ಶೀರ್ಷಿಕೆ : ವೈದ್ಯರ ಕರ್ತವ್ಯ ಪ್ರಜ್ಞೆ : ಬೀದಿಪಾಲಾಗಲಿದ್ದ ನವಜಾತ ಶಿಶು ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ
ಲಿಂಕ್ : ವೈದ್ಯರ ಕರ್ತವ್ಯ ಪ್ರಜ್ಞೆ : ಬೀದಿಪಾಲಾಗಲಿದ್ದ ನವಜಾತ ಶಿಶು ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ
ವೈದ್ಯರ ಕರ್ತವ್ಯ ಪ್ರಜ್ಞೆ : ಬೀದಿಪಾಲಾಗಲಿದ್ದ ನವಜಾತ ಶಿಶು ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ
ಕೊಪ್ಪಳ ನ. 09 (ಕರ್ನಾಟಕ ವಾರ್ತೆ): ಅದೇ ತಾನೆ, ಜನ್ಮ ನೀಡಿದ ಮಗುವನ್ನು ವಯಕ್ತಿಕ ಕಾರಣಗಳಿಗಾಗಿ ತಾಯಿಯೋರ್ವಳು ತೊರೆದು ಹೋಗುವ ಹವಣಿಕೆಯಲ್ಲಿ ಇರುವುದನ್ನು ಗಮನಿಸಿದ ಗಂಗಾವತಿ ತಾಲೂಕು ಕಾರಟಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಇದೀಗ ಮಗುವನ್ನು ಸುರಕ್ಷಿತವಾಗಿ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಕಳೆದ ನ. 05 ರಂದು ಕಾರಟಗಿ ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆಯೊಬ್ಬಳು ಗಂಡು ಶಿಶುವಿಗೆ ಜನ್ಮ ನೀಡಿದಳು. ಆದರೆ ವಯಕ್ತಿಕ ಕಾರಣಗಳಿಗಾಗಿ ಮಗುವನ್ನು ತನ್ನೊಂದಿಗೆ ಒಯ್ಯಲು ಮನಸ್ಸಿಲ್ಲದೆ, ಮಗುವನ್ನು ತೂರೆದು ಹೋಗುವ ಹವಣಿಕೆಯಲ್ಲಿ ಇರುವುದನ್ನು ಗಮನಿಸಿದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಕರ್ತವ್ಯ ಪ್ರಜ್ಞೆ ಮೆರೆದು, ಕೂಡಲೆ ಈ ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದಾರೆ.
ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಈ ಮಾಹಿತಿಯನ್ನು ಕಾರಟಗಿ ಪೊಲೀಸ್ ಠಾಣೆಗೆ ನೀಡಿ, ಕೂಡಲೆ ಇದನ್ನು ತಡೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದರು. ಆರಕ್ಷಕ ಉಪ-ನಿರೀಕ್ಷಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ತಾಯಿಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿದರು. ಇದರ ಹೊರತಾಗಿಯೂ ಆ ತಾಯಿ, ಮಗುವನ್ನು ತಾನು ಪೋಷಣೆ ಮಾಡುವುದು ಅಸಾಧ್ಯ. ಹೀಗಾಗಿ ಮಗುವನ್ನು ನಿಮ್ಮ ವಶಕ್ಕೆ ತೆಗೆದುಕೊಳ್ಳಿ ಎಂದು ತಿಳಿಸಿದರು. ಮಗುವಿನ ಪೋಷಣೆಗೆ ಅವಶ್ಯವಾದ ನೆರವನ್ನು ಇಲಾಖೆಯಿಂದ ನೀಡುವ ಭರವಸೆಯನ್ನು ನೀಡಿದ್ದಾಗ್ಯೂ, ಸಹ ಒಪ್ಪಿಕೊಳ್ಳದೇ ಮಗುವನ್ನು ಇಲಾಖೆ ವಶಕ್ಕೆ ನೀಡುವದಾಗಿ ತಿಳಿಸಿದ್ದರಿಂದಾಗಿ. ನವಜಾತ ಶಿಶುವಿನ ಮಗುವಿನ ಆರೋಗ್ಯದ ಹಿತದೃಷ್ಠಿಯಿಂದ ಇನ್ನೂ ಎರಡು ದಿನದವರೆಗೆ ಆರೋಗ್ಯ ಕೇಂದ್ರದಲ್ಲಿಯೇ ಪೋಷಣೆ ಮಾಡುವಂತೆ ವೈದ್ಯಾಧಿಕಾರಿಗಳ ಶಿಪ್ಪಾರಸಿನಂತೆ ಅಲ್ಲಿಯೇ ಚಿಕಿತ್ಸೆ ನೀಡುವಂತೆ ಕೋರಲಾಯಿತು. ಇಷ್ಟೆಲ್ಲ ಪ್ರಯತ್ನಗಳ ಫಲವಾಗಿ, ಬೀದಿಪಾಲಾಗಲಿದ್ದ ಮಗುವನ್ನು ಆ ತಾಯಿ, ನಿಯಮಾನುಸಾರ, ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಾಗಿ ಆಧ್ಯಾರ್ಪಣೆಯನ್ನು ಮಾಡಿರುತ್ತಾಳೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಮಗುವನ್ನು ಅಮೂಲ್ಯ (ಪಿ) ದತ್ತು ಕೇಂದ್ರಕ್ಕೆ ವರ್ಗಾಯಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ ಕೊಪ್ಪಳದಲ್ಲಿ ದಾಖಲಿಸಿ, ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕಾರಟಗಿ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ. ಶಕುಂತಲ ಹಾಗೂ ವೈದ್ಯಾಧಿಕಾರಿ ಡಾ. ರಾಘವೇಂದ್ರ ಅವರ ಕರ್ತವ್ಯ ಪ್ರಜ್ಞೆ ಮತ್ತು ಸಮಿತಿಯ ಸದಸ್ಯ ಕಲ್ಲಪ್ಪ ತಳವಾರ ಯಲಬುರ್ಗಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತೆ ಯಮುನಮ್ಮ ಅವರ ಉತ್ತಮ ಕಾರ್ಯ ಅಭಿನಂದನಾರ್ಹವಾಗಿದೆ.
ಭಾರತೀಯ ದಂಡ ಸಂಹಿತೆ ಕಲಂ 317ರಡಿಯಲ್ಲಿ ಯಾವುದೇ ಶಿಶು ಅಥವಾ ಮಗುವನ್ನು, ಅದರ ಪಾಲನೆ ಮತ್ತು ಪೋಷಣೆ ಹೊಣೆಯಲ್ಲಿರುವ ಯಾರೇ ವ್ಯಕ್ತಿ ತೊರೆದು ಹೋಗುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಅಪರಾಧಕ್ಕ್ಕೆ 7 ವರ್ಷದ ಕಠಿಣ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಮಗುವನ್ನು ಎಲ್ಲೆಂದರಲ್ಲಿ ಬಿಸಾಡದೆ, ತೊರೆದು ಹೋಗದೆ, ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದಲ್ಲಿ, ಆ ಮಗುವಿನ ಸಂಪೂರ್ಣ ಹೊಣೆಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವಹಿಸಿಕೊಂಡು, ಮಗುವಿನ ಪುನರ್ವಸತಿಗೆ ಅಗತ್ಯ ಕ್ರಮ ಕೈಗೊಳ್ಳುವುದು.
ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರನ್ವಯ ಕಲಂ 31 ರಡಿ ಆರೈಕೆ ಮತ್ತು ಪೋಷಣೆ ಅವಶ್ಯವಿರುವ ಯಾವುದೇ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಪಡಿಸಬಹುದಾಗಿದೆ. ಈ ರೀತಿಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಪಡಿಸಿದ ಮಗುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಮುಂದೆ ಪುನರವಸತಿಯ ಕಲ್ಪಿಸುತ್ತದೆ.
ಯಾವುದೇ ಕಾರಣದಿಂದಲೂ, ಯಾವುದೇ ಮಗುವನ್ನು ತಂದೆ, ತಾಯಿ ಅಥವಾ ಪೋಷಕರು ಶಿಶು ಅಥವಾ ಮಗುವನ್ನು ಎಲ್ಲಿಂದರಲ್ಲಿ ತೊರೆದು ಹೋಗಿ ಶಿಕ್ಷೆಗೆ ಗುರಿಯಾಗದೇ, ಅಂತಹ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಪಡಿಸಿದಲ್ಲಿ, ಮಕ್ಕಳ ಕಲ್ಯಾಣ ಸಮಿತಿ ಮಗುವಿನ ಭವಿಷ್ಯವನ್ನು ರೂಪಿಸಲು ಅಗತ್ಯ ಕ್ರಮ ಕೈಗೊಳ್ಳುತ್ತದೆ ಎನ್ನುತ್ತಾರೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ನಿಲೋಫರ್ ರಾಂಪುರಿ ಅವರು.
ಹೀಗಾಗಿ ಲೇಖನಗಳು ವೈದ್ಯರ ಕರ್ತವ್ಯ ಪ್ರಜ್ಞೆ : ಬೀದಿಪಾಲಾಗಲಿದ್ದ ನವಜಾತ ಶಿಶು ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ
ಎಲ್ಲಾ ಲೇಖನಗಳು ಆಗಿದೆ ವೈದ್ಯರ ಕರ್ತವ್ಯ ಪ್ರಜ್ಞೆ : ಬೀದಿಪಾಲಾಗಲಿದ್ದ ನವಜಾತ ಶಿಶು ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ವೈದ್ಯರ ಕರ್ತವ್ಯ ಪ್ರಜ್ಞೆ : ಬೀದಿಪಾಲಾಗಲಿದ್ದ ನವಜಾತ ಶಿಶು ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ಲಿಂಕ್ ವಿಳಾಸ https://dekalungi.blogspot.com/2017/11/blog-post_23.html
0 Response to "ವೈದ್ಯರ ಕರ್ತವ್ಯ ಪ್ರಜ್ಞೆ : ಬೀದಿಪಾಲಾಗಲಿದ್ದ ನವಜಾತ ಶಿಶು ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ"
ಕಾಮೆಂಟ್ ಪೋಸ್ಟ್ ಮಾಡಿ