ಶೀರ್ಷಿಕೆ : News and Photo Date: 31--10--2017
ಲಿಂಕ್ : News and Photo Date: 31--10--2017
News and Photo Date: 31--10--2017
ಸ್ಥಳೀಯ ಸಂಸ್ಥೆಗಳಿಂದ ಪೌರ ಕಾರ್ಮಿಕರಿಗೆ ನೇರ ವೇತನಕ್ಕೆ ಶೀಘ್ರ ಆದೇಶ
****************************************************************
--ಸಚಿವ ಈಶ್ವರ ಖಂಡ್ರೆ
************************
ಕಲಬುರಗಿ,ಅ.31,(ಕ.ವಾ): ಕರ್ನಾಟಕ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಮಹಾನಗರ ಪಾಲಿಕೆಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ನೇರವಾಗಿ ಸ್ಥಳೀಯ ಸಂಸ್ಥೆಗಳ ಮೂಲಕ ವೇತನ ನೀಡಲು ಆದೇಶ ಹೊರಡಿಸಲಾಗುವುದು ಎಂದು ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಹೇಳಿದರು.
ಅವರು ಮಂಗಳವಾರ ಕಲಬುರಗಿ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಿರುವ ಕಲಬುರಗಿ ವಿಭಾಗದ ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಂದ ಸಿಂಗಾಪುರ ಅಧ್ಯಯನ ಪ್ರವಾಸಕ್ಕಾಗಿ ಆಯ್ಕೆಗೊಂಡ ಪೌರ ಕಾರ್ಮಿಕರಿಗೆ ಬೀಳ್ಕೋಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹೊರ ಗುತ್ತಿಗೆ ಪೌರ ಕಾರ್ಮಿಕರಿಗೆ ನೇರವಾಗಿ ಸ್ಥಳೀಯ ಸಂಸ್ಥೆಗಳಿಂದಲೇ ವೇತನ ನೀಡುವ ನಿಟ್ಟಿನಲ್ಲಿ ಈಗಾಗಲೇ ಪೌರಾಡಳಿತ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಹಲವಾರು ಸಭೆಗಳನ್ನು ಕೈಗೊಳ್ಳಲಾಗಿದೆ. ಆದಷ್ಟು ಬೇಗ ನಿರ್ಣಯ ಕೈಗೊಳ್ಳಲಾಗುವುದು. ಮಾರ್ಚ್ ಅಂತ್ಯದೊಳಗಾಗಿ ರಾಜ್ಯದ 10 ಸಾವಿರ ಪೌರ ಕಾರ್ಮಿಕರಿಗೆ ಖಾಯಂಗೊಳಿಸುವ ತೀರ್ಮಾನ ಸಹ ಕೈಗೊಳ್ಳಲಾಗಿದೆ ಎಂದರು.
ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಈ ಹಿಂದೆ ನೀಡುತ್ತಿದ್ದ ಕನಿಷ್ಠ ವೇತನ 6000ರೂ. ದಿಂದ ಸುಮಾರು 14000 ರೂ. ಗಳಿಗೆ ಹೆಚ್ಚಿಸಲಾಗಿದೆ. ಖಾಯಂ ಪೌರ ಕಾರ್ಮಿಕರಿಗೆ ಏಳೂವರೆ ಲಕ್ಷ ರೂ. ವೆಚ್ಚದಲ್ಲಿ ಗೃಹ ಭಾಗ್ಯ ಯೋಜನೆ ಮಂಜೂರು ಮಾಡಲಾಗಿದೆ ಎಂದರು.
ಪೌರ ಕಾರ್ಮಿಕರನ್ನು ವಿದೇಶ ಪ್ರವಾಸಕ್ಕೆ ಅಧ್ಯಯನಕ್ಕಾಗಿ ಕಳುಹಿಸಲು ಆಯವ್ಯಯದಿಂದ 10 ಕೋಟಿ ರೂ. ನೀಡಿರುವ ಶ್ರೇಯಸ್ಸು ನಮ್ಮ ಸರ್ಕಾರಕ್ಕಿದೆ. ಈಗಾಗಲೇ 6 ತಂಡಗಳನ್ನು ಅಧ್ಯಯನಕ್ಕಾಗಿ ಕಳುಹಿಸಲಾಗಿದ್ದು, ಸಧ್ಯ ಏಳನೇ ತಂಡದಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ 9 ಪೌರ ಕಾರ್ಮಿಕರು ಸೇರಿದಂತೆ ಕಲಬುರಗಿ ವಿಭಾಗದ 44 ಪೌರ ಕಾರ್ಮಿಕರನ್ನು ಸಿಂಗಾಪುರಕ್ಕೆ ಕಳುಹಿಸಲಾಗುತ್ತಿದೆ. ರಾಜ್ಯದ ಒಟ್ಟು 1000 ಪೌರ ಕಾರ್ಮಿಕರನ್ನು ವಿದೇಶ ಅಧ್ಯಯನ ಪ್ರವಾಸಕ್ಕೆ ಕಳುಹಿಸಿ ರಾಜ್ಯದಲ್ಲಿಯೂ ಸಹ ಅಲ್ಲಿನ ತಂತ್ರಜ್ಞಾನ ಬಳಸಿಕೊಂಡು ನಗರಗಳನ್ನು ಪ್ರವಾಸಿ ತಾಣಗಳನ್ನಾಗಿ ಬೆಳೆಸುವುದು ನಮ್ಮ ಉದ್ದೇಶವಾಗಿದೆ. ವಿದೇಶ ಪ್ರವಾಸಕ್ಕೆ ಆಯ್ಕೆಗೊಂಡ ತಲಾ ಪೌರ ಕಾರ್ಮಿಕರಿಗೆ 75 ರಿಂದ 80 ಸಾವಿರ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಅದರೊಂದಿಗೆ ಪೌರ ಕಾರ್ಮಿಕರ ಖರ್ಚಿಗಾಗಿ 100 ಡಾಲರ (5 ಸಾವಿರ ರೂ.) ಸಹ ನೀಡಲಾಗುತ್ತಿದ್ದು, ಪೌರ ಕಾರ್ಮಿಕರೆಲ್ಲರೂ ಸಿಂಗಾಪುರ ಪ್ರವಾಸ ಕೈಗೊಂಡು ತಂತ್ರಜ್ಞಾನ, ಘನತ್ಯಾಜ್ಯ ನಿರ್ವಹಣೆ ಮನದಟ್ಟು ಮಾಡಿಕೊಂಡು ಸುಖಕರವಾಗಿ ಹಿಂದಿರುಗುವಂತೆ ಶುಭ ಕೋರಿದರು.
ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಯೋಮೆಟ್ರಿಕ್ ಆಧಾರದ ಮೇಲೆ ಪೌರ ಕಾರ್ಮಿಕರ ಹಾಜರಾತಿ ಪಡೆದು, ಹಾಜರಾತಿ ಆಧಾರದ ಮೇಲೆ ನೇರವಾಗಿ ಆಯಾ ತಿಂಗಳ ಸಂಬಳ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಪೌರ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಅವಶ್ಯಕವಿರುವ ಎಲ್ಲ ಸುರಕ್ಷತಾ ಸಲಕರಣೆಗಳನ್ನು ನೀಡಲಾಗಿದೆ. ಪೌರ ಕಾರ್ಮಿಕರ ಮಾಸ್ಟರ್ ಹೆಲ್ತ್ ತಪಾಸಣೆ ಸಲುವಾಗಿ 8 ಲಕ್ಷ ರೂ.ಗಳನ್ನು ಮೀಸಲಿರಿಸಲಾಗಿದೆ. 214 ಖಾಯಂ ಪೌರ ಕಾರ್ಮಿಕರಿಗೆ ಮನೆ ಮಂಜೂರು ಮಾಡಲಾಗಿದೆ. 3 ಎಕರೆ ಭೂ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕಾಗಿ ಈಗಾಗಲೇ 2 ಕೋಟಿ ರೂ. ಪ್ರಥಮ ಕಂತಾಗಿ ಬಿಡುಗಡೆಯಾಗಿದೆ. ಗುತ್ತಿಗೆ ಆಧಾರದ 46 ಪೌರ ಕಾರ್ಮಿಕರಿಗೆ ರಾಜೀವ ಆವಾಸ್ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಲಾಗಿದೆ. ಇನ್ನೂ 100 ಪೌರ ಕಾರ್ಮಿಕರಿಗೆ ಲಾಟರಿ ಮೂಲಕ ಮನೆ ನೀಡಲಾಗುವುದು. 81 ಪೌರ ಕಾರ್ಮಿಕರಿಗೆ ಅನೀಲ ಸಂಪರ್ಕ ಕಲ್ಪಿಸಲಾಗಿದೆ. 978 ಪೌರ ಕಾರ್ಮಿಕರಿಗೆ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಹಾಗೂ 300 ಪೌರ ಕಾರ್ಮಿಕರಿಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಕಲ್ಪಿಸಲಾಗಿದೆ. ಪೌರ ಕಾರ್ಮಿಕರ ಮಕ್ಕಳಿಗೆ ಸ್ಕಾಲರಶಿಪ್ ಸಹಿತ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ, ಮಹಾನಗರ ಪಾಲಿಕೆ ಮೇಯರ್ ಶರಣಕುಮಾರ ಮೋದಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸುವರ್ಣಾ ಹಣಮಂತರಾಯ ಮಲಾಜಿ, ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಾಗಣಗೌಡ ಸಂಕನೂರ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ರೇವಣಸಿದ್ದಪ್ಪ ಎಸ್. ಪಾಟೀಲ, ಕರ ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷೆ ಯಾಸ್ಮೀನ್ ಬೇಗಂ ಶೇಖಬಾಬಾ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ತನವೀರ ಅಹ್ಮದ್ ಅಖ್ತರ್ ಅಹ್ಮದ ಸರಡಗಿ, ನಗರ ಯೋಜನೆ ಹಾಗೂ ಅಭಿವೃದ್ಧಿ ನ್ಯಾಯ ಸ್ಥಾಯಿ ಅಧ್ಯಕ್ಷೆ ಫಯಾಜ್ ಹುಸೇನ್, ಪೌರಾಡಳಿತ ನಿರ್ದೆಶನಾಲಯದ ಜಂಟಿ ನಿರ್ದೇಶಕಿ ಸತ್ಯಭಾಮಾ, ಮಹಾನಗರ ಪಾಲಿಕೆ ಉಪ ಆಯುಕ್ತ ಆರ್.ಪಿ. ಜಾಧವ, ಪರಿಸರ ಇಂಜಿನಿಯರ್ ಮುನಾಫ್ ಪಟೇಲ್, ಸುಶ್ಮಾ, ಮುಜಮ್ಮಿಲ್ ಅಲಂ, ಬೆಂಗಳೂರು ಸಿನ್ಯಾಕ್ಸ್ ಸಂಸ್ಥೆಯ ವಿಜಯಲಕ್ಷ್ಮೀ, ಮಹಾನಗರ ಪಾಲಿಕೆ ಸದಸ್ಯರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ರಾಷ್ಟ್ರಮಟ್ಟದ ಔತಣಕೂಟದಲ್ಲಿ ಹೆಪ್ಸಿಬಾ ರಾಣಿ ಭಾಗಿ
ಕಲಬುರಗಿ,ಅ.31, (ಕ.ವಾ): ಕೇಂದ್ರ ಸರ್ಕಾರವು ಪ್ರಪ್ರಥಮ ಬಾರಿಗೆ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯ ನವದೆಹಲಿಯಲ್ಲಿ ಇದೇ ತಿಂಗಳು ಅಕ್ಟೋಬರ್ 28ರಂದು ಲಂಚ್ ಆ್ಯಂಡ್ ಲರ್ನ್– ಎ ನಾಲೇಜ್ ಶೇರಿಂಗ್ ಏಕ್ಸ್‍ಪಿರಿಯನ್ಸ್ ಎಂಬ ಹೆಸರಿನಲ್ಲಿ ರಾಷ್ಟ್ರ ಮಟ್ಟದ ಭೋಜನ ಕೂಟ ಏರ್ಪಡಿಸಿತು. ಕರ್ನಾಟಕ ರಾಜ್ಯದಿಂದ ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕುಮಾರಿ ಹೆಪ್ಸಿಬಾ ರಾಣಿ ಕೊರ್ಲಾಪಟಿ ಅವರಿಗೆ ಮಾತ್ರ ರಾಷ್ಟ್ರ ಮಟ್ಟದ ಔತಣ ಕೂಟದಲ್ಲಿ ಭಾಗಿಯಾಗುವ ಅವಕಾಶ ಲಭಿಸಿತು.
ಈ ಕೂಟದಲ್ಲಿ ವಿವಿಧ ರಾಜ್ಯದ ಒಟ್ಟು 11 ಜಿಲ್ಲೆಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಅಧಿಕಾರಿಗಳು ಪಾಲ್ಗೊಂಡಿದ್ದರು. ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಾಣ ಮಾಡಲು ಕೈಗೊಂಡಿರುವ ವಿವಿಧ ಯೋಜನೆಗಳು, ಮಾನಸಿಕ ಬದಲಾವಣೆಗಾಗಿ ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳು ಹಾಗೂ ಅದರಿಂದಾದ ಉಪಯೋಗಗಳು ಮತ್ತು ಸಾಗಿ ಬಂದ ದಾರಿಯ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಲಬುರಗಿ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಲು ಕೈಗೊಂಡಿರುವ “ಕೂಸು’’ ಮತ್ತು “ಸಿರಿ’’ ಹಾಗೂ ಪ್ರತಿ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಳ್ಳುತ್ತಿರುವ ರೇಡಿಯೋ ಕಾರ್ಯಕ್ರಮ ಕುರಿತು ಔತಣ ಕೂಟದಲ್ಲಿ ಹೆಪ್ಸಿಬಾ ರಾಣಿ ವಿವರಿಸಿದರು. ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಪ್ರಯುಕ್ತ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯ “ಕೂಸು” ಕಾರ್ಯಕ್ರಮದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿತು. “ಸಿರಿ” ಮತ್ತು ರೇಡಿಯೋ ಕಾರ್ಯಕ್ರಮವು ಒಂದು ವಿನೂತನ ಕಾರ್ಯಕ್ರಮ ಎಂದು ಅವರು ಪ್ರಶಂಸೆಗೆ ಪಾತ್ರರಾದರು.

ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರ ಪ್ರವಾಸ
*********************************************
ಕಲಬುರಗಿ,ಅ.31, (ಕ.ವಾ): ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಚಿಂಚನಸೂರ ಅವರು ನವೆಂಬರ್ 1ರಂದು ಬೆಳಿಗ್ಗೆ 6 ಗಂಟೆಗೆ ಕಲಬುರಗಿಯಿಂದ ಸೋಲಾಪುರಕ್ಕೆ ರಸ್ತೆ ಮೂಲಕ ಪ್ರಯಾಣಿಸಿ ವಾಸ್ತವ್ಯ ಮಾಡುವರು. ನವೆಂಬರ್ 2ರಂದು ಮಹಾರಾಷ್ಟ್ರದ ಸೋಲಾಪುರದಲ್ಲಿರುವ ಕನ್ನಡಿಗರನ್ನು ಭೇಟಿ ಮಾಡುವರು. ನಂತರ ಅಧ್ಯಕ್ಷರು ರಸ್ತೆ ಮೂಲಕ ಕಲಬುರರಿಗೆ ಆಗಮಿಸಿ ವಾಸ್ತವ್ಯ ಮಾಡುವರು.

ಅನುಯಾಯಿ ಹುದ್ದೆಗಳ ನೇಮಕಾತಿ: ಲಿಖಿತ ಪರೀಕ್ಷೆಯ ಫಲಿತಾಂಶ ಪ್ರಕಟ
****************************************************************
ಕಲಬುರಗಿ,ಅ.31, (ಕ.ವಾ): ಕಲಬುರಗಿ ಪೊಲೀಸ್ ತರಬೇತಿ ಮಹಾವಿದ್ಯಾಲಯಲ್ಲಿ ಖಾಲಿ ಇರುವ 15 ಅನುಯಾಯಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2017ರ ಆಗಸ್ಟ್ 6ರಂದು ಜರುಗಿದ ಲಿಖಿತ ಪರೀಕ್ಷೆಯ ಫಲಿತಾಂಶವನ್ನು ತಿತಿತಿ.ಞsಠಿ.gov.iಟಿ ವೆಬ್‍ಸೈಟ್‍ನಲ್ಲಿ ಹಾಗೂ ಕಲಬುರಗಿಯ ನಾಗನಹಳ್ಳಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಲಿಖಿತ ಪರೀಕ್ಷೆ ಬರೆದಿರುವ ಪರೀಕ್ಷಾರ್ಥಿಗಳು ಇದನ್ನು ಗಮನಿಸಬೇಕೆಂದು ಕಲಬುರಗಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಎಸ್.ಪಿ. ಮತ್ತು ಪ್ರಾಂಶುಪಾಲರು ತಿಳಿಸಿದ್ದಾರೆ.
ಒಂದು ವಾರ ಕನ್ನಡ ಚಲನಚಿತ್ರ ಪ್ರದರ್ಶಿಸಲು ಚಿತ್ರಮಂದಿಗಳಿಗೆ ಸೂಚನೆ
ಕಲಬುರಗಿ,ಅ.31, (ಕ.ವಾ): ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕಲಬುರಗಿ ಜಿಲ್ಲೆಯ ಎಲ್ಲ ಚಿತ್ರಮಂದಿರಗಳಲ್ಲಿ ನವೆಂಬರ್ 1 ರಿಂದ ಒಂದು ವಾರ ಕಾಲ (ಮುಂಜಾನೆ ಪ್ರದರ್ಶನ ಮಾತ್ರ) ಕಡ್ಡಾಯವಾಗಿ ಕನ್ನಡ ಚಲನಚಿತ್ರಗಳನ್ನು ಮಾತ್ರ ಪ್ರದರ್ಶಿಸಬೇಕೆಂದು ಕಲಬುರಗಿ ತಾಲೂಕು ತಹಶೀಲ್ದಾರರು ಎಲ್ಲ ಚಿತ್ರಮಂದಿಗಳಿಗೆ ತಿಳಿಸಿದ್ದಾರೆ.

ವಾಹನ ಬಾಡಿಗೆಗಾಗಿ ದರಪಟ್ಟಿ ಆಹ್ವಾನ
***********************************
ಕಲಬುರಗಿ,ಅ.31,(ಕ.ವಾ): ಕಲಬುರಗಿ ಜಿಲ್ಲಾ ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್.ಕೆ.ಆರ್.ಡಿ.ಬಿ. ಕೋಶಕ್ಕೆ ಒಂದು ವಾಹನದ ಅವಶ್ಯಕತೆ ಇರುತ್ತದೆ. ಇದಕ್ಕಾಗಿ ವಾಹನವನ್ನು ಬಾಡಿಗೆ ಆಧಾರದ ಮೇಲೆ ಪಡೆಯಲು ವಿವಿಧ ಟ್ರಾವೆಲ್ ಏಜೆನ್ಸಿಯವರಿಂದ ದರಪಟ್ಟಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಸಂಬಂಧಪಟ್ಟ ಟ್ರಾವೆಲ್ಸ್ ಏಜೆನ್ಸಿಯವರು ವಾಹನದ ಎಲ್ಲ ದಾಖಲೆಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ (ಆರ್.ಟಿ.ಓ.) ದೃಢೀಕರಿಸಿ ಸಲ್ಲಿಸಬೇಕು. ವಾಹನವು ಹಳದಿ ನಂಬರ್ ಪ್ಲೇಟ್ ಹೊಂದಿರಬೇಕು. ಇಚ್ಛೆಯುಳ್ಳ ಟ್ರಾವೆಲ್ಸ್ ಏಜೆನ್ಸಿಯವರು 2017ರ ನವೆಂಬರ್ 2ರೊಳಗಾಗಿ ತಮ್ಮ ದರಪಟ್ಟಿಯನ್ನು ಲಗತ್ತಿಸಿ ಭದ್ರಪಡಿಸಿದ ಲಕೋಟೆಯ ಮೇಲೆ ಬಾಡಿಗೆ ವಾಹನದ ತಿಂಗಳ ಬಾಡಿಗೆಯ ದರಪಟ್ಟಿ ಎಂದು ಕಡ್ಡಾಯವಾಗಿ ನಮೂದಿಸಿ ಹೆಚ್.ಕೆ.ಆರ್.ಡಿ.ಬಿ. ಯೋಜನಾ ಶಾಖೆ, ಜಿಲ್ಲಾ ಪಂಚಾಯಿತಿ ಕಾರ್ಯಾಲಯ ಕಲಬುರಗಿ ವಿಳಾಸಕ್ಕೆ ಸಲ್ಲಿಸಬೇಕು. ಅರ್ಹತೆ, ನಿಬಂಧನೆ ಮುಂತಾದ ವಿವರಗಳಿಗಾಗಿ ಮೇಲ್ಕಂಡ ವಿಳಾಸಕ್ಕೆ ಸಂಪರ್ಕಿಸಲು ಕೋರಿದೆ.

ನವೆಂಬರ್ 2ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
***********************************************
ಕಲಬುರಗಿ,ಅ.31,(ಕ.ವಾ): ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11 ಕೆ.ವಿ. ಜಯನಗರ ಹಾಗೂ 11ಕೆ.ವಿ. ರಾಮಮಂದಿರ ಫೀಡರಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯ ಕೈಗೊಳ್ಳುವ ಪ್ರಯುಕ್ತ ನವೆಂಬರ್ 2ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯವಾಗುವ ಬಡಾವಣೆಗಳ ವಿವರ ಇಂತಿದೆ.
11 ಕೆ.ವಿ. ಜಯನಗರ: ಆರಿಹಂತ್‍ನಗರ ಜಯನಗರ, ಓಕಳಿ ಕ್ಯಾಂಪ್, ಬಸವೇಶ್ವರ ಆಸ್ಪತ್ರೆ, ಭಾಗ್ಯನಗರ, ತಿಲಕನಗರ. ತೇಲಕರ ಲೇಔಟ್ ಪೂಜಾ ಕಾಲೋನಿ, ಜಿ.ಡಿ.ಎ. ಲೇಔಟ್ ವಿಶ್ವೇಶ್ವರಯ್ಯ ಕಾಲೋನಿ, ಆಂಜನೇಯನಗರ, ಕೆ.ಜಿ.ಬಿ ಬ್ಯಾಂಕ್, ಪ್ರಶಾಂತ ನಗರ(ಎ), ಡೆಂಟಲ್‍ಕಾಲೇಜ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11 ಕೆ.ವಿ. ರಾಮಮಂದಿರ: ಸಿ.ಬಿ.ಐ.ಕಾಲೋನಿ, ಸದಾಶಿವನಗರ, ನವಜೀವನ ಸೊಸೈಟಿ ,ಕಲ್ಮಣಕರ್ ಲೇಔಟ್, ರಾಮಮಂದಿರ, ಕರುಣೇಶ್ವರನಗರ, ನವಣಿ ಲೇಔಟ್, ಸಂಗಮೇಶ್ವರ ಲೇಔಟ್, ದೇವಾನಗರ, ಓಜಾ ಕಾಲೋನಿ, ವಿವೇಕಾನಂದ ಕಾಲೋನಿ, ಲಕ್ಷ್ಮೀನಾರಾಯಣ ಲೇಔಟ್, ಶಿವ ಶಕ್ತಿ ಲೇಔಟ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು

ಹೀಗಾಗಿ ಲೇಖನಗಳು News and Photo Date: 31--10--2017
ಎಲ್ಲಾ ಲೇಖನಗಳು ಆಗಿದೆ News and Photo Date: 31--10--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photo Date: 31--10--2017 ಲಿಂಕ್ ವಿಳಾಸ https://dekalungi.blogspot.com/2017/10/news-and-photo-date-31-10-2017.html
0 Response to "News and Photo Date: 31--10--2017"
ಕಾಮೆಂಟ್ ಪೋಸ್ಟ್ ಮಾಡಿ