ಶೀರ್ಷಿಕೆ : ರಾಜ್ಯ ಹಣಕಾಸು ಸಂಸ್ಥೆ ವತಿಯಿಂದ ಬಡ್ಡಿ ಸಹಾಯಧನ ಯೋಜನೆ
ಲಿಂಕ್ : ರಾಜ್ಯ ಹಣಕಾಸು ಸಂಸ್ಥೆ ವತಿಯಿಂದ ಬಡ್ಡಿ ಸಹಾಯಧನ ಯೋಜನೆ
ರಾಜ್ಯ ಹಣಕಾಸು ಸಂಸ್ಥೆ ವತಿಯಿಂದ ಬಡ್ಡಿ ಸಹಾಯಧನ ಯೋಜನೆ
ಕೊಪ್ಪಳ ನ. 04 (ಕರ್ನಾಟಕ ವಾರ್ತೆ): ಕೊಪ್ಪಳದ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ವತಿಯಿಂದ ಮಹಿಳೆರಿಗಾಗಿ ಮತ್ತು ಮೊದಲ ಪೀಳಿಗೆ ಉದ್ದಿಮೆದಾರರಿಗಾಗಿ “ಬಡ್ಡಿ ಸಹಾಯಧನ ಯೋಜನೆ”ಯನ್ನು ಜಾರಿಗೊಳಿಸಿದ್ದು, ಜಿಲ್ಲೆಯ ಆಸಕ್ತ ಮಹಿಳೆಯರು ಹಾಗೂ ಮೊದಲ ಪೀಳಿಗೆ ಉದ್ದಿಮೆದಾರರು ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ರಾಜ್ಯ ಮಟ್ಟದ ಹಣಕಾಸು ಸಂಸ್ಥೆಯಾಗಿದ್ದು, 1951ರ ರಾಜ್ಯ ಹಣಕಾಸು ಸಂಸ್ಥೆಗಳ ಕಾಯ್ದೆ ಅನ್ವಯ 1959 ರಲ್ಲಿ ಸ್ಥಾಪಿತವಾಗಿದೆ. ಕರ್ನಾಟಕ ರಾಜ್ಯದಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಮಧ್ಯಮ ಹಾಗೂ ದೀರ್ಘಾವಧಿ ಹಣಕಾಸಿನ ನೆರವನ್ನು ನೀಡುವುದೇ ಸಂಸ್ಥೆಯ ಮೂಲೋದ್ದೇಶವಾಗಿದೆ. ಕಳೆದ 58 ವರ್ಷಗಳಿಂದಲೂ ರಾಜ್ಯದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಘಟಕಗಳಿಗೆ/ ಉದ್ದಿಮೆಗಳಿಗೆ ಹಣಕಾಸಿನ ನೆರವನ್ನು ನೀಡುವುದರಲ್ಲಿ ಸಂಸ್ಥೆಯು ಮುಂಚೂಣಿಯಲ್ಲಿದೆ.
ಸಂಸ್ಥೆಯ ಪ್ರಾರಂಭವಾದಂದಿನಿಂದಲೂ 29,890ಕ್ಕೂ ಹೆಚ್ಚಿನ ಮಹಿಳಾ ಉದ್ದಿಮೆದಾರರಿಂದ ಸ್ಥಾಪಿಸಲ್ಪಟ್ಟ ಉದ್ದಿಮೆಗಳಿಗೆ ಹಲವಾರು ಯೋಜನೆಗಳಡಿಯಲ್ಲಿ ರೂ. 3,286.21 ಕೋಟಿ ರೂ. ಗಳ ಅವಧಿ ಸಾಲವನ್ನು ನೀಡಲಾಗಿದ್ದು, ಅವುಗಳು ಯಶಸ್ಸನ್ನು ಕಂಡಿವೆ. ಸಂಸ್ಥೆಯು ಕಾಲಕಾಲಕ್ಕೆ ತಕ್ಕಂತೆ ಆಕರ್ಷಕ ಯೋಜನೆಗಳ ಮೂಲಕ ಹಣಕಾಸಿನ ನೆರವನ್ನು ನೀಡುತ್ತಾ ಮಹಿಳಾ ಉದ್ಯಮಿಗಳ ಆರ್ಥಿಕ ಸಬಲೀಕರಣಕ್ಕಾಗಿ ಪ್ರೋತ್ಸಾಹ ನೀಡುತ್ತಾ ಬಂದಿದೆ.
ಕರ್ನಾಟಕ ಸರ್ಕಾರದ ನೆರವಿನೊಂದಿಗೆ ಡಿಸೆಂಬರ್ 2015ರಲ್ಲಿ ಸಂಸ್ಥೆಯ ವತಿಯಿಂದ ವಿಶೇಷವಾಗಿ ಮಹಿಳೆಯರಿಗಾಗಿಯೇ ವಾರ್ಷಿಕ ಶೇ. 4ರ ನಿವ್ವಳ ಬಡ್ಡಿದರದಲ್ಲಿ “ಮಹಿಳೆಯರಿಗಾಗಿ ಬಡ್ಡಿ ಸಹಾಯಧನ ಯೋಜನೆ” ಯೊಂದನ್ನು ಪ್ರಾರಂಭಿಸಲಾಯಿತು. ಈ ಯೋಜನೆಯಡಿಯಲ್ಲಿ ಮಹಿಳಾ ಉದ್ಯಮಿಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಶೇ. 10 ರಷ್ಟು ಬಡ್ಡಿ ಸಹಾಯಧನ ಲಭಿಸುವುದಲ್ಲದೆ ಗರಿಷ್ಟ ಅವಧಿ ಸಾಲದ ಮಿತಿಯು ರೂ.50.00 ಲಕ್ಷಗಳಿತ್ತು. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಹಯೋದೊಂದಿಗೆ ಸಂಸ್ಥೆಯ ವತಿಯಿಂದ ಈ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲಾಗಿದ್ದು, ಮಾರ್ಚ್ 2017 ರವರೆಗೆ ಸುಮಾರು 419 ಮಹಿಳಾ ಉದ್ಯಮಿಗಳಿಗೆ ಒಟ್ಟಾರೆಯಾಗಿ ರೂ. 169.48 ಕೋಟಿಗಳ ಹಣಕಾಸಿನ ನೆರವನ್ನು ನೀಡಲಾಗಿದೆ.
ಮಹಿಳೆಯರಿಗಾಗಿ ಬಡ್ಡಿ ಸಹಾಯಧನ ಯೋಜನೆಯು ಹೆಚ್ಚಿನ ಸಂಖ್ಯೆಯ ಮಹಿಳಾ ಉದ್ದಿಮೆದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ, ರಾಜ್ಯಾದ್ಯಂತ ಮಹಿಳಾ ಉದ್ದಿಮೆದಾರರಿಂದ ಈ ಯೋಜನೆಗೆ ಉತ್ತಮ ಪ್ರಕ್ರಿಯೆ ಕಂಡುಬಂದು ಗರಿಷ್ಟ ನೆರವಿನ ಮಿತಿಯ ಹೆಚ್ಚಳಕ್ಕೆ ಮನವಿ ಬಂದಿದ್ದರಿಂದ, ಯೋಜನೆಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದು ಗರಿಷ್ಠ ನೆರವಿನ ಮಿತಿಯ ಹೆಚ್ಚಳಕ್ಕೆ ಮನವಿ ಬಂದಿದ್ದರಿಂದ, ಯೋಜನೆಯ ಸಫಲತೆಯನ್ನು ಮನಗಂಡು, ಸಂಸ್ಥೆಯ ವತಿಯಿಂದ ಈ ಯೋಜನೆಯ ಅವಧಿ ಸಾಲದ ನೆರವಿನ ಮಿತಿಯ ಹೆಚ್ಚಳಕ್ಕೆ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿತ್ತು. ಅದರಂತೆ ಈ ಮನವಿಗೆ ಮಿತಿಯ ಹೆಚ್ಚಳಕ್ಕೆ ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಮಹಿಳೆಯರಿಗಾಗಿ ಬಡ್ಡಿ ಸಾಹಧನ ಯೋಜನೆಯಡಿಯಲ್ಲಿ ಅವಧಿ ಸಾಲದ ನೆರವಿನ ಗರಿಷ್ಠ ಮಿತಿಯನ್ನು ರೂ. 50.00 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಈ ಪರಿಷ್ಕøತ ಯೋಜನೆಯು ದಿನಾಂಕ 12-05-2017ರ ನಂತರ ಮಂಜೂರು ಮಾಡುವ ಸಾಲಗಳಿಗೆ ಅನ್ವಯವಾಗಿರುತ್ತದೆ.
ಮಹಿಳೆಯರಿಗಾಗಿ ಬಡ್ಡಿ ಸಹಾಯಧನ ಯೋಜನೆಯ ಪ್ರಮುಖ ಲಕ್ಷಣಗಳು ಇಂತಿವೆ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಹಾಗೂ ಸೇವಾ ಕ್ಷೇತ್ರದ ಘಟಕಗಳನ್ನು ಹೊಸದಾಗಿ ಸ್ಥಾಪಿಸಲಿಚ್ಚಿಸುವ ಮಹಿಳಾ ಉದ್ದಿಮೆದಾರರು. ಹಾಲಿ/ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಘಟಕಗಳ ವಿಸ್ತರಣೆ/ ನವೀಕರಣ/ ವೈವಿದ್ಧೀಕರಣಕ್ಕಾಗಿ. ಮಹಿಳಾ ಉದ್ದಿಮೆದಾರಿಂದಲೇ ಘಟಕವು ಸ್ಥಾಪಿತವಾಗಿರಬೇಕು. ಒಂದು ವೇಳೆ ಪಾಲುದಾರಿಕೆ ಸಂಸ್ಥೆ/ ಕಂಪೆನಿಯಾಗಿದ್ದಲ್ಲಿ, ಮಹಿಳಾ ಪಾಲುದಾರರು/ ನಿರ್ದೇಶಕರುಗಳು ಕನಿಷ್ಠ ಶೇ.51 ರಷ್ಟು ಶೇರುಗಳನ್ನು ಹೊಂದಿರಬೇಕಾಗುವುದು. ಕನಿಷ್ಠ ಅವಧಿ ಸಾಲದ ಮಿತಿ – ರೂ. 5.00 ಲಕ್ಷಗಳು. ಹಾಗೂ ಗರಿಷ್ಠ ಅವಧಿ ಸಾಲದ ಮಿತಿ - ರೂ. 200.00 ಲಕ್ಷಗಳು.
ಮಹಿಳೆಯರಿಗಾಗಿ ಬಡ್ಡಿ ಸಹಾಯಧನ ಯೋಜನೆಯನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಕಾರ್ಯ ರೂಪಕ್ಕೆ ತರಲಾಗುತ್ತಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾಹಿತಿಗಾಗಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಶಾಖಾ ಕಛೇರಿ ನಂ.37, ಮೊದಲನೇ ಮಹಡಿ, ಡಿಸಿ ಕಛೇರಿ ಎದುರು, ಹೊಸಪೇಟೆ ರಸ್ತೆ ಕೊಪ್ಪಳ ಇಲ್ಲಿಗೆ ಅಥವಾ ದೂರವಾಣಿ ಸಂಖ್ಯೆ 08539-225004ಕ್ಕೆ ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಸಹಾಯಕ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ರಾಜ್ಯ ಹಣಕಾಸು ಸಂಸ್ಥೆ ವತಿಯಿಂದ ಬಡ್ಡಿ ಸಹಾಯಧನ ಯೋಜನೆ
ಎಲ್ಲಾ ಲೇಖನಗಳು ಆಗಿದೆ ರಾಜ್ಯ ಹಣಕಾಸು ಸಂಸ್ಥೆ ವತಿಯಿಂದ ಬಡ್ಡಿ ಸಹಾಯಧನ ಯೋಜನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ರಾಜ್ಯ ಹಣಕಾಸು ಸಂಸ್ಥೆ ವತಿಯಿಂದ ಬಡ್ಡಿ ಸಹಾಯಧನ ಯೋಜನೆ ಲಿಂಕ್ ವಿಳಾಸ https://dekalungi.blogspot.com/2017/11/blog-post_76.html
0 Response to "ರಾಜ್ಯ ಹಣಕಾಸು ಸಂಸ್ಥೆ ವತಿಯಿಂದ ಬಡ್ಡಿ ಸಹಾಯಧನ ಯೋಜನೆ"
ಕಾಮೆಂಟ್ ಪೋಸ್ಟ್ ಮಾಡಿ