ಸದಭಿರುಚಿಯ ಚಿತ್ರಗಳಿಂದ ಸಮಾಜಕ್ಕೆ ಉತ್ತಮ ಸಂದೇಶ – ವೆಂಕಟರಾಜಾ

ಸದಭಿರುಚಿಯ ಚಿತ್ರಗಳಿಂದ ಸಮಾಜಕ್ಕೆ ಉತ್ತಮ ಸಂದೇಶ – ವೆಂಕಟರಾಜಾ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಸದಭಿರುಚಿಯ ಚಿತ್ರಗಳಿಂದ ಸಮಾಜಕ್ಕೆ ಉತ್ತಮ ಸಂದೇಶ – ವೆಂಕಟರಾಜಾ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಸದಭಿರುಚಿಯ ಚಿತ್ರಗಳಿಂದ ಸಮಾಜಕ್ಕೆ ಉತ್ತಮ ಸಂದೇಶ – ವೆಂಕಟರಾಜಾ
ಲಿಂಕ್ : ಸದಭಿರುಚಿಯ ಚಿತ್ರಗಳಿಂದ ಸಮಾಜಕ್ಕೆ ಉತ್ತಮ ಸಂದೇಶ – ವೆಂಕಟರಾಜಾ

ಓದಿ


ಸದಭಿರುಚಿಯ ಚಿತ್ರಗಳಿಂದ ಸಮಾಜಕ್ಕೆ ಉತ್ತಮ ಸಂದೇಶ – ವೆಂಕಟರಾಜಾ

ಕೊಪ್ಪಳ ನ. 17 (ಕರ್ನಾಟಕ ವಾರ್ತೆ) : ಸದಭಿರುಚಿಯ ಚಲನಚಿತ್ರಗಳು, ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡುವುದರಿಂದ, ಚಲನಚಿತ್ರಗಳು ಜನರ ಮನಪರಿವರ್ತನೆಗೆ ಸೂಕ್ತ ಮಾಧ್ಯಮವಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಹೇಳಿದರು.
 
     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತದ ಸಹಯೋಗದಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರಗಳ ಉಚಿತ ಪ್ರದರ್ಶನ ನೀಡುವ ಚಿತ್ರೋತ್ಸವ ಸಪ್ತಾಹ ಕಾರ್ಯಕ್ರಮವನ್ನು ನ. 17 ರಿಂದ 23 ರವರೆಗೆ ಏಳು ದಿನಗಳ ಕಾಲ ಶಾರದ ಮತ್ತು ಲಕ್ಷ್ಮಿ ಚಿತ್ರಮಂದಿರಗಳಲ್ಲಿ ಹಮ್ಮಿಕೊಂಡಿದ್ದು, ಲಕ್ಷ್ಮೀ ಚಿತ್ರಮಂದಿರದಲ್ಲಿ ಶುಕ್ರವಾರದಂದು ಚಿತ್ರೋತ್ಸವ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.
 
     ಚಲನಚಿತ್ರಗಳು ಜನರ ಮನಸ್ಸಿನ ಮೇಲೆ ಈಗಲೂ ಉತ್ತಮ ಪರಿಣಾಮ ಬೀರಲು ಸಾಮಥ್ಯವಿರುವ ಮಾಧ್ಯಮವಾಗಿದೆ.  ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಕನ್ನಡ ಚಲನಚಿತ್ರಗಳು ಹೆಚ್ಚು, ಹೆಚ್ಚು ಬರಬೇಕು.  ಮನುಕುಲಕ್ಕೆ ಕೊಡುಗೆ ನೀಡಿರುವ ಮಹಾತ್ಮ ಗಾಂಧೀಜಿಯವರಂತಹ ಮಹನೀಯರ ಜೀವನ ಚರಿತ್ರೆ ಇಂದಿಗೂ ಜನರ ಮೇಲೆ ಗಾಢ ಪರಿಣಾಮ ಬೀರುತ್ತದೆ.  ಚಲನಚಿತ್ರ ಮಾಧ್ಯಮವು ಸಾಕ್ಷರರಿಗೆ ಮಾತ್ರವಲ್ಲದೆ ಅನಕ್ಷರಸ್ಥರಿಗೂ ಸುಲಭವಾಗಿ ತಲುಪಬಹುದಾದ ಮಾಧ್ಯಮವಾಗಿದೆ.  ಸದಭಿರುಚಿಯ ಚಿತ್ರಗಳಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ತಲುಪಲು ಸಾಧ್ಯವಿದೆ.   ಈ ನಿಟ್ಟಿನಲ್ಲಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರಗಳನ್ನು ಉಚಿತವಾಗಿ ಜನರಿಗೆ ತಲುಪಿಸುವಂತಹ ಚಿತ್ರೋತ್ಸವ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯ ಶ್ಲಾಘನೀಯವಾಗಿದೆ  ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಸದಭಿರುಚಿಯ ಚಲನಚಿತ್ರಗಳು ಕನ್ನಡದಲ್ಲಿ ಹೆಚ್ಚು, ಹೆಚ್ಚು ಬರಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಹೇಳಿದರು.
 
     ತಹಸಿಲ್ದಾರ್ ಗುರುಬಸವರಾಜ ಅವರು ಮಾತನಾಡಿ, ಚಲನಚಿತ್ರ ಮಾಧ್ಯಮವನ್ನು ನಾವು ಕೇವಲ ಮನರಂಜನಾ ಮಾಧ್ಯಮವೆಂದು ಭಾವಿಸಬಾರದು.  ಚಲನಚಿತ್ರಗಳು, ಅಪರಾಧಿಗಳನ್ನು ಸರಿದಾರಿಗೆ ತರಲು ಸಾಧ್ಯವಾಗಬಹುದಾದ, ಜನರ ಮನಸ್ಸಿಗೆ ಪುನಶ್ಚೇತನ ತರಲು ಸಾಧ್ಯವಿರುವ ಹಾಗೂ ಜೀವನಕ್ಕೆ ಒಂದು ಗುರಿಯನ್ನು ನೀಡುವಂತಹ ಮಾಧ್ಯಮವಾಗಿದೆ.  ಯುವಜನರು ಚಲನಚಿತ್ರಗಳಲ್ಲಿ ದೊರೆಯುವ ಉತ್ತಮ ಅಂಶಗಳು, ಒಳ್ಳೆಯ ಸಂದೇಶಗಳನ್ನು ಗ್ರಹಿಸಿ, ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.  ಉತ್ತಮ ಚಲನಚಿತ್ರಗಳಿಂದ, ಸಮಾಜದಲ್ಲಿ ಸಾಕಷ್ಟು ಬದಲಾವಣೆ ಮೂಡಿಸಲು ಸಾಧ್ಯವಿದ್ದು, ಒಳ್ಳೆಯ ಸದಭಿರುಚಿಯ ಚಿತ್ರಗಳನ್ನು ನಾವು ವೀಕ್ಷಿಸಿ, ಕನ್ನಡ ಚಿತ್ರರಂಗಕ್ಕೆ ಬೆಂಬಲವನ್ನು ನೀಡೋಣ ಎಂದು ಹೇಳಿದರು.
 
     ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ಹಿರಿಯ ಸಾಹಿತಿಗಳಾದ ಮಹಾಂತೇಶ ಮಲ್ಲನಗೌಡರ, ಗಣ್ಯರಾದ ಶಿವಾನಂದ ಹೊದ್ಲೂರ, ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಕೊಪ್ಪಳದ ಬಸವರಾಜ, ಲಕ್ಷ್ಮಿ ಚಿತ್ರಮಂದಿರದ ಮಾಲೀಕರಾದ ಮಹಾಂತಯ್ಯನಮಠ ಉಪಸ್ಥಿತರಿದ್ದರು.    ಉದ್ಘಾಟನಾ ಸಮಾರಂಭದ ನಂತರ ಪ್ರದರ್ಶನಗೊಂಡ ಗಿರಿರಾಜ್ ಅವರ ನಿರ್ದೇಶನದ ಅಮರಾವತಿ ಚಲನಚಿತ್ರ ಕೊಪ್ಪಳದ ಲಕ್ಷ್ಮೀ ಮತ್ತು ಶಾರದ ಚಿತ್ರಮಂದಿರದಲ್ಲಿ ಹೌಸ್‍ಫುಲ್ ಪ್ರದರ್ಶನಗೊಂಡಿತು.  ಕೊಪ್ಪಳ ನಗರದ ಹಲವು ಕಾಲೇಜುಗಳ ನೂರಾರು ವಿದ್ಯಾರ್ಥಿಗಳು   ಚಲನಚಿತ್ರ ವೀಕ್ಷಿಸಲು ಆಗಮಿಸಿದ್ದರು.
     ಕೊಪ್ಪಳದ ಶಾರದಾ ಮತ್ತು ಲಕ್ಷ್ಮೀ ಚಿತ್ರಮಂದಿರಗಳಲ್ಲಿ ನ.18 ರಂದು ಕಿರಿಕ್ ಪಾರ್ಟಿ, ನ.19 ರಂದು ರಾಮಾ ರಾಮಾ ರೇ, ನ.20 ರಂದು ಮದಿಪು (ತುಳು ಭಾಷೆ), ನ.21 ರಂದು ಯೂ ಟರ್ನ್, ನ.22 ರಂದು ಅಲ್ಲಮ ಹಾಗೂ ನ.23 ರಂದು ಮಾರಿಕೊಂಡವರು ಕನ್ನಡ ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ.  ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ.



ಹೀಗಾಗಿ ಲೇಖನಗಳು ಸದಭಿರುಚಿಯ ಚಿತ್ರಗಳಿಂದ ಸಮಾಜಕ್ಕೆ ಉತ್ತಮ ಸಂದೇಶ – ವೆಂಕಟರಾಜಾ

ಎಲ್ಲಾ ಲೇಖನಗಳು ಆಗಿದೆ ಸದಭಿರುಚಿಯ ಚಿತ್ರಗಳಿಂದ ಸಮಾಜಕ್ಕೆ ಉತ್ತಮ ಸಂದೇಶ – ವೆಂಕಟರಾಜಾ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಸದಭಿರುಚಿಯ ಚಿತ್ರಗಳಿಂದ ಸಮಾಜಕ್ಕೆ ಉತ್ತಮ ಸಂದೇಶ – ವೆಂಕಟರಾಜಾ ಲಿಂಕ್ ವಿಳಾಸ https://dekalungi.blogspot.com/2017/11/blog-post_79.html

Subscribe to receive free email updates:

0 Response to "ಸದಭಿರುಚಿಯ ಚಿತ್ರಗಳಿಂದ ಸಮಾಜಕ್ಕೆ ಉತ್ತಮ ಸಂದೇಶ – ವೆಂಕಟರಾಜಾ"

ಕಾಮೆಂಟ್‌‌ ಪೋಸ್ಟ್‌ ಮಾಡಿ