ಶೀರ್ಷಿಕೆ : ಸೈನಿಕ ಹುಳು ಬಾಧೆ ನಿರ್ವಹಣೆಗಾಗಿ ರೈತರಿಗೆ ಮಾಹಿತಿ ಮತ್ತು ಪ್ರಾತ್ಯಕ್ಷತೆ ಕಾರ್ಯಕ್ರಮ
ಲಿಂಕ್ : ಸೈನಿಕ ಹುಳು ಬಾಧೆ ನಿರ್ವಹಣೆಗಾಗಿ ರೈತರಿಗೆ ಮಾಹಿತಿ ಮತ್ತು ಪ್ರಾತ್ಯಕ್ಷತೆ ಕಾರ್ಯಕ್ರಮ
ಸೈನಿಕ ಹುಳು ಬಾಧೆ ನಿರ್ವಹಣೆಗಾಗಿ ರೈತರಿಗೆ ಮಾಹಿತಿ ಮತ್ತು ಪ್ರಾತ್ಯಕ್ಷತೆ ಕಾರ್ಯಕ್ರಮ
ಕೊಪ್ಪಳ ಅ. 19 (ಕರ್ನಾಟಕ ವಾರ್ತೆ): ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ವಿಜ್ಞಾನಿಗಳಿಂದ ಜಿಲ್ಲೆಯ ಮಂಗಳೂರು ಗ್ರಾಮದ ರೈತ ಶಂಕರಗೌಡ ಮಾಲಿ ಪಾಟೀಲ ರವರ ಹೊಲದಲ್ಲಿ, ಮೆಕ್ಕೆಜೋಳದ ಬೆಳೆಗೆ ಸೈನಿಕ ಹುಳುವಿನ ಬಾಧೆ, ಇದರ ನಿರ್ವಹಣೆ ಹಾಗೂ “ವಿಷ ಪಾಷಾಣ” ತಯಾರಿಸುವ ಕುರಿತು ರೈತರಿಗೆ ಪ್ರಾತ್ಯಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ವಿಜ್ಞಾನಿಗಳು ಜಿಲ್ಲೆಯ ಮಂಗಳೂರು, ರ್ಯಾವಣಕಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರ ಹೊಲಗಳಿಗೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಸೈನಿಕ ಹುಳುವಿನ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಮಂಗಳೂರು ಸಮೀಪದ ಶಂಕರಗೌಡ ಮಾಲಿ ಪಾಟೀಲ ರವರ ಹೊಲದಲ್ಲಿ ಮೆಕ್ಕೆಜೋಳದ ಬೆಳೆಗೆ ಸೈನಿಕ ಹುಳುವಿನ ನಿರ್ವಹಣೆ ಮಾಡುವ ಕುರಿತು ಹಾಗೂ “ವಿಷ ಪಾಷಾಣ” ತಯಾರಿಸುವ ಕುರಿತು ರೈತರಿಗೆ ಪ್ರಾತ್ಯಕ್ಷಿಕೆಯನ್ನು ಮಾಡಲಾಯಿತು.
ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ ಅವರು ರೈತರನ್ನುದ್ದೇಶಿಸಿ ಮಾತನಾಡಿ, ವಾತಾವರಣದಲ್ಲಿ ಏರುಪೇರು ಆಗುತ್ತಿರುವುದರಿಂದ ಸೈನಿಕ ಕೀಟಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೈನಿಕ ಹುಳು ಹಗಲು ವೇಳೆ ಬೆಳೆಯ ಮೇಲೆ ದಾಳಿಮಾಡದೆ, ರಾತ್ರಿ ಮಾತ್ರ ಬೆಳೆಯ ಮೇಲೆ ದಾಳಿ ಮಾಡುತ್ತದೆ. ಈ ಹುಳು 4-5 ದಿವಸದಲ್ಲಿ ಪೂರ್ತಿಯಾಗಿ ಬೆಳೆಯನ್ನು ನಾಶಪಡಿಸುತ್ತದೆ. ಕ್ಲೋರೋಪ್ಯಾರಿಫಾಸ್ 20 ಇಸಿ.ಯನ್ನು ಅಥವಾ ಕ್ವಿನಾಲ್ಪಾಸ್ 25 ಇ.ಸಿ.ಯನ್ನು 2 ಮಿಲಿ. ಪ್ರತಿ ಲೀ. ನೀರಿಗೆ ಬೆರೆಸಿ ಹುಳದ ಹಾವಳಿಯ ಪ್ರಾರಂಭದ ಹಂತದಲ್ಲಿ ರೈತರು ಸಿಂಪಡನೆ ಮಾಡಬೇಕು ಹಾಗೂ ಕೀಟಬಾಧೆ ಹೆಚ್ಚಾದಲ್ಲಿ ವಿಷಪಾಷಾಣ ವನ್ನು ತಯಾರಿಸಿ ಹೊಲದಲ್ಲಿ ಎರಚಬೇಕು. ಸೈನಿಕ ಹುಳುವು ಮೆಕ್ಕಜೋಳದ ಜೊತೆಗೆ ನವಣೆ, ರಾಗಿ ಜೋಳ, ಶೇಂಗಾ, ಸೂರ್ಯಕಾಂತಿ ಮತ್ತು ಭತ್ತದಲ್ಲೂ ಸಹ ಕಂಡುಬರುತ್ತಿದ್ದು, ಈ ಕೀಟ ಕಂಡತಕ್ಷಣ ರೈತರು ಸಿಂಪರಣೆಯನ್ನು ಮಾಡುವುದರ ಜೊತೆಗೆ ಹೊಲದ ಸುತ್ತ, ಬದುಗಳ ಮೇಲೆ ಕಸ ಇರದಂತೆ ಎಚ್ಚರವಹಿಸಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಒಂದು ಎಕರೆಗೆ ಬೇಕಾಗುವ ವಿಷಪಾಷಾಣವನ್ನು ತಯಾರಿಸಲು ಭತ್ತದ ತೌಡು 20ಕೆಜಿ., ಬೆಲ್ಲ 2 ಕೆಜಿ, 250 ಮಿಲೀ. ಮಾನೋಕ್ರೋಟೋಫಾಸ್ ಮತ್ತು 4 ಲೀ. ನೀರು. ಇವುಗಳನ್ನು ಮಿಶ್ರಣ ಮಾಡಿ ಒಂದು ರಾತ್ರಿ ಬಕೇಟ್‍ನಲ್ಲಿ ಮುಚ್ಚಿಟ್ಟು ಕಳಿಯಲು ಬಿಟ್ಟು, ನಂತರ ಸಾಯಂಕಾಲ 5 ಗಂಟೆಗೆ ಕೈಗವಚ ಹಾಕಿಕೊಂಡು ಹೊಲದಲ್ಲಿ ಎರಚಬೇಕು. ವಿಷ ಪಾಷಾಣವನ್ನು ತಯಾರಿಸುವ ವಿಧಾನವನ್ನು ಕೇಂದ್ರ ವಿಜ್ಞಾನಿಗಳಾದ ಪ್ರದೀಪ ಬಿರಾದರ ಅವರು ರೈತರಿಗೆ ತೋರಿಸಿಕೊಟ್ಟರು. ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ದೂರವಾಣಿ ಸಂಖ್ಯೆ: 08539-220305 ಕ್ಕೆ ಸಂಪರ್ಕಿಸಬಹುದು.
ಹೀಗಾಗಿ ಲೇಖನಗಳು ಸೈನಿಕ ಹುಳು ಬಾಧೆ ನಿರ್ವಹಣೆಗಾಗಿ ರೈತರಿಗೆ ಮಾಹಿತಿ ಮತ್ತು ಪ್ರಾತ್ಯಕ್ಷತೆ ಕಾರ್ಯಕ್ರಮ
ಎಲ್ಲಾ ಲೇಖನಗಳು ಆಗಿದೆ ಸೈನಿಕ ಹುಳು ಬಾಧೆ ನಿರ್ವಹಣೆಗಾಗಿ ರೈತರಿಗೆ ಮಾಹಿತಿ ಮತ್ತು ಪ್ರಾತ್ಯಕ್ಷತೆ ಕಾರ್ಯಕ್ರಮ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಸೈನಿಕ ಹುಳು ಬಾಧೆ ನಿರ್ವಹಣೆಗಾಗಿ ರೈತರಿಗೆ ಮಾಹಿತಿ ಮತ್ತು ಪ್ರಾತ್ಯಕ್ಷತೆ ಕಾರ್ಯಕ್ರಮ ಲಿಂಕ್ ವಿಳಾಸ https://dekalungi.blogspot.com/2017/10/blog-post_10.html
0 Response to "ಸೈನಿಕ ಹುಳು ಬಾಧೆ ನಿರ್ವಹಣೆಗಾಗಿ ರೈತರಿಗೆ ಮಾಹಿತಿ ಮತ್ತು ಪ್ರಾತ್ಯಕ್ಷತೆ ಕಾರ್ಯಕ್ರಮ"
ಕಾಮೆಂಟ್ ಪೋಸ್ಟ್ ಮಾಡಿ