News and photos date: 03--10--2017

News and photos date: 03--10--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and photos date: 03--10--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and photos date: 03--10--2017
ಲಿಂಕ್ : News and photos date: 03--10--2017

ಓದಿ


News and photos date: 03--10--2017

ಡಿವೈಡರ್ ಸೌಂದರ್ಯೀಕರಣ ಕಾಮಗಾರಿಗೆ ಚಾಲನೆ
*********************************************
ಕಲಬುರಗಿ,ಅ.03.(ಕ.ವಾ.)-ಮಹಾನಗರ ಪಾಲಿಕೆಯಿಂದ 14ನೇ ಹಣಕಾಸು ಯೋಜನೆಯಡಿ ರಾಷ್ಟ್ರಪತಿ ವೃತ್ತದಿಂದ ಕಣ್ಣಿ ಮಾರುಕಟ್ಟೆ ಮಾರ್ಗವಾಗಿ ಹೀರಾಪೂರ ಕ್ರಾಸ್ ವರೆಗಿನ ರಸ್ತೆಯ ಡಿವೈಡರ್ ಸೌಂದರ್ಯೀಕರಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಚಾಲನೆ ನೀಡಿದರು.
ಅವರು ಮಂಗಳವಾರ ನಗರದ ಸಂಗಮೇಶ್ವರ ಆಸ್ಪತ್ರೆ ಹತ್ತಿರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ನಗರವನ್ನು ಹಸಿರು ಮತ್ತು ಸುಂದರವಾಗಿಸಲು ಮಹಾನಗರ ಪಾಲಿಕೆಯಿಂದ ವಿವಿಧ ಕಾಮಗಾರಿಗಳನ್ನು ಪ್ರಾರಂಭಿಸಲಾಗುತ್ತಿವೆ. ಈ ಕಾಮಗಾರಿಗಳು ಗುಣಮಟ್ಟದಿಂದ ಕೂಡಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದರು.
ಮಹಾನಗರ ಪಾಲಿಕೆ ಮತ್ತು ಮುಖ್ಯಮಂತ್ರಿಗಳ ಅನುದಾನದಲ್ಲಿ ಸರ್ದಾರ ವಲ್ಲಭಬಾಯಿ ವೃತ್ತದಿಂದ ಜಗತ್ ವೃತ್ತದವರೆಗಿನ ರಸ್ತೆ ಅಭಿವೃದ್ಧಿ, ಡಿವೈಡರ್ ಸೌಂದರ್ಯೀಕರಣ, ಪಾದಚಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಆದಷ್ಟು ಬೇಗ ಟೆಂಡರ್ ಕರೆಯಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ, ಮಾಹಾನಗರ ಪಾಲಿಕೆ ಸದಸ್ಯರಾದ ಸಿದ್ದಾರ್ಥ ಗುರುಶಾಂತ ಪಟ್ಟೆದಾರ, ಮಿರ್ಜಾ ಅಫಜಲಬೇಗ, ಫಯಾಜ್ ಹುಸೇನ್, ಆಜಂ ಪಟೇಲ್, ಗಣೇಶ ವಳಕೇರಿ, ಮಲ್ಲಿಕಾರ್ಜುನ ಟೇಂಗಳಿ, ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಇಂಜನೀಯರ ಆರ್.ಪಿ.ಜಾಧವ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇ.ಎಸ್.ಐ.ಆಸ್ಪತ್ರೆಯಲ್ಲಿ ಪ್ರಸೂತಿ ವಿಭಾಗ ಬಲವರ್ಧನಗೊಳಿಸಲು ಸೂಚನೆ
*****************************************************************
ಕಲಬುರಗಿ,ಅ.03.(ಕ.ವಾ.)-ಇ.ಎಸ್.ಐ. ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಮಕ್ಕಳ ವಿಭಾಗಗಳನ್ನು ಬಲವರ್ಧನಗೊಳಿಸಿ ಮುಂದಿನ ತಿಂಗಳಿನಿಂದ ಪ್ರತಿದಿನ ಕನಿಷ್ಠ 20 ಹೆರಿಗೆಗಳಾಗುವಂತೆ ಸಜ್ಜುಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಇ.ಎಸ್.ಐ.ಸಿ. ಡೀನರಿಗೆ ತಿಳಿಸಿದರು.
ಅವರು ಮಂಗಳವಾರ ಇ.ಎಸ್.ಐ. ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ದಿನಂಪ್ರತಿ 30 ಹೆರಿಗೆಗಳಾಗುತ್ತವೆ. ಇದರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ವಾರ್ಡುಗಳ ತೊಂದರೆಯಾಗುತ್ತಿದ್ದು, ಇ.ಎಸ್.ಐ.ಆಸ್ಪತ್ರೆಯಲ್ಲಿ ಹೆಚ್ಚಿನ ಹೆರಿಗೆಗಳಾದರೆ ಸಹಾಯವಾಗುವುದು ಎಂದರು.
ಬಡಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಲು ಈ ಭಾಗದಲ್ಲಿ ಇ.ಎಸ್.ಐ. ಆಸ್ಪತ್ರೆ ಸ್ಥಾಪಿಸಲಾಗಿದೆ. ರೋಗಿಗಳನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲು ಎಲ್ಲ ತರಹದ ಮೂಲಭೂತ ಸೌಲಭ್ಯ ಹಾಗೂ ವೈದ್ಯಕೀಯ ಸಿಬ್ಬಂದಿಗಳಿದ್ದು ರೋಗಿಗಳಿಗೆ ಇದರ ಪ್ರಯೋಜನ ದೊರಕಿಸುವಂತಾಗಬೇಕು ಎಂದು ಸೂಚಿಸಿದರು.
ಆಸ್ಪತ್ರೆಯಲ್ಲಿ ಅತೀ ಅವಶ್ಯಕವಾಗಿ ಬೇಕಾಗಿರುವ ಪೆಡಿಯಾಟ್ರಿಕ್ ಐ.ಸಿ.ಯು., ಮೆಡಿಸಿನ್ ಐ.ಸಿ.ಯು. ಮತ್ತು ರಕ್ತ ನಿಧಿಯನ್ನು ಆಧ್ಯತೆ ಮೇರೆಗೆ ಸ್ಥಾಪಿಸಬೇಕು. ಈಗಾಗಲೇ ಮೆಡಿಸಿನ್ ಐ.ಸಿ.ಯು.ನ 6 ಬೆಡ್‍ಗಳು ಎಲ್ಲ ಮೂಲಭೂತ ಸೌಲಭ್ಯ ಹಾಗೂ ಸಲಕರಣೆಗಳನ್ನು ಹೊಂದಿದ್ದು, ಅವಶ್ಯಕವಿರುವ ರೋಗಿಗಳನ್ನು ದಾಖಲಿಸಿಕೊಳ್ಳಬೇಕು. ಈ ವಿಭಾಗಗಳನ್ನು ಆದಷ್ಟು ಬೇಗ ಸ್ಥಾಪಿಸಲು ಸಣ್ಣ ಪುಟ್ಟ ತೊಂದರೆಗಳಿದ್ದರೆ ಅವುಗಳನ್ನು ಬಗೆಹರಿಸಿಕೊಳ್ಳುವಂತೆ ತಿಳಿಸಿದ ಸಚಿವರು, ಎಂ.ಸಿ.ಎ. ಮತ್ತು ಇ.ಎಸ್.ಐ. ನಾಮ್ರ್ಸ್‍ಗಳಲ್ಲಿ ಕೆಲವು ಯಂತ್ರೋಪಕರಣಗಳು ಮತ್ತು ಸಲಕರಣೆಗಳು ಖರೀದಿಸಲು ಅವಕಾಶಗಳಿಲ್ಲ. ಅದರ ಪಟ್ಟಿಮಾಡಿ ನೀಡುವಂತೆ ಡೀನರಿಗೆ ತಿಳಿಸಿದರು.
ಇ.ಎಸ್.ಐ. ಆಸ್ಪತ್ರೆ ಪ್ರಭಾರಿ ಡೀನ್ ಡಾ|| ನಾಗರಾಜ ಎಂ., ಮಾತನಾಡಿ, ಇ.ಎಸ್.ಐ. ಆಸ್ಪತ್ರೆಯಲ್ಲಿ ಪ್ರತಿದಿನ 800 ಹೊರರೋಗಿಗಳ ಆಗಮಿಸುತ್ತಿದ್ದಾರೆ. ಈ ಪೈಕಿ ಸುಮಾರು 120 ಜನರನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ. ಮೆಡಿಸಿನ್ ವಿಭಾಗದಲ್ಲಿ ತಿಂಗಳಿಗೆ 30-40 ಹಾಗೂ ಸರ್ಜರಿ ವಿಭಾಗದಲ್ಲಿ ಪ್ರತಿ ತಿಂಗಳು 20 ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸೂತಿ ವಿಭಾಗದಲ್ಲಿ ಪ್ರತಿ ದಿನ 100 ಹೊರಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. ಸಧ್ಯ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ಮತ್ತು ಐ.ಸಿ.ಯು. ಸಜ್ಜುಗೊಳ್ಳದ ಕಾರಣ ಆಪತ್ತಿನ ಹೆರಿಗೆ ಮಾಡುತ್ತಿಲ್ಲ ಎಂದು ಮಾಹಿತಿ ನೀಡಿದರು.
ಆಸ್ಪತ್ರೆಯಲ್ಲಿ ಒಟ್ಟು 10 ಆಪರೇಷನ್ ಥೇಟರ್‍ಗಳಿವೆ ಈ ಪೈಕಿ 8 ಓ.ಟಿ. ಕೆಲಸ ನಿರ್ವಹಿಸುತ್ತಿದ್ದು, ಪ್ರತಿ ತಿಂಗಳು 186 ಪ್ರಮುಖ ಮತ್ತು 600 ಸಣ್ಣ ಶಸ್ತ್ರ ಚಿಕಿತ್ಸೆ ಕೈಗೊಳ್ಳಲಾಗುತ್ತಿದೆ. ಇ.ಎಸ್.ಐ. ಸಂಕೀರ್ಣದಲ್ಲಿ ಇತ್ತೀಚಿಗೆ ನೀರಿನ ಸಮಸ್ಯೆ ಉಲ್ಬಣವಾಗಿದೆ. ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯವರು ವಾರಕ್ಕೆ 4 ದಿನ ನೀರು ಬಿಡುತ್ತಿರುವ ಹಾಗೂ ಆಸ್ಪತ್ರೆಯಲ್ಲಿ ಕಸದ ನಿರ್ವಹಣೆ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಇ.ಎಸ್.ಐ. ಆಸ್ಪತ್ರೆಯ ಮೆಡಿಕಲ್ ಸುಪರಿಂಟೆಂಡೆಂಟ್ ಡಾ|| ಹೆಚ್.ಎಸ್.ಕಡ್ಲಿಮಟ್ಟಿ, ಉಪ ಮೆಡಿಕಲ್ ಸುಪರಿಂಟೆಂಡೆಂಟ್ ಡಾ|| ಪ್ರವೀಣ ದೊಡ್ಮನಿ, ಮಕ್ಕಳ ತಜ್ಞ ಡಾ|| ಶಶಿಧರ ಮತ್ತಿತರ ಗಣ್ಯರು ಹಾಜರಿದ್ದರು.
ಅಕ್ಟೋಬರ್ 7ರಿಂದ ತೀವ್ರಗೊಂಡ ಮಿಷನ ಇಂದ್ರಧನುಷ ಲಸಿಕಾ ಕಾರ್ಯಕ್ರಮ
********************************************************************
ಕಲಬುರಗಿ,ಅ.03.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ಇಂದ್ರಧನುಷ ಮಿಷನ್ ವಿಶೇಷ ಲಸಿಕಾ ಅಭಿಯಾನದ ನಾಲ್ಕು ಹಂತಗಳಲ್ಲಿ ಲಸಿಕೆ ವಂಚಿತ ಗರ್ಭಿಣಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ತೀವ್ರಗೊಂಡ ಮಿಷನ್ ಇಂದ್ರಧನುಷ ಯೋಜನೆಯಡಿ ಮೊದಲನೇ ಸುತ್ತಿನಲ್ಲಿ 512 ಗರ್ಭಿಣಿಯರಿಗೆ, 0-1 ವರ್ಷದೊಳಗಿನ 1308 ಹಾಗೂ 1-2 ವರ್ಷದೊಳಗಿನ 811 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, ಲಸಿಕಾ ಕಾರ್ಯಕ್ರಮವನ್ನು ಅಕ್ಟೋಬರ್ 7 ರಿಂದ 17ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ತಿಳಿಸಿದರು.
ಅವರು ಮಂಗಳವಾರ ಕಲಬುರಗಿಯಲ್ಲಿ ಜರುಗಿದ ತೀವ್ರಗೊಂಡ ಮಿಷನ್ ಇಂದ್ರಧನುಷ ಯೋಜನೆಯ ಮೊದಲನೇ ಸುತ್ತಿನ ಕಾರ್ಯಕ್ರಮದÀ ಜಿಲ್ಲಾ ಚಾಲನಾ ಸಮಿತಿಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಇಂದ್ರಧನುಷ ವಿಶೇಷ ಲಸಿಕಾ ಅಭಿಯಾನದಡಿ ನಾಲ್ಕು ಸುತ್ತು ಮುಗಿದಿದ್ದು, ವಿವಿಧ ಲಸಿಕಾ ಕಾರ್ಯಕ್ರಮದಡಿ ಕಡಿಮೆ ಸಾಧನೆಗೈದ ದೇಶದ 118 ಜಿಲ್ಲೆ, 17 ನಗರ ಪ್ರದೇಶ ಹಾಗೂ ಈಶಾನ್ಯ ಭಾಗದ 52 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಕರ್ನಾಟಕ ರಾಜ್ಯದ ಕಲಬುರಗಿ, ಯಾದಗಿರಿ, ಬೆಳಗಾವಿ ನಗರ, ಬಾಗಲಕೋಟೆ ಮತ್ತು ಬೆಂಗಳೂರು ಬಿ.ಬಿ.ಎಂ.ಪಿ. ಜಿಲ್ಲೆಗಳು ಸೇರಿವೆ. ಅಕ್ಟೋಬರ್-2017 ರಿಂದ ಜನವರಿ-2018ರ ವರೆಗೆ ನಾಲ್ಕು ಹಂತದಲ್ಲಿ ಪ್ರತಿ ಮಾಹೆ 7ನೇ ತಾರೀಖಿನಿಂದ ಈ ಲಸಿಕೆ ಕಾರ್ಯಕ್ರಮ ಜರುಗಲಿದೆ. ನಗರದ ಸ್ಲಂ ಪ್ರದೇಶಗಳ ಮಕ್ಕಳನ್ನೆ ಹೆಚ್ಚಿನ ಗಮನಹರಿಸಿ ಲಸಿಕೆ ಹಾಕುವುದು ಈ ಕಾರ್ಯಕ್ರಮದ ಪ್ರಮುಖ ಗುರಿಯಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಶಾ ಕಾರ್ಯಕರ್ತೆಯರು ಮನೆ-ಮನೆಗೆ ತೆರಳಿ ಸಮೀಕ್ಷೆ ಕೈಗೊಂಡಿದ್ದು, ಅದರಂತೆ 0-1 ವರ್ಷದೊಳಗಿನ ಮಕ್ಕಳಿಗೆ 8 ನಮೂನೆಯ ಲಸಿಕೆಗಳು ಹಾಗೂ 1-2 ವರ್ಷದೊಳಗಿನ ಮಕ್ಕಳಿಗೆ 3 ನಮೂನೆಯ ಲಸಿಕೆಗಳನ್ನು ಕಡ್ಡಾಯವಾಗಿ ನೀಡಲಾಗುವುದು ಎಂದರು.
ಈ ಲಸಿಕೆ ಕಾರ್ಯಕ್ರಮದಲ್ಲಿ ನಿಯಮಿತವಾಗಿ ಲಸಿಕಾ ಕಾರ್ಯಕ್ರಮದಿಂದ ಹೊರಗುಳಿದ ಹಾಗೂ ಒಂದು ಹಂತದ ಲಸಿಕೆಗಳನ್ನು ತೆಗೆದುಕೊಂಡು ತದನಂತರ ಲಸಿಕೆ ಪಡೆಯದ ಮಕ್ಕಳನ್ನು ಗುರುತಿಸಿ ಲಸಿಕೆ ನೀಡುವ ಅಗತ್ಯವಿದೆ. ಮಕ್ಕಳಿಗೆ ಪ್ರತಿರಕ್ಷಣೆ ಒದಗಿಸುವ ಲಸಿಕೆಯಲ್ಲಿ ರಾಜ್ಯದ ಪ್ರತಿಶತ 80 ಇದ್ದರೆ, ಜಿಲ್ಲೆಯ ಪ್ರತಿಶತ 76.4 ಇದೆ. ಇದನ್ನು ಸರಿದೂಗಿಸಬೇಕಾಗಿದ್ದು, ಯಾವುದೇ ಕಾರಣಕ್ಕೂ ಈ ಸುತ್ತಿನಲ್ಲಿ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಜಿಲ್ಲಾ ಆರ್.ಸಿ.ಎಚ್. ಅಧಿಕಾರಿಗಳು ಇದರ ಸಂಪೂರ್ಣ ಮೇಲ್ವಿಚಾರಣೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಚಿಸಿದರು. ನಗರ ಪ್ರದೇಶ ಕೇಂದ್ರಿತ ಈ ಕಾರ್ಯಕ್ರಮದಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಅಗತ್ಯ ನೆರವು ನೀಡಬೇಕು ಹಾಗೂ ಈ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದರು.
ಮಕ್ಕಳಿಗೆ ಲಸಿಕೆ ನೀಡಿದ ನಂತರ ಆನ್‍ಲೈನ್‍ನಲ್ಲಿ ಈ ಕುರಿತು ದಾಖಲೀಕರಣದಲ್ಲಿ ಜಿಲ್ಲೆಯ ಕಳಪೆ ಸಾಧನೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಲಸಿಕೆ ನೀಡಿದ ನಂತರ ಕಡ್ಡಾಯವಾಗಿ ಅಂತರ್ಜಾಲದಲ್ಲಿ ಅಪಡೇಟ್ ಮಾಡಬೇಕು. ಅಪಡೇಟ್ ಮಾಡಿದ ಅಂಕಿ-ಅಂಶಗಳನ್ನು ಸರ್ಕಾರ ಗಣನೆಗೆ ತೆಗೆದುಕೊಂಡು ಯೋಜನೆಗಳನ್ನು ರೂಪಿಸುತ್ತದೆ. ಈ ನಿಟ್ಟಿನಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ಮಹತ್ವದ ಈ ಸಭೆಗೆ ಗೈರು ಹಾಜರಾದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಮೊದಲನೇ ಸುತ್ತಿನ ಈ ಲಸಿಕಾ ಕಾರ್ಯಕ್ರಮಕ್ಕಾಗಿ ಒಟ್ಟು 338 ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಅಭಿಯಾನಕ್ಕಾಗಿ ಜಿಲ್ಲೆಯಾದ್ಯಂತ 276 ಇಂದ್ರಧನುಷ ಲಸಿಕಾ ಕೇಂದ್ರಗಳನ್ನು ಹಾಗೂ 3 ಸಂಚಾರಿ ಲಸಿಕಾ ತಂಡಗಳನ್ನು ರಚಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಕಡ್ಡಾಯವಾಗಿ ಮಕ್ಕಳನ್ನು ಲಸಿಕೆ ಹಾಕಿಸಲು ಕರೆದುಕೊಂಡು ಬರಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಹಾಗೂ ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣಾಧಿಕಾರಿ ಡಾ|| ಎ.ಎಸ್.ರುದ್ರವಾಡಿ, ವಿಶ್ವ ಆರೋಗ್ಯ ಸಂಸ್ಥೆಯ ಸರ್ವೇಕ್ಷಣಾಧಿಕಾರಿ ಡಾ|| ಅನೀಲಕುಮಾರ ತಾಳಿಕೋಟಿ, ಜಿಲ್ಲಾ ಆಸ್ಪತ್ರೆಯ ಅಧೀಕ್ಷಕರು ಹಾಗೂ ಶಸ್ತ್ರಜ್ಞ ಡಾ|| ಬಾಲಚಂದ್ರ ಜೋಷಿ, ಪ್ರಾದೇಶಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ|| ರಂಗನಾಥ ಕಟ್ಟಿ, ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು, ಮಹಾನಗರ ಪಾಲಿಕೆಯ ವೈದ್ಯಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಕಲಬುರಗಿ ನಗರ ಪ್ರದೇಶಗಳ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಡಿಫ್ತಿರಿಯಾ ಪ್ರಕರಣ ವರದಿಯಾದ ಪ್ರದೇಶಗಳ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿಗಳು, ಅಭಿಯಾನದ ಮೇಲ್ವಿಚಾರಕ ಗುರುನಾಥ ಕವಾಳೆ, ರವೀಂದ್ರ ಠಾಕೂರು, ಆರ್.ಸಿ.ಹೆಚ್. ವಿಭಾಗದ ಎ.ಎಸ್.ಒ ಶ್ರೀರಾಮ ಪ್ರಕಾಶ ಕಾಳೆ ಸಭೆಯಲ್ಲಿ ಪಾಲ್ಗೊಂಡಿದ್ದರು.
ಅಕ್ಟೋಬರ್ 7ರಂದು ಹೋಬಳಿ ಮಟ್ಟದ ಜನಸ್ಪಂದನ ಸಭೆಗಳು
******************************************************
ಕಲಬುರಗಿ,ಅ.03.(ಕ.ವಾ.)-ಕಲಬುರಗಿ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಲ್ಲಿ 2017ರ ಅಕ್ಟೋಬರ್ 7ರಂದು ಬೆಳಿಗ್ಗೆ 11 ಗಂಟೆಗೆ ಜನಸ್ಪಂದನ ಸಭೆಗಳನ್ನು ನಡೆಸಲಾಗುವುದು ಎಂದು ಹೆÀಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ತಿಳಿಸಿದ್ದಾರೆ. ತಾಲೂಕುವಾರು ನಡೆಯುವ ಜನಸ್ಪಂದನಗಳ ಹೋಬಳಿ, ಗ್ರಾಮ ಮತ್ತು ಸಭೆ ಸ್ಥಳಗಳ ವಿವರ ಇಂತಿದೆ.
ಕಲಬುರಗಿ-ಕಮಲಾಪುರ ಹೋಬಳಿಯ ಡೊಂಗರಗಾಂವ ಗ್ರಾಮ ಪಂಚಾಯಿತಿ ಕಾರ್ಯಾಲಯ. ಆಳಂದ-ನರೋಣಾ ಹೋಬಳಿಯ ಬೋಧನ ಗ್ರಾಮ ಪಂಚಾಯಿತಿ ಕಾರ್ಯಾಲಯ. ಅಫಜಲಪುರ-ಆತನೂರ ಹೋಬಳಿಯ ಗುಡೂರ ಗ್ರಾಮ ಪಂಚಾಯಿತಿ ಕಾರ್ಯಾಲಯ. ಜೇವರ್ಗಿ-ನೆಲೋಗಿ ಹೋಬಳಿಯ ಬದನಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಸೇಡಂ-ಸೇಡಂ ಹೋಬಳಿಯ ನೀಲಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯ. ಚಿತ್ತಾಪುರ-ಚಿತ್ತಾಪುರ ಹೋಬಳಿಯ ರಾವೂರ ಗ್ರಾಮ ಪಂಚಾಯಿತಿ ಕಾರ್ಯಾಲಯ. ಚಿಂಚೋಳಿ-ಸುಲೇಪೇಟ್ ಹೋಬಳಿಯ ಭಂಟನಹಳ್ಳಿ ಸರ್ಕಾರಿ ಶಾಲಾ ಆವರಣ.
ಅಕ್ಟೋಬರ್ 4ರಂದು ವಾಡಿ-ಸೋಲಾಪುರ ವಿಶೇಷ ರೈಲು
*************************************************
ಕಲಬುರಗಿ,ಅ.03.(ಕ.ವಾ.)-ತುಳಜಾಪುರದಲ್ಲಿ ಅಕ್ಟೋಬರ್ 5ರಂದು ಶೀಗಿ ಹುಣ್ಣಿಮೆ ಪ್ರಯುಕ್ತ ನಡೆಯುವ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತುಳಜಾ ಭವಾನಿಯ ದರ್ಶನ ಪಡೆಯಲು ಈ ಭಾಗದ ಅಪಾರ ಸಂಖ್ಯೆಯ ಭಕ್ತಾದಿಗಳು ತುಳಜಾಪುರಕ್ಕೆ ಪ್ರಯಾಣಿಸುವರು.
ಈ ಭಕ್ತಾದಿಗಳ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಅಕ್ಟೋಬರ್ 4ರಂದು ಮಧ್ಯಾಹ್ನ 2 ಗಂಟೆಯಿಂದ ವಾಡಿ ರೈಲು ನಿಲ್ದಾಣದಿಂದ ಸೋಲಾಪುರಕ್ಕೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ. ಈ ರೈಲು ಅಕ್ಟೋಬರ್ 6ರಂದು ಮಧ್ಯಾಹ್ನ 3 ಗಂಟೆಗೆ ಸೋಲಾಪುರದಿಂದ ವಾಡಿಗೆ ಮರಳಿ ಪ್ರಯಾಣಿಸುವುದು ಎಂದು ಕಲಬುರಗಿ ಸ್ಟೇಶನ್ ಮ್ಯಾನೇಜರ್ ಜಿಜಿಮೊನ್ ಪಿ.ಜೆ. ತಿಳಿಸಿದ್ದಾರೆ.
ವಿಜ್ಞಾನ ಪದವಿ ಕಾಲೇಜು ಅಧ್ಯಾಪಕರಿಗೆ ಕಾರ್ಯಾಗಾರ
************************************************
ಕಲಬುರಗಿ,ಅ.03.(ಕ.ವಾ.)-ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ “ಅಪ್ಲಿಕೇಶನ್ ಆಫ್ ಜಿಐಎಸ್ ಹಾಗೂ ರಿಮೋಟ್ ಸೆನ್ಸಿಂಗ್” (Applications of GIS and Remote Sensing) ವಿಷಯದ ಕುರಿತು ಅಕ್ಟೋಬರ್ 10 ರಿಂದ 12ರವರೆಗೆ ಮೂರು ದಿನಗಳ ಕಾರ್ಯಾಗಾರವನ್ನು ಬೆಂಗಳೂರಿನ ಬನಶಂಕರಿ ಎರಡನೇ ಹಂತದ 21ನೇ ಮುಖ್ಯ ರಸ್ತೆಯಲ್ಲಿರುವ ವಿಜ್ಞಾನ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸದಸ್ಯ ಕಾರ್ಯದರ್ಶಿ ಹೆಚ್. ಹೊನ್ನೇಗೌಡ ಅವರು ತಿಳಿಸಿದ್ದಾರೆ.
ಈ ಕಾರ್ಯಾಗಾರದಲ್ಲಿ ಪ್ರತಿನಿಧಿಗಳಾಗಿ ರಾಜ್ಯದಾದ್ಯಂತ ವಿಜ್ಞಾನ ಪದವಿ ಕಾಲೇಜು ಪ್ರಾಧ್ಯಾಪಕರು (ಭೌತ ವಿಜ್ಞಾನ, ಜೀವ ವಿಜ್ಞಾನ, ಪರಿಸರ ವಿಜ್ಞಾನ, ಕಂಪ್ಯೂಟರ್ ಮತ್ತು ಭೂ ವಿಜ್ಞಾನ ವಿಭಾಗದ ಅಧ್ಯಾಪಕರು) ಹಾಗೂ ಯುವ ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದೆ. ಈ ಕಾರ್ಯಾಗಾರಕ್ಕೆ ಉಚಿತ ಪ್ರವೇಶವಿದ್ದು, ಹೆಸರು ನೋಂದಾಯಿಸಲು ಅಕ್ಟೋಬರ್ 7 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ವೆಬ್‍ಸೈಟ್ http//www.kstacademy.org ಹಾಗೂ ವೈಜ್ಞಾನಿಕಾಧಿಕಾರಿ ವಿ.ಕೆ. ಶ್ರೀನಿವಾಸು ಮೊಬೈಲ್ ಸಂಖ್ಯೆ 9620767819ನ್ನು ಸಂಪರ್ಕಿಸಲು ಕೋರಲಾಗಿದೆ.
ಅಕ್ಟೋಬರ್ 7ರಂದು ರಾಯಚೂರಿನಲ್ಲಿ ಪತ್ರಕರ್ತರಿಗೆ ವೃತ್ತಿ ಕಾರ್ಯಾಗಾರ
****************************************************************
ಕಲಬುರಗಿ,ಅ.03.(ಕ.ವಾ.)-ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಾಯಚೂರು ಇವುಗಳ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 7ರಂದು ಬೆಳಿಗ್ಗೆ 10.30 ಗಂಟೆಗೆ ‘ಪತ್ರಕರ್ತರಿಗೆ ವೃತ್ತಿ ಕಾರ್ಯಾಗಾರ’ವನ್ನು ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಸೆಮಿನಾರ್ ಹಾಲ್‍ನಲ್ಲಿ ಏರ್ಪಡಿಸಲಾಗಿದೆ.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ವಕ್ಫ್ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ತನ್ವೀರ್ ಸೇಠ್ ಅವರು ಈ ಕಾರ್ಯಾಗಾರವನ್ನು ಉದ್ಘಾಟಿಸುವರು. ರಾಯಚೂರಿನ ವಿಧಾನಸಭಾ ಸದಸ್ಯ ಡಾ.ಎಸ್.ಶಿವರಾಜ ಪಾಟೀಲ ಅಧ್ಯಕ್ಷತೆಯಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ.ಸಿದ್ದರಾಜು ಪ್ರಾಸ್ತಾವಿಕ ನುಡಿ ಹೇಳುವರು. ಸಿಂಧನೂರು ವಿಧಾನಸಭಾ ಸದಸ್ಯ ಹಾಗೂ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್‍ನ (ಎಂ.ಎಸ್.ಐ.ಎಲ್.) ಅಧ್ಯಕ್ಷ ಹಂಪನ ಗೌಡ ಬಾದರ್ಲಿ, ಮಾನ್ವಿ ವಿಧಾನಸಭಾ ಸದಸ್ಯ ಹಾಗೂ ತುಂಗಭದ್ರ ಯೋಜನೆ (ಕಾಡಾ) ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಂಪಯ್ಯ ನಾಯಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ರಾಯಚೂರಿನ ಲೋಕಸಭೆ ಸದಸ್ಯ ಬಿ.ವಿ. ನಾಯಕ, ಕೊಪ್ಪಳದ ಲೋಕಸಭೆ ಸದಸ್ಯ ಸಂಗಣ್ಣ ಕರಡಿ, ವಿಧಾನಸಭಾ ಸದಸ್ಯರಾದ ತಿಪ್ಪರಾಜು ಹವಾಲ್ದಾರ್, ಪ್ರತಾಪಗೌಡ ಪಾಟೀಲ, ಕೆ.ಶಿವನಗೌಡ ನಾಯಕ, ಮಾನಪ್ಪ ವಜ್ಜಲ್, ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್. ಭೋಸರಾಜು, ಬಸವರಾಜ ಪಾಟೀಲ್ ಇಟಗಿ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರು, ರಾಯಚೂರಿನ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಎಂ. ಸಾಲಿಮಠ, ನಗರಸಭೆ ಅಧ್ಯಕ್ಷೆ ಹೇಮಲತಾ ಪಿ. ಬೂದೆಪ್ಪ, ಎಪಿಎಂಸಿ ಅಧ್ಯಕ್ಷ ಅಮರೆಗೌಡ ಹಂಚಿನಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿಂದಪ್ಪ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿರಾಂ ಜಿ. ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಮೊದಲನೇ ಗೋಷ್ಠಿಯಲ್ಲಿ “ವೃತ್ತ ಪತ್ರಿಕೆಗಳಲ್ಲಿ ಮುದ್ರಣ ಯಂತ್ರಗಳ ಬಳಕೆ” ವಿಷಯ ಕುರಿತು ಸಂಜೆವಾಣಿ ದಿನಪತ್ರಿಕೆಯ ಸಂಪಾದಕ ಬಿ.ಟಿ ಅಮುದನ್ ಮಂಡಿಸುವರು. ಎರಡನೇ ಗೋಷ್ಠಿಯಲ್ಲಿ ಕನ್ನಡಪ್ರಭ ದಿನಪತ್ರಿಕೆಯ ಪುಟ ವಿನ್ಯಾಸಕ ಸುಧಾಕರ ದರ್ಬೆ ಹಾಗೂ ವಿಜಯವಾಣಿ ದಿನಪತ್ರಿಕೆಯ ಪುಟ ವಿನ್ಯಾಸಕ ಆರ್. ಹರೀಶಕುಮಾರ್ ಅವರು “ಡೆಸ್ಕ್‍ಟಾಪ್ ಪಬ್ಲಿಷಿಂಗ್ ಮತ್ತು ಪುಟ ವಿನ್ಯಾಸ” ಕುರಿತು ವಿಷಯ ಮಂಡಿಸುವರು. ಮೂರನೇ ಗೋಷ್ಠಿಯಲ್ಲಿ ಕರ್ನಾಟಕ ಫೋಟೋ ನ್ಯೂಸ್‍ನ ಮುಖ್ಯಸ್ಥ ಸಾಗ್ಗೆರೆ ರಾಮಸ್ವಾಮಿ ಅವರು “ಛಾಯಾಚಿತ್ರ ಪತ್ರಿಕೋದ್ಯಮ” ವಿಷಯ ಕುರಿತು ಮಾತನಾಡುವರು. ನಾಲ್ಕನೇ ಗೋಷ್ಠಿಯಲ್ಲಿ ವಿಶ್ವವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಪಿ. ತ್ಯಾಗರಾಜು ಅವರು “ಸಾಮಾಜಿಕ ಮಾಧ್ಯಮ” ಕುರಿತು ವಿಷಯ ಮಂಡಿಸುವರು.
ವಸತಿ ಕಾರ್ಯಾಗಾರಕ್ಕಾಗಿ ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನ
*******************************************************
ಕಲಬುರಗಿ,ಅ.03.(ಕ.ವಾ.)-ಜಿಲ್ಲಾ ಕೈಗಾರಿಕಾ ಕೇಂದ್ರವು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ 2017-18ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗ್ರಾಮೀಣ ಅರ್ಹ ಕುಶಲಕರ್ಮಿಗಳಿಗೆ ವಸತಿ ಕಾರ್ಯಾಗಾರಗಳ ನಿರ್ಮಾಣಕ್ಕಾಗಿ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ವಿವಿಧ ಕಾರ್ಯನಿರತ ಪೂರ್ಣ ಪ್ರಮಾಣದ ಕುಶಲಕರ್ಮಿಗಳಿಂದ ವಸತಿ ಕಾರ್ಯಾಗಾರಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ವಿಶೇಷ ಘಟಕ ಯೋಜನೆಯಡಿ 34 ಮತ್ತು ಗಿರಿಜನ ಉಪಯೋಜನೆಯಡಿ 02 ವಸತಿ ಕಾರ್ಯಾಗಾರಗಳನ್ನು ಮಂಜೂರು ಮಾಡುವ ಗುರಿ ಹೊಂದಿದೆ. ಬಿದಿರು, ಬಡಿಗತನ, ಚರ್ಮಗಾರಿಕೆ, ಕರಕುಶಲ ವಸ್ತು ತಯಾರಿಕೆ, ಕಮ್ಮಾರಿಕೆ, ಕುಂಬಾರಿಕೆ, ಬೆಳ್ಳಿ/ಬಂಗಾರ ಆಭರಣ ತಯಾರಿಕೆ, ಜನರಲ್ ಇಂಜಿನಿಯರಿಂಗ್, ಚಾಪೆ ಮತ್ತು ಬುಟ್ಟಿ ಹೆಣೆಯುವಿಕೆ ವೃತ್ತಿಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ ಅಕ್ಟೋಬರ್ 10ರೊಳಗಾಗಿ ಸಲ್ಲಿಸಬೇಕು.
ಅರ್ಜಿದಾರರು ವಸತಿ ರಹಿತರಾಗಿದ್ದು, ಕುಶಲಕರ್ಮಿ ವೃತ್ತಿಯ ಆದಾಯದಿಂದ ಉಪಜೀವನ ನಡೆಸುತ್ತಿರಬೇಕು. ಷರತ್ತು ಹಾಗೂ ಮತ್ತಿತರ ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಕಲಬುರಗಿ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ 08472-223988,221637ಗಳನ್ನು ಸಂಪರ್ಕಿಸಬಹುದು.




ಹೀಗಾಗಿ ಲೇಖನಗಳು News and photos date: 03--10--2017

ಎಲ್ಲಾ ಲೇಖನಗಳು ಆಗಿದೆ News and photos date: 03--10--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and photos date: 03--10--2017 ಲಿಂಕ್ ವಿಳಾಸ https://dekalungi.blogspot.com/2017/10/news-and-photos-date-03-10-2017.html

Subscribe to receive free email updates:

3 Responses to "News and photos date: 03--10--2017"