ಶೀರ್ಷಿಕೆ : ಜಿಲ್ಲಾ ಹಾಪ್‍ಕಾಮ್ಸ್ ವತಿಯಿಂದ ಸಬ್ಸಿಡಿ ದರದಲ್ಲಿ ಪ್ಲಾಸ್ಟಿಕ್ ಕ್ರೇಟ್‍ಗಳ ಮಾರಾಟ
ಲಿಂಕ್ : ಜಿಲ್ಲಾ ಹಾಪ್‍ಕಾಮ್ಸ್ ವತಿಯಿಂದ ಸಬ್ಸಿಡಿ ದರದಲ್ಲಿ ಪ್ಲಾಸ್ಟಿಕ್ ಕ್ರೇಟ್‍ಗಳ ಮಾರಾಟ
ಜಿಲ್ಲಾ ಹಾಪ್‍ಕಾಮ್ಸ್ ವತಿಯಿಂದ ಸಬ್ಸಿಡಿ ದರದಲ್ಲಿ ಪ್ಲಾಸ್ಟಿಕ್ ಕ್ರೇಟ್‍ಗಳ ಮಾರಾಟ
ಕೊಪ್ಪಳ ನ. 10 (ಕರ್ನಾಟಕ ವಾರ್ತೆ): ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಹಾಫ್ ಕಾಮ್ಸ್ ನಿಂದ ರೈತರ ಅನುಕೂಲಕ್ಕಾಗಿ ಸಬ್ಸಿಡಿ ದರದಲ್ಲಿ ಪ್ಲಾಸ್ಟಿಕ್ ಕ್ರೇಟ್‍ಗಳ ಮಾರಾಟ ಮಾಡಲಾಗುತ್ತಿದೆ.
ತೋಟಗಾರಿಕೆ ಬೆಳೆಗಳಲ್ಲಿ ಕೊಯ್ಲಿನ ನಂತರ ಸಾಗಾಣಿಕೆಯಲ್ಲಿ ಶೇ.10-15 ರಷ್ಟು ಬೆಳೆ ನಷ್ಟು ಹೊಂದುವುದು ಕಂಡುಬಂದಿದೆ. ಇದಕ್ಕೆ ಅವೈಜ್ಞಾನಿಕ ಸಾಗಾಣಿಕೆ ಪದ್ಧತಿಯೇ ಬಹುತೇಕ ಕಾರಣವಾಗಿದೆ. ಬೇಗನೆ ಹಾಳಾಗುವಂತಹ ಟೊಮ್ಯಾಟೋ, ಡೊಣ್ಣೆ ಮೆಣಸಿನಕಾಯಿ, ಮಾವು, ದ್ರಾಕ್ಷಿ ಇವು ಅವೈಜ್ಞಾನಿಕ ಸಾಗಾಣಿಕೆ ವ್ಯವಸ್ಥೆಯಿಂದ ಸಾಗಾಣಿಕೆ ಸಂದರ್ಭಧಲ್ಲಿ ನಷ್ಟಕ್ಕೆ ತುತ್ತಾಗುತ್ತವೆ. ಸರಿಯಾಗಿ ಗಾಳಿಯಾಡುವ, ದೂರದ ಊರಿಗೂ ಸಾಗಿಸಲು ಉತ್ತಮವಾದ ಸಾಧನಗಳೆಂದರೆ, ಚೌಕಾಕಾರದ ಪ್ಲಾಸ್ಟಿಕ್ ಪುಟ್ಟಿಗಳು ಅಂದರೆ ಪ್ಲಾಸ್ಟಿಕ್ ಕ್ರೇಟ್ಸ್.
ರೈತರ ಅನುಕೂಲಕ್ಕಾಗಿ ಜಿಲ್ಲಾ ಹಾಪ್‍ಕಾಮ್ಸ್‍ನಿಂದ ಪ್ಲಾಸ್ಟಿಕ್ ಕ್ರೇಟ್ ಗಳನ್ನು ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತಿದೆ. ಜಿಲ್ಲಾ ಹಾಪ್‍ಕಾಮ್ಸ್‍ನಲ್ಲಿ ಕ್ರೇಟ್ಸ್‍ಗಳು ಲಭ್ಯವಿದ್ದು, ತೋಟಗಾರಿಕೆ ಬೆಳೆಗಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾ ಹಾಪ್ ಕಾಮ್ಸ್ ಕೊಪ್ಪಳ, ದೂರವಾಣಿ ಸಂಖ್ಯೆ-08539-231531 ಇವರನ್ನು ಸಂಪರ್ಕಿಸಬಹುದಾಗಿದೆ. ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಜಿಲ್ಲಾ ಹಾಪ್‍ಕಾಮ್ಸ್ ವತಿಯಿಂದ ಸಬ್ಸಿಡಿ ದರದಲ್ಲಿ ಪ್ಲಾಸ್ಟಿಕ್ ಕ್ರೇಟ್‍ಗಳ ಮಾರಾಟ
ಎಲ್ಲಾ ಲೇಖನಗಳು ಆಗಿದೆ ಜಿಲ್ಲಾ ಹಾಪ್‍ಕಾಮ್ಸ್ ವತಿಯಿಂದ ಸಬ್ಸಿಡಿ ದರದಲ್ಲಿ ಪ್ಲಾಸ್ಟಿಕ್ ಕ್ರೇಟ್‍ಗಳ ಮಾರಾಟ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಜಿಲ್ಲಾ ಹಾಪ್‍ಕಾಮ್ಸ್ ವತಿಯಿಂದ ಸಬ್ಸಿಡಿ ದರದಲ್ಲಿ ಪ್ಲಾಸ್ಟಿಕ್ ಕ್ರೇಟ್‍ಗಳ ಮಾರಾಟ ಲಿಂಕ್ ವಿಳಾಸ https://dekalungi.blogspot.com/2017/11/blog-post_58.html
0 Response to "ಜಿಲ್ಲಾ ಹಾಪ್‍ಕಾಮ್ಸ್ ವತಿಯಿಂದ ಸಬ್ಸಿಡಿ ದರದಲ್ಲಿ ಪ್ಲಾಸ್ಟಿಕ್ ಕ್ರೇಟ್‍ಗಳ ಮಾರಾಟ"
ಕಾಮೆಂಟ್ ಪೋಸ್ಟ್ ಮಾಡಿ