ಕೊಡಗು ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ

ಕೊಡಗು ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಕೊಡಗು ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಕೊಡಗು ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ
ಲಿಂಕ್ : ಕೊಡಗು ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ

ಓದಿ


ಕೊಡಗು ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ


ಕೊಪ್ಪಳ ಅ. 21 (ಕರ್ನಾಟಕ ವಾರ್ತೆ): ರಾಷ್ಟ್ರೀಯ ರಕ್ಷಣಾ ಅಕಾಡೆಮಿ/ ಭಾರತೀಯ ನೌಕಾ ಅಕಾಡೆಮಿಗೆ ಸೇರಿಸಲು ಶೈಕ್ಷಣಿಕವಾಗಿ, ಮಾನಸಿಕವಾಗಿ ಮತ್ತು ದೈಹಿಕ ಸದೃಢವಾಗಿ ತರಬೇತಿಗೊಳಿಸುವ ಉದ್ದೇಶದಿಂದ ಕೊಡುಗು ಸೈನಿಕ ಶಾಲೆಯ 6ನೇ ಮತ್ತು 9ನೇ ತರಗತಿಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
    ಪಠ್ಯಕ್ರಮ 10+2 ಸಿ.ಬಿ.ಎಸ್.ಸಿ (ವಿಜ್ಞಾನ ವಿಭಾಗ) ವಾಗಿದ್ದು, ದಾಖಲಾತಿ ಅಖಿಲ ಭಾರತ ಮಟ್ಟದ ಸೈನಿಕ ಶಾಲಾ ಪ್ರವೇಶ ಪರೀಕ್ಷೆ, ಮೌಖಿಕ ಸಂದರ್ಶನ ಮತ್ತು ವೈದ್ಯಕೀಯ ತಪಾಸಣೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.  6ನೇ ಹಾಗೂ 9ನೇ ತರಗತಿಯ ಪ್ರಶ್ನೆಪತ್ರಿಕೆಗಳು ಕ್ರಮವಾಗಿ 5ನೇ ಹಾಗೂ 8ನೇ ತರಗತಿಯ ಸಿ.ಬಿ.ಎಸ್.ಸಿ ಪಠ್ಯಕ್ರಮದ ಆಧಾರದಲ್ಲಿರುತ್ತದೆ.  ಸೈನಿಕ ಶಾಲೆಯಲ್ಲಿ 6ನೇ ತರಗತಿಗೆ 80-100, 9ನೇ ತರಗತಿಗೆ 10-20 ಸೀಟುಗಳು ಖಾಲಿ ಇದ್ದು, ಎಸ್.ಸಿ - 15%, ಎಸ್.ಟಿ - 7.5% ಮತ್ತು ರಕ್ಷಣಾ ಇಲಾಖೆ – 25% ಮೀಸಲಾತಿಯಲ್ಲಿ ಪ್ರವೇಶ ಪಡೆಯಬಹುದು. 
    ದಾಖಲಾತಿಗೆ ಸಂಬಂಧಿಸಿದಂತೆ ವಯೋಮಿತಿ 6ನೇ ತರಗತಿಗೆ 2007ರ ಜುಲೈ. 02 ರಿಂದ 2008ರ ಜುಲೈ. 01 ರೊಳಗೆ, ಹಾಗೂ 9ನೇ ತರಗತಿಗೆ 2004ರ ಜುಲೈ. 02 ರಿಂದ 2005ರ ಜುಲೈ. 01 ರೊಳಗೆ ಅಭ್ಯರ್ಥಿಗಳು ಜನಿಸಿರಬೇಕು.  ಪ್ರವೇಶ ಪರೀಕ್ಷೆ 2018ರ ಜನವರಿ 07 ರಂದು ನಡೆಯಲಿದ್ದು, 6ನೇ ಮತ್ತು 9ನೇ ತರಗತಿ ಪ್ರವೇಶ ಪರೀಕ್ಷೆ ಕೊಡಗಿನ ಸೈನಿಕ ಶಾಲೆಯಲ್ಲಿ ಹಾಗೂ 9ನೇ ತರಗತಿಗೆ ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆಗಳು ನಡೆಯಲಿವೆ.
    ಅರ್ಜಿ ಸಲ್ಲಿಸಲು ಶಾಲೆಯ ವೆಬ್‍ಸೈಟ್‍ನಲ್ಲಿ ಲಭ್ಯವಿರುವ ಆನ್‍ಲೈನ್ ಅರ್ಜಿಯನ್ನು ಭರ್ತಿ ಮಾಡಿದ ನಂತರ ಪಿ.ಡಿ.ಎಫ್‍ನಲ್ಲಿ ಪ್ರಿಂಟ್ ತೆಗೆದು ಅಗತ್ಯ ದಾಖಲೆ ಹಾಗೂ ಅರ್ಜಿ ಶುಲ್ಕದ ಡಿ.ಡಿ.ಯೊಂದಿಗೆ ಸಲ್ಲಿಸಬೇಕು.  ಮಾದರಿ ಪುಸ್ತಕ ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಡೌನ್‍ಲೊಡ್ ಮಾಡಲು ಶಾಲೆಯ ವೆಬ್‍ಸೈಟ್  http://ift.tt/2xhOsAV; ನ್ನು ಅಕ್ಟೋಬರ್. 16 ರಿಂದ ನವೆಂಬರ್. 17 ರವರೆಗೆ ಸಂಪರ್ಕಿಸಬಹುದು.  ಮಾಹಿತಿ ಪುಸ್ತಕ/ ಅರ್ಜಿಯನ್ನು ಶಾಲಾ ಕೆಲಸದ ವೇಳೆಯೊಳಗೆ ಖುದ್ದಾಗಿ ಅರ್ಜಿ ಶುಲ್ಕದ ಡಿಡಿ.ಯನ್ನು ಸಲ್ಲಿಸಿ ಪಡೆದುಕೊಳ್ಳಬಹುದು.  ಮಾಹಿತಿ ಪುಸ್ತಕ/ ಅರ್ಜಿಯನ್ನು ಖುದ್ದಾಗಿ ಪಡೆಯುವವರು ಅಧಿಕೃತ ದಾಖಲೆಗಳಾದ ಆಧಾರ್ ಕಾರ್ಡ್/ ಮತದಾನ ಗುರುತಿನ ಚೀಟಿ/ ಪಾನ್ ಕಾರ್ಡ್/ ವಾಹನ ಚಾಲನ ಪರವಾನಿಗೆಯನ್ನು ತೋರಿಸಬೇಕು.  ಅರ್ಜಿ ಶುಲ್ಕ ಸಾಮಾನ್ಯ ವರ್ಗ ಮತ್ತು ರಕ್ಷಣಾ ಇಲಾಖೆಯವರಿಗೆ ರೂ. 500/- ಮತ್ತು ಪ.ಜಾ/ ಪಂಗಡಕ್ಕೆ ರೂ. 350/- ಗಳನ್ನು ನಿಗದಿಪಡಿಸಲಾಗಿದ್ದು, ಇದನ್ನು ಪ್ರಾಶುಂಪಾಲರು, ಸೈನಿಕ ಶಾಲೆ ಕೊಡಗು, ಕುಶಾಲನಗರದಲ್ಲಿ ಸಂದಾಯವಾಗುವಂತೆ ಡಿಮ್ಯಾಂಡ್ ಡ್ರಾಫ್ಟ್‍ನ್ನು ತೆಗೆದು ಕಳುಹಿಸಬೇಕು.  ಹಾಗೂ ಪ್ರತಿ ಡಿ.ಡಿಯನ್ನು ಪಡೆದು ಲಗತ್ತಿಸಬೇಕು.
    ಅರ್ಜಿಯನ್ನು ಭರ್ತಿ ಮಾಡಿ ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣ ಪತ್ರದ ಪ್ರತಿಯನ್ನು ಲಗತ್ತಿಸಿ ಡಿಸೆಂಬರ್. 05 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಶಾಲೆಯ ವೆಬ್‍ಸೈಟ್ ಅಥವಾ ದೂರವಾಣಿ ಸಂಖ್ಯೆ 08276-278963 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


ಹೀಗಾಗಿ ಲೇಖನಗಳು ಕೊಡಗು ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ

ಎಲ್ಲಾ ಲೇಖನಗಳು ಆಗಿದೆ ಕೊಡಗು ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಡಗು ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/10/blog-post_63.html

Subscribe to receive free email updates:

0 Response to "ಕೊಡಗು ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ"

ಕಾಮೆಂಟ್‌‌ ಪೋಸ್ಟ್‌ ಮಾಡಿ