ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ತರಕಾರಿ ಬೀಜ ಕಿಟ್ ವಿತರಣೆ

ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ತರಕಾರಿ ಬೀಜ ಕಿಟ್ ವಿತರಣೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ತರಕಾರಿ ಬೀಜ ಕಿಟ್ ವಿತರಣೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ತರಕಾರಿ ಬೀಜ ಕಿಟ್ ವಿತರಣೆ
ಲಿಂಕ್ : ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ತರಕಾರಿ ಬೀಜ ಕಿಟ್ ವಿತರಣೆ

ಓದಿ


ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ತರಕಾರಿ ಬೀಜ ಕಿಟ್ ವಿತರಣೆ


ಕೊಪ್ಪಳ ನ. 30 (ಕರ್ನಾಟಕ ವಾರ್ತೆ): ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ “ಕೃಷಿ ಭಾಗ್ಯ” ಯೋಜನೆಯಡಿ ರೈತರಿಗೆ ತರಕಾರಿ ಬೀಜಗಳ ಕಿಟ್ ವಿತರಣೆ ಮಾಡುವಂತಹ ಕಾರ್ಯಕ್ರಮವನ್ನು ಮೊದಲ ಬಾರಿಗೆ ತೋಟಗಾರಿಕೆ ಇಲಾಖೆ ಜಾರಿಗೊಳಿಸಿದೆ.
       ರೈತರಿಗೆ ಕೃಷಿಯಲ್ಲಿ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಾಗೂ ನಿರಂತರ ಆದಾಯ ಗಳಿಕೆ ಮಾಡುವಂತಹ ತರಕಾರಿ ಕೃಷಿಗೆ ಪ್ರೋತ್ಸಾಹ ನೀಡಲು ಈ ವಿಶೇಷ ಯೋಜನೆ ಜಾರಿಗೊಳಿಸಲಾಗಿದೆ.  ಪ್ರಸಕ್ತ ಹಿಂಗಾರಿನಿಂದಲೇ ತರಕಾರಿ ಬೀಜಗಳ ಕಿಟ್ ವಿತರಣೆ ಶುರುವಾಗಲಿದೆ.  ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತರಕಾರಿ ಬೆಳೆಗಳ ಉತ್ಪಾದನಾ ವೆಚ್ಚ ಕಡಿಮೆ ಮಾಡಲು, ಗುಣಮಟ್ಟದ ಬೀಜಗಳನ್ನು ದೊರಕಿಸುವುದು ಯೋಜನೆಯ ಉದ್ದೇಶವಾಗಿದೆ.  ಅಧಿಕೃತ ಹಾಗೂ ಶಿಫಾರಸು ಮಾಡಿರುವ ಹೊಸ ಸುಧಾರಿತ ತರಕಾರಿ ತಳಿಗಳನ್ನು ಪರಿಚಯಿಸುವ ಜೊತೆಗೆ ರೈತರಿಗೆ ಉತ್ತೇಜಿಸಲು ಈ ವಿಶೇಷ ಸೌಲಭ್ಯ ಸಹಕಾರಿಯಾಗಲಿದೆ.
      ರೈತರಿಗೆ ಗುಣಮಟ್ಟದ ಬೀಜ ವಿತರಿಸುವುದಲ್ಲದೆ ನಂತರ ಹರಡುವ ವಿವಿಧ ರೋಗಗಳ ನಿರ್ವಹಣೆಗೂ ಇಲಾಖೆ ಕ್ರಮ ಕೈಗೊಂಡಿದೆ.  ತರಕಾರಿ ಬೀಜಗಳು, ತೋಟಗಾರಿಕೆ ಬೆಳೆಗಳ ಇಳುವರಿ ಹೆಚ್ಚಿಸುವ ಜೊತೆಗೆ ರೈತರ ಆರ್ಥಿಕ ಮಟ್ಟ ಸುಧಾರಿಸುವ ಉದ್ದೇಶ ಹೊಂದಲಾಗಿದೆ.  ಪ್ರಸಕ್ತ ಮುಂಗಾರು ಹಂಗಾಮಿನ ಕೊನೆಯಲ್ಲಿ ಉತ್ತಮ ಮಳೆಯಾಗಿದೆ.  ಆರಂಭಿಕ ಬೆಳೆ ವೈಫಲ್ಯ ಸರಿದೂಗಿಸಲು ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಬೆಳೆಯುವ ತರಕಾರಿ ಬೆಳೆಗಳಿಗೆ ಬೀಜ ಕಿಟ್‍ಗಳನ್ನು “ಕೃಷಿ ಭಾಗ್ಯ” ಯೋಜನೆಯಡಿ ವಿತರಿಸಲಾಗುತ್ತದೆ.  
      ಪ್ರತಿ ರೈತರಿಗೆ ತರಕಾರಿ ಬೇಸಾಯಕ್ಕೆ ತರಕಾರಿ ಬೀಜಗಳಿಗೆ 2000 ರೂ, ಜೈವಿಕ ಗೊಬ್ಬರ-500 ರೂ, ಸಸ್ಯ ಸಂರಕ್ಷಣಾ ಔಷಧ 1500 ರೂ, ಸೇರಿ ಒಟ್ಟು ಘಟಕ ವೆಚ್ಚ 4000 ರೂ. ಆಗಲಿದೆ.   ಈ ಪೈಕಿ ಗರಿಷ್ಟ 2000 ರೂ, ಮೊತ್ತದ  ವಿವಿಧ ತರಕಾರಿ ಬೆಳೆಗಳ ಬೀಜಗಳನ್ನು ಇಲಾಖೆ ವತಿಯಿಂದ ವಿತರಿಸಲಾಗುತ್ತದೆ.   ಬೀಜದ ವೆಚ್ಚ ಹೊರತುಪಡಿಸಿ, ಇತರ ಘಟಕಗಳ ವೆಚ್ಚವನ್ನು ರೈತರೇ ಭರಿಸಲು ನಿಯಮ ರೂಪಿಸಲಾಗಿದ್ದು, ತೋಟಗಾರಿಕೆ ರೈತರು ಈ ಬಗ್ಗೆ ಆಯಾ ತಾಲೂಕಿನ ತೋಟಗಾರಿಕೆ ಕಛೇರಿಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ತರಕಾರಿ ಬೀಜ ಕಿಟ್ ವಿತರಣೆ

ಎಲ್ಲಾ ಲೇಖನಗಳು ಆಗಿದೆ ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ತರಕಾರಿ ಬೀಜ ಕಿಟ್ ವಿತರಣೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ತರಕಾರಿ ಬೀಜ ಕಿಟ್ ವಿತರಣೆ ಲಿಂಕ್ ವಿಳಾಸ https://dekalungi.blogspot.com/2017/11/blog-post_104.html

Subscribe to receive free email updates:

0 Response to "ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ತರಕಾರಿ ಬೀಜ ಕಿಟ್ ವಿತರಣೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ