ಶೀರ್ಷಿಕೆ : ವಿಷನ್ 2025 : ಅ. 28 ರಂದು ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಅಭಿಪ್ರಾಯ ಸಂಗ್ರಹಣೆ
ಲಿಂಕ್ : ವಿಷನ್ 2025 : ಅ. 28 ರಂದು ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಅಭಿಪ್ರಾಯ ಸಂಗ್ರಹಣೆ
ವಿಷನ್ 2025 : ಅ. 28 ರಂದು ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಅಭಿಪ್ರಾಯ ಸಂಗ್ರಹಣೆ
ಕೊಪ್ಪಳ (ಕರ್ನಾಟಕ ವಾರ್ತೆ) ಅ. 28: ಮುಂದಿನ ಏಳು ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಕ್ಷೇತ್ರಗಳಲ್ಲಿ, ಏನೇನು ಸಾಧನೆಗಳಾಗಬೇಕು, ಕೃಷಿ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ನಗರಗಳ ಅಭಿವೃದ್ಧಿ, ಆಡಳಿತ, ಕಾನೂನು, ಸಾಮಾಜಿಕ ನ್ಯಾಯ ಹೀಗೆ ನಾನಾ ವಲಯಗಳ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಜನರ ಅಭಿಪ್ರಾಯ ಸಂಗ್ರಹಣೆಗೆ ಸರ್ಕಾರ ಉದ್ದೇಶಿಸಿದ್ದು, ಅ. 28 ರಂದು ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಅಭಿಪ್ರಾಯ ಸಂಗ್ರಹಣೆ ಹಾಗೂ ಅಂಶಗಳ ಕ್ರೋಢೀಕರಣ ಕಾರ್ಯಕ್ರಮ ನವ ಕರ್ನಾಟಕ 2025 ರ ಮುನ್ನೋಟ (ವಿಷನ್ 2025) ಸಿದ್ಧಪಡಿಸಲು ವೇದಿಕೆ ಸಜ್ಜಾಗಿದೆ.
ಬದಲಾದ ಸನ್ನಿವೇಶದಲ್ಲಿ ಜನರ ಜೀವನ ಶೈಲಿ, ಉದ್ಯೋಗ, ಆಹಾರ ಪದ್ಧತಿ, ಹವಾಮಾನ, ಭೌಗೋಳಿಕ ಸ್ಥಿತ್ಯಂತರ, ಕೃಷಿ ಮತ್ತು ಕೈಗಾರಿಕಾ ರಂಗಗಳಲ್ಲಿ ಆಗಬೇಕಾದ ಬದಲಾವಣೆಗಳನ್ನು ಆಡಳಿತ ವ್ಯವಸ್ಥೆಯು ಎಚ್ಚರಿಕೆಯಿಂದಲೇ ಗಮನಿಸಿ ಮುಂದಿನ ಹೆಜ್ಜೆ ಇಡಬೇಕಾದ ಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂದಿನ ಏಳು ವರ್ಷಗಳಲ್ಲಿ ಜನಾಗತ್ಯಕ್ಕೆ ತಕ್ಕಂತೆ ಯೋಜನೆಗಾಗಿ, ಜನಾಭಿಪ್ರಾಯ ಸಂಗ್ರಹಣೆಯನ್ನು ಜಿಲ್ಲಾ ಕೇಂದ್ರಗಳಿಂದಲೇ ಆರಂಭಿಸಿ ರಾಜ್ಯ ಸರ್ಕಾರದ ಆದ್ಯತೆಗಳನ್ನು ಗುರುತಿಸಿ, ಯೋಜನೆ ರೂಪಿಸಲು ನವ ಕರ್ನಾಟಕ 2025 ರ ಮುನ್ನೋಟ ಸಿದ್ಧಪಡಿಸಲು ಮುಂದಾಗಿದೆ. ಇದಕ್ಕಾಗಿ ಪ್ರತಿ ಜಿಲ್ಲೆಯ ಅಭಿವೃದ್ಧಿಗಳ ಆದ್ಯತೆ ಅಭಿಪ್ರಾಯ ಸಂಗ್ರಹಣೆ ನಡೆಯುತ್ತಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ದೂರದೃಷ್ಟಿ ಚಿಂತನೆಯೊಂದಿಗೆ ವಿಷನ್ 2025 ಡಾಕ್ಯುಮೆಂಟ್ ತಯಾರಿಗೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗಾಗಿ ಆಯಾಯ ಕ್ಷೇತ್ರದಲ್ಲಿನ ಅನುಭವಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು, ಸಾಧಕರನ್ನು ಒಗ್ಗೂಡಿಸಿ, ಕ್ಷೇತ್ರವಾರು ಗುಂಪುಗಳನ್ನು ರಚಿಸಿ, ಸಂವಾದದ ಮೂಲಕ ಅಭಿವೃದ್ಧಿಯ ಆಧ್ಯತೆ, ಸಾಧ್ಯತೆ ನಿಟ್ಟಿನಲ್ಲಿ ಅಭಿಪ್ರಾಯ ಸಂಗ್ರಹಣೆಗೆ ಸಿದ್ಧತೆ ಕೈಗೊಂಡಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಸುಮಾರು 13 ಆದ್ಯತಾ ವಲಯಗಳನ್ನು ನಿಗದಿಪಡಿಸಲಾಗಿದ್ದು, ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ, ಕೃಷಿ ಮತ್ತು ಕೃಷಿಗೆ ಸಂಬಂಧಿತ ಕ್ಷೇತ್ರಗಳು, ಉದ್ಯೋಗ ಮತ್ತು ಕೌಶಲ್ಯ, ಆಡಳಿತ, ಆರೋಗ್ಯ, ಕೈಗಾರಿಕೆ, ಮೂಲಭೂತ ಸೌಕರ್ಯ, ಕಾನೂನು ಮತ್ತು ಸುವ್ಯವಸ್ಥೆ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ನಗರಾಭಿವೃದ್ಧಿ, ಸ್ಮಾರ್ಟ್ ಸಿಟಿ ಸೇರಿದಂತೆ ಅಭಿವೃದ್ಧಿಯ ಆದ್ಯತೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರಗತಿಪರ ಚಿಂತಕರು, ಸಾಹಿತಿಗಳು, ಸಂಪನ್ಮೂಲ ವ್ಯಕ್ತಿಗಳು, ತಜ್ಞರು ಸೇರಿದಂತೆ ಎಲ್ಲ ನಿಟ್ಟಿನಿಂದಲೂ, ಅಭಿವೃದ್ಧಿಗಾಗಿ ಚಿಂತನೆಗಳನ್ನು, ಸಲಹೆಗಳನ್ನು ಕ್ರೋಢೀಕರಿಸುವ ಕಾರ್ಯ ಆಗಲಿದೆ ಇವುಗಳನ್ನೊಳಗೊಂಡಂತೆ ಜಿಲ್ಲೆಯ ಜನಪ್ರತಿನಿಧಿಗಳು, ವಿಷಯಗಳ ತಜ್ಞರು, ಭಾಗೀದಾರರು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆ ಹಾಗೂ ಅಂಶಗಳ ಕ್ರೋಢಿಕರಣ ಅ. 28 ರಂದು ಕೊಪ್ಪಳದಲ್ಲಿ ನಡೆಯಲಿದೆ. ಈ ಕಾರ್ಯಕ್ರಮ ಮುನ್ನಡೆಸಲು ವಿಷನ್ 2025 ರ ಸಿಇಒ ರೇಣುಕಾ ಚಿದಂಬರಂ ಅವರು ಕೊಪ್ಪಳಕ್ಕೆ ಆಗಮಿಸುವರು.
ಅಭಿವೃದ್ಧಿಯ ಉದ್ದೇಶದಿಂದ 13 ಕ್ಷೇತ್ರಗಳನ್ನು 05 ಆದ್ಯತಾ ವಲಯಗಳನ್ನಾಗಿ ರೂಪಿಸಲಾಗಿದ್ದು, ನಗರ, ಮೂಲಭೂತ ಸೌಕರ್ಯ/ಸ್ಮಾರ್ಟ್ ಸಿಟಿ. ಸಾಮಾಜಿಕ ನ್ಯಾಯ, ಆರೋಗ್ಯ ಮತ್ತು ಶಿಕ್ಷಣ. ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಮತ್ತಿತರೆ ಹಾಗೂ ಗ್ರಾಮೀಣಾಭಿವೃದ್ಧಿ. ಕೈಗಾರಿಕಾ ಅಭಿವೃದ್ಧಿ, ಸೇವೆಗಳು, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ, ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಆಡಳಿತ, ಕಾನೂನು ಮತ್ತು ನ್ಯಾಯ ಸೇರಿದಂತೆ 05 ಆದ್ಯತಾ ವಲಯಗಳನ್ನಾಗಿಸಿ, ಈ ವಲಯಗಳ ಅಭಿವೃದ್ಧಿಗೆ ಅಭಿಪ್ರಾಯ ಕ್ರೋಢೀಕರಣ ಜರುಗಲಿದೆ.
ಉದ್ಘಾಟನೆ : ಕರ್ನಾಟಕ ವಿಷನ್ 2025 ಡಾಕ್ಯುಮೆಂಟ್ ಸಿದ್ಧತೆ ಕುರಿತ ಕಾರ್ಯಕ್ರಮದ ಉದ್ಘಾಟನೆ ಅ. 28 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ನೆರವೇರಲಿದೆ. ವಿಷನ್ 2025 ರ ಸಿಇಒ ರೇಣುಕಾ ಚಿದಂಬರಂ ಅವರು ಯೋಜನೆ ಕುರಿತ ಪ್ರಾಸ್ತಾವಿಕ ಭಾಷಣ ಮಾಡುವರು. ಈ ಕಾರ್ಯಕ್ರಮದ ನಂತರ ವಿಷಯಾಧಾರಿತ ಚರ್ಚೆಗಳು, ಅಭಿಪ್ರಾಯ ಸಂಗ್ರಹಣೆ ಪ್ರತ್ಯೇಕ ಸ್ಥಳಗಳಲ್ಲಿ ಬೆಳಿಗ್ಗೆ 11-15 ಗಂಟೆಯಿಂದ ಜರುಗಲಿದೆ. ಈಗಾಗಲೆ ಹಲವು ವಿಷಯಕ್ಕೆ ಸಂಬಂಧಿಸಿದಂತೆ ಭಾಗೀದಾರರು, ಜನಪ್ರತಿನಿಧಿಗಳು, ವಿಷಯ ಪರಿಣಿತರು, ಮಾಧ್ಯಮದವರು, ಸಾರ್ವಜನಿಕರು ಹಾಗೂ ತಜ್ಞರು ಸೇರಿದ ಪ್ರತಿಯೊಂದು ರಂಗಕ್ಕೆ ಪ್ರತಿನಿಧಿಗಳನ್ನು ಗುರುತಿಸಿದ್ದು ಅವರು ಐದು ವಲಯಗಳ ಪ್ರತ್ಯೇಕ ಅಭಿಪ್ರಾಯ ಸಂಗ್ರಹಣೆ ಸಭೆಗಳಲ್ಲಿ ಭಾಗವಹಿಸಿ ಅಭಿಪ್ರಾಯ ನೀಡಲಿದ್ದಾರೆ. ತದನಂತರ ಎಲ್ಲ ವಲಯಗಳ ಕ್ರೋಢೀಕರಣ ಸಮನ್ವಯತೆ ಅಭಿಪ್ರಾಯ ಸಂಗ್ರಹಣೆ ಸಭೆ ನಡೆಯಲಿದೆ.
ಈಗಾಗಲೇ ಕೊಪ್ಪಳ ಜಿಲ್ಲಾಡಳಿತ ಸಾರ್ವಜನಿಕವಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಅಭಿಪ್ರಾಯ ಕಳುಹಿಸಲು vision2025koppal@gmail.com ಇ-ಮೇಲ್ ವಿಳಾಸವನ್ನು ಈ ಹಿಂದೆಯೇ ನೀಡಿದ್ದು, ಅದರಲ್ಲಿ ಬಂದಂತಹ ಅಂಶಗಳನ್ನು ಸಹ ಗಣನೆಗೆ ತೆಗೆದುಕೊಂಡು ಕೊಪ್ಪಳ ಜಿಲ್ಲೆ ಮುನ್ನೋಟ 2025 ಸಿದ್ದಪಡಿಸುವ ಒಟ್ಟಾರೆ ಅಂಶಗಳು ಅಂತಿಮಗೊಳ್ಳಲಿವೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ವಿಷನ್ 2025 : ಅ. 28 ರಂದು ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಅಭಿಪ್ರಾಯ ಸಂಗ್ರಹಣೆ
ಎಲ್ಲಾ ಲೇಖನಗಳು ಆಗಿದೆ ವಿಷನ್ 2025 : ಅ. 28 ರಂದು ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಅಭಿಪ್ರಾಯ ಸಂಗ್ರಹಣೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿಷನ್ 2025 : ಅ. 28 ರಂದು ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಅಭಿಪ್ರಾಯ ಸಂಗ್ರಹಣೆ ಲಿಂಕ್ ವಿಳಾಸ https://dekalungi.blogspot.com/2017/10/2025-28.html
0 Response to "ವಿಷನ್ 2025 : ಅ. 28 ರಂದು ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಅಭಿಪ್ರಾಯ ಸಂಗ್ರಹಣೆ"
ಕಾಮೆಂಟ್ ಪೋಸ್ಟ್ ಮಾಡಿ