news and photo date: 09--10--2017

news and photo date: 09--10--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು news and photo date: 09--10--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : news and photo date: 09--10--2017
ಲಿಂಕ್ : news and photo date: 09--10--2017

ಓದಿ


news and photo date: 09--10--2017

ಅಕ್ಟೋಬರ್ 10ರಂದು ವಿಷನ್-2025 ಜಿಲ್ಲಾ ಮಟ್ಟದ ಕಾರ್ಯಾಗಾರ
***********************************************************
ಕಲಬುರಗಿ,ಅ.09.(ಕ.ವಾ.)-ವಿಷನ್-2025 ಕಲಬುರಗಿ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಅಕ್ಟೋಬರ್ 10ರಂದು ಬೆಳಿಗ್ಗೆ 10.15ರಿಂದ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸುವರು. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ವಿಜನ್ ಡಾಕ್ಯೂಮೆಂಟ್ ಪ್ರಾಜೆಕ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇಣುಕಾ ಚಿದಂಬರಂ ಅವರು ಈ ಕಾರ್ಯಾಗಾರವನ್ನು ಉದ್ಘಾಟಿಸುವರು.
ಅಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ನಗರ ಮೂಲ ಸೌಕರ್ಯ, ಸ್ಮಾರ್ಟ್ ಸಿಟಿ, ಸಾಮಾಜಿಕ ನ್ಯಾಯ, ಆರೋಗ್ಯ ಶಿಕ್ಷಣ, ಕೃಷಿ ಮತ್ತು ಅಲೈಡ್, ಗ್ರಾಮೀಣಾಭಿವೃದ್ಧಿ, ಕೈಗಾರಿಕಾ ಅಭಿವೃದ್ಧಿ, ಸೇವೆಗಳು, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನ, ಆಡಳಿತ, ಕಾನೂನು ಮತ್ತು ನ್ಯಾಯ ಎಂಬ ವಿಷಯಗಳ ಮೇಲೆ ಸಭೆ/ಚರ್ಚೆಗಳು ನಡೆಯಲಿವೆ. ಮಧ್ಯಾಹ್ನ 1.15 ರಿಂದ 2.30ರವರೆಗೆ ವಿರಾಮವಿರುತ್ತದೆ.
ನಂತರ ಮಧ್ಯಾಹ್ನ 2.30ರಿಂದ ಸಾಯಂಕಾಲ 4.30ರ ವರೆಗೆ ವಿವಿಧ ಗುಂಪುಗಳಿಂದ ತಮ್ಮ ಅಭಿಪ್ರಾಯಗಳನ್ನು ಪ್ರಸ್ತುತಪಡಿಸುವರು. ಪ್ರತಿ ಗುಂಪಿಗೆ ಗರಿಷ್ಠ 15 ನಿಮಿಷಗಳ ಅವಧಿ ನೀಡಲಾಗುತ್ತದೆ. ಬಳಿಕ ಟೀಕೆ, ಟಿಪ್ಪಣಿಗೆ ಅವಕಾಶವಿರುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ತಿಳಿಸಿದ್ದಾರೆ.

ಅತಿವೃಷ್ಠಿ: ಸಂತ್ರಸ್ತರಿಗೆ ಪರಿಹಾರದ ಅನುದಾನ ಬಿಡುಗಡೆ
*************************************************
ಕಲಬುರಗಿ,ಅ.09.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ಕಳೆದ ಸೆಪ್ಟೆಂಬರ್ 13ರಂದು ಸುರಿದ ಭಾರಿ ಮಳೆಯಿಂದ ಹಾನಿಗೊಳಪಟ್ಟ ಮನೆಗಳಿಗೆ ಪರಿಹಾರ ರೂಪದಲ್ಲಿ ಮಾನದಂಡದನ್ವಯ ಸಂತ್ರಸ್ಥರಿಗೆ ಹಣ ಮಂಜೂರು ಮಾಡಲು ಕಲಬುರಗಿ ಮಹಾನಗರ ಪಾಲಿಕೆಗೆ 29,75,400 ರೂ. ಹಾಗೂ ಚಿತ್ತಾಪುರ ತಹಶೀಲ್ದಾರರಿಗೆ 1,14,000 ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ತಿಳಿಸಿದ್ದಾರೆ.
ಕಲಬುರಗಿ ನಗರದ 783 ಮನೆಗಳು ಹಾಗೂ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮದ 30 ಮನೆಗಳು ಅತಿವೃಷ್ಠಿಯಿಂದ ಹಾನಿಯಾಗಿತ್ತು. ಅತಿವೃಷ್ಟಿ ಪರಿಹಾರ ಕಾಮಗಾರಿಗಳಿಗಾಗಿ ಮೀಸಲಿಟ್ಟ ಈ ಅನುದಾನವನ್ನು ಎನ್.ಡಿ.ಆರ್.ಎಫ್. ಹಾಗೂ ಎಸ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ ಸಂತ್ರಸ್ಥರಿಗೆ ಅನುದಾನ ಬಿಡುಗಡೆ ಮಾಡುವಂತೆ ತಿಳಿಸಲಾಗಿದೆ.
ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಸೂಚನೆ
ಕಲಬುರಗಿ,ಅ.09.(ಕ.ವಾ)-ಕಲಬುರಗಿ ಜಿಲ್ಲೆಯ ವಕ್ಫ್ ನೋಂದಾಯಿತ ಮಸೀದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೇಶ್ ಇಮಾಮ್ ಹಾಗೂ ಮೌಜನ್‍ಗಳು ವಕ್ಫ್ ಮಂಡಳಿಯಿಂದ ನೀಡಲಾಗುತ್ತಿರುವ ಗೌರವಧನ ಪಡೆಯಲು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡನ್ನು ಜೋಡಿಸಬೇಕೆಂದು ಎಂದು ಕಲಬುರಗಿ ಜಿಲ್ಲಾ ವಕ್ಫ್ ಅಧಿಕಾರಿಗಳು ತಿಳಿಸಿದ್ದಾರೆ.
ಆಧಾರ ಸಂಖ್ಯೆ ಜೋಡಣೆಗೆ ಈ ಹಿಂದೆ ತಿಳಿಸಲಾಗಿತ್ತಾದರೂ ಈವರೆಗೆ ಕೇವಲ ಶೇ.40ರಷ್ಟು ಫಲಾನುಭವಿಗಳು ಮಾತ್ರ ಮಾಹಿತಿಯನ್ನು ಸಲ್ಲಿಸಿರುತ್ತಾರೆ. ಮಾಹಿತಿಯನ್ನು ಸಲ್ಲಿಸದೇ ಇರುವ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು.
ಇನ್ನೂಳಿದ ಶೇ. 60ರಷ್ಟು ಫಲಾನುಭವಿಗಳು ಆಧಾರ ಕಾರ್ಡಿನ ಪ್ರತಿ ಹಾಗೂ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಕುರಿತು ಸಂಬಂಧಪಟ್ಟ ಕಮೀಟಿಯಿಂದ ದೃಢೀಕರಣ ಪತ್ರ, ಬ್ಯಾಂಕ್ ಪಾಸ್‍ಬುಕ್ ಕ್ರಮಬದ್ಧಗೊಳಿಸಿದ ಪ್ರತಿ ಹಾಗೂ ಮೊಬೈಲ್ ಸಂಖ್ಯೆನ್ನೊಳಗೊಂಡ ವಿವರವನ್ನು ದಾಖಲೆಗಳನ್ನು ಅಕ್ಟೋಬರ್ 25ರೊಳಗಾಗಿ ಜಿಲ್ಲಾ ವಕ್ಫ್ ಕಚೇರಿ, ಒಂದನೇ ಮಹಡಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ, ಮಿನಿ ವಿಧಾನಸೌಧ ಹತ್ತಿರ, ಮುಖ್ಯ ರಸ್ತೆ, ಕಲಬುರಗಿ ಕಚೇರಿ ವಿಳಾಸಕ್ಕೆ ತಕ್ಷಣ ಸಲ್ಲಿಸಬೇಕೆಂದು ತಿಳಿಸಲಾಗಿದೆ.
ಅದೇ ರೀತಿ ಕಲಬುರಗಿ ನಗರದಲ್ಲಿ ಬಹಳಷ್ಟು ಮಸೀದಿ, ಖಬ್ರಸ್ಥಾನ ಮತ್ತು ದರ್ಗಾಗಳು ವಕ್ಫ್ ಮಂಡಳಿಯಲ್ಲಿ ನೊಂದಣಿಯಾಗಿರುವುದಿಲ್ಲವೆಂದು ಕಂಡು ಬಂದಿದ್ದು, ನೋಂದಣಿಯಾಗಿರದ ಮಸೀದಿ, ಖಬ್ರಸ್ಥಾನ, ದರ್ಗಾಗಳ ಜವಾಬ್ದಾರರು ವಕ್ಫ್ ಮಂಡಳಿಯಲ್ಲಿ ನೋಂದಣಿ ಮಾಡಬೇಕೆಂದು ಅವರು ತಿಳಿಸಿದ್ದಾರೆ.

ನ್ಯಾಯಮೂರ್ತಿ ಎನ್.ಕೆ. ಪಾಟೀಲರಿಂದ ಎನ್.ಎ.ಟಿ.ಇ. ಸದಸ್ಯತ್ವದ ಪ್ರಮಾಣ ವಚನ
*************************************************************************
ಕಲಬುರಗಿ,ಅ.09.(ಕ.ವಾ)-ಕೇಂದ್ರ ಸರ್ಕಾರದ ವಿದ್ಯುಚ್ಛಕ್ತಿ ಸಚಿವಾಲಯವು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಎನ್.ಕೆ. ಪಾಟೀಲ ಅವರನ್ನು ರಾಷ್ಟ್ರೀಯ ವಿದ್ಯುಚ್ಛಕ್ತಿ ಮೇಲ್ಮನವಿ ನ್ಯಾಯಾಧೀಕರಣಕ್ಕೆ (ನ್ಯಾಶನಲ್ ಅಪಿಲೇಟ್ ಟ್ರಿಬ್ಯುನಲ್ ಫಾರ್ ಇಲೆಕ್ಟ್ರಿಸಿಟಿ) ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡಿದ್ದು, ನ್ಯಾಯಮೂರ್ತಿ ಪಾಟೀಲ ಅವರು ನ್ಯಾಯಾಧೀಕರಣ ಸದಸ್ಯತ್ವ ಪ್ರಮಾಣ ವಚನ ಈಚೆಗೆ ಹೊಸದೆಹಲಿಯಲ್ಲಿ ಸ್ವೀಕರಿಸಿದರು.
ನ್ಯಾಯಾಧೀಕರಣದ ಅಧ್ಯಕ್ಷೆ ಹಾಗೂ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ರಂಜನಾ ಪಿ. ದೇಸಾಯಿ ಪ್ರಮಾಣ ವಚನ ಬೋಧಿಸಿದರು. ಸದಸ್ಯತ್ವದ ಅವಧಿ ಮೂರು ವರ್ಷವಾಗಿರುತ್ತದೆ ಅಥವಾ ಶ್ರೀಯುತರ 65 ವರ್ಷ ವಯೋಮಿತಿವರೆಗೆ ಅಥವಾ ಮುಂದಿನ ಆದೇಶವರೆಗೆ ಇವುಗಳಲ್ಲಿ ಯಾವುದು ಮುಂಚಿತವೋ ಅದನ್ನು ಪರಿಗಣಿಸಲಾಗುವುದು ಎಂದು ಸಚಿವಾಲಯ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ನ್ಯಾಯಮೂರ್ತಿ ಎನ್.ಕೆ.ಪಾಟೀಲರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ನಿಡೇಬನ ಗ್ರಾಮದವರಾಗಿದ್ದು, 1954ರಲ್ಲಿ ಜನಿಸಿದ್ದಾರೆ. ಇವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ವಿದ್ಯಾಭ್ಯಾಸ ಭಾಲ್ಕಿಯಲ್ಲಿ, ಪದವಿ ವಿದ್ಯಾಭ್ಯಾಸ ಬೀದರಿನಲ್ಲಿ ಮುಗಿಸಿದರು. ಶ್ರೀಯುತರು ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದ ಬಳಿಕ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ 1982ರಲ್ಲಿ ವಕೀಲ ವೃತ್ತಿ ಆರಂಭಿಸಿದರು. ನಂತರ 2000ರಿಂದ 2016ರವರೆಗೆ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ತಮ್ಮ ಸೇವಾವಧಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿಯೂ ಹಾಗೂ ಅಧೀನ ನ್ಯಾಯಾಲಯಗಳ ಮೂಲಭೂತ ಸೌಕರ್ಯಗಳ ಕಲ್ಪಿಸುವಿಕೆ ಹಾಗೂ ಪರಿಶೀಲನೆ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕಾಣೆಯಾದ ವ್ಯಕ್ತಿಯ ಪತ್ತೆಗೆ ಮನವಿ
********************************
ಕಲಬುರಗಿ,ಅ.09.(ಕ.ವಾ.)-ಚಿಕ್ಕಬಳ್ಳಾಪುರ ಅಗ್ರಹಾರ ಚಿಂತಾಮಣಿ ನಗರದ 45 ವರ್ಷದ ಸರ್ಕಾರಿ ಶಾಲಾ ಶಿಕ್ಷಕ ಅಮರನಾಥ ಎಂ.ವಿ. ಅವರು ದಿನಾಂಕ:06-03-2015ರಂದು ಕಲಬುರಗಿ ಜಿಲ್ಲೆಯ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ದರ್ಶನಕ್ಕೆ ಪ್ರಯಾಣಿಸುತ್ತಿದ್ದಾಗ ರಾಯಚೂರು ರೈಲ್ವೆ ನಿಲ್ದಾಣದಲ್ಲಿ ನೀರು ತರುವುದಾಗಿ ಹೇಳಿ ಹೋದವರು ಮರಳಿ ಬರದೇ ಕಾಣೆಯಾಗಿರುತ್ತಾರೆ.
ಈ ಕುರಿತು ರಾಯಚೂರಿನ ರೈಲ್ವೆ ಪೊಲೀಸ್ ಠಾಣೆಯಲ್ಲಿ ಅಮರನಾಥ ಎಂ.ವಿ. ಅವರ ಪತ್ನಿ ಪದ್ಮಾಶಾಲಿ ಅವರು ದೂರು ನೀಡಿದ್ದು, ಪ್ರಕರಣ ಸಂಖ್ಯೆ. 112/2017 ರನ್ವಯ ದೂರು ದಾಖಲಿಸಲಾಗಿದೆ. 5 ಅಡಿ 6 ಇಂಚು ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಗೋಧಿ ಮೈಬಣ್ಣ, ದಪ್ಪವಾದ ಮೂಗು, ಬಲಗೈ ಮೇಲೆ ಅಂಜಿನೇಯ್ಯ ಸ್ವಾಮಿಯ ಹಚ್ಚೆ ಗುರುತು ಹೊಂದಿರುವ ವ್ಯಕ್ತಿಯು ಚಾಕಲೇಟ್ ಬಣ್ಣದ ಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿದ್ದು, ಕನ್ನಡ ಮತ್ತು ತೆಗಲು ಭಾಷೆ ಮಾತನಾಡುತ್ತಾನೆ. ವ್ಯಕ್ತಿಯ ಶೋಧನಾ ಕಾರ್ಯ ನಡೆದಿದೆ.
ಈ ವ್ಯಕ್ತಿ ಬಗ್ಗೆ ಯಾವುದೇ ಸುಳಿವು ಸಿಕ್ಕಲ್ಲಿ ಕೂಡಲೇ ರಾಯಚೂರು ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ. 08532-231716ಗೆ ತಿಳಿಸುವಂತೆ ರಾಯಚೂರು ರೈಲ್ವೆ ಪೊಲೀಸ್ ಠಾಣೆಯ ಎ.ಎಸ್.ಐ. ಕೇಶಮೂರ್ತಿ ಅವರು ತಿಳಿಸಿದ್ದಾರೆ.

ರೈತರು ಬೆಳೆ ದೃಢೀಕರಣ ಪಡೆಯುವುದು ಕಡ್ಡಾಯ
********************************************
ಕಲಬುರಗಿ,ಅ.09.(ಕ.ವಾ.)-ರೈತರು ಹೆಸರು ಮತ್ತು ಉದ್ದು ಖರೀದಿ ಕೇಂದ್ರಗಳಲ್ಲಿ ಬೆಳೆದ ದಾಸ್ತಾನನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಭೂಮಿಯ ವಿಸ್ತೀರ್ಣ ಮಾಡಿದ ಕುರಿತು ಸರಿಯಾದ ಮಾಹಿತಿ ನೀಡಿ ಬೆಳೆ ದೃಢೀಕರಣ ಪಡೆಯುವುದು ಕಡ್ಡಾಯವಾಗಿದೆ ಎಂದು ಕಲಬುರಗಿಯ ಜಿಲ್ಲಾ ಟಾಸ್ಕಫೋರ್ಸ್ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಒಬ್ಬ ರೈತನು ಒಂದೇ ಜಮೀನಿನಲ್ಲಿ ಉದ್ದು ಮತ್ತು ಹೆಸರು ಬೆಳೆಗಳನ್ನು ಬೆಳೆದಿದ್ದಲ್ಲಿ, ಹೆಸರು ಹಾಗೂ ಉದ್ದು ಬೆಳೆಗಳಿಗೆ ಪ್ರತ್ಯೇಕವಾಗಿ ದೃಢೀಕರಣ ಪತ್ರ ಕಂದಾಯ ಅಧಿಕಾರಿಗಳಿಂದ ಪಡೆದುಕೊಳ್ಳಬೇಕು. ಒಂದು ವೇಳೆ ಒಂದೇ ಬೆಳೆಗೆ ದೃಢೀಕರಣ ಪಡೆದಲ್ಲಿ ಮತ್ತೊಂದು ಬೆಳೆಯನ್ನು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುವಂತಿಲ್ಲ. ಆದ್ದರಿಂದ ರೈತರು ಬೆಳೆ ದೃಢೀಕರಣ ಪತ್ರ ಕಡ್ಡಾಯವಾಗಿ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.

ಅಫಜಲಪುರ: ನಲ್ಮ ಯೋಜನೆಯಡಿ ಅರ್ಜಿ ಆಹ್ವಾನ
********************************************
ಕಲಬುರಗಿ,ಅ.09.(ಕ.ವಾ.)-ಅಫಜಲಪುರ ಪುರಸಭೆಯಿಂದ ನಲ್ಮ ಯೋಜನೆಯ ಎಸ್‍ಇಪಿ ಕಾರ್ಯಕ್ರಮದಡಿ 2017-18ನೇ ಸಾಲಿನ ಸ್ವಯಂ ಉದ್ಯೋಗಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಫಜಲಪುರ ಪುರಸಭೆಯ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಭರ್ತಿ ಮಾಡಿದ ಅರ್ಜಿಗಳನ್ನು ಅಫಜಲಪುರ ಪುರಸಭೆ ಕಾರ್ಯಾಲಯದಲ್ಲಿ ಅಕ್ಟೋಬರ್ 25ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಫಜಲಪುರ ಪುರಸಭೆ ಕಾರ್ಯಾಲಯದಲ್ಲಿನ ಸಿ.ಎ.ಓ. ಅವರನ್ನು ಸಂಪರ್ಕಿಸಲು ಕೋರಿದೆ.
ಕೂಡ್ಲೂರ ಗ್ರಾಮದಲ್ಲಿ ಸಾಂಸ್ಕøತಿಕ ಸಂಗೀತ ಕಾರ್ಯಕ್ರಮ
ಕಲಬುರಗಿ,ಅ.09.(ಕ.ವಾ.)-ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗಡಿನಾಡ ಸಂಗೀತ ಹಾಗೂ ವಿವಿದೋದ್ದೇಶ ಸೇವಾ ಸಂಸ್ಥೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಯಾದಗಿರಿ ತಾಲೂಕಿನ ಕೂಡ್ಲೂರ ಗ್ರಾಮದ ಶ್ರೀ ಬಸವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಾಂಸ್ಕøತಿಕ ಸಂಗೀತ ಸಮ್ಮೇಳನವನ್ನು ತಾಲೂಕು ಪಂಚಾಯಿತಿ ಸದಸ್ಯ ರವೀಂದ್ರ ಮಲ್ಲೂರ ಉದ್ಘಾಟಿಸಿದರು.
ಖ್ಯಾತ ಕಲಾವಿದರಾದ ಪ್ರಶಾಂತ ಗೋಲ್ಡ್‍ಸ್ಮೀತ್, ವಿಶ್ವನಾಥ ವಸ್ತ್ರದಮಠ, ಚಂದ್ರಶೇಖರ ಗೋಗಿ, ನಾಗೇಂದ್ರ ಹೊನ್ನಳ್ಳಿ ಮತ್ತು ಕಲ್ಮೇಶ ಹೂಗಾರ, ದೇಸಾಯಿ ಕಲ್ಲೂರ ಸೇರಿದಂತೆ ಮತ್ತಿತರ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.

ಅ.10ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
**********************************************
ಅಂಗವಾಗಿ ಅರಿವು-ಜಾಥಾ ಉದ್ಘಾಟನೆ
**********************************
ಕಲಬುರಗಿ,ಅ.09.(ಕ.ವಾ.)-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಅರಿವು ಕಾರ್ಯಕ್ರಮವನ್ನು ಅಕ್ಟೋಬರ್ 10ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ಹೆಚ್.ಐ.ಟಿ. ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಹಾಗೂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಹಾಗೂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕಿ ಚನ್ನಮಲ್ಲಯ್ಯ ಹಿರೇಮಠ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕ ಡಾ|| ಬಿ.ಎನ್. ಜೋಶಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಅಂಬಾರಾಯ ಎಸ್.ರುದ್ರವಾಡಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಶರಣಬಸಪ್ಪ ಕೆ. ಅಧ್ಯಕ್ಷತೆ ವಹಿಸುವರು. ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಮನೋವೈದ್ಯ ಡಾ|| ಚಂದ್ರಶೇಖರ ಹುಡೇದ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸುವರು. “ಕಾರ್ಯ ಸ್ಥಳದಲ್ಲಿ ಮಾನಸಿಕ ಆರೋಗ್ಯ” ಕಾರ್ಯಕ್ರಮದ ಘೋಷವಾಕ್ಯವಾಗಿದೆ.
ಜಾಥಾ ಉದ್ಘಾಟನೆ: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಜಾಥಾ ಕಾರ್ಯಕ್ರಮವನ್ನು ಅಕ್ಟೊಬರ್ 10ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಹಾಗೂ ಶೋಭಾ ಸಿದ್ದು ಸಿರಸಗಿ ಉದ್ಘಾಟಿಸುವರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಹಾಗೂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕಿ ಚನ್ನಮಲ್ಲಯ್ಯ ಹಿರೇಮಠ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಡಾ|| ರವಿ ರಾಠೋಡ, ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕ ಡಾ|| ಬಿ.ಎನ್. ಜೋಶಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಅಂಬಾರಾಯ ಎಸ್. ರುದ್ರವಾಡಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಶರಣಬಸಪ್ಪ ಕೆ. ಅತಿಥಿಗಳಾಗಿ ಆಗಮಿಸುವರು.

ಚಿಂಚೋಳಿಯಲ್ಲಿ ಕುಷ್ಠರೋಗದ ಕುರಿತು ವಿಶೇಷ ಅರಿವು-ಸಮೀಕ್ಷೆ ಕಾರ್ಯಕ್ರಮ
*******************************************************************
ಕಲಬುರಗಿ,ಅ.09.(ಕ.ವಾ.)-ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಕುಷ್ಠರೋಗದ ಕುರಿತು ವಿಶೇಷ ಅರಿವು ಮತ್ತು ಸಮೀಕ್ಷೆ ಕಾರ್ಯಕ್ರಮವನ್ನು ಅಕ್ಟೋಬರ್ 9 ರಿಂದ 16ರವರೆಗೆ ಚಿಂಚೋಳಿ ತಾಲೂಕು ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಚಿಂಚೋಳಿ ನಗರ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಕುಷ್ಠರೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಲಂಚ ಪಡೆಯುವಾಗ ಸಿಕ್ಕಿಬಿದ್ದ ಗ್ರಾಮ ಲೆಕ್ಕಾಧಿಕಾರಿಗೆ ಏಳು ವರ್ಷ ಶಿಕ್ಷೆ
**************************************************************
ಕಲಬುರಗಿ,ಜು.16.(ಕ.ವಾ.)-ಜಮೀನು ಮುಟೇಶನ್ ಮಾಡಿಕೊಡಲು ಒಂದು ಸಾವಿರ ರೂ. ಲಂಚ ಪಡೆದ ಜೇವರ್ಗಿ ತಾಲೂಕಿನ ಯಲಗೋಡ ಗ್ರಾಮದ ಗ್ರಾಮಲೆಕ್ಕಾಧಿಕಾರಿ ರುಕ್ಕಪ್ಪ ಅವರ ವಿರುದ್ಧದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ವಿಶೇಷ ಸೆಷನ್ಸ್ ನ್ಯಾಯಾಧೀಶ ಬಿ.ವಿ.ಪಾಟೀಲ್ ಅವರು ಏಳು ವರ್ಷ ಶಿಕ್ಷೆ ಮತ್ತು 3 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.
ಫಿರ್ಯಾದಿ ಸಿದ್ದಣ್ಣ ಬಾಗೂರು ಅವರು ಸರ್ವೆ ನಂ. 6/2ರಲ್ಲಿ 5 ಎಕರೆ 07 ಗುಂಟೆ ಜಮೀನು ತಮ್ಮನ ಹೆಸರಿನಲ್ಲಿದ್ದು, ಆತನು ಮೃತ ಪಟ್ಟಿರುತ್ತಾನೆ. ಹೀಗಾಗಿ ಸದರಿ ಜಮೀನು ತಮ್ಮ ಹೆಸರಿಗೆ ಮುಟೇಶನ್‍ಗಾಗಿ ಅರ್ಜಿ ಸಲ್ಲಿಸಿದ್ದರು. ಆರೋಪಿತ ರುಕ್ಕಪ್ಪ ಇವರು ಮೋಟೇಷನ್ ಮಡಿಕೊಡಲು 1000ರೂ. ಬೇಡಿಕೆ ಇಟ್ಟು. 2012ರ ಮೇ 19ರಂದು ಸಂಜೆ 4.20 ಗಂಟೆಗೆ ಜೇವರ್ಗಿ ತಾಲೂಕಿನ ಯಡ್ರಾಮಿ ಪಟ್ಟಣದ ವಿಶೇಷ ತಹಶೀಲ್ದಾರ ಕಚೇರಿಯ ಮುಂದಿನ ಆವರಣದಲ್ಲಿ ಫಿರ್ಯಾದಿ ಸಿದ್ದಣ್ಣ ಬಾಗೂರು ಅವರಿಂದ 1000 ರೂ.ಲಂಚದ ಹಣ ಪಡೆಯುವಾಗ ಹಣದೊಂದಿಗೆ ಸಿಕ್ಕಿಬಿದ್ದಿರುತ್ತಾರೆ. ಈ ಕುರಿತು ಲೋಕಾಯುಕ್ತ ಇನ್ಸಪೆಕ್ಟರ್ ತಮ್ಮರಾಯ ಪಾಟೀಲ ಅವರು ಆರೋಪಿತನ ವಿರುದ್ಧ ದೋಷಾರೋಪಣೆ ಪತ್ರ ಸಲ್ಲಿಸಿದರು.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಆರೋಪಿ ರುಕ್ಕಪ್ಪ ವಿರುದ್ಧ ಹಾಜರುಪಡಿಸಲಾದ ಸಾಕ್ಷ್ಯಾಧಾರಗಳು ಸಾಬೀತಾಗಿದ್ದರಿಂದ ಆರೋಪಿ ತಪ್ಪಿತಸ್ಥನೆಂದು ಪರಿಗಣಿಸಿ ಕಲಂ 7 ಹಾಗೂ 13(1)ಡಿ ಸಂಗಡ 13(2) ಲಂಚ ನಿಷೇಧ ಕಾಯ್ದೆ ಅಡಿಯಲ್ಲಿ ಕಲಂ 7ರ ಲಂಚ ನಿಷೇಧ ಕಾಯ್ದೆ ಅಡಿಯಲ್ಲಿನ ಅಪರಾಧಕ್ಕೆ 3 ವರ್ಷ ಕಾರಾಗೃಹ ವಾಸ ಹಾಗೂ 1000 ರೂ. ದಂಡ ಮತ್ತು ಕಲಂ 13(2)ರ ಅಡಿಯಲ್ಲಿನ ಅಪರಾಧಕ್ಕೆ 4 ವರ್ಷ ಶಿಕ್ಷೆ ಹಾಗೂ 2000ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಐ. ವಿರುಪಣ್ಣ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.



ಹೀಗಾಗಿ ಲೇಖನಗಳು news and photo date: 09--10--2017

ಎಲ್ಲಾ ಲೇಖನಗಳು ಆಗಿದೆ news and photo date: 09--10--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo date: 09--10--2017 ಲಿಂಕ್ ವಿಳಾಸ https://dekalungi.blogspot.com/2017/10/news-and-photo-date-09-10-2017.html

Subscribe to receive free email updates:

0 Response to "news and photo date: 09--10--2017"

ಕಾಮೆಂಟ್‌‌ ಪೋಸ್ಟ್‌ ಮಾಡಿ