ಶೀರ್ಷಿಕೆ : ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ
ಲಿಂಕ್ : ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ
ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ
ಕೊಪ್ಪಳ ಅ. 28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಅ. 31 ರಿಂದ ನ. 06 ರವರೆಗೆ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಬಸವರಾಜ ರಾಯರಡ್ಡಿ ಅವರು ಹುಬ್ಬಳಿಯಿಂದ ಹೊರಟು ಅ. 31 ರಂದು ರಾತ್ರಿ 07 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು. ನಂತರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ “ಕೃಷ್ಣ ಮೇಲ್ದಂಡೆ ಯೋಜನೆ” ಹಂತ-3 ಕ್ಕೆ ಭೂಸ್ವಾಧಿನ ಪಡಿಸಿಕೊಳ್ಳುವ ಜಮೀನಿಗೆ ಭೂ ಪರಿಹಾರ ದರವನ್ನು ನಿಗದಿಪಡಿಸುವ ಕುರಿತು ಸಚಿವ ಸಂಪುಟ ಉಪಸಮಿತಿ ಸಭೆಯ ಕುರಿತು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸುವರು. ಮಂತ್ರಿಗಳು ಅಂದು ಕೊಪ್ಪಳದಲ್ಲಿ ವಾಸ್ತವ್ಯ ಮಾಡುವರು. ನ. 01 ರಂದು ಬೆಳಿಗ್ಗೆ 9 ಗಂಟೆಗೆ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸುವರು. ಬೆಳಿಗ್ಗೆ 11-30 ಗಂಟೆಗೆ ಮುನಿರಾಬಾದಗೆ ತೆರಳಿ ತುಂಗಭದ್ರ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡುವರು. ಮಧ್ಯಾಹ್ನ 1 ಗಂಟೆಗೆ ಕುಕನೂರಿಗೆ ತೆರಳುವರು. 2-30ಕ್ಕೆ ಯಲಬುರ್ಗಾ ತಹಶಿಲ್ದಾರ ಕಛೇರಿ ಸಭಾಂಗಣದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 7-30ಕ್ಕೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.
ನವೆಂಬರ್. 2 ರಂದು ಬೆಳಿಗ್ಗೆ 10 ಗಂಟೆ ಕೊಪ್ಪಳದಲ್ಲಿ ಜರುಗಲಿರುವ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 12-45 ಕ್ಕೆ ಕೊಪ್ಪಳದಿಂದ ಆಲಮಟ್ಟಿಗೆ ತೆರಳುವರು. 3 ಗಂಟೆಗೆ ಆಲಮಟ್ಟಿಯಲ್ಲಿ ಕಂದಾಯ ಸಚಿವರು ಮತ್ತು ಸಚಿವ ಸಂಪುಟ ಉಪಸಮಿತಿಯ ಇತರೆ ಸಚಿವರುಗಳೊಂದಿಗೆ ಕೃಷ್ಣ ನದಿಯ ರೈತರ ಸಭೆಯಲ್ಲಿ ಭಾಗವಹಿಸುವರು. 8-30ಕ್ಕೆ ಯಲಬುರ್ಗಾ ತಾಲೂಕು ಹಿರೇವಂಕಲಕುಂಟಾಗೆ ಆಗಮಿಸುವರು. ರಾತ್ರಿ 10 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.
ನ. 3 ರಂದು ಬೆಳಿಗ್ಗೆ 10 ಕ್ಕೆ ಹಿರೇವಂಕಲಕುಂಟಾಗೆ ತೆರಳಿ ಕಂದಾಯ ಸಚಿವರು ಮತ್ತು ಸಚಿವ ಸಂಪುಟ ಉಪಸಮಿತಿಯ ಇತರೆ ಸಚಿವರುಗಳೊಂದಿಗೆ ಕೃಷ್ಣ ನದಿಯ ರೈತರ ಸಭೆಯಲ್ಲಿ ಭಾಗವಹಿಸುವರು. ಬೆಳಿಗ್ಗೆ 11-30ಕ್ಕೆ ಕೊಪ್ಪಳದಲ್ಲಿ ಕಂದಾಯ ಸಚಿವರು ಮತ್ತು ಸಚಿವ ಸಂಪುಟ ಉಪಸಮಿತಿಯ ಇತರೆ ಸಚಿವರುಗಳೊಂದಿಗೆ ಕೃಷ್ಣ ನದಿಯ ರೈತರ ಸಭೆಯಲ್ಲಿ ಭಾಗವಹಿಸುವರು. ಮಂತ್ರಿಗಳು ಅಂದು ಕೊಪ್ಪಳದಲ್ಲಿ ವಾಸ್ತವ್ಯ ಹೂಡುವರು.
ನ. 4 ರಿಂದ 06 ರವರೆಗೆ ನಿತ್ಯ ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಜನಸಂಪರ್ಕ ಸಭೆಯಲ್ಲಿ ಭಾಗವಹಿಸುವರು. ನಂತರ ಯಲಬುರ್ಗಾದಲ್ಲಿ ವಾಸ್ತವ್ಯ ಹೂಡುವರು. ನ. 5 ಯಲಬುರ್ಗಾ ತಾಲೂಕಿನ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ, ಯಲಬುರ್ಗಾದಲ್ಲಿ ವಾಸ್ತವ್ಯ ಮಾಡುವರು. ನ. 6 ರಂದು ರಾತ್ರಿ 8-15ಕ್ಕೆ ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ತೆರಳುವರು ಎಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ
ಎಲ್ಲಾ ಲೇಖನಗಳು ಆಗಿದೆ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ ಲಿಂಕ್ ವಿಳಾಸ https://dekalungi.blogspot.com/2017/10/blog-post_87.html
0 Response to "ಜಿಲ್ಲಾ ಉಸ್ತುವಾರಿ ಮಂತ್ರಿಗಳ ಪ್ರವಾಸ ಕಾರ್ಯಕ್ರಮ"
ಕಾಮೆಂಟ್ ಪೋಸ್ಟ್ ಮಾಡಿ