ಶೀರ್ಷಿಕೆ : ಲಾಭದಾಯಕ ಕಡಲೆ ಬೇಸಾಯ ಕುರಿತು ರೈತರಿಗೆ ತರಬೇತಿ
ಲಿಂಕ್ : ಲಾಭದಾಯಕ ಕಡಲೆ ಬೇಸಾಯ ಕುರಿತು ರೈತರಿಗೆ ತರಬೇತಿ
ಲಾಭದಾಯಕ ಕಡಲೆ ಬೇಸಾಯ ಕುರಿತು ರೈತರಿಗೆ ತರಬೇತಿ
ಕೊಪ್ಪಳ ಅ. 04 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಯೋಜನೆಯಡಿಯಲ್ಲಿ (ದ್ವಿದಳ ಧಾನ್ಯಗಳು) ಲಾಭದಾಯಕ ಕಡಲೆ ಬೇಸಾಯ ಕುರಿತ ತರಬೇತಿ ಕಾರ್ಯಕ್ರಮವನ್ನು ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಬುಧವಾರದಂದು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಪ್ರಾಧ್ಯಾಪಕರು, ಬೇಸಾಯ ಶಾಸ್ತ್ರಜ್ಞರಾದ ಡಾ. ಬಿ.ಎಮ್. ಚಿತ್ತಾಪುರ ರವರು ಉದ್ಘಾಟನೆ ಮಾಡಿದರು. ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದ ವಿಸ್ತರಣಾ ಮುಂದಾಳುಗಳಾದ ಡಾ. ಎಂ.ಬಿ. ಪಾಟೀಲರವರು ಪ್ರಾಸ್ತಾವಿಕ ನುಡಿಗಳೊಂದಿಗೆ, ಕಡಿಮೆ ಖರ್ಚಿನಲ್ಲಿ ಕಡಲೆಗೆ ಬರುವ ರೋಗ ಕೀಡೆಗಳ ನಿರ್ವಹಣೆ ಕುರಿತು ರೈತರಿಗೆ ತಿಳಿಸಿಕೊಟ್ಟರು. ಕಡಲೆ ಬಿತ್ತುವಾಗ ಟ್ರೈಕೋಡರ್ಮಾ ಬೀಜೋಪಚಾರ ಮಾಡುವುದರಿಂದ ಕಡಲೆಗೆ ಬರುವಂತಹ ವೈರಸ್ ರೋಗಗಳನ್ನು ತಡೆಗಟ್ಟಬಹುದು, ರೈಜೋಬಿಯಂ ಮತ್ತು ಪಿ.ಎಸ್.ಬಿ. ಅಣುಜೀವಿ ಗೊಬ್ಬರಗಳಿಂದ ಬೀಜೋಪಚಾರ ಮಾಡುವುದರಿಂದ ಬೆಳೆಗೆ ಕಡಿಮೆ ಖರ್ಚಿನಲ್ಲಿ ಸಮರ್ಪಕ ಸಸ್ಯ ಪೋಷಕಾಂಶಗಳನ್ನು ಒದಗಿಸಬಹುದೆಂದು ತಿಳಿಸಿದರು. ಪ್ರಾಧ್ಯಾಪಕರು, ಬೇಸಾಯ ಶಾಸ್ತ್ರಜ್ಞರಾದ ಡಾ. ಬಿ.ಎಮ್. ಚಿತ್ತಾಪುರ ರವರು ಬೇಸಾಯ ತಂತ್ರಜ್ಞಾನಗಳಾದ ಕ್ಯಾಲ್ಸಿಯಂ ಕ್ಲೋರೈಡ್ ಬೀಜೋಪಚಾರದಿಂದ ಕಡಲೆ ಬೆಳೆಗೆ ಬರ ನಿರೋಧಕ ಶಕ್ತಿ ಬರುತ್ತದೆ. ಇದರ ಜೊತೆಗೆ ಗೊಬ್ಬರ ನಿರ್ವಹಣೆ, ನೀರು ನಿರ್ವಹಣೆ ಹಾಗೂ ಇತರೆ ಬೇಸಾಯ ತಂತ್ರಜ್ಞಾನಗಳ ಬಗ್ಗೆ ತಿಳಿಸಿಕೊಟ್ಟರು.
ಡಾ. ಗಿರೀಶ ಎನ್. ಮರಡ್ಡಿ, ವಿಜ್ಞಾನಿಗಳು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ರವರು ಕಡಲೆ ಮಾರಾಟ ಮತ್ತು ಮೌಲ್ಯವರ್ಧನೆ ಬಗ್ಗೆ ರೈತರಿಗೆ ತಿಳಿಸಿಕೊಟ್ಟು, ರೈತರಿಗೆ ಕಡಲೆಯಲ್ಲಿ ಬರುವಂತಹ ಪ್ರಮುಖ ಕೀಟವಾದ ಎಲಿಕೊವರ್ಪಾವನ್ನು ಸಮಗ್ರವಾಗಿ ಹತೋಟಿ ಮಾಡಲು ಸಮಗ್ರ ಪೀಡೆಯ ನಿರ್ವಹಣೆಯ ತಂತ್ರಗಳು ಹಾಗೂ ಕಡಿಮೆ ಖರ್ಚಿನ ತಂತ್ರಜ್ಞಾನಗಳಾದ ತತ್ತಿನಾಶಕ ಪ್ರೊಫೆನೋಫಾಸ್ 2 ಮಿ.ಲಿ/ಲೀ ನೀರಿಗೆ ಅಥವಾ ಇಮಾಮೆಕ್ಟಿಮ್ ಬೆಂಜಿಯಾಟ್ 2 ಗ್ರಾಂ. ಅಥವಾ ಇಂಡಾಕ್ಸಿಕಾರ್ಬ್ 3 ಮಿಲಿ./ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದರ ಜೊತೆಗೆ ಬೇವಿನ ಬೀಜದ ಕಷಾಯ ಹಾಗೂ ಎನ್.ಪಿ.ವಿ. ನಂಜಾಣುವನ್ನು ಸಿಂಪರಣೆ ಮಾಡಿ ಕೀಡೆಯನ್ನು ಸಮರ್ಪಕವಾಗಿ ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಮಾಡಬಹುದೆಂದು ರೈತರಿಗೆ ತಿಳಿಸಿದರು. ನಂತರ ರೈತ ಮತ್ತು ವಿಜ್ಞಾನಿಗಳೊಂದಿಗೆ ಕಡಲೆ ಬೆಳೆ ಕುರಿತು ಹಲವಾರು ವಿಷಯಗಳ ಬಗ್ಗೆ ಗುಂಪು ಚರ್ಚೆ ನಡೆಯಿತು.
ಡಾ. ಜಿ.ಎನ್. ಮರಡ್ಡಿ, ವಿಷಯ ತಜ್ಞರು(ಕೃಷಿ ವಿಸ್ತರಣೆ) ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಇವರು ತರಬೇತಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ಹೀಗಾಗಿ ಲೇಖನಗಳು ಲಾಭದಾಯಕ ಕಡಲೆ ಬೇಸಾಯ ಕುರಿತು ರೈತರಿಗೆ ತರಬೇತಿ
ಎಲ್ಲಾ ಲೇಖನಗಳು ಆಗಿದೆ ಲಾಭದಾಯಕ ಕಡಲೆ ಬೇಸಾಯ ಕುರಿತು ರೈತರಿಗೆ ತರಬೇತಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಲಾಭದಾಯಕ ಕಡಲೆ ಬೇಸಾಯ ಕುರಿತು ರೈತರಿಗೆ ತರಬೇತಿ ಲಿಂಕ್ ವಿಳಾಸ https://dekalungi.blogspot.com/2017/10/blog-post_99.html
0 Response to "ಲಾಭದಾಯಕ ಕಡಲೆ ಬೇಸಾಯ ಕುರಿತು ರೈತರಿಗೆ ತರಬೇತಿ"
ಕಾಮೆಂಟ್ ಪೋಸ್ಟ್ ಮಾಡಿ