ಶೀರ್ಷಿಕೆ :
ಲಿಂಕ್ :
ಅನ್ನದಾತನ ಋಣ ತೀರಿಸುತ್ತಿರುವ ಕೃಷಿವಿಜ್ಞಾನ ಪದವಿಧರರು
# ಮಂಡ್ಯ ಜಿಲ್ಲೆಯಲ್ಲಿ ವಿನೂತನ ಪ್ರಯೋಗ # ಪರ್ಯಾಯ ಬೆಳೆಗಳಿಗೆ ಪ್ರೋತ್ಸಾಹ
ಬತ್ತದ ನಾಡು, ಸಕ್ಕರೆ ಜಿಲ್ಲೆ ಮಂಡ್ಯ ಬೇಸಾಯವನ್ನೆ ಹೆಚ್ಚು ಅವಂಭಿಸಿರುವ ಪ್ರದೇಶ.ಇಂತಹ ಜಿಲ್ಲೆಯಲ್ಲಿ 700 ಕ್ಕೂ ಹೆಚ್ಚುಮಂದಿ ಪದವಿಧರರು ಕೃಷಿಗೆ ಸಂಬಂಧಿಸಿದ ವಿಭಾಗಗಳಲ್ಲಿ ಉನ್ನತ ಅಧ್ಯಯನ ಮಾಡಿ ಪದವಿಗಳಿಸಿದ್ದಾರೆ. ಕೆಲವರೂ ಈಗಲೂ ಅಧ್ಯಯನ ಮಾಡುತ್ತಿದ್ದರೆ ಮತ್ತೆ ಕೆಲವರು ವಿಧ್ಯಾಭ್ಯಾಸ ಮುಗಿಸಿ ಸಕರ್ಾರಿ ಸೇವೆಗೆ ಸೇರಿ ನಿವೃತ್ತರಾಗಿದ್ದಾರೆ. ಇಂತಹ ಸಮಾನಾಸಕ್ತರೆಲ್ಲ ಸೇರಿ ಅನ್ನದಾತನಿಗೆ ನೆರವಾಗಲು ಚಿಂತಿಸಿದಾಗ ಅಸ್ತಿತ್ವಕ್ಕೆ ಬಂದದ್ದೆ ಮಂಡ್ಯ ಜಿಲ್ಲಾ ಕೃಷಿ ವಿಜ್ಞಾನ ಪದವಿಧರರ ಸಂಘ. ಐದು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸಂಘದಲ್ಲಿ 75 ವರ್ಷ ದಾಟಿದ ಹಿರಿಯರೂ ಇದ್ದಾರೆ. ಪ್ರೊ.ಕೆ.ಟಿ.ಶಿವಶಂಕರ್ ಸಂಘದ ಅಧ್ಯಕ್ಷರಾಗಿದ್ದಾರೆ. ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ಅಣ್ಣಯ್ಯ ಹಾಗೂ ನಿವೃತ್ತ ಕೃಷಿ ಅಧಿಕಾರಿ ಡಾ.ಎ.ರಾಜಣ್ಣ ಸಂಘದ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಸರಕಾರಿ ಇಲಾಖೆಗಳು ಮತ್ತು ರೈತರಿಗೆ ಸಂಪರ್ಕ ಸೇತುವೆಯಾಗಿರುವ ಸಂಘ ವಿಚಾರ ಸಂಕಿರಣ, ತರಬೇತಿ ಶಿಬಿರ,ತೋಟಗಳ ಭೇಟಿ,ಪ್ರಾತ್ಯಕ್ಷತೆ ನಡೆಸುವ ಮೂಲಕ ಅನ್ನದಾತನಿಗೆ ನೆರವಾಗುತ್ತಿದೆ.
ರೈತರ ಬಗ್ಗೆ ಎಲ್ಲರಿಗೂ ಕಾಳಜಿ. ರೈತಪರವಾದ ಪ್ರತಿಭಟನೆ,ಚಳವಳಿಗಳು ನಡೆದರೆ ಎಲ್ಲರ ಬೆಂಬಲವೂ ಇರುತ್ತದೆ.ನೇಗಿಲಯೋಗಿ,ಅನ್ನದಾತ,ಉಳುವಯೋಗಿ ಎಂದು ರೈತರನ್ನು ಎಲ್ಲರೂ ಹಾಡಿ ಹೊಗುಳುವವರೆ.ಸರಕಾರ ರೂಪಿಸುವ ಯೋಜನೆಗಳು ಕೂಡ ರೈತಸ್ನೇಹಿಯಾಗಿಯೆ ಇರುತ್ತವೆ.ದುರಂತವೆಂದರೆ ಅಂತಹ ಯೋಜನೆಗಳ ಅನುಷ್ಠಾನದಲ್ಲಿ ಸರಕಾರಿಯಂತ್ರ ವಿಫಲವಾಗುತ್ತದೆ.ಇದಕ್ಕೆ ಪ್ರಮುಖ ಕಾರಣ ರೈತರಿಗೆ ಸಿಗಬೇಕಾದ ಮಾಹಿತಿ ಮತ್ತು ಸಲಹೆಗಳ ಕೊರತೆ ಎನ್ನುವುದು ಸತ್ಯ.
ರೈತರಿಗೆ ಅನ್ಯಾಯವಾದಾಗ ಬೀದಿಗಿಳಿದು ಪ್ರತಿಭಟಿಸುವ ರೈತನಾಯಕರು,ಆರಂಭದಲ್ಲೆ ಸ್ವಲ್ಪ ಎಚ್ಚೆತ್ತುಕೊಂಡು ರೈತರಿಗೆ ಸರಕಾರಿ ಇಲಾಖೆಯ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿದರೆ,ಸೂಕ್ತ ಸಲಹೆ, ಮಾರ್ಗದರ್ಶನ ನೀಡಿದರೆ ಅನ್ನದಾತನ ಮೊಗದಲ್ಲಿ ನಗು ಕಾಣಬಹುದು. ಇಂತಹ ಪುಣ್ಯದ ಕೆಲಸ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿದೆ. ಸರಕಾರದ ಕೃಷಿ,ತೋಟಗಾರಿಕೆ,ಅರಣ್ಯ,ಪಶುಸಂಗೋಪನೆ,ಮೀನುಗಾರಿಕೆ ಹೀಗೆ ವಿವಿಧ ಇಲಾಖೆಗಳು ಮತ್ತು ರೈತರ ನಡುವೆ ಸೇತುವೆಯಾಗಿ ಜಿಲ್ಲೆಯ ಪ್ರಜ್ಞಾವಂತರು ಸಂಘಟಿತರಾಗಿ ಕೆಲಸಮಾಡುತ್ತಿದ್ದಾರೆ.ಇಂತಹ ಮಾದರಿಗಳು ಪ್ರತಿ ಜಿಲ್ಲೆಯಲ್ಲೂ ಅಸ್ತಿತ್ವಕ್ಕೆ ಬಂದರೆ ಅಷ್ಟರ ಮಟ್ಟಿಗೆ ಅನ್ನದಾತ ನಿಟ್ಟುಸಿರು ಬಿಟ್ಟಾನು.
ಬತ್ತದ ನಾಡು, ಸಕ್ಕರೆ ಜಿಲ್ಲೆ ಮಂಡ್ಯ ಬೇಸಾಯವನ್ನೆ ಹೆಚ್ಚು ಅವಂಭಿಸಿರುವ ಪ್ರದೇಶ.ಇಂತಹ ಜಿಲ್ಲೆಯಲ್ಲಿ 700 ಕ್ಕೂ ಹೆಚ್ಚುಮಂದಿ ಪದವಿಧರರು ಕೃಷಿಗೆ ಸಂಬಂಧಿಸಿದ ವಿಭಾಗಗಳಲ್ಲಿ ಉನ್ನತ ಅಧ್ಯಯನಮಾಡಿ ಪದವಿಗಳಿಸಿದ್ದಾರೆ. ಕೆಲವರೂ ಈಗಲೂ ಅಧ್ಯಯನ ಮಾಡುತ್ತಿದ್ದರೆ ಮತ್ತೆ ಕೆಲವರು ವಿಧ್ಯಾಭ್ಯಾಸ ಮುಗಿಸಿ ಸಕರ್ಾರಿ ಸೇವೆಗೆ ಸೇರಿ ನಿವೃತ್ತರಾಗಿದ್ದಾರೆ. ಇಂತಹ ಸಮಾನಾಸಕ್ತರೆಲ್ಲ ಸೇರಿಕೊಂಡು ಅನ್ನದಾತನಿಗೆ ನೆರವಾಗಲು ಚಿಂತಿಸಿದಾಗ ಅಸ್ತಿತ್ವಕ್ಕೆ ಬಂದದ್ದೆ ಮಂಡ್ಯ ಜಿಲ್ಲಾ ಕೃಷಿ ವಿಜ್ಞಾನ ಪದವಿಧರರ ಸಂಘ.
ಐದು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸಂಘದಲ್ಲಿ 75 ವರ್ಷ ದಾಟಿದ ಹಿರಿಯರೂ ಇದ್ದಾರೆ. ಪ್ರೊ.ಕೆ.ಟಿ.ಶಿವಶಂಕರ್ ಸಂಘದ ಅಧ್ಯಕ್ಷರಾಗಿದ್ದಾರೆ. ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ಅಣ್ಣಯ್ಯ ಹಾಗೂ ನಿವೃತ್ತ ಕೃಷಿ ಅಧಿಕಾರಿ ಡಾ.ಎ.ರಾಜಣ್ಣ ಸಂಘದ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಉಳಿದಂತೆ ನಿದೇರ್ಶಕರನ್ನು ಒಳಗೊಂಡ ಆಡಳಿತ ಮಂಡಳಿ ಇದೆ.
ಸರಕಾರಿ ಇಲಾಖೆಗಳು ಮತ್ತು ರೈತರಿಗೆ ಸಂಪರ್ಕ ಸೇತುವೆಯಾಗಿರುವ ಸಂಘದವರು ವಿಚಾರ ಸಂಕಿರಣ, ತರಬೇತಿ ಶಿಬಿರ,ತೋಟಗಳ ಭೇಟಿ,ಪ್ರಾತ್ಯಕ್ಷತೆ ನಡೆಸುತ್ತಾರೆ. ಮುಂದಿನ ದಿನಗಳಲ್ಲಿ ಕೃಷಿಗೆ ಸಂಬಂಧಿಸಿದ ಪತ್ರಿಕೆಯನ್ನು ರೂಪಿಸಿ ರೈತರಿಗೆ ಸೂಕ್ತ ಮಾಹಿತಿ ಒದಗಿಸಲು ಚಿಂತನೆ ನಡೆಸುತ್ತಿದ್ದಾರೆ.
ಸಂಘದ ಉದ್ದೇಶಗಳು : ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಬತ್ತ ಮತ್ತು ಕಬ್ಬು ಬೆಳೆಯಲಾಗುತ್ತದೆ.ನೀರನ್ನೆ ಹೆಚ್ಚು ಅವಲಂಭಿಸಿರುವ ಬೆಳೆಗಳನ್ನು ಇಲ್ಲಿನ ರೈತರು ಬೆಳೆಯುತ್ತಾರೆ. ನೀರನ್ನು ಪೋಲು ಮಾಡುತ್ತಾರೆ ಇದು ಜಿಲ್ಲೆಯ ದೊಡ್ಡ ಸಮಸ್ಯೆ . ಇದಕ್ಕೆ ಏನಾದರೂ ಪಯರ್ಾಯ ಮಾಡಬಹುದಾ? ನೀರನ್ನು ಕಡಿಮೆ ಬಳಸಿ ಪಯರ್ಾಯ ಬೆಳೆ ಪದ್ಧತಿಗಳನ್ನು ಜಾರಿಗೆ ತರಬಹುದಾ? ಎನ್ನುವ ನಿಟ್ಟಿನಲ್ಲಿ ಸಂಘ ಕೆಲಸಮಾಡುತ್ತಿದೆ ಎನ್ನುತ್ತಾರೆ ಸಂಘದ ಉಪಾಧ್ಯಕ್ಷರಲ್ಲಿ ಒಬ್ಬರಾಗಿರುವ ನಿವೃತ್ತ ಅರಣ್ಯಾಧಿಕಾರಿ (ಐಎಫ್ಎಸ್) ಅಣ್ಣಯ್ಯ.
ರೈತರು ಪಯರ್ಾಯ ಬೆಳೆ ಬೆಳೆಯಲು ಸಲಹೆ ಸೂಚನೆ ಕೊಡುವುದು. ಯಾವ ಪ್ರದೇಶದಲ್ಲಿ ಯಾವ ಮಣ್ಣಿಗೆ ಎಂತಹ ಬೆಳೆ ಸೂಕ್ತ ಅಂತ ತಿಳಿಸಿಕೊಡುವುದು. ಕೃಷಿ.ತೋಟಗಾರಿಕೆ ಹಾಗೂ ಅರಣ್ಯದ ಬೆಳೆಗಳನ್ನು ಒಟ್ಟೊಟ್ಟಿಗೆ ಸಮಗ್ರ ಪದ್ಧತಿ ಬೇಸಾಯದಲ್ಲಿ ಬೆಳೆದು ಆದಾಯವನ್ನು ಹೆಚ್ಚಿಸಿಕೊಂಡು ಸುಸ್ಥಿರ ಕೃಷಿ ಮಾಡಲು ಪ್ರೋತ್ಸಾಹ ನೀಡುವುದು.ಆ ಮೂಲಕ ರೈತರನ್ನು ಆಥರ್ಿಕವಾಗಿ ಸಬಲರನ್ನಾಗಿ ಮಾಡುವುದು ಸಂಘದ ಉದ್ದೇಶ ಮತ್ತು ಗುರಿ.
20015 ರಲ್ಲಿ ಜಿಲ್ಲೆಯವರೆ ಆದ ನಾಗರಾಜು ಅವರು ಗೇರು ಅಭಿವೃದ್ಧಿ ಮಂಡಳಿಯ ನಿದರ್ೇಶಕರಾಗಿದ್ದರು. ಒಳನಾಡು ಪ್ರದೇಶದಲ್ಲಿ ಗೇರು ವಿಸ್ತರಣೆಗೆ ಯೋಜನೆ ಜಾರಿಯಲ್ಲಿತ್ತು.ಇದರ ಅಂಗವಾಗಿ ಜಿಲ್ಲಾ ಕೃಷಿ ವಿಜ್ಞಾನ ಪದವಿಧರರ ಸಂಘ 2015 ಅಗಸ್ಟ್ನಲ್ಲಿ ಮಹಾರಾಷ್ಟ್ರದ ವೆಂಗೂಲರ್ಾದಿಂದ ಒಂದು ಲಕ್ಷ ಕಸಿಮಾಡಿದ ಗೇರು ಗಿಡಗಳನ್ನು ತರಿಸಿತು. ಕೇಂದ್ರ ಸಕರ್ಾರದ ಯೋಜನೆಯಡಿ ಕೇರಳ ರಾಜ್ಯದ ಕೊಚ್ಚಿನ್ನಲ್ಲಿರುವ ಗೇರು ಮತ್ತು ಸಂಬಾರ ಅಭಿವೃದ್ಧಿ ಮಂಡಳಿ (ಡಿಸಿಸಿಡಿ)ಯವರು ಈ ಸಸಿಗಳನ್ನು ಉಚಿತವಾಗಿ ಕೊಟ್ಟರು.
ಮಂಡ್ಯ ಜಿಲ್ಲೆಯಲ್ಲಿ ಆಸಕ್ತಿ ಇರುವ ರೈತರ ಗುಂಪುಗಳನ್ನು ರಚನೆ ಮಾಡಲಾಯಿತು.ನಂತರ ಅವರ ಜಮೀನುಗಳಿಗೆ ಸಂಘದ ಸದಸ್ಯರು ಭೇಟಿನೀಡಿ ಕೆಲವೊಂದು ಸಲಹೆ ಸೂಚನೆ ನೀಡಿದರು.ನಂತರ ಆಸಕ್ತ ರೈತರಿಗೆ ಕ್ಷೇತ್ರ ಭೇಟಿ,ಗೇರು ತೋಟಗಳ ವೀಕ್ಷಣೆ ಮಾಡಿಸಿ ಗೇರು ಬೆಳೆಯ ಬಗ್ಗೆ ಅರಿವು ಮೂಡಿಸಲಾಯಿತು. ಪುತ್ತೂರಿನ ಗೇರು ಸಂಶೋಧನಾ ಕೇಂದ್ರಕ್ಕೂ ರೈತರು ಹೋಗಿಬಂದರು.ಅಲ್ಲದೆ ಸಮೀಪದಲ್ಲೇ ಇರುವ ಪ್ರಗತಿಪರ ಗೇರು ಕೃಷಿಕ ಕಡಮಂಜಲು ಸುಭಾಷ್ ರೈ ಅವರ ಗೇರು ತೋಟವನ್ನು ನೋಡಿಬಂದರು.ಮಂಗಳೂರು,ಪುತ್ತೂರಿನ ಸಂಸ್ಕರಣಾ ಘಟಕಗಳಿಗೂ ಹೋಗಿ ಮಾರುಕಟ್ಟೆಯ ಬಗ್ಗೆ ತಿಳಿದುಕೊಂಡರು.ಜಕ್ಕೂರಿನ ಜಿಕೆವಿಕೆ,ಚಿಂತಾಮಣಿಯ ಸಂಶೋಧನಾ ಕೇಂದ್ರ ಮತ್ತು ಮಾರುಕಟ್ಟೆಗೂ ರೈತರು ಹೋಗಿ ಬಂದರು.ಇದಕ್ಕೆಲ್ಲಾ ಸಂಘ ಒತ್ತಾಸೆಯಾಗಿ ನಿಂತು ನೆರವಾಯಿತು ಎನ್ನುತ್ತಾರೆ ಅಣ್ಣಯ್ಯ.
ಇದರ ಫಲವಾಗಿ ಈಗ ಜಿಲ್ಲೆಯಲ್ಲಿ ರೈತರು ಬತ್ತ,ಕಬ್ಬು ಬೆಳೆಗಳಿಗೆ ಪಯರ್ಾಯವಾಗಿ ಗೇರು ಕೃಷಿಮಾಡಿ ಯಶಸ್ವಿಯಾಗಿದ್ದಾರೆ. ಎರಡು ವರ್ಷದಲ್ಲಿ ಜಿಲ್ಲೆಯಲ್ಲೂ ದಟ್ಟ ಬರ ಇತ್ತು. ಬರಕ್ಕೆ ಹೊಂದಿಕೊಳ್ಳುವ ಗೇರು ಲಾಭದಾಯಕ ಬೆಳೆಯಾಗಿಯೂ ಯಶಸ್ವಿಯಾಯಿತು.ಈ ಬಾರಿ ಮಳೆಯಾದ ಪರಿಣಾಮ ಎಂಟು ಸಾವಿರ ಗಿಡಗಳನ್ನು ಮತ್ತೆತರಿಸಿ ರೈತರಿಗೆ ವಿತರಿಸಲಾಗಿದೆ. ಮಂಡ್ಯ ಜಿಲ್ಲೆಯ ಜೊತೆಗೆ ಮೈಸೂರು,ಚಾಮರಾಜನಗರ,ಹಾಸನ,ರಾಮನಗರ,ತುಮಕೂರು ಜಿಲ್ಲೆಯ ರೈತರಿಗೂ ಈ ಗೇರು ಸಸಿಗಳನ್ನು ವಿತರಿಸಲಾಗಿದೆ.
ಕೃಷಿ,ಅರಣ್ಯ,ತೋಟಗಾರಿಕೆ ಎನ್ನುವ ಪರಿಕಲ್ಪನೆಯನ್ನು ಗಮನದಲ್ಲಿಟ್ಟುಕೊಂಡು ಕೃಷಿ ವಿಜ್ಞಾನ ಪದವಿಧರರ ಸಂಘ ರೈತರಿಗೆ ಪ್ರೋತ್ಸಾಹ ನೀಡುತ್ತಿದೆ. ಜೊತೆಗೆ ಜೇನು ಸಾಕಾಣೆಯನ್ನು ಕಲಿಸಲು ಮುಂದಾಗಿದೆ. ರೈತರ ತೋಟದ ಬದುಗಳಲ್ಲಿ ನೆಡಲು ಸೂಕ್ತವಾದ ಅರಣ್ಯಧಾರಿತ ಗಿಡಗಳನ್ನು ವಿತರಿಸಲಾಗುತ್ತಿದೆ . ಕೆಂಪು ಮಣ್ಣು ಇರುವ ಪ್ರದೇಶಗಳಲ್ಲಿ ತೇಗದ ಜೊತೆಗೆ ನುಗ್ಗೆ, ಪಪ್ಪಾಯ,ನಡುವೆ ಉರುಳಿ. ಕಪ್ಪು ಭೂಮಿ ಇರುವ ಕಡೆ ಹೆಬ್ಬೇವು,ನುಗ್ಗೆ ಎರಡು ಪಟಗಳ ನಡುವೆ ದನಿಯಾ( ಕೊತ್ತಂಬರಿ) ಬೆಂಗಾಲ್ ಗ್ರಾಂ( ಕಡಲೆ) ಹೀಗೆ ವಿವಿಧ ಮಾದರಿಗಳನ್ನು ಜಿಲ್ಲೆಯಲ್ಲಿ ಕಾಣಬಹುದು ಎನ್ನುತ್ತಾರೆ ಅಣ್ಣಯ್ಯ. ಕಳೆದ ವರ್ಷ ಇಂತಹ ಮಾದರಿ ತೋಟಗಲಲ್ಲಿ ಕ್ಷೇತ್ರೋತ್ಸವಮಾಡಿ ರೈತರಿಗೆ ಅರಿವು ಮೂಡಿಸಲಾಗಿದೆ.
ಮಾದರಿ ನರ್ಸರಿ : ಬೇರೆ ಬೇರೆ ಜಿಲ್ಲೆಗಳಲ್ಲಿ ಅಗ್ರಿ ಕಲ್ಬ್ ಇದೆ.ಅದೊಂದು ತಾಂತ್ರಿಕ ಸಂಸ್ಥೆ. ಅಲ್ಲಿ ರೈತರಿಗೆ ಮಾಹಿತಿ ಕೊಡುತ್ತಾರೆ. ಅದರೆ ನಾವು ಕೃಷಿ ವಿಜ್ಞಾನ ಪದವಿಧರ ಸಂಘದಿಂದ ಸಲಹೆ,ಮಾಹಿತಿ ಕೊಡುವುದರ ಜೊತೆಗೆ ಪ್ರಾಯೋಗಿಕವಾಗಿಯೂ ತಾಕುಗಳನ್ನು ಮಾಡಿಕೊಳ್ಳಲು ನೆರವಾಗುತ್ತಿದ್ದೇವೆ.ಇದರಿಂದ ರೈತರಿಗೆ ಹೆಚ್ಚು ಆತ್ಮವಿಶ್ವಾಸ ಮೂಡಲು ಸಹಾಯವಾಗುತ್ತದೆ ಎನ್ನುತ್ತಾರೆ.
ಮಂಡ್ಯ ಜಿಲ್ಲೆಯವರೆ ಸೇರಿ ಮಂಡ್ಯ ಕೃಷಿ ವಿಜ್ಞಾನ ಪದವಿಧರರ ಸಂಘ ಮಾಡಿಕೊಂಡಿರುವುದರಿಂದ ಜಿಲ್ಲೆಗೆ ಹೆಚ್ಚು ಗಮನಕೊಡಲಾಗುತ್ತದೆ. ಆದರೆ ಒಂದು ಪ್ರದೇಶ ಅಂತ ಇದನ್ನು ಸೀಮಿತ ಗೊಳಿಸಿಕೊಂಡಿಲ್ಲ. ಅಕ್ಕಪಕ್ಕದ ಜಿಲ್ಲೆಯ ರೈತರಿಗೂ ಸಲಹೆ,ಮಾಹಿತಿ,ನರ್ಸರಿ ಸೇವೆ ಎಲ್ಲವನ್ನೂ ನೀಡುತ್ತಾ ಬರುತ್ತಿದ್ದೇವೆ. ಇತ್ತೀಚಿಗೆ ಮೈಸೂರು ತೋಟಗಾರಿಕೆ ವಿಶ್ವ ವಿದ್ಯಾನಿಲಯದಲ್ಲಿ ನಡೆದೆ ಗೇರು ಬೆಳೆ ವಿಚಾರ ಸಂಕಿರಣದಲ್ಲಿ ರೈತರು ಗೇರು ಗಿಡಗಳು ಬೇಕು ಅಂತ ಕೇಳಿದರು. ಈ ಬಾರಿ ಉತ್ತಮ ಮಳೆಯಾದ ಕಾರಣ ಗೇರು ಗಿಡಗಳಿಗೂ ದೊಡ್ಡ ಬೇಡಿಕೆ ಬಂತು. ಗಿಡಗಳು ಎಲ್ಲೂ ಸಿಗುತ್ತಿರಲಿಲ್ಲ.ನಾವು ನಮ್ಮ ಜಿಲ್ಲೆಯಲ್ಲಿ ಕೊಟ್ಟು ಉಳಿದಿದ್ದ ಐದಾರು ಸಾವಿರ ಗಿಡಗಳನ್ನು ಚಾಮರಾಜನಗರ,ಹಾಸನ,ತುಮಕೂರು ಜಿಲ್ಲೆಯ ರೈತರಿಗೂ ಪೂರೈಕೆ ಮಾಡಿದ್ದೇವೆ ಎನ್ನುತ್ತಾರೆ ಅಣ್ಣಯ್ಯ.
ಇದೊಂದು ನೋಂದಣಿಯಾಗಿರುವ ಸಂಘ.ಕಾನೂನು ಬದ್ಧವಾಗಿ ಎಲ್ಲಾ ಚಟುವಟಿಕೆಗಳು ನಡೆಯುತ್ತವೆ.
ಮಂಡ್ಯದಿಂದ 15 ಕಿ.ಮೀ ದೂರದ ಕೆರೆಗೋಡು ಸಮೀಪ ಹಾನಸೋಸಲು ಎಂಬ ಗ್ರಾಮದಲ್ಲಿ ಸಂಘದಿಂದ ಗಿಡಗಳ ನರ್ಸರಿ ಮಾಡಲಾಗಿದೆ. ಇಲ್ಲಿ ಗುಣಮಟ್ಟದ ಸಸಿಗಳನ್ನು ಉತ್ಪಾದಿಸಿ ರೈತರಿಗೆ ವಿತರಣೆ ಮಾಡಲಾಗುತ್ತಿದೆ.ಮುಖ್ಯವಾಗಿ ತೇಗ,ಸಾಗುವಾನಿ,ನುಗ್ಗೆ,ಪಪ್ಪಾಯ ರೀತಿಯ ಗಿಡಗಳನ್ನು ಕಳೆದ ಮೂರು ವರ್ಷಗಳಿಂದ ಬೆಳೆಸುತ್ತಿದ್ದಾರೆ,ವಿತರಿಸುತ್ತಿದ್ದಾರೆ. ಅರಣ್ಯ ಇಲಾಖೆ ಮತ್ತಿತರರ ಸಂಘಗಳು ಇದೆ ಕೆಲಸ ಮಾಡುತ್ತಿದ್ದಾರೆ ನಿಜ ಆದರೆ ಗುಣಮಟ್ಟದ ಬೀಜ ಮತ್ತು ಮೂಲ ತಳಿಯ ಮರಗಳು ಇರುವ ಜಾಗ ನಮಗೆ ಗೊತ್ತಿರುವುದರಿಂದ ನಾವೂ ಕೂಡ ಗುಣಮಟ್ಟದ ಗಿಡಗಳನ್ನು ಉತ್ಪಾದಿಸಿ ರೈತರಿಗೆ ನೆರವಾಗುತ್ತಿದ್ದೇವೆ. ಸಧ್ಯಕ್ಕೆ ರೈತರಿಗೆ ಬೇಡಿಕೆ ಇರುವ ಗಿಡಗಳನ್ನು ಬೆಳೆಸುತ್ತಿದ್ದೇವೆ. ಇಂತಹ ಗಿಡಗಳನ್ನು ಲಾಭದ ದೃಷ್ಠಿಯಿಂದ ನೋಡದೆ ಗಿಡದ ನಿರ್ವಹಣೆ ಮತ್ತು ಬೆಳೆಸಲು ಆದ ವೆಚ್ಚವನ್ನಷ್ಟೇ ಲೆಕ್ಕಹಾಕಿ ಸಾಧ್ಯವಾದಷ್ಟು ಕಡಿಮೆ ದರದಲ್ಲಿ ಗಿಡಗಳನ್ನು ಕೊಡಲಾಗುತ್ತಿದೆ ಎನ್ನುತ್ತಾರೆ ಅಣ್ಣಯ್ಯ. ಹೆಚ್ಚಿನ ಮಾಹಿತಿಗೆ ಅಣ್ಣಯ್ಯ 9448019306 ಸಂಪಕರ್ಿಸಿ.
ಹೀಗಾಗಿ ಲೇಖನಗಳು
ಎಲ್ಲಾ ಲೇಖನಗಳು ಆಗಿದೆ
ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಲಿಂಕ್ ವಿಳಾಸ https://dekalungi.blogspot.com/2017/10/blog-post_32.html
0 Response to " "
ಕಾಮೆಂಟ್ ಪೋಸ್ಟ್ ಮಾಡಿ