ಶೀರ್ಷಿಕೆ : ಮಲೆನಾಡಿನ ಜೇನುಕೃಷಿ ಬಿಸಿಲ ನಾಡಿಗೂ ಬಂತು : ಕೊಪ್ಪಳದಲ್ಲೂ ಜೇನು ಸಾಕಾಣಿಕೆ ಮಾಡಿ ತುಪ್ಪದ ಹೊಳೆ ಹರಿಸಿದ ರೈತರು
ಲಿಂಕ್ : ಮಲೆನಾಡಿನ ಜೇನುಕೃಷಿ ಬಿಸಿಲ ನಾಡಿಗೂ ಬಂತು : ಕೊಪ್ಪಳದಲ್ಲೂ ಜೇನು ಸಾಕಾಣಿಕೆ ಮಾಡಿ ತುಪ್ಪದ ಹೊಳೆ ಹರಿಸಿದ ರೈತರು
ಮಲೆನಾಡಿನ ಜೇನುಕೃಷಿ ಬಿಸಿಲ ನಾಡಿಗೂ ಬಂತು : ಕೊಪ್ಪಳದಲ್ಲೂ ಜೇನು ಸಾಕಾಣಿಕೆ ಮಾಡಿ ತುಪ್ಪದ ಹೊಳೆ ಹರಿಸಿದ ರೈತರು
ಕೊಪ್ಪಳ ಅ. 31 (ಕರ್ನಾಟಕ ವಾರ್ತೆ): ಜೇನು ಸಾಕಾಣಿಕೆ ಸಾಮಾನ್ಯವಾಗಿ ಮಲೆನಾಡಿನಲ್ಲಿ ರೈತರು ಕೈಗೊಳ್ಳುವುದನ್ನು ಕಾಣುತ್ತೇವೆ. ಆದರೆ ಬಿಸಿಲ ನಾಡು ಎನಿಸಿಕೊಂಡಿರುವ ಕೊಪ್ಪಳ ಜಿಲ್ಲೆಯಲ್ಲಿಯೂ ಜೇನು ಕೃಷಿಯನ್ನು ಯಶಸ್ವಿಯಾಗಿ ಕೈಗೊಂಡು ಕೃಷಿಯ ಜೊತೆಗೆ ಉಪಕಸುಬಾಗಿ ಲಾಭದಾಯಕ ಮಾಡಿಕೊಳ್ಳಬಹುದಾಗಿದೆ ಎಂಬುದನ್ನು ಇಲ್ಲಿನ ರೈತರು ಸಾಬೀತುಪಡಿಸಿದ್ದಾರೆ.
ಜೇನು ಕೃಷಿಯನ್ನು ಯಶಸ್ವಿಯಾಗಿ ಕೈಗೊಂಡ ಪ್ರಗತಿ ಪರ ರೈತರ ತೋಟಕ್ಕೆ ಪ್ರತ್ಯಕ್ಷ ವರದಿ ಸಂಗ್ರಹಣೆಗಾಗಿ ಕೊಪ್ಪಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಗಂಗಾವತಿ ತಾಲೂಕು ಬಸಾಪಟ್ಟಣ ಗ್ರಾಮಕ್ಕೆ ವಿಶೇಷ ಮಾಧ್ಯಮ ಪ್ರವಾಸ ಆಯೋಜಿಸಿತ್ತು.
ಜೇನು ಸಾಕಾಣಿಕೆ ಎಂಬುದು ರೈತರ ಪಾಲಿಗೆ ಸಂಜೀವಿನಿಯಾಗಿದ್ದು, ಜೇನು ಕೃಷಿಯಿಂದ ಆರ್ಥಿಕ ಲಾಭ ಗಳಿಸಲು ಅವಕಾಶವಿದೆ ಅಲ್ಲದೆ, ಕೃಷಿಯಲ್ಲಿ ಜೇನಿನಿಂದ ನಡೆಯುವ ಪರಾಗ ಕ್ರಿಯೆ, ಇಳುವರಿಯನ್ನು ಸುಮಾರು ಶೇ. 40 ರಷ್ಟು ಹೆಚ್ಚಿಸಲು ಸಹಕಾರಿಯಾಗಿದೆ ಅಂದರೆ, ಇದರ ಮಹತ್ವ ಎಷ್ಟು ಎಂಬುದು ತಿಳಿಯುತ್ತದೆ. ಇದಕ್ಕೆಂದೇ ತೋಟಗಾರಿಕೆ ಇಲಾಖೆ ಇತ್ತೀಚೆಗಷ್ಟೇ ಕೊಪ್ಪಳದಲ್ಲಿ ಮೂರು ದಿನಗಳ ಹಮ್ಮಿಕೊಂಡ ಜೇನು ಮೇಳ ಅತ್ಯಂತ ಯಶಸ್ವಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಸಮಗ್ರ ಕೃಷಿ ಬೇಕು : ಸಮಗ್ರ ಕೃಷಿ ಇಂದಿನ ಅಗತ್ಯವಾಗಿದೆ. ಒಂದೆರಡು ಬೆಳೆಗಳನ್ನು ಬೆಳೆದಾಗ ಹವಾಮಾನದ ವೈಪರೀತ್ಯದಿಂದಾಗಿ ಒಂದೇ ಬೆಳೆ ಇದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಆದರೆ ಕೃಷಿ ಜೊತೆಗೆ ತೋಟಗಾರಿಕೆ, ಅರಣ್ಯ ಬೆಳೆಗಳು, ಹೈನುಗಾರಿಕೆ, ಲಾಭದಾಯಕವಾಗಿದೆ. ಇದರ ಜೊತೆಗೆ ಉಪಕಸುಬುಗಳಾದ ರೇಷ್ಮೆ ಸಾಕಾಣಿಕೆ ಯಂತಹ ಕಸುಬುಗಳು ಕೃಷಿಯಲ್ಲಿ ನಷ್ಟ ತಡೆಗಟ್ಟಿ ಸ್ಥಿರತೆ ಕಾಪಾಡುವಲ್ಲಿ ಮತ್ತು ಸ್ವಾವಲಂಬನೆಯತ್ತ ಹೆಜ್ಜೆ ಇಡುವಲ್ಲಿ ಸಹಕಾರಿಯಾಗಿವೆ. ಅಂತಹ ಉಪಕಸುಬುಗಳಲ್ಲಿ ಸರಳ ಮತ್ತು ಹೆಚ್ಚಿನ ಲಾಭ ಕೊಡುವ ಮತ್ತು ಕಡಿಮೆ ಸಮಯ ಬಯಸುವ ಕಸುಬು ಎಂದರೆ ಜೇನು ಸಾಕಾಣಿಕೆ ಯಾಗಿದೆ. ದಿನದ ತುಸು ಸಮಯ ಮಾತ್ರ ಈ ಉಪಕಸುಬಿಗೆ ಸಾಕು, ಲಾಭ ಮಾತ್ರ ಅಧಿಕ. ರೈತ ಮಹಿಳೆಯರಿಗೆ ಇದು ಅತ್ಯಂತ ಸೂಕ್ತ ಉದ್ಯಮ. ಒಂದು ಜೇನು ಪೆಟ್ಟಿಗೆಯಿಂದ ವರ್ಷಕ್ಕೆ ಹಲವು ಬಾರಿ ಜೇನುತುಪ್ಪ ಪಡೆಯಬಹುದು. ನಿರಂತರ ಬೆಳೆ ಇದ್ದಲ್ಲಿ, ಪ್ರತೀ ತಿಂಗಳೂ ತುಪ್ಪ ಪಡೆಯಲು ಸಾಧ್ಯ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಪ್ರಗತಿಪರ ರೈತ ಅನಿಲಕುಮಾರ್ ಹಾಗೂ ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ರೈತ ನಿಂಗಪ್ಪ ಎನ್ನುವವರು ಜೇನು ಕೃಷಿಯನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಅಲ್ಲದೆ ಹೈದ್ರಾಬಾದ್-ಕರ್ನಾಟಕ ವ್ಯಾಪ್ತಿಯಲ್ಲಿ ಮೊದಲ ಜೇನು ಕೃಷಿಕರ ಎಂಪ್ಯಾನಲ್ ಸಂಘವನ್ನು ಸಹ ಸ್ಥಾಪಿಸಿ, ತೋಟಗಾರಿಕೆ ಇಲಾಖೆಯ ನೆರವು ಪಡೆಯುತ್ತಿದ್ದಾರೆ. ಸಂಘದಲ್ಲಿ ಈಗಾಗಲೆ 25 ರೈತರು ಸದಸ್ಯರಾಗಿದ್ದು, ಎಲ್ಲರೂ ಜೇನು ಕೃಷಿಯಲ್ಲಿ ಆಸಕ್ತಿ ತೋರಿದ್ದಾರೆ.
40 ಜೇನು ಪೆಟ್ಟಿಗೆ : ಗಂಗಾವತಿ ತಾಲೂಕು ಬಸಾಪಟ್ಟಣದ ರೈತ ಅನಿಲಕುಮಾರ್ ಅವರು ಮೇಟಿಕುರ್ಕೆಯಲ್ಲಿ ಶಾಂತವೀರಯ್ಯ ಎಂಬುವವರಿಂದ ಜೇನು ಕೃಷಿಯ ತರಬೇತಿ ಪಡೆದು, ಅವರಿಂದಲೇ 02 ಜೇನು ಪೆಟ್ಟಿಗೆ ಪಡೆದುಕೊಂಡು ಬಂದು, ತಮ್ಮ ತೋಟದಲ್ಲಿ ಜೇನು ಸಾಕಾಣಿಕೆ ಪ್ರಾರಂಭಿಸಿಯೇ ಬಿಟ್ಟರು. ಮೊದ ಮೊದಲು ವಿಫಲವಾದರೂ, ಕುಗ್ಗದೆ, ಮತ್ತೆ ಯತ್ನ ಮಾಡಿ ಯಶಸ್ಸು ಕಂಡರು. 20 ಎಕರೆ ಜಮೀನು ಹೊಂದಿರುವ ಇವರು, ಸಮಗ್ರ ಕೃಷಿ ಮಾಡುತ್ತಿದ್ದಾರೆ. ಮಾವು, ಪಪ್ಪಾಯಿ, ಭತ್ತ ಸೇರಿದಂತೆ ಹಲವು ಕೃಷಿ ಬೆಳೆಯನ್ನೂ ಬೆಳೆಯುತ್ತಾರೆ. ವಿಶೇಷವೆಂದರೆ, ಇವರು ಕೈಗಳ್ಳುವುದು ಸಾವಯವ ಕೃಷಿ ಮಾತ್ರ. ಯಾವುದೇ ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ಇದೀಗ ತಮ್ಮ ತೋಟದಲ್ಲಿ ಸುಮಾರು 40 ಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳನ್ನಿಟ್ಟು, ಜೇನು ಕೃಷಿ ಮಾಡುತ್ತಿದ್ದಾರೆ. ಇದೀಗ ಅವರು ಇತರರಿಗೂ, ಜೇನು ಕೃಷಿಗೆ ಉತ್ತೇಜಿಸುತ್ತಿದ್ದು, ಜೇನು ಕೃಷಿಗೆ ಬೇಕಾದ ಪರಿಕರಗಳನ್ನು ನೀಡುವುದಲ್ಲದೆ, ಅಗತ್ಯ ತರಬೆತಿಯನ್ನೂ ಇವರೇ ನೀಡುತ್ತಿದ್ದಾರೆ. ಕೊಪ್ಪಳ ಜಿಲ್ಲೆಯಷ್ಟೇ ಅಲ್ಲ, ಹೈದ್ರಾಬಾದ್-ಕರ್ನಾಟಕ ಪ್ರದೇಶದ ಹಲವು ಜಿಲ್ಲೆಗಳಿಂದ ರೈತರು ಸ್ವಯಂ ಪ್ರೇರಿತರಾಗಿ ಇವರಲ್ಲಿ ಬಂದು ಜೇನು ಸಾಕಾಣಿಕೆಯ ತರಬೇತಿ ಪಡೆದುಕೊಂಡು ಹೋಗುತ್ತಾರೆ.
ಇಳುವರಿ ಹೆಚ್ಚಳ ಪ್ರಮುಖ ಉದ್ದೇಶ : ಪ್ರತಿ ಜೇನು ಪೆಟ್ಟಿಗೆಯಿಂದ ವರ್ಷಕ್ಕೆ ಕನಿಷ್ಟ 04 ರಿಂದ 05 ಸಾವಿರ ಆದಾಯ ಗಳಿಸಲು ಸಾಧ್ಯವಿದೆ. ಆದರೆ ಜೇನು ಸಾಕಾಣಿಕೆಯ ಪ್ರಮುಖ ಉದ್ದೇಶ ಕೃಷಿ ಇಳುವರಿ ಹೆಚ್ಚಿಸಿಕೊಳ್ಳುವುದಾಗಿದೆ. ಜೇನು ಹುಳುಗಳು ಕೈಗೊಳ್ಳುವ ಪರಾಗಸ್ಪರ್ಷ ಕ್ರಿಯೆಯಿಂದ ಕೃಷಿಯಲ್ಲಿ ಶೇ. 40 ರಷ್ಟು ಇಳುವರಿ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಹೀಗಾಗಿ ಜೇನು ಸಾಕಾಣಿಕೆ ಜೇನು ತುಪ್ಪದ ಹಣ ತಂದುಕೊಟ್ಟರೆ, ಅದರ ಇನ್ನೊಂದು ಲಾಭವೆಂದರೆ, ಕೃಷಿ ಬೆಳೆ ಹೆಚ್ಚು ಇಳುವರಿ ತಂದು, ಲಾಭವನ್ನು ಇಮ್ಮಡಿಗೊಳಿಸುತ್ತದೆ.
ಕೃಷಿ ಹಾಗೂ ತೋಟಗಾರಿಕೆಯಲ್ಲಿ ಹೆಚ್ಚಿನ ರಾಸಾಯನಿಕ ಹಾಗೂ ಕೀಟನಾಶಕ ಬಳಕೆಯಿಂದಾಗಿ ಜೇನು ಹುಳುಗಳ ಪೀಳಿಗೆ ಸಂಕಷ್ಟದಲ್ಲಿದೆ. ಜೇನು ಹುಳುಗಳ ಕಣ್ಮರೆಯಿಂದ ಇಡೀ ಕೃಷಿ ಚಟುವಟಿಕೆಯೇ ಆತಂಕಕ್ಕೆ ಸಿಲುಕಲಿದೆ. ಪರಿಸರ ಉಳಿಸಿದಾಗ ಮಾತ್ರ ಜೇನು ಉಳಿದು, ಕೃಷಿ ಹಾಗೂ ಮನುಕುಲ ಉಳಿಯಲು ಸಾಧ್ಯ. ಜನರು ಶುದ್ಧ ಜೇನು ತುಪ್ಪ ಸಿಗುವ ಕಡೆ, ಹುಡುಕಿಕೊಂಡು ಬಂದು ಖರೀದಿಸುತ್ತಾರೆ. ಕೃಷಿ ಚಟುವಟಿಕೆಯ ಜೊತೆಗೆ ಜೇನು ಸಾಕಾಣಿಕೆ ನಿಜಕ್ಕೂ ಒಳ್ಳೆಯ ಉಪಕಸುಬಾಗಿದೆ. ಹೆಚ್ಚು ದೈಹಿಕ ಪರಿಶ್ರಮವಿಲ್ಲದ ಉಪಕಸುಬು ಇದಾಗಿದ್ದು, ರೈತ ಮಹಿಳೆಯರಿಗೂ ಇದು ಅತ್ಯಂತ ಸೂಕ್ತವಾಗಿದೆ ಎನ್ನುತ್ತಾರೆ ಪ್ರಗತಿಪರ ರೈತ ಅನಿಲಕುಮಾರ್
ಜೇನು ಸಾಕಾಣಿಕೆಯನ್ನು ಇತರೆ ರೈತರಿಗೂ ಪರಿಚಯಿಸುವ ಉದ್ದೇಶದಿಂದ ಕೊಪ್ಪಳ ತೋಟಗಾರಿಕೆ ಇಲಾಖೆ ಇಂದರಗಿ ಗ್ರಾಮದ ರೈತ ನಿಂಗಪ್ಪ ಎನ್ನುವವರನ್ನು ಜೇನುಕೃಷಿ ಪ್ರೇರಕರನ್ನಾಗಿ ನೇಮಿಸಿ, ಪ್ರತಿ ತಿಂಗಳು ಗೌರವಧನ ನೀಡುತ್ತಿದೆ. ನಿಂಗಪ್ಪ ಹೇಳುವಂತೆ ಒಂದು ಆರೋಗ್ಯವಂತ ರಾಣಿ ಜೇನು ನಿತ್ಯ 500 ರಿಂದ 1000 ಮೊಟ್ಟೆಗಳನಿಡ್ಡುತ್ತದೆ. ಪ್ರತಿ ರಾಣಿ ಜೇನಿನ ಜೀವಿತಾವಧಿ 2 ರಿಂದ 3 ವರ್ಷವಾಗಿದ್ದು, ಇತರೆ ಜೇನು ಹುಳುಗಳು ಸುಮಾರು ಒಂದು ಕಿ.ಮೀ. ವಿಸ್ತೀರ್ಣದಲ್ಲಿ ಸಂಚರಿಸಿ, ಮಕರಂದವನ್ನು ಹೀರಿ ತರುತ್ತವೆ. ಒಂದು ಜೇನು ಪೆಟ್ಟಿಗೆಯಲ್ಲಿ 08 ಸೂಪರ್ ಫ್ರೇಮ್ ಹಾಗೂ 08 ಇತರೆ ಫ್ರೇಮ್‍ಗಳನ್ನು ಇರಿಸಲಾಗುತ್ತದೆ. ಈಲ್ಲೆಯಲ್ಲಿ ಯಾವುದೇ ಗ್ರಾಮದ ರೈತರು ಜೇನು ಸಾಕಾಣಿಕೆಗೆ ಆಸಕ್ತಿ ತೋರಿದರೆ, ಅವರ ತೋಟಕ್ಕೇ ಹೋಗಿ, ಮಾಹಿತಿ ಹಾಗೂ ತರಬೇತಿ ನೀಡಲು ಸಿದ್ಧ ಎನ್ನುತ್ತಾರೆ.
ಕೊಪ್ಪಳ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದೀಗ, ಜೇನು ಕೃಷಿ ಪ್ರೋತ್ಸಾಹಿಸಿ, ರೈತರಲ್ಲಿ ಉತ್ತೇಜನ ನೀಡಲಾಗುತ್ತಿದೆ. ಮಧು ಮೇಳವನ್ನು ಜಿಲ್ಲೆಯಲ್ಲಿ ಆಯೋಜಿಸಿ, ಜೇನು ಕೃಷಿ ಬಗ್ಗೆ ರೈತರಿಗೆ ಮಾಹಿತಿ ಹಾಗೂ ಶುದ್ಧ ಜೇನು ತುಪ್ಪ ಮಾರಾಟ ಮಾಡಲು ಉತ್ತೇಜನ ನೀಡಲಾಗುತ್ತಿದೆ. ಜೇನು ಸಾಕಾಣಿಕೆಗೆ ಇಲಾಖೆಯಿಂದ ಪ್ರತಿ ಜೇನು ಪೆಟ್ಟಿಗೆಗೆ ಸಾಮಾನ್ಯ ರೈತರಿಗೆ ರೂ. 1800 ಹಾಗೂ ಪ.ಜಾತಿ/ಪ.ಪಂಗಡದವರಿಗೆ ರೂ. 3600 ಸಹಾಯಧನ ನೀಡಲಾಗುತ್ತಿದೆ. ಅಲ್ಲದೆ ಜೇನು ಸಾಕಾಣಿಕೆಯನ್ನು ಹೆಚ್ಚಿಸಿಕೊಂಡು ಮಧುವನ ಮಾಡಿಕೊಳ್ಳಲು ಬಯಸುವವರಿಗೆ 50 ಸಾವಿರ ರೂ. ಸಹಾಯಧನ ನೀಡಲಾಗುವುದು. ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು.
ಜೇನು ಕೃಷಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ರೈತ ಅನಿಲಕುಮಾರ್- 9900440777 ಅಥವಾ ನಿಂಗಪ್ಪ, ಜೇನು ಕೃಷಿ ಪ್ರೇರಕ- 9901499701 ಕ್ಕೆ ಸಂಪರ್ಕಿಸಬಹುದಾಗಿದೆ.
- ತುಕಾರಾಂರಾವ್ ಬಿ.ವಿ
ಜಿಲ್ಲಾ ವಾರ್ತಾಧಿಕಾರಿ,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ

ಹೀಗಾಗಿ ಲೇಖನಗಳು ಮಲೆನಾಡಿನ ಜೇನುಕೃಷಿ ಬಿಸಿಲ ನಾಡಿಗೂ ಬಂತು : ಕೊಪ್ಪಳದಲ್ಲೂ ಜೇನು ಸಾಕಾಣಿಕೆ ಮಾಡಿ ತುಪ್ಪದ ಹೊಳೆ ಹರಿಸಿದ ರೈತರು
ಎಲ್ಲಾ ಲೇಖನಗಳು ಆಗಿದೆ ಮಲೆನಾಡಿನ ಜೇನುಕೃಷಿ ಬಿಸಿಲ ನಾಡಿಗೂ ಬಂತು : ಕೊಪ್ಪಳದಲ್ಲೂ ಜೇನು ಸಾಕಾಣಿಕೆ ಮಾಡಿ ತುಪ್ಪದ ಹೊಳೆ ಹರಿಸಿದ ರೈತರು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಲೆನಾಡಿನ ಜೇನುಕೃಷಿ ಬಿಸಿಲ ನಾಡಿಗೂ ಬಂತು : ಕೊಪ್ಪಳದಲ್ಲೂ ಜೇನು ಸಾಕಾಣಿಕೆ ಮಾಡಿ ತುಪ್ಪದ ಹೊಳೆ ಹರಿಸಿದ ರೈತರು ಲಿಂಕ್ ವಿಳಾಸ https://dekalungi.blogspot.com/2017/11/blog-post_26.html
0 Response to "ಮಲೆನಾಡಿನ ಜೇನುಕೃಷಿ ಬಿಸಿಲ ನಾಡಿಗೂ ಬಂತು : ಕೊಪ್ಪಳದಲ್ಲೂ ಜೇನು ಸಾಕಾಣಿಕೆ ಮಾಡಿ ತುಪ್ಪದ ಹೊಳೆ ಹರಿಸಿದ ರೈತರು"
ಕಾಮೆಂಟ್ ಪೋಸ್ಟ್ ಮಾಡಿ