ಶೀರ್ಷಿಕೆ : ಸರ್ಕಾರಿ ವಾಹನಗಳ ಹೊಗೆ ತಪಾಸಣೆ ಅಭಿಯಾನಕ್ಕೆ ಡಿಸಿ ಚಾಲನೆ
ಲಿಂಕ್ : ಸರ್ಕಾರಿ ವಾಹನಗಳ ಹೊಗೆ ತಪಾಸಣೆ ಅಭಿಯಾನಕ್ಕೆ ಡಿಸಿ ಚಾಲನೆ
ಸರ್ಕಾರಿ ವಾಹನಗಳ ಹೊಗೆ ತಪಾಸಣೆ ಅಭಿಯಾನಕ್ಕೆ ಡಿಸಿ ಚಾಲನೆ
ಕೊಪ್ಪಳ ನ. 16 (ಕರ್ನಾಟಕ ವಾರ್ತೆ): ಕೊಪ್ಪಳದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಛೇರಿ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಸಹಯೋಗದಲ್ಲಿ ಸರ್ಕಾರಿ ವಾಹನಗಳ ಹೊಗೆ ಹೊರಸೂಸುವ ಪ್ರಮಾಣದ ತಪಾಸಣೆ ಅಭಿಯಾನಕ್ಕೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಜಿಲ್ಲಾಡಳಿತ ಭವನ ಆವರಣದಲ್ಲಿ ಗುರುವಾರದಂದು ಚಾಲನೆ ನೀಡಿದರು.
ಸರ್ಕಾರದ ಸೂಚನೆಯಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸರ್ಕಾರಿ ವಾಹನಗಳು ಹೊರಸೂಸುವ ಹೊಗೆ ಪ್ರಮಾಣವನ್ನು ಗುರುತಿಸಿ, ಚಾಲಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಅಭಿಯಾನವು ಜಿಲ್ಲೆಯಲ್ಲಿ ಹದಿನೈದು ದಿನಗಳ ಕಾಲ ಜರುಗಲಿದ್ದು, ಎಲ್ಲ ಇಲಾಖೆಗಳ ಸರ್ಕಾರಿ ವಾಹನಗಳನ್ನು ತಪ್ಪದೆ ತಪಾಸಣೆಗೆ ಒಳಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಪರಿಸರ ಅಧಿಕಾರಿ ಕೆ.ಎಸ್ ಮಂಜುನಾಥ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಭಿಯಾನದ ಅಂಗವಾಗಿ ಜಿಲ್ಲಾಡಳಿತ ಭವನ ಆವರಣದಲ್ಲಿ ವಿವಿಧ ಇಲಾಖೆಗಳ ಸರ್ಕಾರಿ ವಾಹನಗಳ ತಪಾಸಣೆ ನಡೆಸಲಾಯಿತು.
ಹೀಗಾಗಿ ಲೇಖನಗಳು ಸರ್ಕಾರಿ ವಾಹನಗಳ ಹೊಗೆ ತಪಾಸಣೆ ಅಭಿಯಾನಕ್ಕೆ ಡಿಸಿ ಚಾಲನೆ
ಎಲ್ಲಾ ಲೇಖನಗಳು ಆಗಿದೆ ಸರ್ಕಾರಿ ವಾಹನಗಳ ಹೊಗೆ ತಪಾಸಣೆ ಅಭಿಯಾನಕ್ಕೆ ಡಿಸಿ ಚಾಲನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಸರ್ಕಾರಿ ವಾಹನಗಳ ಹೊಗೆ ತಪಾಸಣೆ ಅಭಿಯಾನಕ್ಕೆ ಡಿಸಿ ಚಾಲನೆ ಲಿಂಕ್ ವಿಳಾಸ https://dekalungi.blogspot.com/2017/11/blog-post_44.html
0 Response to "ಸರ್ಕಾರಿ ವಾಹನಗಳ ಹೊಗೆ ತಪಾಸಣೆ ಅಭಿಯಾನಕ್ಕೆ ಡಿಸಿ ಚಾಲನೆ"
ಕಾಮೆಂಟ್ ಪೋಸ್ಟ್ ಮಾಡಿ