ಶೀರ್ಷಿಕೆ : ಬದನೆಯಲ್ಲಿ ಕೀಟ/ರೋಗಗಳ ಹತೋಟಿಗೆ ರೈತರಿಗೆ ಸಲಹೆಗಳು.
ಲಿಂಕ್ : ಬದನೆಯಲ್ಲಿ ಕೀಟ/ರೋಗಗಳ ಹತೋಟಿಗೆ ರೈತರಿಗೆ ಸಲಹೆಗಳು.
ಬದನೆಯಲ್ಲಿ ಕೀಟ/ರೋಗಗಳ ಹತೋಟಿಗೆ ರೈತರಿಗೆ ಸಲಹೆಗಳು.
ಕೊಪ್ಪಳ ಅ. 07 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಬದನೆ ಬೆಳೆಯಲ್ಲಿ ಕಾಯಿಕೊರಕ ಹುಳುವಿನ ಬಾಧೆ ಮತ್ತು ಎಲೆ ಚುಕ್ಕೆ ರೋಗ ಕಂಡುಬಂದಿದ್ದು, ಇದರ ಹತೋಟಿಗೆ ಕೊಪ್ಪಳ ತೋಟಗಾರಿಕೆ ಇಲಾಖೆ ರೈತರಿಗೆ ಸಲಹೆಗಳನ್ನು ನೀಡಿದೆ.
ತೋಟಗಾರಿಕೆ ಇಲಾಖೆ ವತಿಯಿಂದ ವಿಷಯ ತಜ್ಞರು ಮತ್ತು ಇತರೇ ಅಧಿಕಾರಿಗಳು ಜಿಲ್ಲೆಯಲ್ಲಿ ಬದನೆ ಬೆಳೆ ಬೆಳೆಯುವ ಪ್ರದೇಶಗಳಿಗೆ ಭೇಟಿ ನೀಡಿದಾಗ ಬದನೆಯಲ್ಲಿ ಕಾಂಡ ಮತ್ತು ಕಾಯಿಕೊರಕದ ಹುಳುವಿನ ಬಾಧೆ ಹೆಚ್ಚಾಗಿರುವುದು ಕಂಡು ಬಂದಿದೆ. ಇದರ ಜೊತೆಗೆ ಸೆರ್ಕೊಸ್ಪೋರಾ ಎನ್ನುವ ಎಲೆ ಚುಕ್ಕೆ ರೋಗವೂ ಕಾಣಿಸಿಕೊಂಡಿದ್ದು, ಸತತ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ಇದರ ಬಾಧೆ ಹೆಚ್ಚಾಗಿರುವುದು ಕಂಡುಬಂದಿದೆ.
ಈ ಕೀಟಬಾಧೆ ಮತ್ತು ರೋಗದ ನಿರ್ವಹಣೆಗೆ ರೈತರು, ಬದನೆ ನಾಟಿ ಮಾಡುವಾಗ ಎಕರೆಗೆ 1 ಕ್ವಿಂಟಲ್ ಮತ್ತು ನಾಟಿ ಮಾಡಿದ 6 ನೇ ವಾರ, 8 ನೇ ವಾರದಲ್ಲಿ 50.ಕೀ ಗ್ರಾಂ ನಂತೆ ಬೇವಿನ ಹಿಂಡಿ ತಪ್ಪದೇ ನೀಡಬೇಕು. ಹೂ ಬಿಡುವ ಸಮಯದಲ್ಲಿ ಎಕರೆಗೆ 10 ರಂತೆ ಲಾಳಿಕೆ ಆಕಾರದ ಮೋಹಕ ಬಲೆಗಳನ್ನು ಅಳವಡಿಸಬೇಕು. ಟ್ರೈಕೋಕಾರ್ಡ್ (ಟ್ರೈಕೋಗ್ರಾಮಾ ಜಾಪೋನಿಕ) ಎನ್ನುವ ಮೊಟ್ಟೆಗಳನ್ನು ಎಕರೆಗೆ 60000 ದಂತೆ ವಾರಕ್ಕೊಮ್ಮೆ ಬಿಡುಗಡೆ ಮಾಡಬೇಕು.
ಮೋಹಕ ಬಲೆಗಳಲ್ಲಿ ಬಿದ್ದ ಗಂಡು ಹುಳುಗಳ ಸಂಖ್ಯೆಯನ್ನು ಆಧರಿಸಿ ಪ್ರೊಫೆನೊಫಾಸ್ 50 ಇ.ಸಿ, 1 ಮೀ.ಲೀ ಅಥವಾ ಕ್ವಿನಾಲಫಾಸ್ 25 ಇ.ಸಿ, 2 ಮೀ.ಲೀ 1 ಲೀ ನೀರಿನಲ್ಲಿ ಬೆರೆಸಿ ಸಿಂಪರಿಸಬೇಕು. ಹುಳದ ಹಾವಳಿ ಜಾಸ್ತಿ ಇದ್ದಲ್ಲಿ, ಕಾರ್ಬೋಸಲ್ಫಾನ್ 25 ಇ.ಸಿ ಎನ್ನುವ ಕೀಟ ನಾಶಕವನ್ನು 1.5 -2.00 ಮೀ.ಲೀ 1 ಲೀ ನೀರಿನಲ್ಲಿ ಬೆರೆಸಿ ಸಿಂಪರಿಸಬೇಕು. ಮಧ್ಯದಲ್ಲಿ ಒಂದೆರಡು ಸಾರಿ ಬೇವಿನ ಎಣ್ಣೆಯನ್ನು ಸಿಂಪರಿಸಬೇಕು.
ಭಾರತೀಯ ತೋಟಗಾರಿಕೆ ಸಂಶೋಧನ ಸಂಸ್ಥೆ ಬೆಂಗಳೂರು ಇವರು ಸಂಶೋಧಿಸಿದ ಪೋಷಕಾಂಶಗಳ ಮಿಶ್ರಣವಾದ ತರಕಾರಿ ಸ್ಪೇಶಲ್ ಅನ್ನು ಹೂ ಆಡುವ ಸಮಯದಲ್ಲಿ 15 ದಿನಗಳಿಗೊಮ್ಮೆ ಸಿಂಪರಿಸಿದರೆ ಉತ್ತಮ ಗುಣಮಟ್ಟದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ.
ಎಲೆ ಚುಕ್ಕೆ ರೋಗ ಮತ್ತು ಕಾಯಿಕೊಳೆ ರೋಗದ ಹತೋಟಿಗಾಗಿ ಕಾರ್ಬೆಂಡಾಜಿಮ್ 50 ಡಬ್ಲೂ.ಪಿ.ಅಥವಾ ಥಯೋಫಿನೈಟ್ ಮೀಥೈಲ್ (ರೋಕೊ) ಎನ್ನುವ ಶಿಲಿಂದ್ರ ನಾಶಕಗಳನ್ನು 1 ಗ್ರಾಂ. 1 ಲೀ ನೀರಿನಲ್ಲಿ ಬೆರೆಸಿ ಸಿಂಪರಿಸಬೇಕು. ಶಿಫಾರಿತ ಗೊಬ್ಬರ ನೀಡಿ ಕಾಯಿ ಕಚ್ಚುವ ಹಂತದಲ್ಲಿ ಎಕರೆಗೆ 10 ಕಿ.ಗ್ರಾಂ ಸಿ.ಎನ್. ಎನ್ನುವ ಗೊಬ್ಬರವನ್ನು ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಾ ಕಛೇರಿಗಳನ್ನು ಮತ್ತು ವಿಷಯ ತಜ್ಞರು, ಹಾರ್ಟಿಕ್ಲಿನಿಕ್ ಕೊಪ್ಪಳ ರವರನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಬದನೆಯಲ್ಲಿ ಕೀಟ/ರೋಗಗಳ ಹತೋಟಿಗೆ ರೈತರಿಗೆ ಸಲಹೆಗಳು.
ಎಲ್ಲಾ ಲೇಖನಗಳು ಆಗಿದೆ ಬದನೆಯಲ್ಲಿ ಕೀಟ/ರೋಗಗಳ ಹತೋಟಿಗೆ ರೈತರಿಗೆ ಸಲಹೆಗಳು. ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಬದನೆಯಲ್ಲಿ ಕೀಟ/ರೋಗಗಳ ಹತೋಟಿಗೆ ರೈತರಿಗೆ ಸಲಹೆಗಳು. ಲಿಂಕ್ ವಿಳಾಸ https://dekalungi.blogspot.com/2017/10/blog-post_7.html
0 Response to "ಬದನೆಯಲ್ಲಿ ಕೀಟ/ರೋಗಗಳ ಹತೋಟಿಗೆ ರೈತರಿಗೆ ಸಲಹೆಗಳು."
ಕಾಮೆಂಟ್ ಪೋಸ್ಟ್ ಮಾಡಿ