ಶೀರ್ಷಿಕೆ : ಕಾಲೇಜು ರಂಗೋತ್ಸವ ಆಚರಣೆ : ಅವಧಿ ವಿಸ್ತರಣೆ
ಲಿಂಕ್ : ಕಾಲೇಜು ರಂಗೋತ್ಸವ ಆಚರಣೆ : ಅವಧಿ ವಿಸ್ತರಣೆ
ಕಾಲೇಜು ರಂಗೋತ್ಸವ ಆಚರಣೆ : ಅವಧಿ ವಿಸ್ತರಣೆ
ಕೊಪ್ಪಳ ಅ. 04 (ಕರ್ನಾಟಕ ವಾರ್ತೆ): ಕಲಬುರಗಿ ರಂಗಾಯಣ ವತಿಯಿಂದ ಕಾಲೇಜು ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಮತ್ತು ವಿದ್ಯಾರ್ಥಿಗಳಲ್ಲಿ ಕಲೆಗಳ ಅಭಿವ್ಯಕ್ತಿಗೆ ಆತ್ಮಸ್ಥೈರ್ಯ ತುಂಬಲು ಕಾಲೇಜು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ರಂಗೋತ್ಸವವನ್ನು ಏರ್ಪಡಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಅ. 13 ರವರೆಗೆ ವಿಸ್ತರಿಸಲಾಗಿದೆ.
ನಾಟಕ ಸ್ಪರ್ಧೆಯು 3 ಹಂತದಾಗಿದ್ದು, ಜಿಲ್ಲೆ, ವಿಭಾಗೀಯ ಮತ್ತು ರಾಜ್ಯಮಟ್ಟದಲ್ಲಿ ಆಯೋಜಿಸಲಾಗುವುದು. ಪ್ರಥಮ ಹಂತದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿ ನಾಟಕೋತ್ಸವವನ್ನು ಏರ್ಪಡಿಸಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಕಾಲೇಜು ವಿದ್ಯಾರ್ಥಿಗಳ 8 ತಂಡಗಳನ್ನು ಸ್ಥಳೀಯ ಸಂಚಾಲನಾ ಸಮಿತಿ ಆಯ್ಕೆ ಮಾಡುತ್ತದೆ. ಆಯ್ಕೆಯಾದ ತಂಡಗಳಿಗೆ 10 ದಿನಗಳ ತರಬೇತಿ ಶಿಬಿರವನ್ನು 8 ಕಾಲೇಜುಗಳಲ್ಲಿ ಏರ್ಪಡಿಸಲಾಗುವುದು. ಹಾಗೇಯೇ ಆಯ್ಕೆಯಾದ ಪ್ರತಿಯೊಂದು ಕಾಲೇಜು ತಂಡ ಒಂದು ಜಾನಪದ ಪ್ರಕಾರವನ್ನು ಆಯ್ಕೆ ಮಾಡಿ ಉತ್ಸವ ಸಂದರ್ಭದಲ್ಲಿ ಪ್ರದರ್ಶಿಸಬೇಕು. ಜಾನಪದ ಕಲಾಪ್ರಕಾರಗಳು ಪ್ರದರ್ಶಕ ಜಾನಪದ ಕಲೆಗಳಾಗಿರಬೇಕು (ಉದಾಹರಣೆಗೆ ಡೊಳ್ಳು, ಕಂಸಾಳೆ, ತಮಟೆ, ಕೋಲಾಟ, ಜಗ್ಗಲಿಗೆ ಇತ್ಯಾದಿ). 10 ದಿನಗಳ ತರಬೇತಿಯ ನಂತರ ಸಿದ್ಧಗೊಂಡ ನಾಟಕ ಮತ್ತು ಜಾನಪದ ಕಾರ್ಯಕ್ರಮಗಳನ್ನು ನಿಗದಿತ ದಿನಾಂಕದಂದು ಸ್ಪರ್ಧಾತ್ಮಕ ರೀತಿಯಲ್ಲಿ ಪ್ರದರ್ಶನ ಏರ್ಪಡಿಸಿ, ಉತ್ತಮ 2 ನಾಟಕ ತಂಡ ಹಾಗೂ 2 ಜಾನಪದ ತಂಡಗಳನ್ನು ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಿ ವಿಭಾಗ ಮಟ್ಟಕ್ಕೆ ಕಳುಹಿಸಲಾಗುವುದು.
ಆಸಕ್ತ ಸರ್ಕಾರಿ/ ಖಾಸಗಿ ಕಾಲೇಜುಗಳ ಮುಖ್ಯಸ್ಥರು ರಂಗಾಯಣದಲ್ಲಿ ಲಭ್ಯವಿರುವ ಅರ್ಜಿ ನಮೂನೆಯನ್ನು ಪಡೆದು ನೊಂದಾಯಿಸಿಕೊಳ್ಳಲು ಅವಧಿಯನ್ನು ಅಕ್ಟೋಬರ್. 07 ರಿಂದ 13 ರ ಸಾಯಂಕಾಲ 5-30 ಗಂಟೆಯವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08472-227735 ಕ್ಕೆ ಸಂಪರ್ಕಿಸಲು ಕಲಬುರಗಿ ರಂಗಾಯಣ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಕಾಲೇಜು ರಂಗೋತ್ಸವ ಆಚರಣೆ : ಅವಧಿ ವಿಸ್ತರಣೆ
ಎಲ್ಲಾ ಲೇಖನಗಳು ಆಗಿದೆ ಕಾಲೇಜು ರಂಗೋತ್ಸವ ಆಚರಣೆ : ಅವಧಿ ವಿಸ್ತರಣೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕಾಲೇಜು ರಂಗೋತ್ಸವ ಆಚರಣೆ : ಅವಧಿ ವಿಸ್ತರಣೆ ಲಿಂಕ್ ವಿಳಾಸ https://dekalungi.blogspot.com/2017/10/blog-post_74.html
0 Response to "ಕಾಲೇಜು ರಂಗೋತ್ಸವ ಆಚರಣೆ : ಅವಧಿ ವಿಸ್ತರಣೆ"
ಕಾಮೆಂಟ್ ಪೋಸ್ಟ್ ಮಾಡಿ