ಶೀರ್ಷಿಕೆ : ದಾಳಿಂಬೆ ಬೆಳೆ ನಿರ್ವಹಣೆಗೆ ಮುಂಜಾಗ್ರತಾ ಕ್ರಮಗಳು : ರೈತರಿಗೆ ಸಲಹೆ
ಲಿಂಕ್ : ದಾಳಿಂಬೆ ಬೆಳೆ ನಿರ್ವಹಣೆಗೆ ಮುಂಜಾಗ್ರತಾ ಕ್ರಮಗಳು : ರೈತರಿಗೆ ಸಲಹೆ
ದಾಳಿಂಬೆ ಬೆಳೆ ನಿರ್ವಹಣೆಗೆ ಮುಂಜಾಗ್ರತಾ ಕ್ರಮಗಳು : ರೈತರಿಗೆ ಸಲಹೆ
ಕೊಪ್ಪಳ ಅ. 04 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ದಾಳಿಂಬೆ ಬೆಳೆ ನಿರ್ವಹಣೆಗೆ ತೋಟಗಾರಿಕೆ ಇಲಾಖೆಯು ರೈತರಿಗೆ ಸಲಹೆಗಳನ್ನು ನೀಡಿದೆ.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದು ಸಂತಸದ ವಿಷಯ. ಆದರೆ ತಂಗಾಳಿ ಮಿಶ್ರಿತ ಮಳೆ ದಾಳಿಂಬೆ ಬೆಳೆಗೆ ತುಂಬ ಹಾನಿಕಾರಕ. ದುಂಡಾಣು ರೋಗ ಉಲ್ಬಣಕ್ಕೆ ಇದು ಹೇಳಿ ಮಾಡಿಸಿದ ವಾತಾವರಣವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ರೈತರು ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈಗಾಗಲೇ ಚಾಟ್ನಿ ಮಾಡಿ ಹಣ್ಣು ಪಡೆಯಲು ಸಿದ್ಧವಾಗಿರುವ ತೋಟಗಳಲ್ಲಿ ಹೆಚ್ಚಿನ ಕಾಳಜಿ ಅವಶ್ಯಕವಾಗಿರುತ್ತದೆ.
ಮೊದಲನೆಯದಾಗಿ ನೀರು ಬಸಿದು ಹೋಗುವಂತೆ ನೋಡಿಕೊಳ್ಳಬೇಕು. ಗಿಡದ ಸುತ್ತಲೂ ಕಸ ತೆಗೆದು ಸ್ವಚ್ಛವಾಗಿರಿಸಿಕೊಳ್ಳಬೇಕು. ನೀರು ದಂಬುಗಳನ್ನು ನಿಯಮಿತವಾಗಿ ತೆಗೆಯುತ್ತಿರಬೇಕು. ಸಿ.ಒ.ಸಿ 3 ಗ್ರಾಂ. ಜೊತೆಗೆ 0.50 ಗ್ರಾಂ. ಬ್ಯಾಕ್ಟಿರೀಮೈಸಿನ್ ಅಥವ ಸ್ಟ್ರಪ್ಟೊಸೈಕ್ಲಿನಿನ್ 1 ಲೀ. ನೀರಿಗೆ ಬೆರೆಸಿ ಸಿಂಪರಿಸಬೇಕು. ಮರು ದಿನವೇ 1 ಗ್ರಾಂ. ಜಿಂಕ್ ಸಲ್ಪೇಟ +1 ಗ್ರಾಂ. ಮ್ಯಾಗ್ನೆಷಿಯಂ ಸಲ್ಫೇಟ್ +1 ಗ್ರಾಂ. ಕ್ಯಾಲ್ಸಿಯಂ+ 1 ಗ್ರಾಂ. ಬೋರಾನ್ ಸಿಂಪರಿಸಿದರೆ, ಗಿಡಗಳಲ್ಲಿ ನಿರೋಧಕ ಶಕ್ತಿ ಹೆಚ್ಚುತ್ತದೆ. 10 ದಿನಗಳ ನಂತರ 10 ಗ್ರಾಂ. ಸೂಡೊಮೋನಾಸ್, ಜೈವಿಕ ಶಿಲೀಂದ್ರ ನಾಶಕವನ್ನು ಪ್ರತ್ಯೇಕವಾಗಿ 1 ಲೀ. ನೀರಿಗೆ ಬೆರೆಸಿ ಸಿಂಪರಿಸಬೇಕು.
ಹಣ್ಣಿಗಾಗಿ ಬಿಟ್ಟಿರುವ ತೋಟಗಳಲ್ಲಿ ರೋಗದ ಲಕ್ಷಣಗಳು ಕಂಡು ಬಂದಲ್ಲಿ, ಧಾರಕ್ಷಕ 4 ಮಿ. ಲೀ. ಜೊತೆಗೆ ದುಂಡಾಣು ರಕ್ಷಕ 10 ಗ್ರಾಂ. 1 ಲೀ.ನೀರಿಗೆ ಬೆರೆಸಿ 15 ದಿನಗಳಿಗೊಮ್ಮೆ ಸಿಂಪರಿಸುತ್ತಿರಬೇಕು.ಕಾಯಿಗಳು ಅಡಿಕೆ ಗಾತ್ರದಲ್ಲಿದ್ದಾಗ ಜಿ.ಎ.20 (ಪಿಪಿಎಂ) ಸಿಂಪರಿಸಿದರೆ ಗಾತ್ರ ಹೆಚ್ಚಾಗಿ ಹೊಳಪು ಬರುತ್ತದೆ. ಇನ್ನು ಮೇಲೆ ಚಾಟ್ನಿ ಮಾಡುವವರು ತಡ ಹಸ್ತಾ ಬಹಾರನಲ್ಲಿ ಚಾಟ್ನಿ ಮಾಡುವುzು ಸೂಕ್ತ ಕಾಲ. ಚಾಟ್ನಿ ನಂತರ ಸೂಕ್ತ ಗೊಬ್ಬರ ನೀಡಿ ನಿಯಮಿತವಾಗಿ ನೀರು ಹರಿಸಬೇಕು. ಅಂತರ ಬೆಳೆಯಾಗಿ ಆಫ್ರಿಕನ್ ಚೆಂಡು ಹೂ ಬೆಳೆ ತೆಗೆದುಕೊಂಡರೆ ಜಂತು ಹುಳುವಿನ ಬಾಧೆ ಕಡಿಮೆಯಾಗಿ, ಅಲ್ಪ ಸ್ವಲ್ಪ ಆದಾಯವನ್ನೂ ಪಡೆಯಬಹುದು.
ಮಳೆ ನಿಲ್ಲುವವರೆಗೂ ನಿಯಮಿತವಾಗಿ ಮೇಲೆ ತಿಳಿಸಿದ ಶಿಲೀಂದ್ರನಾಶಕಗಳನ್ನು ಬದಲಾಯಿಸಿ ಸಿಂಪರಣೆ ಕೈಗೊಂಡಲ್ಲಿ ಮಾತ್ರ ದುಂಡಾಣು ರೋಗ ಹತೋಟಿ ಮಾಡಲು ಸಾಧ್ಯ .
ಇನ್ನು ಕೀಟಗಳಾದ ಹಣ್ಣು ಕೊರಕ, ಹಣ್ಣಿನ ನೊಣ ಕಂಡು ಬಂದರೆ, ಕ್ವಿನಾಲಫಾಸ್ 25 ಇ. ಸಿ. 2 ಮಿ. ಲೀ. 1 ಲೀ. ನೀರಿಗೆ ಬೆರೆಸಿ ಸಿಂಡಿಸಬೇಕು ಮತ್ತು ಎಕರೆಗೆ 4-6 ಮೋಹಕ ಬಲೆಗಳನ್ನು ಬಳಸಬೇಕು. ಹಿಟ್ಟು ತಿಗಣಿ ಕಂಡುಬಂದಲ್ಲಿ , 1 ಮಿ. ಲೀ. ಕ್ಲೋರೋಪೈರಿಫಾಸ್ +1 ಮಿ.ಲೀ ನುವಾನ್ ಜೊತೆಗೆ ಶಾಂಪೂ ಬೆರೆಸಿ ಸಿಂಪರಿಸಿರಿ. ಇತರೆ ಚುಕ್ಕೆ ರೋಗಳ ಹತೋಟಿಗಾಗಿ ರೋಕೋ 1 ಗ್ರಾಂ. 1 ಲೀ. ನೀರಿಗೆ ಬೆರೆಸಿ ಸಿಂಪರಿಸಿರಿ ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಕೊಪ್ಪಳ, ತೋಟಗಾರಿಕೆ ಉಪನಿರ್ದೇಶಕರ ಕಛೇರಿ, ಕೊಪ್ಪಳ ಅಲ್ಲದೇ ಆಯಾ ತಾಲೂಕಾ ಕಛೇರಿಗಳನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದೆ.
ಹೀಗಾಗಿ ಲೇಖನಗಳು ದಾಳಿಂಬೆ ಬೆಳೆ ನಿರ್ವಹಣೆಗೆ ಮುಂಜಾಗ್ರತಾ ಕ್ರಮಗಳು : ರೈತರಿಗೆ ಸಲಹೆ
ಎಲ್ಲಾ ಲೇಖನಗಳು ಆಗಿದೆ ದಾಳಿಂಬೆ ಬೆಳೆ ನಿರ್ವಹಣೆಗೆ ಮುಂಜಾಗ್ರತಾ ಕ್ರಮಗಳು : ರೈತರಿಗೆ ಸಲಹೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ದಾಳಿಂಬೆ ಬೆಳೆ ನಿರ್ವಹಣೆಗೆ ಮುಂಜಾಗ್ರತಾ ಕ್ರಮಗಳು : ರೈತರಿಗೆ ಸಲಹೆ ಲಿಂಕ್ ವಿಳಾಸ https://dekalungi.blogspot.com/2017/10/blog-post_9.html
0 Response to "ದಾಳಿಂಬೆ ಬೆಳೆ ನಿರ್ವಹಣೆಗೆ ಮುಂಜಾಗ್ರತಾ ಕ್ರಮಗಳು : ರೈತರಿಗೆ ಸಲಹೆ"
ಕಾಮೆಂಟ್ ಪೋಸ್ಟ್ ಮಾಡಿ