ಶೀರ್ಷಿಕೆ : ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ ಸೈನಿಕ ಹುಳು ಬಾಧೆ : ಸಾಮೂಹಿಕ ನಿಯಂತ್ರಣ ಕೈಗೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಸಲಹೆ
ಲಿಂಕ್ : ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ ಸೈನಿಕ ಹುಳು ಬಾಧೆ : ಸಾಮೂಹಿಕ ನಿಯಂತ್ರಣ ಕೈಗೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಸಲಹೆ
ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ ಸೈನಿಕ ಹುಳು ಬಾಧೆ : ಸಾಮೂಹಿಕ ನಿಯಂತ್ರಣ ಕೈಗೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಸಲಹೆ
ಕೊಪ್ಪಳ ಅ. 07 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ ಸೈನಿಕ ಹುಳುವಿನ ಬಾಧೆ ಕಂಡುಬಂದಿದ್ದು, ಇದರ ಹತೋಟಿಗೆ ಕೃಷಿ ಇಲಾಖೆ ರೈತರಿಗೆ ಸಲಹೆಗಳನ್ನು ನೀಡಿದೆ.
ಜಂಟಿ ಕೃಷಿ ನಿರ್ದೇಶಕ ವೀರೇಶ್ ಹುನಗುಂದ ಮತ್ತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ್ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು ಕೊಪ್ಪಳ ತಾಲೂಕಿನ ಮುಸುಕಿನಜೋಳ, ಸಜ್ಜೆÀ ಹಾಗೂ ತೊಗರಿ ಬೆಳೆಗಳಲ್ಲಿ ಕೀಟಭಾಧಿತ ತಾಕುಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಮೆಕ್ಕೆಜೋಳದಲ್ಲಿ ಸೈನಿಕ ಹುಳುವಿನ ಬಾಧೆ ಕಂಡುಬಂದಿರುತ್ತದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದ ಮೆಕ್ಕೆಜೋಳ, ನವಣಿ, ರಾಗಿ, ಜೋಳ, ಶೇಂಗಾ, ಸೂರ್ಯಕಾಂತಿ ಮತ್ತು ಭತ್ತದ ಬೆಳೆಗೆ ಅಲ್ಲಲ್ಲಿ ಸೈನಿಕ ಹುಳುವಿನ ಬಾಧೆ ಕಂಡುಬಂದಿದ್ದು,
ಏನಿದು ಸೈನಿಕ ಹುಳು :
*********** ಸೈನಿಕ ಹುಳುವು ಸಣ್ಣಗೆ, ನಯವಾಗಿ ಕಳೆಗುಂದಿದ ಹಸಿರು ಬಣ್ಣದಿಂದ ಕೂಡಿದ್ದು, ಮೈಮೇಲೆ ಅಡ್ಡ ಗೆರೆಗಳಿರುತ್ತವೆ. ಸುಮಾರು ಒಂದೂವರೆ ಇಂಚು ಉದ್ದವಿರುತ್ತವೆ. ಸಾವಿರಾರು ಸಂಖ್ಯೆಯಲ್ಲಿ ಪತಂಗಗಳು ನೂರಾರು ಕಿ.ಮೀ. ದೂರದಿಂದ ಆಹಾರ ಹುಡುಕಿಕೊಂಡು ಹೋಗುತ್ತವೆ. ಆಹಾರ ಬೆಳೆದಿದ್ದ ಜಾಗದಲ್ಲಿ ಭೂಸ್ಪರ್ಶ ಮಾಡಿ, ಮೊಟ್ಟೆಗಳನ್ನು ಇಡುತ್ತವೆ. ಒಂದು ಹೆಣ್ಣು ಪತಂಗವು ಸುಮಾರು 800-1000 ಮೊಟ್ಟೆಗಳನ್ನು ಗರಿಯ ತಳಭಾಗದಲ್ಲಿ ಗುಂಪು ಗುಂಪಾಗಿ ಇಡುತ್ತದೆ. 12-15 ದಿನಗಳೊಳಗೆ ಮರಿ ಹಂತವನ್ನು ಮುಗಿಸಿ, ಕೋಶಾವಸ್ಥೆಗೆ ಹೋಗುತ್ತದೆ. 5-7 ದಿನಗಳೊಳಗೆ ಕೋಶಾವಸ್ಥೆಯಿಂದ ಪತಂಗಗಳು ಹೊರಬಂದು ತಮ್ಮ ಸಂತತಿಯನ್ನು ಮುಂದುವರೆಸುತ್ತವೆ. ಹುಳುವಿನ ಬಾಧೆ ತೀವ್ರ ತರವಾಗಿದ್ದು, ಒಂದು ಗಿಡದಲ್ಲಿ ಸುಮಾರು 15-20 ಸಂಖ್ಯೆಯಲ್ಲಿ ಹುಳುಗಳಿರುತ್ತವೆ. ಈ ಹುಳುಗಳು ಹಗಲು ಹೊತ್ತಿನಲ್ಲಿ ಅಡುಗಿಕೊಂಡು ರಾತ್ರಿ ಎಲೆಗಳನ್ನು ತೀವ್ರ ಗತ್ತಿಯಲ್ಲಿ ತಿಂದು ಹಾನಿ ಮಾಡುತ್ತದೆ, ಇವುಗಳ ಸಂಖ್ಯೆ ಹೆಚ್ಚಿದಾಗ ಹಾನಿಯ ಪ್ರಮಾಣ ಹೆಚ್ಚಾಗುತ್ತದೆ. ಎಲೆಯ ಮಧ್ಯ ನರವೊಂದನ್ನು ಬಿಟ್ಟು ಉಳಿದ ಭಾಗವೆಲ್ಲ ತಿಂದು ಹಾಕುತ್ತದೆ. ತೊಗರಿಯಲ್ಲಿ ಕಾಯಿಕೊರಕ ಹಾಗೂ ಮಚ್ಚೆಯುಳ್ಳ ಕಾಯಿಕೊರಕ ಕೀಟವು ಕಂಡುಬಂದಿದ್ದು ಕಾಯಿ ಬಿಡುವ ಸಮಯದಲ್ಲಿ ಕಾಯಿಯ ಒಳಗಡೆ ಸೇರಿ ರಂದ್ರವನ್ನು ಕೊರೆದು ಬೆಳೆವಣಿಗೆ ಆಗುತ್ತಿರುವ ಬೀಜವನ್ನು ತಿನ್ನುತ್ತದೆ. ಕೆಲವೊಮ್ಮೆ ಹುಳಗಳು ಎಳೆಯ ಕಾಂಡವನ್ನು ಸಹ ಕೊರೆದು ಒಳಗೆ ಸೇರುತ್ತವೆ.
ಹತೋಟಿ ಕ್ರಮಗಳು :
********** ಹೊಲದ ಸುತ್ತಮುತ್ತಲಿನ ಅಥವಾ ಬದುವಿನ ಮೇಲಿನ ಕಳೆಯ/ಸಸ್ಯಗಳನ್ನು/ಕಳೆ ಕಸಗಳನ್ನು ಸಂಪೂರ್ಣವಾಗಿ ನಾಶ ಮಾಡಬೇಕು. ಬಾಧೆಗೊಳಗಾಗಿರುವ ಪ್ರದೇಶದ ಪ್ರತಿಯೊಬ್ಬ ರೈತರು ತಮ್ಮ ಹೊಲದಲ್ಲಿ ಸಾಮೂಹಿಕವಾಗಿ ಸಾಯಂಕಲಾಲ 7 ರಿಂದ ರಾತ್ರಿ 09 ಗಂಟೆಯವರೆಗೆ ದೀಪದ ಬಲೆಯನ್ನು ಇಟ್ಟು ಪತಂಗಗಳಿಗೆ ಆಕರ್ಷಿಸಿ ನಾಶಪಡಿಸಬೇಕು. ಮರಿ ಹುಳುಗಳು ಒಂದು ಅಥವಾ ಎರಡನೆ ಹಂತದಲ್ಲಿರುವಾಗ ಸೈನಿಕ ಹುಳುವಿನ ಹತೋಟಿಗಾಗಿ ಕ್ಲೋರೋಫೆರಿಪಾಸ್ 20 ಇಸಿ, 2 ಮಿ.ಲೀ. ಅಥವಾ ಕ್ವೀನಾಲ್ಫಾಸ್ 25 ಇಸಿ, 2 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಪ್ರತಿ ಎಕರೆಗೆ 200 ಲೀ. ಸಿಂಪರಣಾ ದ್ವಾವಣ ಬಳಸಬೇಕು. ಮೆಕ್ಕೆಜೋಳ ಹಾಗೂ ಸಜ್ಜೆ ತೆನೆ ಕೀಡೆಗಾಗಿ ಶೇ. 5ರ ಮೆಲಾಥಿಯಾನ್ ಕೀಟನಾಶಕವನ್ನು ಧೂಳೀಕರಣ ಮಾಡಬೇಕು. ಹುಳುಗಳ ನಿಯಂತ್ರಣ ಕೀಟನಾಶಕದಿಂದ ನಿಯಂತ್ರಿಸುವುದು ಸಾಧ್ಯವಾಗದಿರುವ ಸಮಯದಲ್ಲಿ ವಿಷ ಪಾಷಾಣವನ್ನು ಬಳಸಿ, ಹತೋಟಿಗೆ ತರಬಹುದು. ಸೈನಿಕ ಹುಳುವಿನ ಹತೋಟಿಗಾಗಿ ಮೊನೋಕ್ರೊಟೊಪಾಸ್ 36 ಎಸ್‍ಎಲ್ ವಿಷಪಾಷಾಣವನ್ನು ಮಾಡಬೇಕು. ತೊಗರಿಯಲ್ಲಿ ಕೀಟಭಾಧೆ ನಿಯಂತ್ರಣ ಮಾಡಲು ಅಜಾರ್ಡಿರೇಕ್ಟಿನ್ 0.03% ಡಬ್ಲ್ಯೂಎಸ್‍ಪಿ 2500 ಗ್ರಾಂ ಪ್ರತಿ ಹೆಕ್ಟರ್ ಅಥವಾ ಡೈಮಿಥೊಯೇಟ್ 30% ಇಅ 1.25 ಲೀಟರ್ ಪ್ರತಿ ಹೆಕ್ಟರ್ ಅಥವಾ ಸ್ಪಿನ್ನೋಸಾಡ್ 45 ಎಸ್‍ಸಿ 125 ಎಂ ಎಲ್ ಪ್ರತಿ ಹೆಕ್ಟರ್ ಅಥವಾ ಕ್ಲೋರೋಂಟ್ರಿಪಾಲ್ 18.5 ಎಸ್‍ಸಿ 150 ಎಂ ಎಲ್ ಪ್ರತಿ ಹೆಕ್ಟರ್ ಗೆ ಸಿಂಪರಣೆ ಮಾಡಬೇಕು. ವಿಷಪಾಷಾಣವನ್ನು ಸಾಯಂಕಾಲ ಹೊಲಗಳಲ್ಲಿ ಎರಚಬೇಕು. ವಿಷಪಾಷಾಣ ಮಾಡುವ ವಿಧಾನ ಇಂತಿದೆ. ಪ್ರತಿ ಎಕರೆಗೆ 20 ಕೆ.ಜಿ. ಅಕ್ಕಿ ಅಥವಾ ಗೋದಿ ತೌಡಿನಲ್ಲಿ 250 ಮಿಲಿ ಮೊನೊಕ್ರೊಟೋಫಾಸ್ ಕೀಟನಾಶಕವನ್ನು ಹಾಕಿದ ನಂತರ 2ಕೆಜಿ ಬೆಲ್ಲ ಮತ್ತು 2 ರಿಂದ 3 ಲೀಟರ್ ನೀರನ್ನು ಹಾಕಿ ಮಿಶ್ರಣವನ್ನು ತಯಾರು ಮಾಡಿ ರಾತ್ರಿಯಿಡೀ ಮಿಶ್ರಣವನ್ನು ಗಾಳಿಯಾಡದಂತೆ ಪ್ಲಾಸ್ಟಿಕ್ ಡ್ರಮ್‍ನಲ್ಲಿ ಮುಚ್ಚಿಟ್ಟು, ಕಳಿಯಲು ಬಿಡಬೇಕು. ಸಂಜೆ 5 ಗಂಟೆ ವೇಳೆ ಕೈಗವಚ ಧರಿಸಿಕೊಂಡು ಬೆಳೆಗಳಿಗೆ ಎರಚಿ, ಬೆಳೆಗಳ ಸಂಖ್ಯೆ ದಟ್ಟವಾಗಿದ್ದಲ್ಲಿ, ಎರಡು ಸಾಲಿಗೊಂದರಂತೆ ಎರಡು ಮೀ. ಅಂತರದಲ್ಲಿ ಒಂದೊಂದು ಹಿಡಿ ಪಾಷಾಣವನ್ನು ಬೆಳೆಗಳಲ್ಲಿ ಇಟ್ಟು ಹುಳುಗಳನ್ನು ಆಕರ್ಷಿಸಬಹುದು. ಬೆಳೆಗಳ ಎತ್ತರ ಕಡಿಮೆ ಇದ್ದಲ್ಲಿ ಮೆಲಾಥಿಯಾನ್ ಶೇ. 5, ಡಸ್ಟ್ ಹೆಕ್ಟೇರಿಗೆ 25 ಕೆ.ಜಿ. ಯಂತೆ ಧೂಳಿಕರಿಸಿ ಅಥವಾ ಪೆನ್ವಲ್‍ರೇಟ್ 1 ಗ್ರಾಂ ಅಥವಾ ಲ್ಯಾಮ್ಡ್ ಸೈಲೋತ್ರಿನ್ 1 ಮಿ.ಲೀ. ಪ್ರತಿ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ವಿಷ ಪಾಷಾಣವನ್ನು ಹೊಲದಲ್ಲಿ ಎರಚಿದಾಗ ಜಾನುವಾರುಗಳು ತಿನ್ನದಂತೆ ಎಚ್ಚರಿಕೆ ವಹಿಸಬೇಕು. ಹೊಲದ ಸುತ್ತ ಒಂದು ಅಡಿ ಆಳ ಹಾಗೂ 01 ಅಥವಾ 02 ಅಡಿ ಕಂದಕವನ್ನು ತೋಡಿ, ಅದರ ಮೇಲಿನ ವಿಷ ಪಾಷಾಣವನ್ನು ಎರಚಿ ಅಥವಾ ಮೆಲಾಥಿಯಾನ ಶೇ. 5 ಡಸ್ಟ್ 8 ರಿಂದ 10 ಕಿ.ಗ್ರಾಂ. ಎರಚುವುದರಿಂದ ಕೀಟಗಳು ಒಂದು ಹೊಲದಿಂದ ಮತ್ತೊಂದು ಹೊಲಕ್ಕೆ ಹೋಗುವುದನ್ನು ತಪ್ಪಿಸಬಹುದು.
ಈ ನಿರ್ವಹಣಾ ಕ್ರಮಗಳನ್ನು ತುರ್ತಾಗಿ ಮತ್ತು ಸಾಮೂಹಿಕವಾಗಿ ಕೈಗೊಳ್ಳುವುದರಿಂದ ಕೀಟಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕ ವೀರೇಶ್ ಹುನಗುಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ ಸೈನಿಕ ಹುಳು ಬಾಧೆ : ಸಾಮೂಹಿಕ ನಿಯಂತ್ರಣ ಕೈಗೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಸಲಹೆ
ಎಲ್ಲಾ ಲೇಖನಗಳು ಆಗಿದೆ ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ ಸೈನಿಕ ಹುಳು ಬಾಧೆ : ಸಾಮೂಹಿಕ ನಿಯಂತ್ರಣ ಕೈಗೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಸಲಹೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ ಸೈನಿಕ ಹುಳು ಬಾಧೆ : ಸಾಮೂಹಿಕ ನಿಯಂತ್ರಣ ಕೈಗೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಸಲಹೆ ಲಿಂಕ್ ವಿಳಾಸ https://dekalungi.blogspot.com/2017/10/blog-post_49.html
0 Response to "ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ ಸೈನಿಕ ಹುಳು ಬಾಧೆ : ಸಾಮೂಹಿಕ ನಿಯಂತ್ರಣ ಕೈಗೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಸಲಹೆ"
ಕಾಮೆಂಟ್ ಪೋಸ್ಟ್ ಮಾಡಿ