ಶೀರ್ಷಿಕೆ : ಜಿಲ್ಲೆಯಲ್ಲಿ ಸಿ.ಎಸ್.ಎ.ಎಸ್ ಸಂಕಲನಾತ್ಮಕ ಪರೀಕ್ಷೆ
ಲಿಂಕ್ : ಜಿಲ್ಲೆಯಲ್ಲಿ ಸಿ.ಎಸ್.ಎ.ಎಸ್ ಸಂಕಲನಾತ್ಮಕ ಪರೀಕ್ಷೆ
ಜಿಲ್ಲೆಯಲ್ಲಿ ಸಿ.ಎಸ್.ಎ.ಎಸ್ ಸಂಕಲನಾತ್ಮಕ ಪರೀಕ್ಷೆ
ಕೊಪ್ಪಳ ನ. 03 (ಕರ್ನಾಟಕ ವಾರ್ತೆ): ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಎಲ್ಲ ಸರಕಾರಿ ಅನುದಾನಿತ ಶಾಲೆಗಳ 4 ನೇ ತರಗತಿಯಿಂದ 9 ನೇ ತರಗತಿವರೆಗಿನ ಎಲ್ಲಾ ವಿಧ್ಯಾರ್ಥಿಗಳಿಗೂ ನ. 04 ರಂದು ಸಿ.ಎಸ್.ಎ.ಎಸ್ ಸಂಕಲನಾತ್ಮಕ -01 (ಎಸ್.ಎ-01) ಪರೀಕ್ಷೆಗಳು ಕೊಪ್ಪಳ ಜಿಲ್ಲೆಯ 1170 ಶಾಲೆಗಳಲ್ಲಿ ನಡೆಯಲಿವೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ 382 ಶಾಲೆಗಳಲ್ಲಿ 36444 ವಿದ್ಯಾರ್ಥಿಗಳು, ಕೊಪ್ಪಳ ತಾಲೂಕಿನ 281 ಶಾಲೆಗಳಲ್ಲಿ 32739 ವಿದ್ಯಾರ್ಥಿಗಳು, ಕುಷ್ಟಗಿ ತಾಲೂಕಿನ 258 ಶಾಲೆಗಳಲ್ಲಿ 28713 ವಿದ್ಯಾರ್ಥಿಗಳು, ಯಲಬುರ್ಗಾ ತಾಲೂಕಿನ 249 ಶಾಲೆಗಳಲ್ಲಿ 28720 ವಿದ್ಯಾರ್ಥಿಗಳು, ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1170 ಶಾಲೆಗಳಲ್ಲಿ 126616 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಅರ್ಹಾತಾ ಮಟ್ಟ ತಿಳಿದುಕೊಳ್ಳುವಂತೆ ಮಾಡುವುದು. ಪಾಲಕರಿಗೆ ವಿದ್ಯಾರ್ಥಿಗಳ ಸಾಧನಾ ಮಟ್ಟವನ್ನು ತಿಳಿಸುವ ಮೂಲಕ ಪಾಲಕರಲ್ಲಿ ಅಭಿಪ್ರೇರಣೆ ಉಂಟುಮಾಡುವುದು. ಪಾಲಕರಿಗೆ ವಿದ್ಯಾರ್ಥಿಗಳ ಸಾಧನಾ ಮಟ್ಟವನ್ನು ತಿಳಿಸುವ ಮೂಲಕ ಪಾಲಕರಲ್ಲಿ ಅಭಪ್ರೇರಣೆ ಉಂಟು ಮಾಡುವುದು. ಶಕ್ಷಕರು ತಮ್ಮ ಕಲಿಕಾ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ಪ್ರೇರೆಪಿಸುವುದು. ಅನುಪಾಲನೆಯ ರೂಪರೇಷಗಳನ್ನು ರಚಿಸಲು ಇಲಾಖೆಗೆ ಅಹಕಾರ ನೀಡುವುದು ಸಿ.ಎಸ್.ಎ.ಎಸ್ ಸಂಕಲನಾತ್ಮಕ ಪರೀಕ್ಷೆಗಳ ಉದ್ದೇಶವಾಗಿದೆ.
ವಿದ್ಯಾರ್ಥಿಗಳಿಗೆ ಬಹು ಆಯ್ಕೆ ಮಾದರಿಯಲ್ಲಿ ಮೌಲ್ಯಾಂಕನ ಕೈಗೊಳ್ಳಲಾಗಿದೆ. ಪ್ರತಿ ವಿಷಯವೂ 24 ಪ್ರಶ್ನೆಗಳನ್ನು ಒಳಗೊಂಡಿದ್ದು 30 ಅಂಕಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ವಿಷಯದಲ್ಲೂ 2 ರೀತಿಯ ಬಹು ಆಯ್ಕೆ ಪ್ರಶ್ನೆಗಳನ್ನು ನೀಡಲಾಗಿದೆ. 1 ರಿಂದ 18 ನೇ ಪ್ರಶ್ನೆಯವರೆಗೆ ಒಟ್ಟು 18 ಪ್ರಶ್ನೆಗಳು ಸಾಮಾನ್ಯ ರೂಪದ ಬಹು ಆಯ್ಕೆ ಪ್ರಶ್ನೆಗಳಾಗಿದ್ದು ಪ್ರತಿ ಪ್ರಶ್ನೆಗೂ 1 ಅಂಕ ನೀಡಲಾಗಿದೆ 19 ರಿಂದ 24 ಪ್ರಶ್ನೆಯವರೆಗೆ ಒಟ್ಟು 6 ಪ್ರಶ್ನೆಗಳು ವಿಶೇಷವಾಗಿ ವಿದ್ಯಾರ್ಥಿಗಳು ಓದಿ ಅರ್ಧೈಸಿಕೊಂಡು ಉತ್ತರವನ್ನು ಆಯ್ಕೆ ಮಾಡುವ ಕೌಶಲ ಬೆಳೆಸುವ ನಿಟ್ಟಿನಲ್ಲಿ ವಿವರಣಾತ್ಮಕ ಪ್ರಶ್ನೆಗಳನ್ನು ನೀಡಿ ಪ್ರತಿ ವಿವರಣಾತ್ಮಕ ಪ್ರಶ್ನೆಗೂ 2 ಅಂಕ ನಿಗದಿಗೊಳಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಈ ಬಾರಿ ಓ.ಎಮ್.ಆರ್ ಶೀಟ್‍ಗಳನ್ನು ಬಳಸುವ ಕೌಶಲ್ಯ ಬೆಳೆಸಲಾಗಿದೆ.
ರಾಷ್ಟ್ರ ಮಟ್ಟದಲ್ಲಿ ಎನ್.ಸಿ.ಇ.ಆರ್.ಟಿ ಯು 2000-2001 ರಿಂದ ನ್ಯಾಷನಲ್ ಅಚಿವ್‍ಮೆಂಟ್ ಸರ್ವೇ (ಎನ್.ಎ.ಎಸ್) ಪರೀಕ್ಷೆಗಳನ್ನು ಕೇಲವು ರಾಜ್ಯಗಳ ಜಿಲ್ಲೆಗಳಲ್ಲಿ ಆಯ್ದ ಶಾಲೆಗಳಲ್ಲಿ ಆಯ್ದ ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸುತ್ತಿದ್ದರು, ಪ್ರಸಕ್ತ ಸಾಲಿನಲ್ಲಿ ಎಂ.ಹೆಚ್.ಆರ್.ಡಿ ಯವರ ನೇತೃತ್ವದಲ್ಲಿ ಎನ್.ಸಿ.ಇ.ಆರ್.ಟಿ ಯ ಆಯ್ದ ಶಾಲೆಗಳ 3,5 ಹಾಗೂ 8 ನೇ ತರಗತಿಯ ವಿದ್ಯಾರ್ಥಿಗಳಿಗೆ 2017 ರ ನವೆಂಬರ್ 13 ರಂದು ಸಮೀಕ್ಷೆ ಕಾರ್ಯ ನಡೆಯಲಿದೆ ಹಾಗೆ ಅ ದಿನವನ್ನು ನಾಸ್ ಡೆ (ಎನ್.ಎ.ಎಸ್) ಎಂದು ಕರೆಯಲು ಎನ್.ಸಿ.ಇ.ಆರ್.ಟಿ ತೀರ್ಮಾನಿಸಿದೆ ರಾಷ್ಟ್ರಾದ್ಯಂತ ಆ ದಿನವೇ ಮೌಲ್ಯಾಂಕನ ನಡೆಯಲಿದೆ. ಜಿಲ್ಲಾ ಮಟ್ಟದಲ್ಲಿ ಪ್ರಸಕ್ತ ಸಾಲಿನ ವಿಶೇಷವೆಂದರೆ ಇಡೀ ರಾಷ್ಟ್ರಕ್ಕೆ ಒಂದೇ ದಿನ ಸಮೀಕ್ಷೆ ನಡೆಸುವುದಲ್ಲದೆ ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳನ್ನು ಸಮೀಕ್ಷಗೆ ಒಳಪಡಿಸಲಾಗಿದೆ. ಹಾಗೆ ಕೊಪ್ಪಳ ಜಿಲ್ಲೆಯಲ್ಲಿ ಆಯ್ದ ಶಾಲೆಗಳಲ್ಲಿ 3 ನೇ ತರಗತಿ 5 ನೇ ತರಗತಿ ಹಾಗೂ 8 ನೇ ತರಗತಿಗಳಿಗೆ ನವೆಂಬರ್. 13 ರಂದು ಏಕಕಾಲಕ್ಕೆ ಪರೀಕ್ಷೆಗಳು ನಡೆಯಲಿದೆ ಸಮೀಕ್ಷೆಗೆ ಪೂರಕವಾಗಿ ಎಲ್ಲಾ ಸಿದ್ದತೆ ಮಾಡಲಾಗಿದೆ ತಾಲೂಕವಾರು ಒಬ್ಬರಂತೆ ಜಿಲ್ಲಾ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ಕೊಪ್ಪಳ ಜಿಲ್ಲಾಧಿಕಾರಿಗಳ ಆದೇಶದಂತೆ ನೇಮಿಸಲಾಗಿದೆ ಎಂದು ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಜಿಲ್ಲೆಯಲ್ಲಿ ಸಿ.ಎಸ್.ಎ.ಎಸ್ ಸಂಕಲನಾತ್ಮಕ ಪರೀಕ್ಷೆ
ಎಲ್ಲಾ ಲೇಖನಗಳು ಆಗಿದೆ ಜಿಲ್ಲೆಯಲ್ಲಿ ಸಿ.ಎಸ್.ಎ.ಎಸ್ ಸಂಕಲನಾತ್ಮಕ ಪರೀಕ್ಷೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಜಿಲ್ಲೆಯಲ್ಲಿ ಸಿ.ಎಸ್.ಎ.ಎಸ್ ಸಂಕಲನಾತ್ಮಕ ಪರೀಕ್ಷೆ ಲಿಂಕ್ ವಿಳಾಸ https://dekalungi.blogspot.com/2017/11/blog-post_40.html
0 Response to "ಜಿಲ್ಲೆಯಲ್ಲಿ ಸಿ.ಎಸ್.ಎ.ಎಸ್ ಸಂಕಲನಾತ್ಮಕ ಪರೀಕ್ಷೆ"
ಕಾಮೆಂಟ್ ಪೋಸ್ಟ್ ಮಾಡಿ