ಶೀರ್ಷಿಕೆ : ಸಂಘ ಅಥವಾ ಒಕ್ಕೂಟಗಳನ್ನು ಸಂಪನ್ಮೂಲ ಸಂಸ್ಥೆಯಾಗಿ ಪರಿಗಣನೆ : ಪ್ರಸ್ತಾವನೆಗಳ ಆಹ್ವಾನ
ಲಿಂಕ್ : ಸಂಘ ಅಥವಾ ಒಕ್ಕೂಟಗಳನ್ನು ಸಂಪನ್ಮೂಲ ಸಂಸ್ಥೆಯಾಗಿ ಪರಿಗಣನೆ : ಪ್ರಸ್ತಾವನೆಗಳ ಆಹ್ವಾನ
ಸಂಘ ಅಥವಾ ಒಕ್ಕೂಟಗಳನ್ನು ಸಂಪನ್ಮೂಲ ಸಂಸ್ಥೆಯಾಗಿ ಪರಿಗಣನೆ : ಪ್ರಸ್ತಾವನೆಗಳ ಆಹ್ವಾನ
ಕೊಪ್ಪಳ ಅ. 21 (ಕರ್ನಾಟಕ ವಾರ್ತೆ): ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಡೇ-ನಲ್ಮ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುವ ಎಸ್.ಜೆ.ಎಸ್.ಆರ್.ವೈ ಯೋಜನೆಯಡಿ ಸ್ಥಾಪಿಸಿರುವ ಸಮುದಾಯ ಅಭಿವೃದ್ಧಿ ಸಂಘ, ಅಥವಾ ಡೇ-ನಲ್ಮ ಯೋಜನೆಯಲ್ಲಿ ರಚಿಸಲಾಗಿರುವ ಕ್ಷೇತ್ರ ಮಟ್ಟದ ಒಕ್ಕೂಟಗಳನ್ನು ಸಂಪನ್ಮೂಲ ಸಂಸ್ಥೆಯನ್ನಾಗಿ ಪರಿಗಣಿಸಲು ಆಸಕ್ತರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.
ಡೇ-ನಲ್ಮ ಸಾಮಾಜಿಕ ದೃಢೀಕರಣ ಮತ್ತು ಸಾಂಸ್ಥಿಕ ಅಭಿವೃದ್ಧಿ ಉಪಘಟಕದಡಿ, ಗಂಗಾವತಿ ನಗರಸಭೆಯ ಕಾರ್ಯವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸಂಪನ್ಮೂಲ ಸಂಸ್ಥೆಗಳನ್ನು ತೊಡಗಿಸಿಕೊಳ್ಳುವ ಉದ್ದೇಶವಿರುತ್ತದೆ. ಈ ಸಂಸ್ಥೆಗಳನ್ನು ನಲ್ಮ ಯೋಜನೆಯ ಅನುಷ್ಠಾನದಡಿ ಮಾರ್ಗಸೂಚಿಯಂತೆ ಸ್ವ-ಸಹಾಯ ಗುಂಪುಗಳ ರಚನೆ, ಪ್ರದೇಶ ಮಟ್ಟದ ಒಕ್ಕೂಟ ರಚನೆ, ನಗರ ಮಟ್ಟದ ಒಕ್ಕೂಟ ರಚನೆ, ಬ್ಯಾಂಕ್ ಲಿಂಕೇಜ್ ಮಾಡುವುದು ಹಾಗೂ ಆರ್ಥಿಕ ಒಳಗೊಳ್ಳುವಿಕೆ ಯೊಂದಿಗೆ ಸಾಮಥ್ರ್ಯ ಅಭಿವೃದ್ಧಿ ಹಾಗೂ ಇತರೆ ತರಬೇತಿಗಳು ನೀಡುವುದು ನಗರದ ಎಲ್ಲ ಅರ್ಹ ಕುಟುಂಬಗಳನ್ನು ಸದಸ್ಯರ ಮೂಲಕ ಸ್ವ-ಸಹಾಯ ಸಂಘ ಹಾಗೂ ಒಕ್ಕೂಟಕ್ಕೆ ಸೇರ್ಪಡಿಸಿ ಸಾಮಾಜಿಕ ಸಂರಚನೆಯನ್ನು ಭದ್ರಗೊಳಿಸುವುದಾಗಿದ್ದು, ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಡೇ-ನಲ್ಮ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುವ ಕುರಿತು ಎಸ್.ಜೆ.ಎಸ್.ಆರ್.ವೈ ಯೋಜನೆಯಡಿಯಲ್ಲಿ ಸ್ಥಾಪಿಸಿರುವ ಸಮುದಾಯ ಅಭಿವೃದ್ಧಿ ಸಂಘ, ಅಥವಾ ಡೇ-ನಲ್ಮ ಯೋಜನೆಯಲ್ಲಿ ರಚಿಸಲಾಗಿರುವ ಕ್ಷೇತ್ರ ಮಟ್ಟದ ಒಕ್ಕೂಟಗಳನ್ನು ಸಂಪನ್ಮೂಲ ಸಂಸ್ಥೆಯನ್ನಾಗಿ ಪರಿಗಣಿಸುವ ಕುರಿತು ಆಸಕ್ತರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ. ಸಿ.ಡಿ.ಎಸ್/ ಎ.ಎಲ್.ಎಫ್ ರವರು ಅಕ್ಟೋಬರ್. 31 ರೊಳಗಾಗಿ ಗಂಗಾವತಿ ನಗರಸಭೆಯ ಕಾರ್ಯಾಲಯಕ್ಕೆ ನಿಯಮಾನುಸಾರ ಪ್ರಸ್ತಾವನೆಗಳನ್ನು ಕಛೇರಿ ಸಮಯದಲ್ಲಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಮುದಾಯ ಅಭಿವೃದ್ಧಿ ತಜ್ಞರಾದ ಸಂಜಯ ಕೋರೆ ಮೊಬೈಲ್ ಸಂಖ್ಯೆ 9880652783 ಕ್ಕೆ ಸಂಪರ್ಕಿಸಬಹುದು ಎಂದು ಗಂಗಾವತಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಸಂಘ ಅಥವಾ ಒಕ್ಕೂಟಗಳನ್ನು ಸಂಪನ್ಮೂಲ ಸಂಸ್ಥೆಯಾಗಿ ಪರಿಗಣನೆ : ಪ್ರಸ್ತಾವನೆಗಳ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಸಂಘ ಅಥವಾ ಒಕ್ಕೂಟಗಳನ್ನು ಸಂಪನ್ಮೂಲ ಸಂಸ್ಥೆಯಾಗಿ ಪರಿಗಣನೆ : ಪ್ರಸ್ತಾವನೆಗಳ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಸಂಘ ಅಥವಾ ಒಕ್ಕೂಟಗಳನ್ನು ಸಂಪನ್ಮೂಲ ಸಂಸ್ಥೆಯಾಗಿ ಪರಿಗಣನೆ : ಪ್ರಸ್ತಾವನೆಗಳ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/10/blog-post_1.html
0 Response to "ಸಂಘ ಅಥವಾ ಒಕ್ಕೂಟಗಳನ್ನು ಸಂಪನ್ಮೂಲ ಸಂಸ್ಥೆಯಾಗಿ ಪರಿಗಣನೆ : ಪ್ರಸ್ತಾವನೆಗಳ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ