ಶೀರ್ಷಿಕೆ : ಶೇಷ್ಠ ಕೃಷಿಕ/ ಕೃಷಿ ಮಹಿಳೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಲಿಂಕ್ : ಶೇಷ್ಠ ಕೃಷಿಕ/ ಕೃಷಿ ಮಹಿಳೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಶೇಷ್ಠ ಕೃಷಿಕ/ ಕೃಷಿ ಮಹಿಳೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಕೊಪ್ಪಳ ನ. 13 (ಕರ್ನಾಟಕ ವಾರ್ತೆ): ರಾಯಚೂರು ಕೃಷಿ ವಿಶ್ವವಿದ್ಯಾಲದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಶ್ರೇಷ್ಠ ಕೃಷಿಕ/ ಕೃಷಿಮಹಿಳೆ ಮತ್ತು ಶ್ರೇಷ್ಠ ಯುವ ಕೃಷಿಕ/ ಯುವ ಕೃಷಿ ಮಹಿಳೆ ಪ್ರಶಸ್ತಿಗಾಗಿ ಆಸಕ್ತ ರೈತ ಮತ್ತು ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಯಚೂರು ಕೃಷಿ ವಿಶ್ವವಿದ್ಯಾಲಯವು ಮುಖ್ಯ ಆವರಣದಲ್ಲಿ ಡಿಸೆಂಬರ್ 8 ರಿಂದ 11 ರವರೆಗೆ “ಕೃಷಿ ಮೇಳ”ವನ್ನು ಆಯೋಜಿಸುತ್ತಿದ್ದು, ಕೃಷಿಗೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳ ಬಗ್ಗೆ ರೈತ ಬಾಂಧವರಿಗೆ ಮಾಹಿತಿ ಒದಗಿಸುವುದು ಹಾಗೂ ಅವುಗಳನ್ನು ಅಳವಡಿಸಲು ಪ್ರೇರೇಪಿಸುವ ಉದ್ದೇಶ ಈ ಮೇಳದ್ದಾಗಿದೆ. “ಜಲ-ನೆಲ ಸಿರಿ ∙ ಧಾನ್ಯ ಸಿರಿ ∙ ಜೀವನ ಸಿರಿ” ಎಂಬ ಶೀರ್ಷಿಕೆಯಡಿ ನಾಲ್ಕು ದಿನಗಳ ಈ ಮೇಳದಲ್ಲಿ ಶ್ರೇಷ್ಠ ಕೃಷಿಕ/ ಕೃಷಿಮಹಿಳೆ ಮತ್ತು ಶ್ರೇಷ್ಠ ಯುವ ಕೃಷಿಕ/ ಯುವ ಕೃಷಿ ಮಹಿಳೆಗೆ ನೆನಪಿನ ಕಾಣಿಕೆಯನ್ನು ಕೃಷಿ ವಿಶ್ವವಿದ್ಯಾಲಯದ ಹೆಸರನ್ನೊಳಗೊಂಡಂತೆ ಕೊಡಲಾಗುವುದು ಹಾಗೂ ಒಂದು ಆಕರ್ಷಕ ಶ್ರೇಷ್ಠ ಕೃಷಿಕ/ ಕೃಷಿಮಹಿಳೆ ಮತ್ತು ಶ್ರೇಷ್ಠ ಯುವ ಕೃಷಿಕ/ ಯುವ ಕೃಷಿಮಹಿಳೆ” ಎಂಬ ಬಿರುದನ್ನೊಳಗೊಂಡ ಪ್ರಮಾಣ ಪತ್ರವನ್ನು ನೀಡಲಾಗುವುದು.
ಅರ್ಜಿ ಸಲ್ಲಿಸಲು ಶ್ರೇಷ್ಠ ಕೃಷಿಕ/ ಕೃಷಿಮಹಿಳೆ ಮತ್ತು ಶ್ರೇಷ್ಠ ಯುವ ಕೃಷಿಕ/ಯುವ ಕೃಷಿ ಮಹಿಳೆ ಪ್ರಶಸ್ತಿಗೆ ಆಯ್ಕೆ ಮಾಡುವ ಯುವ ಕೃಷಿಕ ಮತ್ತು ಯುವ ಕೃಷಿಮಹಿಳೆಯ ವಯಸ್ಸು ಕನಿಷ್ಠ 18 ರಿಂದ 35 ಮಿತಿಯಲ್ಲಿರಬೇಕು. ಕನಿಷ್ಠ 3 ವರ್ಷ ಕೃಷಿಯಲ್ಲಿ ಅನುಭವವಿದ್ದು ಸ್ವತ: ಕೃಷಿಯನ್ನು ಮಾಡುತ್ತಿರಬೇಕು. ಇತರ ರೈತರಿಗೆ ಮಾರ್ಗದರ್ಶಿಯಾಗಿ ಮಾದರಿ ಯುವಕ ಎನಿಸಿಕೊಂಡಿರಬೇಕು. ಶ್ರೇಷ್ಠ ಕೃಷಿಕ/ ಕೃಷಿಮಹಿಳೆ ಮತ್ತು ಶ್ರೇಷ್ಠ ಯುವ ಕೃಷಿಕ/ ಯುವ ಕೃಷಿಮಹಿಳೆ ಅರ್ಜಿ ನಮೂನೆಯಲ್ಲಿ ಯಾವದೇ ವ್ಯತ್ಯಾಸವಿರುವುದಿಲ್ಲ. ಎಲ್ಲ ವರ್ಗದ ರೈತರಿಗೆ ಪ್ರಾತಿನಿಧ್ಯ ನೀಡುವುದು. ಈಗಾಗಲೇ ಇಂತಹ ಪುರಸ್ಕಾರಗಳು/ಪ್ರಶಸ್ತಿಗಳು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪಡೆದಿದ್ದರೆ ಅಂದರೆ ಕೃಷಿಗೆ ಸಂಬಂಧಿಸಿದ ಪ್ರಶಸ್ತಿ ಪಡೆದ ರೈತರ / ರೈತ ಮಹಿಳೆಯರ / ಯುವ ರೈತ / ಯುವ ರೈತ ಮಹಿಳೆ ನಾಮ ನಿರ್ದೇಶನವನ್ನು ಪರಿಗಣಿಸಲಾಗುವುದಿಲ್ಲ. ಪ್ರತಿ ಪ್ರಶಸ್ತಿಗೆ ಕನಿಷ್ಠ ಐದು ಅರ್ಜಿಗಳು ಇರಲೇ ಬೇಕು – ಕನಿಷ್ಠ ಅರ್ಜಿಗಳು ಇಲ್ಲದಿದ್ದಲ್ಲಿ ಆ ಜಿಲ್ಲೆಗೆ ಸಂಬಂಧಿಸಿದಂತಹ ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ. ಭರ್ತಿ ಮಾಡಿದ ಅರ್ಜಿಗೆ ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳಿಂದ ಶಿಫಾರಸ್ಸು ಮಾಡಿಸಿರಬೇಕು.
ಆಸಕ್ತ ರೈತ ಮತ್ತು ರೈತಮಹಿಳೆಯರು ನಿಗದಿತ ಅರ್ಜಿ ನಮೂನೆ-1ನ್ನು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಅಥವಾ ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ಹಾಗೂ ವಿಶ್ವವಿದ್ಯಾಲಯದ ವೆಬ್ ಸೈಟ್ http://ift.tt/2ADikXg ನಲ್ಲಿ ಸಹ ಪಡೆದು ಭರ್ತಿ ಮಾಡಿ ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳಿಂದ ಶಿಫಾರಸ್ಸು ಮಾಡಿಸಿ ನ. 20 ರ ಸಂಜೆ 5.00 ಗಂಟೆಯೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ದೂರವಾಣಿ ಸಂಖ್ಯೆ: 08359 220305 / 9480696319 ಅಥವಾ ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ದೂರವಾಣಿ ಸಂಖ್ಯೆ: 08533 272518 / 9480696316 ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಶೇಷ್ಠ ಕೃಷಿಕ/ ಕೃಷಿ ಮಹಿಳೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಶೇಷ್ಠ ಕೃಷಿಕ/ ಕೃಷಿ ಮಹಿಳೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಶೇಷ್ಠ ಕೃಷಿಕ/ ಕೃಷಿ ಮಹಿಳೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/11/blog-post_13.html
0 Response to "ಶೇಷ್ಠ ಕೃಷಿಕ/ ಕೃಷಿ ಮಹಿಳೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ