ಶೀರ್ಷಿಕೆ : ಕಲಾಧ್ಯಯನ ಫೆಲೋಶಿಫ್ : ಕಲಾವಿದರಿಂದ ಅರ್ಜಿ ಆಹ್ವಾನ
ಲಿಂಕ್ : ಕಲಾಧ್ಯಯನ ಫೆಲೋಶಿಫ್ : ಕಲಾವಿದರಿಂದ ಅರ್ಜಿ ಆಹ್ವಾನ
ಕಲಾಧ್ಯಯನ ಫೆಲೋಶಿಫ್ : ಕಲಾವಿದರಿಂದ ಅರ್ಜಿ ಆಹ್ವಾನ
ಕೊಪ್ಪಳ ನ. 18 (ಕರ್ನಾಟಕ ವಾರ್ತೆ): ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಪ್ರಸಕ್ತ ಸಾಲಿನ ವಿಶೇಷ ಸಾಧನೆ ಮಾಡಿದ ಪರಿಣಿತರಿಗೆ ಸಂಶೋಧನೆ/ ಕಲಾ ಅಧ್ಯಯನ ಮಾಡುವ ಸಲುವಾಗಿ ಗಿರಿಜನ ಅಭಿವೃದ್ಧಿ ಯೋಜನೆಯಡಿ “ಕಲಾಧ್ಯಯನ ಫೆಲೋಶಿಫ್” ನೀಡಲು ಪರಿಶಿಷ್ಟ ಪಂಗಡದ ಆಸಕ್ತ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಲಾಧ್ಯಯನದ ಅವಧಿ ಒಂದು ವರ್ಷ, ಆಸಕ್ತರು ಕಲಾಸಂಶೋಧನೆಗಾಗಿ/ ಯಾವುದೇ ಲಲಿತಕಲೆಯ (ಚಿತ್ರಕಲೆ) ವಿಷಯವನ್ನು ಆರಿಸಿಕೊಳ್ಳಬಹುದು. ಈ ಬಗ್ಗೆ ಸುಮಾರು 4 ರಿಂದ 5 ಪುಟಗಳ ಸಾರಲೇಖವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಗಿರಿಜನ ಅಭಿವೃದ್ಧಿ ಯೋಜನೆಯಡಿ 10 ಕಲಾವಿದರಿಗೆ ನೀಡಲಾಗುವ ಫೆಲೋಶಿಫ್‍ಗೆ ಪರಿಶಿಷ್ಟ ಪಂಗಡದ ಒಟ್ಟು 10 ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದವರಿಗೆ ಒಂದು ಲಕ್ಷ ರೂಪಾಯಿಗಳನ್ನು ಕಲಾ ಸಂಶೋಧನಾ ಫೆಲೋಶಿಪ್ ಮೊತ್ತವನ್ನು ಮೂರು ಕಂತುಗಳಲ್ಲಿ ನೀಡಲಾಗುವುದು.
ಅರ್ಜಿ ಸಲ್ಲಿಸಲು ಡಿಸೆಂಬರ್. 08 ಕೊನೆಯ ದಿನಾಂಕವಾಗಿದ್ದು, ಸ್ವ-ವಿಳಾಸದ ಲಕೋಟೆ ಕಳುಹಿಸಿ, ಅಂಚೆಯ ಮೂಲಕವೂ ಅರ್ಜಿಗಳನ್ನು ತರಿಸಿಕೊಳ್ಳಬಹುದಾಗಿದೆ. ಅಥವಾ ವೆಬ್‍ಸೈಟ್ http://ift.tt/2AQS9vC ನಲ್ಲಿ ಪಡೆಯಬಹುದು. ಹೆಚ್ಚಿನ ವಿವರ ಹಾಗೂ ಅರ್ಜಿಗಾಗಿ ಅಕಾಡೆಮಿಯ ಕಾರ್ಯಾಲಯ, ಕನ್ನಡ ಭವನ, 2ನೇ ಮಹಡಿ, ಜೆ.ಸಿ ರಸ್ತೆ ಬೆಂಗಳೂರು-560002, ದೂರವಾಣಿ ಸಂಖ್ಯೆ 080-22480297 ಕ್ಕೆ ಸಂಪರ್ಕಿಸಬಹುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಇಂದ್ರಮ್ಮ ಹೆಚ್.ವಿ., ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಕಲಾಧ್ಯಯನ ಫೆಲೋಶಿಫ್ : ಕಲಾವಿದರಿಂದ ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಕಲಾಧ್ಯಯನ ಫೆಲೋಶಿಫ್ : ಕಲಾವಿದರಿಂದ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕಲಾಧ್ಯಯನ ಫೆಲೋಶಿಫ್ : ಕಲಾವಿದರಿಂದ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/11/blog-post_86.html
0 Response to "ಕಲಾಧ್ಯಯನ ಫೆಲೋಶಿಫ್ : ಕಲಾವಿದರಿಂದ ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ