ಶೀರ್ಷಿಕೆ : ನ. 14 ರಿಂದ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆ : ದಿನಾಂಕ ನಿಗದಿ
ಲಿಂಕ್ : ನ. 14 ರಿಂದ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆ : ದಿನಾಂಕ ನಿಗದಿ
ನ. 14 ರಿಂದ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆ : ದಿನಾಂಕ ನಿಗದಿ
ಕೊಪ್ಪಳ ನ. 07 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಇವರಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಜಿಲ್ಲೆಯಾದ್ಯಂತ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ನ. 14 ರಿಂದ ಡಿಸೆಂಬರ್. 08 ರವರೆಗೆ ಹಮ್ಮಿಕೊಳ್ಳಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಗ್ರಾಮ ಮಟ್ಟದಲ್ಲಿ ಮಕ್ಕಳ ಸ್ಥಿತಿಗತಿಗಳನ್ನು ಚರ್ಚಿಸಿ, ವಿಶ್ಲೇಷಿಸಿ ಪಂಚಾಯತ ಮಟ್ಟದಲ್ಲೇ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳಿಂದ “ಮಕ್ಕಳ ಗ್ರಾಮಸಭೆ”ಗಳನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂವಾಯತ್ ರಾಜ್ ಇಲಾಖೆಯ ಸುತ್ತೋಲೆಯ ನಿರ್ದೇಶನದಂತೆ ಉತ್ತಮವಾಗಿ ಅನುಷ್ಠಾನಗೊಳಿಸಲಾಗಿದೆ. ಜಿಲ್ಲೆಯ ಎಲ್ಲಾ 153 ಗ್ರಾಮ ಪಂಚಾಯತಗಳಲ್ಲೂ, ಗ್ರಾಮ ಪಂಚಾಯತ ಮಟ್ಟದ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಸದಸ್ಯರು, ಮಕ್ಕಳ ಮತ್ತು ಕಿಶೋರಿ ಸಂಘಗಳ ಪ್ರತಿನಿಧಿಗಳನ್ನೊಳಗೊಂಡ ಮಕ್ಕಳ ಹಕ್ಕುಗಳ ಗ್ರಾಮಸಭೆ ಪೂರ್ವಭಾವಿ ಸಭೆಯನ್ನು ಆಯೋಜಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಗ್ರಾಮ ಸಭೆಯ ಬಗ್ಗೆ ವ್ಯಾಪಕ ಪ್ರಚಾರ ನೀಡಲು ಹಾಗೆಯೇ ಮಕ್ಕಳ ಹಕ್ಕುಗಳ ಗ್ರಾಮಸಭೆಗಳನ್ನು ಆಯೋಜಿಸಿ, ಶಿಶು ಮರಣ ತಡೆಯುವುದು, ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೌಷ್ಟಿಕ ಆಹಾರವನ್ನು ಒದಗಿಸುವುದು, ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡಲು ಅಗತ್ಯ ಕ್ರಮವಹಿಸಬೇಕು. ಎಲ್ಲಾ 3 ವರ್ಷದಿಂದ 6 ವರ್ಷದ ಮಕ್ಕಳು ಅಂಗನವಾಡಿಗಳಲ್ಲಿ, 6 ರಿಂದ 14 ವರ್ಷದ ಮಕ್ಕಳು ಶಾಲೆಗಳಲ್ಲಿ ದಾಖಲಾಗಿ ಶಿಕ್ಷಣವನ್ನು ಪಡೆಯುವಂತೆ ಮತ್ತು 14 ರಿಂದ 18 ವರ್ಷದ ಮಕ್ಕಳು ಶಿಕ್ಷಣದ ಮುಖ್ಯವಾಹಿನಿಯಲ್ಲಿ ಇರುವಂತೆ ಮಾಡುವುದು. ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಆಟ-ಪಾಠಗಳ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ರೂಪಿಸುವುದು. ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಜೀತ ಪದ್ಧತಿ, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವುದು ಮತ್ತು ಅವುಗಳನ್ನು ನಿರ್ಮೂಲನೆ, ಮಕ್ಕಳ ಪೋಷಣೆ ಹಾಗೂ ರಕ್ಷಣೆಗಿರುವ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವುದು. ಹಾಗೂ ಮಕ್ಕಳ ಭಾಗವಹಿಸುವ ಹಕ್ಕನ್ನು ಖಾತರಿ ಪಡಿಸುವುದು ಈ ಅಂಶಗಳನ್ನು ಚರ್ಚಿಸಲು ಆದೇಶಿಸಲಾಗಿದೆ.
ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ನಡೆಯುವ ದಿನಾಂಕ ಮತ್ತು ಗ್ರಾಮಗಳ ವಿವರ ಇಂತಿದೆ.
ಗಂಗಾವತಿ ತಾಲೂಕು: ನ.14 ರಂದು ಅಗೋಲಿ & ಆನೇಗುಂದಿ, 15 ರಂದು ಬರಗೂರು & ಬಸಾಪಟ್ಟಣ, 16 ರಂದು ಬಸರಿಹಾಳ & ಬೆನ್ನೂರು, 17 ರಂದು ಬೇವಿನಾಳ & ಬುದಗುಂಪಾ, 18 ರಂದು ಚೆಳ್ಳೂರು & ಚಿಕ್ಕಜಂತಕಲ್, 20 ರಂದು ಚಿಕ್ಕಬೆಣಕಲ್ & ಚಿಕ್ಕೆಂಕನಕಲ್, 21 ರಂದು ಚಿಕ್ಕಮಾದಿನಾಳ & ಡಾಣಾಪುರ, 22 ರಂದು ಗೌರಿಪು & ಗುಂಡುರ, 23 ರಂದು ಹಣವಾಳ & ಹೇರೂರು, 24 ರಂದು ಹಿರೇಖೇಡ & ಹೊಸಕೇರಾ, 25 ರಂದು ಹುಲಿಹೈದರ್ & ಹುಲ್ಕಿಹಾಳ, 27 ರಂದು ಜಂಗಮರ ಕಲ್ಗುಡಿ & ಜೀರಾಳ, 28 ರಂದು ಕರಡೋಣ & ಕೇಸರಟ್ಟಿ, 29 ರಂದು ಮೈಲಾಪುರ & ಮುಲ್ಲಾಪುರ, 30 ರಂದು ಮರ್ಲಾನಹಳ್ಳಿ & ಮುಸಲಾಪುರ, ಡಿಸೆಂಬರ್. 02 ರಂದು ಮುಸ್ಟೂರು & ನವಲಿ, ಡಿ. 04 ರಂದು ಸಾಣಾಪುರ & ಸಂಗಾಪುರ, ಡಿ. 05 ರಂದು ಸಿದ್ದಾಪುರ & ಶ್ರೀರಾಮನಗರ, ಡಿ. 06 ರಂದು ಸುಳೇಕಲ್ಲ & ಉಳೇನೂರು, ಡಿ. 07 ರಂದು ವಡ್ಡರಟ್ಟಿ & ವೆಂಕಟಗಿರಿ ಹಾಗೂ ಡಿ. 08 ರಂದು ಯರಡೋಣಾ ಗ್ರಾಮ ಪಂಚಾಯತಗಳಲ್ಲಿ.
ಕೊಪ್ಪಳ ತಾಲೂಕು: ನ. 14 ರಂದು ಅಗಳಕೇರಾ & ಅಳವಂಡಿ, 15 ರಂದು ಬಹದ್ದೂರಬಂಡಿ & ಬಂಡಿಹರ್ಲಾಪುರ, 16 ಬೆಟಗೇರಿ & ಬೇವಿನಹಳ್ಳಿ, 17 ರಂದು ಬಿಸರಳ್ಳಿ & ಬೋಚನಹಳ್ಳಿ, 18 ರಂದು ಬುದಗುಂಪಾ & ಚಿಕ್ಕಬೊಮ್ಮನಾಳ, 20 ರಂದು ಗಿಣಿಗೇರಾ & ಗೊಂಡಬಾಳ, 21 ರಂದು ಗುಳದಳ್ಳಿ & ಹಲಗೇರಿ, 22 ರಂದು ಹಾಲವರ್ತಿ & ಹಾಸಗಲ, 23 ರಂದು ಹಟ್ಟಿ & ಹಿರೇಬಗನಾಳ, 24 ರಂದು ಹಿರೇಸಿಂದೋಗಿ & ಹಿಟ್ನಾಳ, 25 ರಂದು ಹೊಸಳ್ಳಿ & ಹುಲಗಿ, 27 ರಂದು ಇಂದರಗಿ & ಇರಕಲಗಡಾ, 28 ರಂದು ಕಲಕೇರಿ & ಕಲ್ಲತಾವರಗೇರಾ, 29 ರಂದು ಕಾತರಕಿ-ಗುಡ್ಲಾನೂರ, ಕವಲೂರ & ಕಿನ್ನಾಳ, 30 ರಂದು ಕೋಳುರು & ಕುಣಿಕೇರಿ, ಡಿಸೆಂಬರ್. 02 ರಂದು ಲೇಬಗೇರಿ & ಮಾದಿನೂರ, ಡಿ. 04 ರಂದು ಮತ್ತೂರು & ಮುನಿರಾಬಾದ್ ಡ್ಯಾಂ, ಡಿ. 05 ರಂದು ಓಜನಹಳ್ಳಿ & ಶಿವಪುರ, ಹಾಗೂ ಡಿ. 06 ರಂದು ವನಬಳ್ಳಾರಿ ಗ್ರಾಮ ಪಂಚಾಯತಗಳಲ್ಲಿ.
ಕುಷ್ಟಗಿ ತಾಲೂಕು : ನ. 14 ರಂದು ಅಡವಿಬಾವಿ & ಅಂಟರಠಾಣಾ, 15 ರಂದು ಬೆನಕನಹಾಳ & ಬಿಜಕಲ್ಲ, 16 ರಂದು ಬಿಳಿಕಲ್ಲ & ಚಳಗೇರಾ, 17 ರಂದು ದೋಟಿಹಾಳ & ಗುಮಗೇರಾ, 18 ರಂದು ಹಾಬಲಕಟ್ಟಿ & ಹನುಮನಾಳ, 20 ರಂದು ಹನುಮಸಾಗರ & ಹಿರೇಬನ್ನಿಗೋಳ, 21 ರಂದು ಹಿರೇಗೊಣ್ಣಾಗರ & ಹಿರೇಮನ್ನಾಪುರ, 22 ರಂದು ಹಿರೇನಂದಿಹಾಳ & ಹುಲಗೇರಾ, 23 ರಂದು ಜಾಹಗೀರಗುಡದೂರ & ಜುಮಲಾಪುರ, 24 ರಂದು ಕಬ್ಬರಗಿ & ಕಂದಕೂರು, 25 ರಂದು ಕಾಟಾಪುರ & ಕೇಸೂರು, 27 ರಂದು ಕಿಲ್ಲಾರಹಟ್ಟಿ & ಕೊರಡಕೇರಾ, 28 ರಂದು ಕ್ಯಾದಿಗುಪ್ಪಾ & ಲಿಂಗದಳ್ಳಿ, 29 ರಂದು ಮಾಲಗಿತ್ತಿ, ಮೇಣದಾಳ & ಮುದೇನೂರು, 30 ರಂದು ನಿಲೊಗಲ್ಲ & ಸಂಗನಹಾಳ, ಡಿಸೆಂಬರ್. 02 ರಂದು ಶಿರಗುಪ್ಪಾ & ತಳವಗೇರಾ, ಡಿ. 04 ರಂದು ತುಗ್ಗಲಡೋಣಿ & ತುಮರಿಕೊಪ್ಪ, ಹಾಗೂ ಡಿ. 05 ರಂದು ಯರಗೇರಾ ಗ್ರಾಮ ಪಂಚಾಯತಗಳಲ್ಲಿ.
ಯಲಬುರ್ಗಾ ತಾಲೂಕು : ನ. 14 ರಂದು ಬಳಗೇರಿ & ಬಳೂಟಗಿ, 15 ರಂದು ಬಂಡಿ & ಬನ್ನಿಕೊಪ್ಪ, 16 ರಂದು ಬೆನಕನಹಾಳ & ಬೇವೂರು, 17 ರಂದು ಭಾನಾಪುರ & ಬೋದುರು, 18 ರಂದು ಚಿಕ್ಕಮ್ಯಾಗೇರಿ & ಗಾಣದಾಳ, 20 ರಂದು ಗೆದ್ದಿಗೇರಿ & ಗುನ್ನಾಳ, 21 ರಂದು ಹಿರೇಹರಳಹಳ್ಳಿ & ಹಿರೇಬಂಡಿಹಾಳ, 22 ರಂದು ಹಿರೇಮ್ಯಾಗೇರಿ & ಹಿರೇವಂಕಲಕುಂಟಾ, 23 ರಂದು ಇಟಗಿ ಮತ್ತು ಕಲ್ಲೂರ, 24 ರಂದು ಕರಮುಡಿ & ಕುದರಿಮೋತಿ, 25 ರಂದು ಮಂಡಲಗೇರಿ & ಮಂಗಳೂರು, 27 ರಂದು ಮಸಬಹಂಚಿನಾಳ & ಮಾಟಲದಿನ್ನಿ, 28 ರಂದು ಮುದೋಳ & ಮುರಡಿ, 29 ರಂದು ನೆಜೇರಿ, ರಾಜೂರು & ಸಂಗನಹಾಳ, 30 ರಂದು ಸಂಕನೂರು & ಶಿರೂರ, ಡಿಸೆಂಬರ್. 02 ರಂದು ತಳಕಲ್ಲ & ತಾಳಕೇರಿ, ಡಿ. 04 ರಂದು ತುಮರಗುದ್ದಿ & ವಜ್ರಬಂಡಿ, ಹಾಗೂ ಡಿ. 05 ರಂದು ವಣಗೇರಿ & ಯರೇಹಂಹಿನಾಳ ಗ್ರಾಮ ಪಂಚಾಯತಗಳಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ನಡೆಲಿವೆ.
ಮಕ್ಕಳ ಹಕ್ಕುಗಳ ಗ್ರಾಮಸಭೆಗಳನ್ನು ನ. 14 ರಿಂದ ಡಿಸೆಂಬರ್. 08 ರವರೆಗೆ ಆಯೋಜಿಸಲು ತಿಳಿಸಲಾಗಿದ್ದು, ಒಂದು ವೇಳೆ ನಿಗದಿಪಡಿಸಿದ ದಿನಾಂಕದಂದು ಗ್ರಾಮಸಭೆಗಳನ್ನು ಆಯೋಜಿಸುವುದು ಸಾಧ್ಯವಾಗದಿದ್ದಲ್ಲಿ ನವೆಂಬರ್. 14 ರಿಂದ ಡಿಸೆಂಬರ್. 14 ರೊಳಗಾಗಿ ಕಡ್ಡಾಯವಾಗಿ ಆಯೋಜಿಸಿ, ಪೂರ್ವ ತಯಾರಿ ಸಭೆಯ ವರದಿ, ಗ್ರಾಮಸಭೆಯ ನಡಾವಳಿಗಳು ಹಾಗೂ ನಮೂನೆಯ ವರದಿಗಳನ್ನು ಗ್ರಾಮಸಭೆ ಮುಗಿದ 10 ದಿನದ ಒಳಗಾಗಿ ತಾಲೂಕು ಪಂಚಾಯತ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾಡಳಿತ, ಕೊಪ್ಪಳ ಕಛೇರಿಗೆ ಸಲ್ಲಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ನ. 14 ರಿಂದ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆ : ದಿನಾಂಕ ನಿಗದಿ
ಎಲ್ಲಾ ಲೇಖನಗಳು ಆಗಿದೆ ನ. 14 ರಿಂದ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆ : ದಿನಾಂಕ ನಿಗದಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ನ. 14 ರಿಂದ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆ : ದಿನಾಂಕ ನಿಗದಿ ಲಿಂಕ್ ವಿಳಾಸ https://dekalungi.blogspot.com/2017/11/14.html
0 Response to "ನ. 14 ರಿಂದ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆ : ದಿನಾಂಕ ನಿಗದಿ"
ಕಾಮೆಂಟ್ ಪೋಸ್ಟ್ ಮಾಡಿ