃಪತುಂಗನ ಕವಿರಾಜಮಾರ್ಗ ಗ್ರಂಥದಲ್ಲಿ ಕರ್ನಾಟಕವು ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿತು ಎಂದು ಉಲ್ಲೇಖಿಸಲಾಗಿದ್ದು, ಹೆಮ್ಮೆಯ ಸಂಗತಿ. 12ನೇ ಶತಮಾನದ ವಚನ ಸಾಹಿತ್ಯ ಹಾಗೂ 14ನೇ ಶತಮಾನದ ದಾಸ ಸಾಹಿತ್ಯ ಯಾರೂ ಮರೆಯುವಂತಿಲ್ಲ. ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸುವುದು ರಾಜ್ಯ ಸರ್ಕಾರದ ದೃಢ ಸಂಕಲ್ಪವಾಗಿದೆ. ನಾಲ್ಕು ವರ್ಷ ಮುಕ್ಕಾಲು ತಿಂಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸರ್ಕಾರ ಪ್ರಾಮಾಣಿಕ ಅಭಿವೃದ್ಧಿ ಕಾರ್ಯ ಕೈಗೊಂಡಿದೆ ಎಂದರು.
ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತ ಮಾಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ, ಕಲಬುರಗಿ ನಗರಾಭಿವೃದ್ಧಿ ಅಧ್ಯಕ್ಷ ಮಹ್ಮದ ಅಸಗರ್ ಚುಲ್‍ಬುಲ್, ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿ ಮತ್ತಿತರರು ಉಪಸ್ಥಿತರಿದ್ದರು.
ನಂತರ ಸಚಿವರು ನಗರೇಶ್ವರ ಬಾಲವಿಕಾಸ ಮಂದಿರದಿಂದ ಡಾ.ಎಸ್.ಎಂ. ಪಂಡಿತ ರಂಗಮಂದಿರದವರೆಗೆ ಹಮ್ಮಿಕೊಂಡಿದ್ದ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಗೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಪಾಲ್ಗೊಂಡ ವಿವಿಧ ಇಲಾಖೆಗಳ ಕೃಷಿ, ತೋಟಗಾರಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸ್ತಬ್ಧಚಿತ್ರಗಳು ಹಾಗೂ ಡೊಳ್ಳು ಕುಣಿತ, ಹಲಗೆ ಮೇಳ, ಶಹನಾಯಿ ಕಲಾತಂಡಗಳು ದಾರಿಯುದ್ದಕ್ಕೂ ಪ್ರದರ್ಶಿಸಿದ ಅದ್ಭುತ ಕಲಾ ಪ್ರದರ್ಶನ ಮೆರವಣಿಗೆಗೆ ವಿಶೇಷ ಕಳೆ ತಂದುಕೊಟ್ಟವು. ರಂಗು ರಂಗಿನ ಸಮವಸ್ತ್ರ ಧರಿಸಿದ ಶಾಲಾ-ಕಾಲೇಜು ಮಕ್ಕಳು, ಪೊಲೀಸ್ ವಾದ್ಯ ವೃಂದ ಹಾಗೂ ಎನ್.ಸಿ.ಸಿ. ವಿದ್ಯಾರ್ಥಿಗಳು, ಸಚಿವರು ಸೇರಿದಂತೆ ಅನೇಕ ಗಣ್ಯರು, ಅಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ನೂರಾರು ಜನರು ವಿವಿಧ ಅಂಗಡಿ ಮುಂಗಟ್ಟುಗಳ ಮುಂದೆ ನಿಂತು ಈ ಭವ್ಯ ಮೆರವಣಿಗೆಯನ್ನು ಆಸಕ್ತಿಯಿಂದ ವೀಕ್ಷಿಸಿದರು.
ಅನುಯಾಯಿ ಹುದ್ದೆಗಳ ಲಿಖಿತ ಪರೀಕ್ಷಾ ಫಲಿತಾಂಶ ಪ್ರಕಟ
ಕಲಬುರಗಿ,ನ.01(ಕ.ವಾ.)-ಕಲಬುರಗಿ ಪೊಲೀಸ್ ತರಬೇತಿ ಮಹಾವಿದ್ಯಾಲಯಲ್ಲಿ ಖಾಲಿಯಿರುವ 15 ಅನುಯಾಯಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2017ರ ಆಗಸ್ಟ್ 6ರಂದು ಜರುಗಿದ ಲಿಖಿತ ಪರೀಕ್ಷೆಯ ಫಲಿತಾಂಶವನ್ನು ತಿತಿತಿ.ಞsಠಿ.gov.iಟಿ ವೆಬ್‍ಸೈಟ್‍ನಲ್ಲಿ ಹಾಗೂ ಕಲಬುರಗಿಯ ನಾಗನಹಳ್ಳಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಲಿಖಿತ ಪರೀಕ್ಷೆ ಬರೆದಿರುವ ಪರೀಕ್ಷಾರ್ಥಿಗಳು ಇದನ್ನು ಗಮನಿಸಬೇಕೆಂದು ಕಲಬುರಗಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಎಸ್.ಪಿ. ಮತ್ತು ಪ್ರಾಂಶುಪಾಲರು ತಿಳಿಸಿದ್ದಾರೆ.
ಯುವಕರು ಸ್ವ-ಉದ್ಯೋಗ ಪ್ರಾರಂಭಿಸಿ ಇತರರಿಗೆ ಉದ್ಯೋಗ ನೀಡಲು ಮನವಿ
ಕಲಬುರಗಿ,ನ.01(ಕ.ವಾ.)-ಇಂಜನಿಯರಿಂಗ್ ಹಾಗೂ ವೃತ್ತಿಪರ ಕೋರ್ಸುಗಳನ್ನು ವ್ಯಾಸಂಗ ಮಾಡಿದ ಯುವಕರು ಬೇರೆಯವರ ಹತ್ತಿರ ಕೆಲಸ ಹುಡುಕಾಡದೇ ತಾವೇ ಸ್ವಂತ ಉದ್ಯೋಗ ಪ್ರಾರಂಭಿಸಿ ಇತರರಿಗೆ ಉದ್ಯೋಗ ನೀಡುವಂತಾಗಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ತಿಳಿಸಿದರು.
ಅವರು ಬುಧವಾರ ಕಲಬುರಗಿಯ ಹೈದ್ರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಕಲಬುರಗಿ, ಬೀದರ ಹಾಗೂ ಯಾದಗಿರಿ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಬೆಂಗಳೂರು, ಹೈದ್ರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಗುಲಬರ್ಗಾ ದಾಲ್ ಮಿಲ್ಲರ್ಸ್ ಅಸೋಸಿಯೇಶನ್, ಸಣ್ಣ ಕೈಗಾರಿಕೆಗಳ ಮಾಲೀಕರ ಸಂಘ ಹಾಗೂ ಕಲಬುರಗಿ ಲೇಡೀಸ್ ಅಸೋಸಿಯೇಶನ್ ಮ್ಯಾನುಫ್ಯಾಕ್ಚರರ್ಸ್ ಪಾರ್ಕ್ (ಕೆ-ಲ್ಯಾಂಪ್) ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆ-2017ರ ಕಲಬುರಗಿ-ಯಾದಗಿರಿ ಮತ್ತು ಬೀದರ ರೋಡ ಶೋ ಉದ್ಘಾಟಿಸಿ ಮಾತನಾಡಿದರು.
ನಿರುದ್ಯೋಗ ಅತೀ ದೊಡ್ಡ ಸಮಸ್ಯೆಯಾಗಿದೆ. ನಿರುದ್ಯೋಗಿ ಯುವಕರು ಸಮಯಕ್ಕೆ ತಕ್ಕಂತೆ ತಮ್ಮ ಮನೋಭಾವ ಬದಲಾಯಿಸಿಕೊಂಡು ಸ್ವಂತ ಉದ್ಯೋಗ ಪ್ರಾರಂಭಿಸುವ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು. ಹಣದ ಅಪಮೌಲ್ಯೀಕರಣ ಹಾಗೂ ಜಿ.ಎಸ್.ಟಿ.ಯಿಂದಾಗಿ ಆರ್ಥಿಕ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಮಾರುಕಟ್ಟೆ ಕುಸಿದಿದೆ. ಇದರಿಂದ ಉದ್ಯಮಿಗಳು ಚೇತರಿಸಿಕೊಳ್ಳಬೇಕಾಗಿದೆ ಎಂದರು.
ಕೈಗಾರಿಕೋದ್ಯಮ ಹಾಗೂ ಮಾರುಕಟ್ಟೆ ವ್ಯವಸ್ಥಿತ ರೀತಿಯಲ್ಲಿ ಅಭಿವೃದ್ದಿಯಾಗಬೇಕಾಗಿದೆ. ಉದ್ಯಮಿಗಳು ಅವಶ್ಯಕತೆಗೆ ಅನುಗುಣವಾಗಿ ಉತ್ಪಾದನೆಯಲ್ಲಿ ತೊಡಗಬೇಕು. ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆ ಉತ್ತೇಜಿಸಲು ಅಧಿಕಾರಿಗಳು ಮುತುವರ್ಜಿವಹಿಸಿ ಕೈಗಾರಿಕೆ ಸ್ಥಾಪನೆಗೆ ಆಗಮಿಸುವ ಉದ್ಯಮಿಗಳ ಯೋಜನೆಗಳನ್ನು ಶೀಘ್ರವಾಗಿ ಮಂಜೂರು ಮಾಡಬೇಕು. ಈ ಭಾಗದಲ್ಲಿರುವ ದಾಲ್ ಉದ್ಯಮಗಳ ಪುನರುಜ್ಜೀವನಕ್ಕೆ ಸಹಕಾರ ನೀಡುವುದಾಗಿ ಸಚಿವರು ತಿಳಿಸಿದರು.
ಬೆಂಗಳೂರಿನಲ್ಲಿ ನವೆಂಬರ್ 23 ಹಾಗೂ 24ರಂದು ನಡೆಯುವ ಸಮಾವೇಶದ ಪೂರ್ವಭಾವಿಯಾಗಿ ಕಲಬುರಗಿಯಲ್ಲಿ ಬೀದರ ಮತ್ತು ಯಾದಗಿರಿಯ ಕೈಗಾರಿಕೋದ್ಯಮಿಗಳಿಗೆ ರೋಡ್‍ಶೋ ಆಯೋಜಿಸಿ ಮಾಹಿತಿ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾರ್ವಜನಿಕ ಕೈಗಾರಿಕೋದ್ಯಮಗಳು ಹಾಗೂ ಪ್ರತಿಷ್ಠಿತ ತಯಾರಿಕಾ ಘಟಕಗಳು ತಮ್ಮ ಉತ್ಪನ್ನಗಳ ಉತ್ಪಾದನೆಗೆ ಬೇಕಾದ ಬಿಡಿ ಭಾಗಗಳನ್ನು ಪ್ರದರ್ಶಿಸಲಿವೆ. ಇದಕ್ಕಾಗಿ ಒಂದು ಲಕ್ಷ ಚ.ಅ.ವಿಸ್ತೀರ್ಣದ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಸುಮಾರು 500 ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಒಂದೇ ಸೂರಿನಡಿ ಸರಬರಾಜುದಾರರ ಮತ್ತು ಖರೀದಿದಾರರ ಕೊಂಡುಕೊಳ್ಳುವ ಸಮಾವೇಶ ನಡೆಯಲಿದೆ. ಕರ್ನಾಟಕದಲ್ಲಿ ಬಂಡವಾಳ ಹೂಡಲು ದೇಶದ ಪ್ರಮುಖ ರಾಜ್ಯಗಳಲ್ಲಿ ರೋಡ ಶೋ ಆಯೋಜಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ 17 ಕಡೆಗಳಲ್ಲಿ ರೋಡ ಶೋ ಆಯೋಜಿಸಿ ಉದ್ದಿಮೆದಾರರಿಗೆ ಹಾಗೂ ಬಂಡವಾಳ ಹೂಡಿಕೆದಾರರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ ತಿಳಿಸಿದರು.
ಕಾರ್ಯಕ್ರಮದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಮಹ್ಮದ್ ಇಲಿಯಾಸ್ ಬಾಗವಾನ್, ಹೈದ್ರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಡಾ. ಸೋಮಶೇಖರ ಟೇಂಗಳಿ, ಯಾದಗಿರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಹನುಮಾನ ದಾಸ್ ಮುಂದಡ, ಗುಲಬರ್ಗಾ ದಾಲ್ ಮಿಲ್ಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಚಿಂದಬರರಾವ ಪಾಟೀಲ, ಜಿ.ಐ.ಇ.ಎಂ.ಎ. ಗೌರವ ಕಾರ್ಯದರ್ಶಿ ಸುರೇಶ ಜಿ. ನಂದ್ಯಾಳ, ಕಲಬುರಗಿ ಲೇಡೀಜ್ ಅಸೋಸಿಯೇಶನ್ ಮ್ಯಾನುಫ್ಯಾಕ್ಚರರ್ಸ್ ಪಾರ್ಕ್ (ಕೆ-ಲ್ಯಾಂಪ್) ಅಧ್ಯಕ್ಷೆ ಜ್ಯೋತಿ ಕಾಡಾದಿ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಪರಿಷತ್ ಸದಸ್ಯರು ಹಾಗೂ ಮುಫಸ್ಸಿಲ್ ಪ್ಯಾನಲ್ ಅಧ್ಯಕ್ಷ ಭೀಮಾಶಂಕರ ಬಿ. ಪಾಟೀಲ, ವಿವಿಧ ಜಿಲ್ಲೆಗಳ ಜಿಲ್ಲಾ ಕೈಗಾರಿಕಾ ಕೇಂದ್ರಗಳ ಜಂಟಿ ನಿರ್ದೇಶಕರುಗಳಾದ ದೊಡ್ಡ ಬಸವರಾಜ, ಮಾಣಿಕ ವ್ಹಿ.ರಘೋಜಿ, ಸುರೇಖಾ ಮುನೊಳ್ಳಿ, ಕಾಸಿಯಾ ಪ್ರತಿನಿಧಿ ಪಿ.ಎನ್.ಜಯಕುಮಾರ ಮತ್ತಿತರರು ಪಾಲ್ಗೊಂಡಿದ್ದರು.
ವಿವಿಧ ವೃತ್ತಿಗಳಲ್ಲಿ ತರಬೇತಿಗಾಗಿ ಅರ್ಜಿ ಆಹ್ವಾನ
ಕಲಬುರಗಿ,01.ನ..(ಕ.ವಾ.)-ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ 2016-18 ಹಾಗೂ 2017-18 ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಸಮುದಾಯಗಳು ಹಾಗೂ ಅಲೆಮಾರಿ/ಅರೆ ಅರೆಮಾರಿ ಸಮುದಾಯಗಳ ತರಬೇತಿ ಕಾರ್ಯಕ್ರಮಗಳಡಿ ಕೆಳಕಂಡ ವೃತ್ತಿಗಳಲ್ಲಿ ತರಬೇತಿ ಪಡೆಯಲು ಕುಂಬಾರ, ಮಡಿವಾಳ, ಉಪ್ಪಾರ, ಸವಿತಾ ಮತ್ತು ಅಲೆಮಾರಿ/ ಅರೆ ಅಲೆಮಾರಿ ಸಮುದಾಯಕ್ಕೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ತರಬೇತಿ ವಿವರ ಇಂತಿದೆ. ಮೊಬೈಲ್ ಸರ್ವಿಸಿಂಗ್, ಕೃತಕ ಆಭರಣ ತಯಾರಿಕೆ, ಸಿದ್ಧ ಉಡುಪು ತಯಾರಿಕೆ, ದ್ವಿಚಕ್ರ ವಾಹನಗಳ ದುರಸ್ತಿ, ಮೋಟಾರ ರಿವೈಂಡಿಂಗ್ ಮತ್ತು ಪಂಪ್‍ಸೆಟು ದುರಸ್ತಿ, ಊದುಬತ್ತಿ ತಯಾರಿಕೆ, ಬ್ಯೂಟಿ ಪಾರ್ಲರ್ (ಮಹಿಳೆಯರಿಗೆ), ಕಂಪ್ಯೂಟರ್ ಬೇಸಿಕ, ಕಂಪ್ಯೂಟರ್ ಟ್ಯಾಲಿ ಹಾಗೂ ಕೈ ಕಸೂತಿ ಮತ್ತು ಪೇಂಟಿಂಗ್. ಅಭ್ಯರ್ಥಿಗಳ ವಯೋಮಿತಿ 18 ರಿಂದ 55 ವರ್ಷದೊಳಗಿರಬೇಕು. ಅರ್ಜಿದಾರರು ಈ ಹಿಂದೆ ನಿಗಮದಿಂದ ಯಾವುದೇ ಯೋಜನೆಗಳಲ್ಲಿ ಸೌಲಭ್ಯಗಳನ್ನು ಪಡೆದಿರಬಾರದು.
ನಿಗದಿತ ಅರ್ಜಿ ನಮೂನೆಗಳನ್ನು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ, ಕೋಣೆ ಸಂಖ್ಯೆ 22, ಮೂರನೇ ಮಹಡಿ, ವಿಕಾಸ ಭವನ, ಮಿನಿ ವಿಧಾನ ಸೌಧ ಕಲಬುರಗಿ ಕಾರ್ಯಾಲಯದಲ್ಲಿ ಚಿತವಾಗಿ ಪಡೆದು ಭರ್ತಿ ಮಾಡಿ ಅರ್ಜಿಯೊಂದಿಗೆ ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಪಡಿತರ ಕಾರ್ಡ ಅಥವಾ ಚುನಾವಣಾ ಗುರುತಿನ ಚೀಟಿ, ಆಧಾರ ಕಾರ್ಡ್ ದಾಖಲಾತಿಗಳ ಜಿರಾಕ್ಸ್ ಪ್ರತಿಯನ್ನು ಲಗತ್ತಿಸಿ ಸದರಿ ಕಚೇರಿಯಲ್ಲಿ ನವೆಂಬರ್ 10ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-278635ನ್ನು ಸಂಪರ್ಕಿಸಲು ಕೋರಲಾಗಿದೆ.

ಹೀಗಾಗಿ ಲೇಖನಗಳು News and Photo Date: 01--11--2017
ಎಲ್ಲಾ ಲೇಖನಗಳು ಆಗಿದೆ News and Photo Date: 01--11--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photo Date: 01--11--2017 ಲಿಂಕ್ ವಿಳಾಸ https://dekalungi.blogspot.com/2017/11/news-and-photo-date-01-11-2017.html
0 Response to "News and Photo Date: 01--11--2017"
ಕಾಮೆಂಟ್ ಪೋಸ್ಟ್ ಮಾಡಿ