ಶೀರ್ಷಿಕೆ : ಸಮಸಮಾಜ ನಿರ್ಮಾಣಕ್ಕೆ ಕನಕದಾಸರ ಕೊಡುಗೆ ಅಪಾರ
ಲಿಂಕ್ : ಸಮಸಮಾಜ ನಿರ್ಮಾಣಕ್ಕೆ ಕನಕದಾಸರ ಕೊಡುಗೆ ಅಪಾರ
ಸಮಸಮಾಜ ನಿರ್ಮಾಣಕ್ಕೆ ಕನಕದಾಸರ ಕೊಡುಗೆ ಅಪಾರ
ಕುಲಕುಲವೆಂದು ಹೊಡೆದಾಡದಿರಿ ಎಂದು ಸಂತಶ್ರೇಷ್ಠ ಕನಕದಾಸರು 16 ನೇ ಶತಮಾನದಲ್ಲಿ ರಚಿಸಿದ ಹಲವಾರು ಕೀರ್ತನೆಗಳು, ಬರಹಗಳು, ಇಂದಿಗೂ ಪ್ರಸ್ತುತವಾಗಿ ಹತ್ತಿರವಾಗುತ್ತವೆ. ಹಿಂದೆ ಇದ್ದ ಮೇಲು-ಕೀಳು ಎಂಬ ಬೇಧ ಭಾವವನ್ನು ಕನಕದಾಸರು ತಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸಿ ಸಮಸಮಾಜದ ನಿರ್ಮಾಣಕ್ಕೆ ತಮ್ಮ ಅಮೂಲ್ಯ ಕಾಣಿಕೆ ನೀಡಿದ್ದಾರೆ. ಹದಗೆಡುತ್ತಿರುವ ಜಾತಿ ವ್ಯವಸ್ಥೆಗೆ ಕನಕದಾಸರ ಕೀರ್ತನೆ ಸಾಮಾಜಿಕ ಕಳಕಳಿ ಇಂದಿಗೂ ಪ್ರಸ್ತುತವಾಗಿವೆ.
ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ 1508 ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ, ತಂದೆ ಬೀರಪ್ಪನಾಯಕ, 78 ಗ್ರಾಮಗಳ ನಾಡಗೌಡಿಕೆ ಮಾಡುತ್ತಿದ್ದರು. ಬೀರಪ್ಪನಾಯಕ ಬಾಲ್ಯದಲ್ಲಿ ಶಿಕ್ಷಣ, ಪುರಾಣ, ಶಾಸ್ತ್ರ ಅಲಂಕಾರ ಗ್ರಂಥಗಳ ಶಿಕ್ಷಣ ಪಡೆದು, ಯುದ್ದ ಕಲೆಗಳನ್ನು ಕರಗತ ಮಾಡಿಕೊಂಡಿದ್ದರು. ಅಪ್ಪನ ಅಕಾಲಿಕ ಸಾವು ತಿಮ್ಮಪ್ಪನಾಯಕನ ಜವಾಬ್ದಾರಿ ಹೆಚ್ಚಿಸಿತು. ದಣ್ಣಾಯಕ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸತೊಡಗಿದ. ಮದುವೆಯ ನಂತರ ಮಗ, ಹೆಂಡತಿ ಹಾಗೂ ತಾಯಿಯ ಅಕಾಲಿಕ ಸಾವು, ತಿಮ್ಮಪ್ಪನಾಯಕನನ್ನು ಇನ್ನಿಲ್ಲದಂತೆ ಕಾಡಿತು. ಜೊತೆಗೆ ಯುದ್ದವೊಂದರಲ್ಲಿ ಸೋತ. ಸಂಸಾರದಲ್ಲಿ ಸೋಲು ರಣರಂಗದಲ್ಲಿನ ಸೋಲುಗಳು ಅವರನ್ನು ಜರ್ಝರಿತನನ್ನಾಗಿಸಿದವು. ಇದರಿಂದ ಹಿಂದೆ ಸರಿಯದೇ ಬದುಕಿನ ಅರ್ಥವಂತಿಕೆ, ಮೋಕ್ಷ ಸಾಧನೆಯ ದಿಕ್ಕಿನತ್ತ ವಾಲಿದ ತಿಮ್ಮಪ್ಪನಾಯಕ, ಕನಕದಾಸರಾಗಿ ಬದಲಾಗಿದ್ದು ಬಹುದೊಡ್ಡ ಇತಿಹಾಸ.
ಕೆಳ ಜಾತಿಯವರೆಂಬ ಕಾರಣಕ್ಕೆ ಅವಹೇಳನಕ್ಕೆ ಒಳಗಾಗಿದ್ದರೂ ಅದನ್ನೇ ಛಲವನ್ನಾಗಿ ಮಾರ್ಪಾಡು ಮಾಡಿಕೊಂಡ ಕನಕದಾಸರು, ಪುರಂದರ ದಾಸರ ಸಂಪರ್ಕ ಸಾಧಿಸಿದರು ಹಾಗೂ ವ್ಯಾಸರಾಯರ ನೆಚ್ಚಿನ ಶಿಷ್ಯರಾದರು. ಕನಕದಾಸರು ಜ್ಞಾನಿ ಎಂಬುದನ್ನು ತಿಳಿದ ವ್ಯಾಸರಾಯರು ತಮ್ಮ ಶಿಷ್ಯರಿಗೆ ಕನಕದಾಸರ ವ್ಯಕ್ತಿತ್ವವನ್ನು ಪರಿಚಯಿಸಿ, ಮೇಲು ಕೀಳು ಭಾವನೆಯಿಂದ ಹೊರಬರುವಂತೆ ಮಾಡಿದರು. 15-16 ನೇ ಶತಮಾನದಲ್ಲಿ ಬಲವಾಗಿ ಬೇರೂರಿದ್ದ ಜಾತಿ ವ್ಯವಸ್ಥೆಯ ವಿರುದ್ದ ಸಮರ ಸಾರಿದವರು ಕನಕದಾಸರು.
ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೇ, ಸಂಗೀತ ಪ್ರಪಂಚಕ್ಕೆ ತನ್ನದೇ ಆದ ಕೊಡುಗೆಯನ್ನು ಮಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಅವರಿಂದ ರಚಿತಗೊಂಡಿವೆ. ಅವರ ಬಹು ಮುಖ್ಯ ಕಾವ್ಯಗಳೆಂದರೆ ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಿಸಾರ ನೃಸಿಂಹಸ್ತವ(ಉಪಲಬ್ದವಿಲ್ಲ). ಅವರ ಕೀರ್ತನೆಗಳಲ್ಲಿ ಅವರ ಸಂದೇಶ ನೇರ ಮತ್ತು ಖಚಿತ. ಹಾಗೆಯೇ ಅಮೂರ್ತವಾದ ಪ್ರತಿಮಾ ನಿರೂಪಣೆಯಲ್ಲಿ ಪರಿಣಿತಿ, ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕøತ ಸಾಹಿತ್ಯಗಳ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು. ಇವರ ಕೃತಿಯಲ್ಲಿ ಅಲೌಕಿಕ ಮತ್ತು ಲೌಕಿಕ ಬದುಕಿಗೆ ನಿಚ್ಚಳ ಮಾರ್ಗವನ್ನು ತೋರಿಸುತ್ತವೆ.
ಅವರ ಕೀರ್ತನೆಗಳು ಸಂಗೀತ ಕ್ಷೇತ್ರಕ್ಕೆ ಹೊಸ ಮಾರ್ಗಗಳನ್ನು ನಿರ್ಮಿಸಿವೆ ಈ ರೀತಿಯ ಜೀವನ, ತತ್ವಾದರ್ಶ ಮತ್ತು ಸಾಮಾಜಿಕ ಕಾಳಜಿಯಿಂದಾಗಿ ಕನಕದಾಸರ ಬದುಕು ಮತ್ತು ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿ ಅಷ್ಟೇ ಅಲ್ಲ ಭಾರತೀಯ ಸಾಂಸ್ಕøತಿಕ ಸಂದರ್ಭದಲ್ಲಿಯೂ ಬಹು ಮುಖ್ಯವಾಗಿದೆ.
ರಾಜ್ಯ ಸರ್ಕಾರ ಕನಕದಾಸರ ಬಗೆಗೆ ಹಲವು ನೆಲೆಗಳಲ್ಲಿ ಚಿಂತಿಸಿ ಸ್ಮರಣೀಯಗೊಳಿಸುವಲ್ಲಿ ಶ್ರಮಿಸುತ್ತಿದೆ. ಕನಕದಾಸರ ಕುರಿತು ಹಲವು ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿದೆ. ಕನಕದಾಸರ ಕರ್ಮಭೂಮಿಯಾದ ಕಾಗಿನೆಲೆಯಲ್ಲಿ ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರವನ್ನು ರಚಿಸಿ, ಬಾಡ ಸೇರಿದಂತೆ ಸುತ್ತಮುತ್ತಲಿನ ಪರಿಸರವನ್ನು ಅಭಿವೃದ್ಧಿಪಡಿಸುವ ಹಾಗೂ ಸಂಸ್ಕøತಿ ಮತ್ತು ಪ್ರೇಕ್ಷಣೀಯ ಸ್ಥಳವಾಗಿಸುವ ಕಾರ್ಯ ನಿರ್ವಹಿಸುತ್ತಿದೆ.
ಸಂಶೋಧನ ಕೇಂದ್ರ:
********** ಪ್ರಾಧಿಕಾರದ ಸಂಶೋಧನ ವಿಭಾಗವು ಕನಕದಾಸರ ಕುರಿತು ವಿಶೇಷವಾದ ಅಧ್ಯಯನ ಕೈಗೊಂಡಿದೆ. ಬಾಡ, ಬಂಕಾಪುರ ಪ್ರದೇಶ, ಕಾಗಿನೆಲೆ, ಕುಮ್ಮೂರು, ಇಂಗಳಗೊಂದಿ, ದಾಸನಕೊಪ್ಪ, ಕದರಮಂಡಲಗಿಯಲ್ಲಿರುವ ಐತಿಹ್ಯಗಳನ್ನು ಅಧ್ಯಯನ ಮಾಡಲಾಗಿದೆ. ಭರಡಿ, ಹಳ್ಳೂರು, ಮಹದೇವಪುರ. ಕಂದಕೂರು, ಬಿಳಿಗಿರಿರಂಗನ ಬೆಟ್ಟ ಹೀಗೆ ಅನೇಕ ಸ್ಥಳಗಳಲ್ಲಿರುವ ಐತಿಹ್ಯಗಳನ್ನು ಅಧ್ಯಯನ ಮಾಡಿ ಗ್ರಂಥ ರೂಪದಲ್ಲಿ ಪ್ರಕಟಿಸಿದೆ. ಕನ್ನಡ, ತೆಲುಗು, ಹಿಂದಿ, ಇಂಗ್ಲೀಷ, ಮರಾಠಿ ಭಾಷೆಗಳಿಗೆ ಕನಕದಾಸರ ಸಾಹಿತ್ಯವನ್ನು ಅನುವಾದಿಸುವ ಮೂಲಕ ಆ ಭಾಷೆಯ ಜನರಿಗೆ ಓದಲು ಅವಕಾಶ ಕಲ್ಪಿಸಿದೆ.
ಕನಕದಾಸರ ಗದ್ದುಗೆ ಮಂದಿರ:
********** ಕನಕದಾಸರು ಭಕ್ತ ಮಾತ್ರವಾಗಿರದೇ ಅವರೊಬ್ಬ ಸಾಮಾಜಿಕ ಚಿಂತಕರು, ಸಮಾಜ ಸುಧಾರಕರಾಗಿದ್ದರು. ಆದರೂ ಅವರನ್ನು ಜಾತಿ ಎಂಬ ಭೂತ ಎಡಬಿಡದೆ ಕಾಡಿದೆ. ಸಂತರು, ದಾರ್ಶನಿಕರೂ ಆಗಿದ್ದ ಕನಕದಾಸರು ಆದಿಕೇಶವನ ಸನ್ನಿಧಿಯಲ್ಲಿ ಜೀವ ತೊರೆದಾಗ ದೊಡ್ಡಕೆರೆಯ ಪಕ್ಕದಲ್ಲಿ ಸಮಾಧಿ ನಿರ್ಮಾಣ ಮಾಡಲಾಯಿತು. ಕಾಗಿನೆಲೆಯ ದೊಡ್ಡಕೆರೆ ಶಾಸನಗಳಲ್ಲಿ ಪೆರ್ಗೆರೆ ಎಂದು ಉಲ್ಲೇಖಗೊಂಡಿದೆ. ಆದರೆ ಅಲ್ಲಿ ಕನಕದಾಸರ ಗದ್ದುಗೆ ಇರುವುದರಿಂದ ಕನಕ ಸರೋವರವೆಂದು ಕರೆಯುತ್ತಾರೆ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದಿಂದ ಇಲ್ಲಿ ಮೊದಲು ನಿರ್ಮಿಸಿದ್ದ ಚಿಕ್ಕ ದೇವಾಲಯವನ್ನು ತೆರವುಗೊಳಿಸಿ ವಿಜಯನಗರ ಶೈಲಿಯಲ್ಲಿ ದೇವಾಲಯವನ್ನು ಸಂಪೂರ್ಣವಾಗಿ ಕಲ್ಲಿನಲ್ಲಿ ನಿರ್ಮಿಸಲಾಗಿದೆ.
ಹೀಗೆ ಸಂತಕವಿ ಕನಕದಾಸರ ಸಾಮಾಜಿಕ, ಸಾಂಸ್ಕøತಿಕ, ಪಾರಮಾರ್ಥಿಕ ಚಿಂತನೆಗಳ ಜೊತೆಗೆ ಅವರ ಕಾವ್ಯಗಳು, ಕೀರ್ತನೆಗಳು ಮತ್ತು ಮಾನವೀಯ ಸಂದೇಶಗಳ ಕುರಿತಂತೆ ಹೊಸ ಹೊಸ ಅಧ್ಯಯನಗಳು, ಸಂಶೋಧನೆಗಳು ಪ್ರಕಟಣೆಗಳು ಹಾಗೂ ಇವುಗಳ ಪ್ರೋತ್ಸಾಹ ಉದ್ದೇಶದಿಂದ ಸರ್ಕಾರ ರಾಷ್ಟ್ರೀಯ ಮಟ್ಟದಲ್ಲಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದೆ. ಅಲ್ಲದೇ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕನಕದಾಸ ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರವನ್ನು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನಕ ಅಧ್ಯಯನ ಪೀಠವನ್ನು, ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ಸ್ಥಾಪಿಸಿ ಕಾರ್ಯಚಟುವಟಿಕೆಗಳಿಗೆ ಧನಸಹಾಯ ನೀಡಿದೆ.
ಸರ್ಕಾರದ ವತಿಯಿಂದ ಕನಕದಾಸರ ಜಯಂತಿಯನ್ನು ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ಅಂದು ಸಾರ್ವತ್ರಿಕ ರಜೆಯನ್ನು ಸಹ ಘೋಷಿಸಲಾಗಿದೆ. ಅಲ್ಲದೇ ಕನಕದಾಸರ ಮತ್ತು ದಾಸ ಸಾಹಿತ್ಯದ ಬಗ್ಗೆ ಅನನ್ಯ ಸೇವೆ ಸಲ್ಲಿಸಿದ ವಿದ್ವಾಂಸರಿಗೆ ಪ್ರತಿವರ್ಷ ‘ಕನಕಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತ್ತಿದೆ.
-ನಾಗರಾಜ ಬೆಲ್ಲದ
ಕೊಪ್ಪಳ

ಹೀಗಾಗಿ ಲೇಖನಗಳು ಸಮಸಮಾಜ ನಿರ್ಮಾಣಕ್ಕೆ ಕನಕದಾಸರ ಕೊಡುಗೆ ಅಪಾರ
ಎಲ್ಲಾ ಲೇಖನಗಳು ಆಗಿದೆ ಸಮಸಮಾಜ ನಿರ್ಮಾಣಕ್ಕೆ ಕನಕದಾಸರ ಕೊಡುಗೆ ಅಪಾರ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಸಮಸಮಾಜ ನಿರ್ಮಾಣಕ್ಕೆ ಕನಕದಾಸರ ಕೊಡುಗೆ ಅಪಾರ ಲಿಂಕ್ ವಿಳಾಸ https://dekalungi.blogspot.com/2017/11/blog-post_66.html
0 Response to "ಸಮಸಮಾಜ ನಿರ್ಮಾಣಕ್ಕೆ ಕನಕದಾಸರ ಕೊಡುಗೆ ಅಪಾರ"
ಕಾಮೆಂಟ್ ಪೋಸ್ಟ್ ಮಾಡಿ