ಶೀರ್ಷಿಕೆ : ವಿಜ್ಞಾನಿಗಳಿಂದ ರೈತರಿಗೆ ಕಡಲೆ ಬೆಳೆ ಬೇಸಾಯ ತರಬೇತಿ
ಲಿಂಕ್ : ವಿಜ್ಞಾನಿಗಳಿಂದ ರೈತರಿಗೆ ಕಡಲೆ ಬೆಳೆ ಬೇಸಾಯ ತರಬೇತಿ
ವಿಜ್ಞಾನಿಗಳಿಂದ ರೈತರಿಗೆ ಕಡಲೆ ಬೆಳೆ ಬೇಸಾಯ ತರಬೇತಿ
ಕೊಪ್ಪಳ ಅ. 19 (ಕರ್ನಾಟಕ ವಾರ್ತೆ): ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ “ಲಾಭದಾಯಕ ಕಡಲೆ ಬೇಸಾಯದ ತರಬೇತಿ ಕಾರ್ಯಕ್ರಮ” ವನ್ನು ಹಮ್ಮಿಕೊಳ್ಳಲಾಯಿತು.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದ ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲರವರು ಈ ಸಂದರ್ಭದಲ್ಲಿ ಮಾತನಾಡಿ, ಬಿತ್ತುವ ಪೂರ್ವದಲ್ಲಿ ಕಡಲೆ ಬೀಜಕ್ಕೆ ಬೀಜೋಪಚಾರ ಮಾಡಲು ತಿಳಿಸಿದರು. 25 ಕೆಜಿ ಬೀಜಕ್ಕೆ 500 ಗ್ರಾಂ. ರೈಜೋಬಿಯಂ, 500 ಗ್ರಾಂ. ರಂಜಕ ಕರಗಿಸುವ ಅಣುಜೀವಿಯ ಗೊಬ್ಬರ (ಪಿ.ಎಸ್.ಬಿ) ಹಾಗೂ 100 ರಿಂದ 200 ಗ್ರಾಂ ಟ್ರೈಕೋಡರ್ಮಾ ಈ ಮೂರನ್ನು ಪ್ರತಿ ಬೀಜಕ್ಕೆ ತಗುಲುವಂತೆ ಮಿಶ್ರಣ ಮಾಡಬೇಕು. ನಂತರ ಬೀಜೋಪಚಾರವಾದ ನಂತರ 6 ಗಂಟೆಗಳ ಕಾಲ ಗಾಳಿಗೆ ಬಿಟ್ಟು ನಂತರ ಬಿತ್ತಲು ಉಪಯೋಗಿಸಬೇಕು. ಈ ಬೀಜೋಪಚಾರ ಮಾಡುವುದರಿಂದ ಸಿಡಿರೋಗ, ಎಲೆ ಮುಟುರು ರೋಗ, ಗೊಡ್ಡುರೋಗಗಳನ್ನು ತಡೆಗಟ್ಟಬಹುದು. ಬಿತ್ತನೆ ಮಾಡಿದ 20 ರಿಂದ 30 ದಿನದ ನಂತರ ಕುಡಿ ಚಿವುಟುವುದರಿಂದ ಉತ್ತಮ ಇಳುವರಿಯನ್ನು ಪಡೆಯಬಹುದು. ಶೇ. 50ರಷ್ಟು ಹೂ ಬಂದಾಗ ಕೃಷಿ ವಿಶ್ವವಿದ್ಯಾಲಯ, ರಾಯಚೂರು ಅವರು ಸಿದ್ದಪಡಿಸಿರುವ ಪಲ್ಸ್ ಮ್ಯಾಜಿಕ್ ಅನ್ನು ಪ್ರತಿ ಎಕರೆಗೆ 2 ಕೆಜಿಯಂತೆ ಸಿಂಪರಣೆ ಮಾಡುವುದರಿಂದ ಉತ್ತಮ ಇಳುವರಿ ನಿರೀಕ್ಷಿಸಬಹುದು. ಕಾಯಿಕೊರಕದ ಕೀಟಬಾಧೆ ಕಂಡರೆ ರೈತರು ಕ್ಲೋರೋಪ್ಯಾರಿಫಾಸ್ ಕೀಟನಾಶಕವನ್ನು ಸಾಯಂಕಾಲದ ವೇಳೆ 4-7 ಗಂಟೆಗೆ ಸಿಂಪಡಣೆ ಮಾಡಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಸಹಾಯಕ ಕೃಷಿ ಅಧಿಕಾರಿ ಎಮ್.ಎನ್. ಹಾಳಪ್ಪನ್ನವರ್, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ತೋಟಗಾರಿಕೆ ವಿಷಯ ತಜ್ಞರಾದ ಪ್ರದೀಪ ಬಿರಾದರ ಸೇರಿದಂತೆ ಸಂಗನಾಳ ಗ್ರಾಮದ ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು.
ಹೀಗಾಗಿ ಲೇಖನಗಳು ವಿಜ್ಞಾನಿಗಳಿಂದ ರೈತರಿಗೆ ಕಡಲೆ ಬೆಳೆ ಬೇಸಾಯ ತರಬೇತಿ
ಎಲ್ಲಾ ಲೇಖನಗಳು ಆಗಿದೆ ವಿಜ್ಞಾನಿಗಳಿಂದ ರೈತರಿಗೆ ಕಡಲೆ ಬೆಳೆ ಬೇಸಾಯ ತರಬೇತಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿಜ್ಞಾನಿಗಳಿಂದ ರೈತರಿಗೆ ಕಡಲೆ ಬೆಳೆ ಬೇಸಾಯ ತರಬೇತಿ ಲಿಂಕ್ ವಿಳಾಸ https://dekalungi.blogspot.com/2017/10/blog-post_19.html
0 Response to "ವಿಜ್ಞಾನಿಗಳಿಂದ ರೈತರಿಗೆ ಕಡಲೆ ಬೆಳೆ ಬೇಸಾಯ ತರಬೇತಿ"
ಕಾಮೆಂಟ್ ಪೋಸ್ಟ್ ಮಾಡಿ