News & photos Dt.02-10-2017(2nd round)

News & photos Dt.02-10-2017(2nd round) - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News & photos Dt.02-10-2017(2nd round), ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News & photos Dt.02-10-2017(2nd round)
ಲಿಂಕ್ : News & photos Dt.02-10-2017(2nd round)

ಓದಿ


News & photos Dt.02-10-2017(2nd round)


                                           “ ಸಿವಿಕ್ ವರ್ಕರ್ಸ್ ಆಫ್ ಕಲಬುರಗಿ” ಕಿರುಚಿತ್ರದ ಸಿ.ಡಿ. ಬಿಡುಗಡೆ
ಕಲಬುರಗಿ,ಅ.02.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆಯಿಂದ ಪಾಲಿಕೆಯ ಅಭಿವೃದ್ಧಿ ಕಾರ್ಯಗಳಲ್ಲಿ ಪೌರ ಕಾರ್ಮಿಕರ ಪಾತ್ರದ ಕುರಿತು ನಿರ್ಮಿಸಲಾದ 20 ನಿಮಿಷದ “ ಸಿವಿಕ್ ವರ್ಕರ್ಸ್ ಆಫ್ ಕಲಬುರಗಿ” ಕಿರುಚಿತ್ರದ ಸಿ.ಡಿ.ಯನ್ನು ಸೋಮವಾರ ಇಲ್ಲಿನ ಮಿರಾಜ್ ಸಿನೆಮಾಸ್‍ನಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಸಚಿವರು ಕಲಬುರಗಿ ನಗರದ ಸ್ವಚ್ಛತೆಯಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುತ್ತಿದ್ದು, ಇದರ ಹಿಂದೆ ಪಾಲಿಕೆಯ ಅಧಿಕಾರಿಗಳು, ಜನಪ್ರತಿನಿಧಿಗಳು ವಿಶೇಷವಾಗಿ ಪೌರಕಾರ್ಮಿಕರ ಅವಿರತವಾದ ಕಾರ್ಯ ಅಡಗಿದೆ. ಪೌರಕಾರ್ಮಿಕರ ಸೇವಾ ಭದ್ರತೆ ಒದಗಿಸಲು ಸರ್ಕಾರ ಸಂಕಲ್ಪ ಮಾಡಿದ್ದು, ಹಂತ ಹಂತವಾಗಿ ಖಾಯಂ ಮಾಡಲಾಗುತ್ತಿದೆ. ಪೌರಕಾರ್ಮಿಕರು ಮಾಸಿಕ 14 ಸಾವಿರ ಸಂಬಳ ಪಡೆಯುವಂತೆ ಮಾಡಲಾಗಿದೆ. ಕಲಬುರಗಿಯ 12 ಪೌರಕಾರ್ಮಿಕರಿಗೆ ಇತ್ತೀಚಿಗೆ ಸಿಂಗಾಪುರ ಪ್ರವಾಸದ ಭಾಗ್ಯ ಸಹ ನೀಡಲಾಗಿದೆ. ಒಟ್ಟಾರೆಯಾಗಿ ನಗರವನ್ನು ಸ್ವಚ್ಛಗೊಳಿಸುವ ಸಫಾಯಿ ಕರ್ಮಚಾರಿಗಳ ಜೀವನವು ಸ್ವಾಭಿಮಾನದಿಂದ ಹಾಗೂ ಸ್ವಚ್ಛತೆಯಿಂದ ಕೂಡಿರಲಿ ಎಂಬುದೇ ಸರ್ಕರದ ಸದಾಶಯವಾಗಿದ್ದು, ಈ ನಿಟ್ಟಿನಲ್ಲಿ ಅವರಿಗೆ ಎಲ್ಲಾ ಸವಲತ್ತುಗಳನ್ನು ಪೂರೈಸಲಾಗುವುದು ಎಂದರು.
ಮಹಾನಗರ ಪಾಲಿಕೆಯ ಮಹಾಪೌರರಾದ ಶರಣಕುಮಾರ ಮೋದಿ ಮಾತನಾಡಿ ಕಲಬುರಗಿ ನಗರವನ್ನು ಸ್ವಚ್ಛವಾಗಿಡಲು ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಶ್ರಮದ ಪ್ರತಿಫಲವಾಗಿ ಕಲಬುರಗಿ ಪಾಲಿಕೆಗೆ ಮುಖ್ಯಮಂತ್ರಿಗಳಿಂದ ಪರಿಸರ ಪ್ರಶಸ್ತಿ, ಅತ್ಯುತ್ತಮ ನಿರ್ವಹಣೆಗೆ ಅಭ್ಯಾಸ ಪ್ರಶಸ್ತಿ ಹಾಗೂ ದೆಶದ ಟಾಪ್ 50 ಪಾಲಿಕೆಗಳಲ್ಲಿ ಕಲಬುರಗಿ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿವಾಗಿದ್ದು, ಈ ಕೀರ್ತಿ ಪೌರಕಾರ್ಮಿಕರಿಗೆ ಸಲ್ಲಬೇಕು ಎಂದರು.
ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ ಪಾಲಿಕೆಗೆ ಅನುದಾನದ ಕೊರತೆಯಿದ್ದು, ಹೆಚ್.ಕೆ.ಆರ್.ಡಿ.ಬಿ. ಅನುದಾನ ನೀಡುವ ಮೂಲಕ ಕಲಬುರಗಿ ನಗರ ಸ್ವಚ್ಛತೆಗೆ ಪರೋಕ್ಷ ಕಾರಣವಾಗಿದೆ ಎಂದರು.
ಮಹಾನಗರ ಪಾಲಿಕೆಯ ಆಯುಕ್ತ ಪಿ.ಸುನೀಲ ಕುಮಾರ್ ಮಾತನಾಡಿ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಹಣಕಾಸು ನೆರವಿನೊಂದಿಗೆ ಈ ಕಿರುಚಿತ್ರ ನಿರ್ಮಿಸಲಾಗಿದ್ದು, ಶ್ರೀನಾಥ ಹೊಸಮನಿ ನಿರ್ದೇಶಿಸಿದ್ದಾರೆ. 20 ನಿಮಿಷದ ಅವಧಿಯ ಈ ಕಿರುಚಿತ್ರದಲ್ಲಿ ಪಾಲಿಕೆಯ ಕಸ ವಿಲೇವಾರಿ ನಿರ್ವಹಣೆ, ರಸ್ತೆ ಗುಂಡಿ ಮುಚ್ಚಲು ಬಳಸುವ ಯಂತ್ರಗಳ ನಿರ್ವಹಣೆ ಹಾಗೂ ಬೀದಿ ದೀಪಗಳ ಸ್ವಯಂಚಾಲಿತ ನಿರ್ವಹಣೆ ಬಗ್ಗೆ ಹಾಗೂ ಪಾಲಿಕೆಯ ಮಹಾಪೌರರ ಸಂದೇಶ ಪ್ರಸಾರವಾಗಲಿದೆ ಎಂದರು.
ನಂತರ “ಎ ಸಿವಿಕ್ ವರ್ಕರ್ಸ್ ಆಫ್ ಕಲಬುರಗಿ” ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಮಹಾನಗರ ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಕಾರ್ಯನಿರ್ವಾಹಕ ಇಂಜಿನೀಯರ ಆರ್.ಪಿ.ಜಾಧವ, ಪರಿಸರ ಇಂಜನೀಯರ ಮುನಾಫ ಪಟೇಲ, ಮೀರಾಜ್ ಚಿತ್ರಮಂದಿರ ವ್ಯವಸ್ಥಾಪಕ ಜತೀನ್, ಬಿಗ್ ಬಜಾರ್ ಮಾಲಿಕ ಅನೀಲ ಕಳಸ್ಕರ ಸೇರಿದಂತೆ ಗಣ್ಯರು, ನೂರಾರು ಸಂಖ್ಯೆಯ ಪೌರಕಾರ್ಮಿಕರು ಭಾಗವಹಿಸಿದ್ದರು.
                                 ಶೌಚಾಲಯದಲ್ಲಿ ಕ್ರಾಂತಿ: ಜಿಲ್ಲಾಧಿಕಾರಿ ವೆಂಕಟೇಶ ಕುಮಾರ ಅವರಿಗೆ ಗಾಂಧಿ ಪುರಸ್ಕಾರ

ಕಲಬುರಗಿ,ಅ.02.(ಕ.ವಾ.)-ಕಲಬುರಗಿ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರು ಹಾಸನ ಜಿಲ್ಲಾ ಪಂಚಾಯತಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಹಾಸನ ಜಿಲ್ಲೆಯನ್ನು ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸಿದ್ದಕ್ಕಾಗಿ ಸೋಮವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಗಾಂಧಿ ಪುರಸ್ಕಾರ” ಕ್ಕೆ ಭಾಜನರಾದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಶೌಚಾಲಯ ಮುಕ್ತ ಜಿಲ್ಲೆಯನ್ನಾಗಿಸಲು ದುಡಿದು ಶೌಚಾಲಯ ನಿರ್ಮಣದಲ್ಲಿ ಕ್ರಾಂತಿಯನ್ನೆ ಮಾಡಿದ ಅಧಿಕಾರಿ ವರ್ಗದವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ.ಪಾಟೀಲ್ ಸತ್ಕರಿಸಿದರು.
ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಹಾಸನ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ 3 ತಿಂಗಳಲ್ಲಿಯೆ 57 ಸಾವಿರ ಶೌಚಾಲಯ ಹಾಗೂ 2 ವರ್ಷದಲ್ಲಿ 2 ಲಕ್ಷಕ್ಕಿಂತ ಅಧಿಕ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಶೌಚಾಲಯದಲ್ಲಿ ಕ್ರಾಂತಿ ಮಾಡಿದ್ದರು. ಜುಲೈ-2017ರ ಅಂತ್ಯಕ್ಕೆ 299907 ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಜಿಲ್ಲೆಗೆ ಹಂಚಿಕೆಯಾದ 45 ಕೋಟಿ ರೂ. ಸಂಪೂರ್ಣ ಅನುದಾನ ಖರ್ಚು ಮಾಡಿ ಆರ್ಥಿಕ ಪ್ರಗತಿಯೂ ಸಾಧಿಸಿದ್ದರು. ಹಾಸನ ಜಿಲ್ಲೆಯು 267 ಗ್ರಾಮ ಪಂಚಾಯತಿಗಳು 2420 ಗ್ರಾಮಗಳನ್ನು ಹೊಂದಿದ್ದು, 357510 ಕುಟುಂಬಗಳು ಶೌಚಾಲಯಗಳನ್ನು ಹೊಂದಿದ್ದಾರೆ. ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಸದಸ್ಯರು ಮನೆಯಲ್ಲಿ ಶೌಚಾಲಯಗಳನ್ನು ಹೊಂದುವುದು ಕಡ್ಡಾಯವಾಗಿದ್ದು, ಇದನ್ನು ಅನುಸರಿಸಿದ ಜನಪ್ರತಿನಿಧಿಗಳಿಗೆ ಕಡ್ಡಾಯವಾಗಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವಂತೆ ವೆಂಕಟೇಶ ಕುಮಾರ ಆದೇಶ ಹೊರಡಿಸಿದ್ದರು.
ಅದೇ ರೀತಿ ಜೆಸ್ಕಾಂ ಕಲಬುರಗಿಯ ವ್ಯವಸ್ಥಾಪಕ ನಿರ್ದೇಶಕಿ ರಾಗಪ್ರಿಯಾ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಶೇ.50ರಷ್ಟು ಪ್ರಗತಿ ಸಾಧಿಸಿದ್ದಕ್ಕಾಗಿ ಅವರನ್ನು ಸಹ ಸಚಿವರು ಗಾಂಧಿ ಪುರಸ್ಕಾರ ನೀಡಿ ಸನ್ಮಾನಿಸಿದರು.

                                                            ಕಲಬುರಗಿ ಜಿ.ಪಂ. ಮುಡಿಗೆ ಸಫಾಯಿಗಿರಿ ಪ್ರಶಸ್ತಿ

ಕಲಬುರಗಿ,ಅ.02.(ಕ.ವಾ.)-ಕಲಬುರಗಿ ಜಿಲ್ಲಾ ಪಂಚಾಯತಿಯು ಸ್ವಚ್ಛಭಾರತ್ ಮಿಷನ್ ಅಡಿಯಲ್ಲಿ ಕೈಗೊಂಡಿರುವ ಶೌಚಾಲಯ ನಿರ್ಮಾಣ ಆಂದೋಲನಕ್ಕೆ ಇಂಡಿಯಾ ಟೈಮ್ಸ್ ಗ್ರೂಪ್ ನೀಡುವ 2017ರ ಸಫಾಯಿಗಿರಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ನವದೆಹಲಿಯಲ್ಲಿ ಅಕ್ಟೋಬರ್ 2 ರಂದು ಜರುಗಿದ ಕಾರ್ಯಕ್ರಮದಲ್ಲಿ ಟಾಯಲೆಟ್ ಏಕ್ ಪ್ರೇಮ ಕಥಾ ಚಿತ್ರದ ನಾಯಕಿ ಭೂಮಿ ಪಡ್ನೇಕರ್ ಪ್ರಶಸ್ತಿ ಪ್ರದಾನ ಮಾಡಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಅಧಿಕಾರ ಸ್ವೀಕರಿಸಿದ ನಂತರ ಈ ಹಿಂದೆ ಯಾರೂ ಗಮನಿಸದ ಸಮಸ್ಯೆ ಶೌಚಾಲಯ ನಿರ್ಮಾಣಕ್ಕೆ ಆಧ್ಯತೆ ನೀಡಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯಶಸ್ಸು ಸಾಧಿಸಲಾಗಿದೆ. ಇಂತಹ ಸಮಾಜ ಸುಧಾರಣೆ ಹಾಗೂ ಪರಿವರ್ತನೆ ಕಾರ್ಯವನ್ನು ಗಮನಿಸಿ ಈ ಪ್ರಶಸ್ತಿ ನೀಡಲಾಗಿದೆ.
ಸ್ವಚ್ಛಭಾರತ ಮಿಷನ್ ಅಡಿಯಲ್ಲಿ ಕಲಬುರಗಿ ಜಿಲ್ಲಾ ಪಂಚಾಯತಿಯಿಂದ ಜಿಲ್ಲೆಯ ಎಲ್ಲ ಗರ್ಭಿಣಿಯರ ಮನೆಯಲ್ಲಿ ಹಾಗೂ ಆಶಾ ಕಾರ್ಯಕರ್ತೆಯರ ಮನೆಯಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಕೂಸು ಕಾರ್ಯಕ್ರಮ ರೂಪಿಸಿ ಕೇವಲ ಎರಡು ವಾರಗಳಲ್ಲಿ ಸುಮಾರು 11 ಸಾವಿರ ಶೌಚಾಲಯಗಳನ್ನು ನಿರ್ಮಿಸಿ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿತ್ತು. ಗರ್ಭೀಣಿಯರಿಗೆ ಸೀಮಂತ ಮಾಡುವ ಮೂಲಕ ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹಿಸುವ ಕಾರ್ಯಕ್ರಮವನ್ನು ರಾಜ್ಯದ ಇನ್ನಿತರೇ ಜಿಲ್ಲೆಯವರು ಅನುಕರಣೆ ಮಾಡುತ್ತಿರುವುದು ವಿಶೇಷವಾಗಿದೆ.
ಸಧ್ಯ ಜಿಲ್ಲೆಯಲ್ಲಿ ಸಿರಿ ಕಾರ್ಯಕ್ರಮದಡಿಯಲ್ಲಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ 100 ಗಂಟೆಗಳಲ್ಲಿ 100 ಶೌಚಾಲಯ ನಿರ್ಮಿಸುವ ಗುರಿ ಹೊಂದಲಾಗಿತ್ತು. ಕಳೆದ ಮಂಗಳವಾರ ಬೆಳಗಿನ 10 ಗಂಟೆಗೆ 100 ಗಂಟೆಗಳ ಕಾಲಾವಕಾಶ ಕೊನೆಗೊಂಡಿದ್ದು, ಈ ಅವಧಿಯಲ್ಲಿ ಒಟ್ಟು 10 ಸಾವಿರ ಶೌಚಾಲಯಗಳನ್ನು ನಿರ್ಮಿಸಲಾಗಿದೆ.







                             


ಹೀಗಾಗಿ ಲೇಖನಗಳು News & photos Dt.02-10-2017(2nd round)

ಎಲ್ಲಾ ಲೇಖನಗಳು ಆಗಿದೆ News & photos Dt.02-10-2017(2nd round) ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News & photos Dt.02-10-2017(2nd round) ಲಿಂಕ್ ವಿಳಾಸ https://dekalungi.blogspot.com/2017/10/news-photos-dt02-10-20172nd-round.html

Subscribe to receive free email updates:

0 Response to "News & photos Dt.02-10-2017(2nd round)"

ಕಾಮೆಂಟ್‌‌ ಪೋಸ್ಟ್‌ ಮಾಡಿ