ನೇರ ನಗದು ವರ್ಗಾವಣೆ ವ್ಯವಸ್ಥೆಯಿಂದ ಅಕ್ರಮಗಳಿಗೆ ಕಡಿವಾಣ : ಕರಡಿ ಸಂಗಣ್ಣ

ನೇರ ನಗದು ವರ್ಗಾವಣೆ ವ್ಯವಸ್ಥೆಯಿಂದ ಅಕ್ರಮಗಳಿಗೆ ಕಡಿವಾಣ : ಕರಡಿ ಸಂಗಣ್ಣ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ನೇರ ನಗದು ವರ್ಗಾವಣೆ ವ್ಯವಸ್ಥೆಯಿಂದ ಅಕ್ರಮಗಳಿಗೆ ಕಡಿವಾಣ : ಕರಡಿ ಸಂಗಣ್ಣ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ನೇರ ನಗದು ವರ್ಗಾವಣೆ ವ್ಯವಸ್ಥೆಯಿಂದ ಅಕ್ರಮಗಳಿಗೆ ಕಡಿವಾಣ : ಕರಡಿ ಸಂಗಣ್ಣ
ಲಿಂಕ್ : ನೇರ ನಗದು ವರ್ಗಾವಣೆ ವ್ಯವಸ್ಥೆಯಿಂದ ಅಕ್ರಮಗಳಿಗೆ ಕಡಿವಾಣ : ಕರಡಿ ಸಂಗಣ್ಣ

ಓದಿ


ನೇರ ನಗದು ವರ್ಗಾವಣೆ ವ್ಯವಸ್ಥೆಯಿಂದ ಅಕ್ರಮಗಳಿಗೆ ಕಡಿವಾಣ : ಕರಡಿ ಸಂಗಣ್ಣ

ಕೊಪ್ಪಳ ನ. 24 (ಕರ್ನಾಟಕ ವಾರ್ತೆ): ಸರ್ಕಾರದಿಂದ ರೈತರು ಹಾಗೂ ಇತರೆ ಯೋಜನೆ ಫಲಾನುಭವಿಗಳಿಗೆ ನೀಡಲಾಗುವ ಸಹಾಯಧನವನ್ನು ನೇರ ನಗದು ವರ್ಗಾವಣೆ ವ್ಯವಸ್ಥೆಯಲ್ಲಿ ಆಯಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿರುವುದರಿಂದ ಅಕ್ರಮಗಳಿಗೆ ಕಡಿವಾಣ ಹಾಕಿದಂತಾಗಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರ
 
    ಧಾರವಾಡ-ವಿಜಯಪುರ ಕೇತ್ರ ಪ್ರಚಾರ ನಿರ್ದೇಶನಾಲಯ,  ಬೆಂಗಳೂರು ಸಂಗೀತ ಮತ್ತು ನಾಟಕ ವಿಭಾಗ, ಕೊಪ್ಪಳ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಪಾಲನ ಇಲಾಖೆ, ಕೃಷಿ ವಿಸ್ತರಣಾ ಮತ್ತು ಶಿಕ್ಷಣ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಹಲಗೇರಿ ಗ್ರಾಮ ಪಂಚಾಯತ ಸಹಯೋಗದಲ್ಲಿ “ಕೃಷಿ ಮತ್ತು ರೈತ ಕಲ್ಯಾಣ ಯೋಜನೆಗಳ ಕುರಿತು ಹಲಗೇರಿ ಗ್ರಾಮದ ಶಾಂಭವಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರಂದು ಹಮ್ಮಿಕೊಳ್ಳಲಾಗಿದ್ದ, ವಿಶೇಷ ಜನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  
 
    ರಾಜ್ಯದ ಸುಮಾರು 13 ಲಕ್ಷ ಮಂದಿ ರೈತರು ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಲ್ಲಿ ಪ್ರೀಮಿಯಮ್ ಹಣ ತುಂಬಿದ್ದಾರೆ.  ಇದೀಗ ರೈತರು ವಿಮಾ ಲಾಭವನ್ನು ಪಡೆಯುತ್ತಿರುವುದು ರೈತರ ಬಾಳಿಗೆ ಸಂಜೀವಿನಿಯಾಗಿದೆ  ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 57 ಕೋಟಿ ರೂ. ವಿಮಾ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ.  ಗೊಬ್ಬರ, ಯಂತ್ರೋಪಕರಣಗಳ ಖರೀದಿಗೆ ಕೇಂದ್ರ ಸರಕಾರದ ವತಿಯಿಂದ ಸಹಾಯಧನವನ್ನು ನೀಡಲಾಗುತ್ತಿದ್ದು, ಹೆಚ್ಚು ಹೆಚ್ಚು ರೈತರು ಇದರ ಲಾಭ ಪಡೆದುಕೊಳ್ಳಬೇಕು.  ಭೂಮಿಯ ಫಲವತ್ತತೆಯನ್ನು ಕಾಪಾಡಲು ರೈತರು ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡಿ, ಸಾವಯವ ಕೃಷಿಯ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು.  ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆ, ಕೌಶಲ್ಯ, ಉದ್ಯೋಗ ಮತ್ತು ಸಬಲೀಕರಣ ಸೇರಿದಂತೆ ಹಲವಾರು ಯೋಜನೆಗಳ ಸವಲತ್ತು ಪಡೆಯಬೇಕು. ರೈತ ಮಹಿಳೆಯರ ಆರೋಗ್ಯ ಸುಧಾರಣೆಗಾಗಿ ಕಟ್ಟಿಗೆಯಿಂದ ಅಡುಗೆ ಮಾಡುವುದನ್ನು ತಪ್ಪಿಸಲು ಉಜ್ವಲ ಯೋಜನೆಯ ಮೂಲಕ ಕೊಪ್ಪಳ ಜಿಲ್ಲೆಯಲ್ಲಿ 8,000 ಮಹಿಳೆಯರಿಗೆ ಉಚಿತ ಎಲ್.ಪಿ.ಜಿ ಸೌಲಭ್ಯ ನೀಡಲಾಗಿದೆ ಎಂದು ಹೇಳಿದ ಸಂಸದ ಕರಡಿ ಸಂಗಣ್ಣ ಅವರು ರೈತರಿಗೆ ರಾಜ್ಯ ಸರ್ಕಾರದ ಕೃಷಿ ಭಾಗ್ಯ ಯೋಜನೆಯಡಿ ಡೀಸೆಲ್ ಪಂಪ್‍ಸೆಟ್ ಅನ್ನು ಇದೇ ಸಂದರ್ಭದಲ್ಲಿ ವಿತರಣೆ ಮಾಡಿದರು.
    ಕೊಪ್ಪಳ ಕೃಷಿ ಇಲಾಖೆ ಜಂಟಿ ನಿರ್ದೇಶಕ ವೀರೇಶ ಹುನಗುಂದ ಅವರು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 27322 ರೈತರಿಗೆ ಮಣ್ಣು ಆರೋಗ್ಯ ಚೀಟಿ ವಿವರ ನೀಡಲಾಗಿದ್ದು, ಇದರಿಂದ ರೈತರಿಗೆ ತಮ್ಮ ಭೂಮಿಯ ಫಲವತ್ತತೆ ಬಗ್ಗೆ ನಿಖರ ಮಾಹಿತಿ ಸಿಗಲಿದೆ.  ಇದರ ಆಧಾರದ ಮೇಲೆ ಸೂಕ್ತ ಬೆಳೆಯನ್ನು ಹಾಕುವುದರಿಂದ ಖರ್ಚು ಕಡಿಮೆಯಾಗಿ ಇಳುವರಿ ಹೆಚ್ಚಾಗಿ ರೈತನ ಆದಾಯ ಹೆಚ್ಚಾಗಲಿದೆ ಎಂದರು.  
    ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಟಿ. ವೇಣುಗೋಪಾಲ ಅವರು ಮಾತನಾಡಿ, “ಪಶುಭಾಗ್ಯ ಯೋಜನೆ” ಅಡಿಯಲ್ಲಿ 2 ಆಕಳು ಅಥವಾ 2 ಎಮ್ಮೆಗಳ ಹೈನುಗಾರಿಕೆ ಘಟಕ ನೀಡಲಾಗುತ್ತಿದೆ.  ಕುಕ್ಕಟ ಘಟಕಕ್ಕೆ 500 ಕೋಳಿ, ವಿಶೇಷವಾಗಿ 2017-18ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಜಿಲ್ಲೆಗೆ 516 ಫಲಾನುಭವಿಗಳ ಗುರಿ ನಿಗದಿಪಡಿಸಲಾಗಿದೆ.  ಆಕಸ್ಮಿಕವಾಗಿ ಮರಣಿಸಿದ ಕುರಿ ಅಥವಾ ಮೇಕೆಗಳಿಗೆ ಪರಿಹಾರವಾಗಿ ಇಲಾಖೆ ವತಿಯಿಂದ ಪ್ರತಿ ಕುರಿಗೆ ರೂ. 5,000 ಗಳಂತೆ ಪರಿಹಾರ ಧನವನ್ನು ವಿತರಿಸಲಾಗುತ್ತಿದೆ.  ದನ ಅಥವಾ ಎಮ್ಮೆಗಳಿಗೆ ರೂ. 10,000 ಗಳಂತೆ ಪರಿಹಾರ ಧನವನ್ನು ನೀಡಲಾಗುತ್ತಿದೆ ಎಂದರು.  
    ತೋಟಗಾರಿಕೆ ಇಲಾಖೆಯ ವಾಮನಮೂರ್ತಿ ಮತ್ತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಪ್ರದೀಪ ಬಿರಾದರ ಅವರ ತಮ್ಮ ಇಲಾಖೆಗಳಿಂದ ಬರುವ ಸರ್ಕಾರದ ಯೋಜನೆಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಲಗೇರಿ ಗ್ರಾಮ ಪಂಚಾಯತ ಅಧ್ಯಕ್ಷ ದೇವಪ್ಪ ಬಸಪ್ಪ ಓಜಿನಹಳ್ಳಿ ಅವರು ವಹಿಸಿದ್ದರು.  ತಾ.ಪಂ ಸದಸ್ಯೆ ಲಕ್ಷ್ಮೀದೇವಿ ಅಶೋಕ ಅಬ್ಬಿಗೇರಿ ಸೇರಿದಂತೆ ಹಲಗೇರಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.  
     ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ನಾಗರೀಕರು ಜಾಗೃತಿ ಜಾಥಾ ನಡೆಸಿದರು.  ಕೃಷಿ ಇಲಾಖೆಯಿಂದ ನಾಲ್ಕು ಮಂದಿ ಫಲಾನುಭವಿಗಳಿಗೆ ಕೃಷಿ ಭಾಗ್ಯ ಯೋಜನೆಯಡಿ ಡಿಸೆಲ್ ಪಂಪ್‍ಸೆಟ್ ವಿತರಿಸಲಾಯಿತು.  ಕೇತ್ರ ಪ್ರಚಾರ ನಿರ್ದೇಶನಾಲಯದ ಉಪ ನಿರ್ದೇಶಕ ಕೆ.ಪಿ. ರಾಜೀವನ್ ಪ್ರಾಸ್ತಾವಿಕವಾಗಿ ಮಾತನಾಡಿದರು.  ಮುರಳಿಧರ್ ಖಾರಬಾರಿ ಕಾರ್ಯಕ್ರಮ ನಿರೂಪಿಸಿದರು.  ಸಿ.ಕೆ. ಸುರೇಶ ಸ್ವಾಗತಿಸಿದರು.  ಹಲಗೇರಿ ಗ್ರಾಮ ಪಂಚಾಯತ ಪಿಡಿಒ ಅಶೋಕ ರಾಂಪೂರ ಕೊನೆಯಲ್ಲಿ ವಂದಿಸಿದರು. 


ಹೀಗಾಗಿ ಲೇಖನಗಳು ನೇರ ನಗದು ವರ್ಗಾವಣೆ ವ್ಯವಸ್ಥೆಯಿಂದ ಅಕ್ರಮಗಳಿಗೆ ಕಡಿವಾಣ : ಕರಡಿ ಸಂಗಣ್ಣ

ಎಲ್ಲಾ ಲೇಖನಗಳು ಆಗಿದೆ ನೇರ ನಗದು ವರ್ಗಾವಣೆ ವ್ಯವಸ್ಥೆಯಿಂದ ಅಕ್ರಮಗಳಿಗೆ ಕಡಿವಾಣ : ಕರಡಿ ಸಂಗಣ್ಣ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ನೇರ ನಗದು ವರ್ಗಾವಣೆ ವ್ಯವಸ್ಥೆಯಿಂದ ಅಕ್ರಮಗಳಿಗೆ ಕಡಿವಾಣ : ಕರಡಿ ಸಂಗಣ್ಣ ಲಿಂಕ್ ವಿಳಾಸ https://dekalungi.blogspot.com/2017/11/blog-post_30.html

Subscribe to receive free email updates:

0 Response to "ನೇರ ನಗದು ವರ್ಗಾವಣೆ ವ್ಯವಸ್ಥೆಯಿಂದ ಅಕ್ರಮಗಳಿಗೆ ಕಡಿವಾಣ : ಕರಡಿ ಸಂಗಣ್ಣ"

ಕಾಮೆಂಟ್‌‌ ಪೋಸ್ಟ್‌ ಮಾಡಿ