NEWS AND PHOTO DATE: 06-09-2017

NEWS AND PHOTO DATE: 06-09-2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS AND PHOTO DATE: 06-09-2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS AND PHOTO DATE: 06-09-2017
ಲಿಂಕ್ : NEWS AND PHOTO DATE: 06-09-2017

ಓದಿ


NEWS AND PHOTO DATE: 06-09-2017

ನಾರಾಯಣ ಗುರುಗಳು ಮಹಾನ ಪುರುಷರು--ಡಾ.ಶರಣಪ್ರಕಾಶ್ ಪಾಟೀಲ್
ಕಲಬುರಗಿ,ಸೆ.06.(ಕ.ವಾ.)-ಒಂದೇ ಮತ ಅದುವೇ ಮನುಜ ಮತ ಎಂದು ಸಾರಿ ಹೇಳಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಎಲ್ಲರನ್ನು ಒಗ್ಗೂಡಿಸಿ ಸಮಾಜದಲ್ಲಿನ ಮೂಢನಂಬಿಕೆ ಕಂದಚಾರಗಳನ್ನು ಹೋಗಲಾಡಿಸಲು ಶ್ರಮಿಸಿದ ಮಹಾನ ಪರುಷರಾಗಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಹೇಳಿದರು.
ಅವರು ಬುಧವಾರ ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಯಂತ್ಯೋತ್ಸವ ಸಮಿತಿಯ ಸಹಯೋಗದಲ್ಲಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆಯ ಸಮಾರಂಭವನ್ನು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. 
ಒಂದೇ ಮತ, ಒಬ್ಬನೇ ದೇವರೆಂದು ಪ್ರತಿಪಾದಿಸಿದ ನಾರಾಯಣ ಗುರುಗಳು ಧಾರ್ಮಿಕ, ಶೈಕ್ಷಣಿಕ ಹಾಗೂ ಶೋಷಿತ ವರ್ಗದ ಸಮುದಾಯದಲ್ಲಿ ಪರಿವರ್ತನೆಯ ಪ್ರಜ್ಞೆಗೆ ದುಡಿದ ಶ್ರೇಷ್ಠ ಸಮಾಜ ಸುಧಾರಕರು. ಶೋಷಿತ ಸಮುದಾಯಕ್ಕೆ ದೇವಾಲಯ ಪ್ರವೇಶಿಸಲು ಅವಕಾಶ ಕಲ್ಪಿಸಿದ ಇವರು ಸಾಮಾಜಿಕ ಕ್ರಾಂತಿಗೆ ತನ್ನದೆಯಾದ ಕೊಡುಗೆ ನೀಡಿದ್ದಾರೆ. ನಾರಾಯಣ ಗುರುಗಳ ಸೇರಿದಂತೆ ಅನೇಕ ಶರಣ-ಸಂತರ ಜೀವನ ಸಂದೇಶಗಳನ್ನು ನಮ್ಮ ಜೀವನದಲ್ಲಿಯೂ ಸಹ ಅಳವಡಿಸಿಕೊಂಡು ಸಾರ್ಥಕ ಜೀವನ ನಡೆಸುವಂತಾಗಲಿ ಎಂಬ ಸದುದ್ದೇಶದೊಂದಿಗೆ ಸರ್ಕಾರವು ಈ ರೀತಿಯ ಅನೇಕ ದಾರ್ಶನಿಕರು, ಸಮಾಜ ಸುಧಾರಕರ, ಮಹಾನ ಪುರುಷರ ಜಯಂತಿ ಕಾರ್ಯಕ್ರಮಗಳನ್ನು ಆಚರಣೆ ಮಾಡುತ್ತಿದೆ. ನಾರಾಯಣ ಗುರುಗಳು ಕೇವಲ ಒಂದು ಜನಾಂಗದ ಗುರುಗಳಲ್ಲ ಅವರು ಮಾನವ ಜನಾಂಗದ ಗುರುಗಳಾಗಿದ್ದಾರೆ ಎಂದು ಸಚಿವರು ಹೇಳಿದರು. 
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿ ಕಾಶೀನಾಥ ಗುತ್ತೆದಾರ ಮಾತನಾಡಿ ಇಂದಿನ ದಿನಗಳಲ್ಲಿ ಶರಣರ ಮತ್ತು ಸಾಮಾಜಿಕ ಸುಧಾರಕರ ದಿನಾಚರಣೆ ಆಯಾ ಸಮುದಾಯಕ್ಕೆ ಸೀಮಿತವಾಗಿದ್ದು ಕಳವಳಕಾರಿ ಎಂದ ಅವರು ಮಹಾನ ಪುರುಷರ ಜಯಂತಿ ಕಾರ್ಯಕ್ರಮಗಳನ್ನು ಎಲ್ಲ ವರ್ಗದ ಸಮುದಾಯ ಒಗ್ಗೂಡಿ ಆಚರಿಸಿದಾಗ ಮಾತ್ರ ಅವರ ಸಂದೇಶಗಳು ಸರ್ವವ್ಯಾಪಿ ಪಸರಿಸಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಲಬುರಗಿ ಜಿಲ್ಲಾ ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ಆರ್. ಗುತ್ತೇದಾರ್, ಜಿಲ್ಲಾ ಪಂಚಾಯತಿ ಸದಸ್ಯ ಹರ್ಷಾನಂದ ಆರ್. ಗುತ್ತೇದಾರ್, ಸಮಾಜದ ಮುಖಂಡರುಗಳಾದ ವೆಂಕಟೇಶ ಕಡೇಚೂರ ಸೇರಿದಂತೆ ಇನ್ನೀತರರು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಸಾಧಿಸಿದ ಸಮಾಜದ ಮುಖಂಡರನ್ನು, ಎಸ್.ಎಸ್.ಎಲ್.ಸಿ., ಪಿ.ಯು.ಸಿ, ಪದವಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಜಿಲ್ಲಾ ಆರ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಸನ್ಮಾನಿಸಲಾಯಿತು.
ಇದಕ್ಕೂ ಮುನ್ನ ಕಲಬುರಗಿ ನಗರದ ಸರ್ದಾರವ ವಲ್ಲಭಬಾಯಿ ಪಟೇಲ್ ವೃತ್ತದಿಂದÀ ಪ್ರಾರಂಭವಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದ ಭವ್ಯ ಮೆರವಣಿಗೆ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಕೊನೆಗೊಂಡಿತು. ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಕಲೆಗಳನ್ನು ಪ್ರದರ್ಶಿಸಿದವು. 



ಸೆಪ್ಟೆಂಬರ್ 8ರಂದು ನೇತ್ರದಾನ ಪಾಕ್ಷಿಕ ಆಚರಣೆ ಅಂಗವಾಗಿ ವಾಕ್‍ಥಾನ್ 
ಕಲಬುರಗಿ,ಸೆ.06(ಕ.ವಾ.)-ಜಿಲ್ಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಅಂಧತ್ವ ವಿಭಾಗದಿಂದ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಅಡಿಯಲ್ಲಿ ಆಗಸ್ಟ್ 25ರಿಂದ ಸೆಪ್ಟೆಂಬರ್ 8ವರೆಗೆ ಹಮ್ಮಿಕೊಂಡಿರುವ 32ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಸೆಪ್ಟೆಂಬರ್ 8ರಂದು ಬೆಳಗಿನ 7.30 ಗಂಟೆಗೆ ಸರದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಗತ್ ವೃತ್ತದವರೆಗೆ ಜಿಲ್ಲೆಯ ಎಲ್ಲ ನೇತ್ರ ತಜ್ಞರು, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿನ್ನೊಳಗೊಂಡ ವಾಕ್‍ಥಾನ್ ಹಾಗೂ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ.
ಅಂದು ಮಧ್ಯಾಹ್ನ 12 ಗಂಟೆಗೆ ಆದರ್ಶ ನಗರದಲ್ಲಿರುವ ಸರ್ಕಾರಿ ಪಿ.ಯು. ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ ಎಂದು ರಾಷ್ಟ್ರೀಯ ಅಂಧತ್ವ ನಿಯಂತ್ರಣ ಅಧಿಕಾರಿ ಡಾ|| ಮಹೇಂದ್ರಕರ್ ತಿಳಿಸಿದ್ದಾರೆ. 
ದೇಶದಲ್ಲಿ ಸುಮಾರು 16 ಲಕ್ಷ ಜನ ಅಂಧರಿದ್ದು, ಇವರಲ್ಲಿ ಚಿಕ್ಕ ವಯಸ್ಸಿನವರೆ ಹೆಚ್ಚಾಗಿದ್ದಾರೆ. ಕಾರ್ನಿಯಲ್ ಟ್ರಾನ್ಸ್‍ಪ್ಲಾಂಟೇಶನ್ ಚಿಕಿತ್ಸೆಯಿಂದ ಚಿಕ್ಕ ವಯಸ್ಸಿನವರಿಗೆ ಮತ್ತೆ ದೃಷ್ಟಿ ನೀಡಬಹುದಾಗಿದೆ. ಇದು ನೇತ್ರದಾನದಿಂದ ಮಾತ್ರ ಸಾಧ್ಯವಿದೆ. ರಾಜ್ಯದಲ್ಲಿ ಸುಮಾರು 57 ನೇತ್ರ ಬ್ಯಾಂಕ್‍ಗಳು ಇದ್ದು, 2015-06ರಲ್ಲಿ 6500 ಕ್ಕಿಂತ ಕಡಿಮೆ ಕಾರ್ನಿಯಾ ಸಂಗ್ರಹಿಸಲ್ಪಟ್ಟಿದೆ. ಮಕ್ಕಳಲ್ಲಿ “ಎ” ಅನ್ನಾಂಗದ ಕೊರತೆಯಿಂದ ದೃಷ್ಟಿದೋಷ ಕಾಣಿಸಿಕೊಳ್ಳುತ್ತಿದೆ. ಇದನ್ನು ತಡೆಗಟ್ಟುವುದು ಸಹ ಮುಖ್ಯವಾಗಿದೆ. 
ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ ಅಂಗವಾಗಿ ಆಸ್ಪತ್ರೆ, ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಮರಣದ ನಂತರ ಕಾರ್ನಿಯಾ ಸಂಗ್ರಹಿಸಿ ಅಂಧರಿಗೆ ಅದರಲ್ಲೂ ಚಿಕ್ಕ ಮಕ್ಕಳಿಗೆ ದೃಷ್ಟಿ ನೀಡುವ ಉದ್ದೇಶ ಹೊಂದಲಾಗಿದೆ.

ವಿಶ್ವ ಕರ್ಮ ಜಯಂತಿ ಆಚರಣೆ: ಮೂಡದ ಒಮ್ಮತ
ಕಲಬುರಗಿ,ಸೆ.06(ಕ.ವಾ.)-ಜಿಲ್ಲೆಯಲ್ಲಿ  ಸೆಪ್ಟೆಂಬರ್ 17ರಂದು ವಿಶ್ವ ಕರ್ಮ ಜಯಂತಿ ಆಚರಣೆಗೆ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ವಿಶ್ವ ಕರ್ಮ ಜಯಂತಿ ಆಚರಣಾ ಸಮಿತಿ ಒಮ್ಮತಕ್ಕೆ ಬರದ ಕಾರಣ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ. 
ವಿಶ್ವ ಕರ್ಮ ಜಯಂತಿ ಅಂಗವಾಗಿ ಜಿಲ್ಲಾಡಳಿತದಿಂದ ಕೈಗೊಳ್ಳುವ ಮೆರವಣಿಗೆ, ಉಪನ್ಯಾಸಕರ ಮತ್ತು ಆಹ್ವಾನ ಪತ್ರಿಕೆಯಲ್ಲಿ ವಿಶ್ವ ಕರ್ಮ ಸಮಾಜದ ಮುಖಂಡರ ಹೆಸರು ಮುದ್ರಿಸಲು ಮುಖಂಡರ ಆಯ್ಕೆಗೆ ಸಂಬಂಧಿಸಿದಂತೆ ಸಭೆಗೆ ಆಗಮಿಸಿದ ವಿಶ್ವ ಕರ್ಮ ಜಯಂತಿ ಆಚರಣಾ ಸಮಿತಿಯ ಸದಸ್ಯರಲ್ಲಿ ಗೊಂದಲ ಮತ್ತು ಭಿನ್ನಾಭಿಪ್ರಾಯ ಉಂಟಾದ ಕಾರಣ ಒಮ್ಮತದ ನಿರ್ಣಯ ಕೈಗೊಳ್ಳಲಿಲ್ಲ. 
ವಿಶ್ವ ಕರ್ಮ ಸಮಾಜದ ಮುಖಂಡರಲ್ಲಿರುವ ಭಿನ್ನಾಭಿಪ್ರಾಯ ಶಮನಗೊಳಿಸಿ ಕಾರ್ಯಕ್ರಮವನ್ನು ಜಿಲ್ಲಾಡಳಿತದ ವತಿಯಿಂದ ವಿಜೃಂಭಣೆಯಿಂದ ಆಚರಿಸಲು ಮತ್ತೊಮ್ಮೆ ಮುಖಂಡರ ಸಭೆಯನ್ನು ಕರೆಯಲು ತೀರ್ಮಾನಿಸಲಾಯಿತು. 
ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಯಾದಗಿರಿ ವಿಶ್ವ ಕರ್ಮ ಏಕದಂಡಗಿ ಮಠದ ಸುರೇಂದ್ರ ಮಹಾಸ್ವಾಮಿಗಳು, ಶ್ರೀನಿವಾಸ ಮಹಾಸ್ವಾಮಿಗಳು, ವಿಶ್ವಕರ್ಮ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.  

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಸೆಪ್ಟೆಂಬರ್ 15ಕ್ಕೆ ಮುಂದೂಡಿಕೆ
ಕಲಬುರಗಿ,ಸೆ.06(ಕ.ವಾ.)-ಕಲಬುರಗಿ ಜಿಲ್ಲಾ ಪಂಚಾಯಿತಿಯ ಎಂಟನೇ ಸಾಮಾನ್ಯ ಸಭೆಯನ್ನು ಅನಿವಾರ್ಯ ಕಾರಣದಿಂದ ಸೆಪ್ಟೆಂಬರ್ 15ಕ್ಕೆ ಮುಂದೂಡಲಾಗಿದೆ. ಜಿಲ್ಲಾ ಪಂಚಾಯತಿಯ ಹೊಸ ಸಭಾಂಗಣದಲ್ಲಿ ಕಲಬುರಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅವರ ಅಧ್ಯಕ್ಷತೆಯಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ಜರುಗಲಿದೆ.
ಸದರಿ ಸಭೆಯು ಈ ಮುಂಚೆ ಸೆಪ್ಟೆಂಬರ್ 7ರಂದು ಬೆಳಗಿನ 11 ಗಂಟೆಗೆ ನಿಗದಿಯಾಗಿತ್ತು. ಸಂಬಂಧಪಟ್ಟ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಸೆಪ್ಟೆಂಬರ್ 15ರಂದು ನಡೆಯುವ ಈ ಸಭೆಗೆ ಖುದ್ದಾಗಿ ಸಂಬಂಧಿಸಿದ ಎಲ್ಲ ಅಗತ್ಯ ದಾಖಲೆಗಳೊಂದಿಗೆ ಸದರಿ ಸಭೆಗೆ ಖುದ್ದಾಗಿ ಹಾಜರಾಗಬೇಕು. 
ಯಾವುದೇ ಇಲಾಖೆಯ ಅಧಿಕಾರಿಗಳು ರಜೆ ಮೇಲೆ ಹೋಗಬೇಕಾದಲ್ಲಿ ಹಾಗೂ ಸಭೆಗೆ ಹಾಜರಾಗಲು ಆಗದಿದ್ದಲ್ಲಿ ಮಾನ್ಯ ಅಧ್ಯಕ್ಷರ ಅನುಮತಿ ಪಡೆದು ಹೋಗಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.  

ಫಲಾನುಭವಿಗಳಿಗೆ ತಾಡಪತ್ರಿ ವಿತರಣೆ: ಆಯ್ಕೆ ಪ್ರಕ್ರಿಯೆ ಸೆಪ್ಟೆಂಬರ್ 11ಕ್ಕೆ ಮುಂದೂಡಿಕೆ  
ಕಲಬುರಗಿ,ಸೆ.06(ಕ.ವಾ.)-ಆಳಂದ ತಾಲೂಕಿನ ಎಲ್ಲ ರೈತರಿಗೆ 2017-18ನೇ ಸಾಲಿನಲ್ಲಿ ರಿಯಾಯಿತಿ ದರದಲ್ಲಿ ತಾಡಪತ್ರಿ (ಟಾರ್ಪಲಿನ್)ಗಳನ್ನು ವಿತರಿಸುವ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯು ರೈತ ಸಂಪರ್ಕ ಕೇಂದ್ರದಲ್ಲಿ ಸೆಪ್ಟೆಂಬರ್ 11ರಂದು ಬೆಳಗಿನ 11 ಗಂಟೆಗೆ ಜರುಗಲಿದೆ ಎಂದು ಆಳಂದ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. 
ಸದರಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯು ಈ ಮುಂಚೆ ಸೆಪ್ಟೆಂಬರ್ 8ರಂದು ನಿಗದಿಯಾಗಿತ್ತು. ಸದರಿ ದಿನದಂದು ತಡಕಲ ಗ್ರಾಮದಲ್ಲಿ ಸಿರಿಧಾನ್ಯಗಳ ಕ್ಷೇತ್ರೋತ್ಸವ ಕಾರ್ಯಕ್ರಮ ಏರ್ಪಡಿಸಿರುವ ಹಿನ್ನೆಲೆಯಲ್ಲಿ  ಸೆಪ್ಟೆಂಬರ್ 11ಕ್ಕೆ ಮುಂದೂಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸೆಪ್ಟೆಂಬರ್ 13ರಂದು ಮಾಸಿಕ ಕೆ.ಡಿ.ಪಿ.ಸಭೆ
ಕಲಬುರಗಿ,ಸೆ.06(ಕ.ವಾ.)-ಕಲಬುರಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅವರ ಅಧ್ಯಕ್ಷತೆಯಲ್ಲಿ ಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯು ಸೆಪ್ಟೆಂಬರ್ 13ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದಲ್ಲಿ ಜರುಗಲಿದೆ. ಸಂಬಂಧಪಟ್ಟ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಸಂಬಂಧಿಸಿದ ಎಲ್ಲ ಅಗತ್ಯ ದಾಖಲೆಗಳೊಂದಿಗೆ ಸದರಿ ಸಭೆಗೆ ಖುದ್ದಾಗಿ ಹಾಜರಾಗುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ.
ಮಹಾತ್ಮಗಾಂಧಿ ಸೇವಾ ಪ್ರಶಸ್ತಿ: ನಾಮ ನಿರ್ದೇಶನ ಆಹ್ವಾನ
  ಕಲಬುರಗಿ,ಸೆ.06(ಕ.ವಾ.)-ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ರಾಜ್ಯ ಸರ್ಕಾರ ಸ್ಥಾಪಿಸಿರುವ “ಮಹಾತ್ಮಗಾಂಧೀ ಸೇವಾ ಪ್ರಶಸ್ತಿ-ಕರ್ನಾಟಕ”ಗೆ ಪ್ರಸಕ್ತ ಸಾಲಿಗೆ ಅರ್ಹ ಸಾಧಕರನ್ನು ಆಯ್ಕೆ ಮಾಡಲು ವ್ಯಕ್ತಿ ಅಥವಾ ಸಂಘ ಸಂಸ್ಥೆಗಳಿಂದ ನಾಮನಿರ್ದೇಶನ ಆಹ್ವಾನಿಸಲಾಗಿದೆ.
ಸಾರ್ವಜನಿಕ ಜೀವನದಲ್ಲಿ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಅಳವಡಿಸಿಕೊಂಡು ಜೀವನ ನಡೆಸುತ್ತಿರುವ ಕನಿಷ್ಠ 60 ವರ್ಷಗಳಾಗಿರುವ ವ್ಯಕ್ತಿಗಳು ಅಥವಾ 25 ವರ್ಷಗಳು ತುಂಬಿರುವ ಸೇವಾ ಸಂಸ್ಥೆಗಳನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುವುದು.   ಪ್ರಶಸ್ತಿಯು ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡಿದೆ. 2017 ಅಕ್ಟೋಬರ್ 02 ರ ಗಾಂಧಿ ಜಯಂತಿಯಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಮಹಾತ್ಮ ಗಾಂಧೀಜಿಯವರು ಪ್ರಚುರುಪಡಿಸಿದ ಜನಪರ ಕಾರ್ಯಕ್ರಮಗಳಾದ ಅಸ್ಪøಶ್ಯತೆ ನಿವಾರಣೆ, ಅಹಿಂಸೆ, ಮಹಿಳಾ ಸಬಲೀಕರಣ, ಗ್ರಾಮೀಣ ನೈರ್ಮಲ್ಯ, ಮದ್ಯಪಾನ ವಿರೋಧಿ ನೀತಿ, ಖಾದಿ ಮತ್ತು ಸ್ವದೇಶಿವಸ್ತು ಬಳಕೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ದಾರ ಸೇರಿದಂತೆ ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳನ್ನು ಈ ಪ್ರಶಸ್ತಿಗೆ ಶಿಫಾರಸ್ಸನ್ನು ಮಾಡಬಹುದಾಗಿದೆ.  
ಈ ಸಾಲಿನ ಪ್ರಶಸ್ತಿ ಆಯ್ಕೆಗಾಗಿ ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಶ್ರೀ ನಾಗಮೋಹನದಾಸ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ.  ಹಿರಿಯ ಪತ್ರಕರ್ತ ಹಾಗೂ ಗಾಂಧೀವಾದಿ ಶ್ರೀ ಖಾದ್ರಿ ಅಚ್ಚುತನ್,  ಗಾಂಧೀ ಸ್ಮಾರಕ ನಿಧಿ ಉಪಾಧ್ಯಕ್ಷ ಪ್ರೊ. ಜಿ. ಬಿ. ಶಿವರಾಜ್, ಸಮಾಜಶಾಸ್ತ್ರ ನಿವೃತ್ತ ಪ್ರಾಧ್ಯಾಪಕಿ  ಪ್ರೊ. ವಸಂತಮ್ಮ ಅವರು ಸದಸ್ಯರಾಗಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರು   ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ನಾಮನಿರ್ದೇಶನಗಳನ್ನು ಅಗತ್ಯ ವಿವರಗಳೊಂದಿಗೆ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,  ಬೆಂಗಳೂರು ವಿಳಾಸಕ್ಕೆ ಸೆಪ್ಟೆಂಬರ್ 13ರೊಳಗಾಗಿ ಸಲ್ಲಿಸಬೇಕು. ಇ-ಮೇಲ್ vartheinfohub@gmail.com  ವಿಳಾಸಕ್ಕೆ ಕಳುಹಿಸಬಹುದಾಗಿದೆ.
ಸೆಪ್ಟೆಂಬರ್ 8ರಂದು ಉದ್ಯೋಗ ಮೇಳ 
ಕಲಬುರಗಿ,ಸೆ.06(ಕ.ವಾ.)-ಕಲಬುರಗಿ ಜಿಲ್ಲಾ ಉದ್ಯೋಗ ಮೇಳವನ್ನು ಸೆಪ್ಟೆಂಬರ್ 8ರಂದು ಬೆಳಗಿನ 11 ರಿಂದ ಸಂಜೆ 4 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕೆಳಕಂಡ ಐದು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. 
ಬೆಂಗಳೂರಿನ ಹೆಡ್‍ಹೆಲ್ಡ್ ಹೈ ಫೌಂಡೇಶನ ಹಾಗೂ ಕಲಬುರಗಿಯ ಯುರೇಕಾ ಫೋರ್ ಬೇಸ್ ಲಿಮಿಟೆಡ್, ಡಾನ್‍ಬಾಸ್ಕೋ ಪ್ಯಾರ್, ಸ್ಪಂದನಾ ಸ್ಫೂರ್ತಿ ಫೈನಾನ್‍ಶಿಯಲ್ ಲಿಮಿಟೆಡ್ ಹಾಗೂ ಎಸ್.ಬಿ.ಐ. ಲೈಫ್ ಇನ್ಸುರೆನ್ಸ್ ಕಂಪನಿಯವರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದಾರೆ. ಈ ಭಾಗದ ಅಭ್ಯರ್ಥಿಗಳು ಸದರಿ ಉದ್ಯೋಗ ಮೇಳದ ಸದುಪಯೋಗ ಪಡೆಯಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಆಯುಷ್ ಇಲಾಖೆಯಿಂದ ಡೆಂಗ್ಯೂ ಜ್ವರದ ಜಾಗೃತಿ ಮತ್ತು ಉಚಿತ ಚಿಕಿತ್ಸೆ ಶಿಬಿರ 
ಕಲಬುರಗಿ,ಸೆ.06(ಕ.ವಾ.)-ಕಲಬುರಗಿಯ ಆಯುಷ್ ಇಲಾಖೆಯಿಂದ ಕಲಬುರಗಿ ನ್ಯೂ  ರಾಘವೇಂದ್ರ ಕಾಲೋನಿಯ ಫ್ಲೋರಾ ಪಬ್ಲಿಕ್ ಶಾಲೆಯಲ್ಲಿ ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಮತ್ತು ಉಚಿತ ಚಿಕಿತ್ಸಾ ಶಿಬಿರವನ್ನು ಜಿಲ್ಲಾ ಆಯುಷ್ ಅಧಿಕಾರಿ ಡಾ|| ನಾಗರತ್ನ ಎಸ್. ಚಿಮ್ಮಲಗಿ ಇವರ ನೇತೃತ್ವದಲ್ಲಿ ಬುಧವಾರ ಜರುಗಿತು. 
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಶಬಾನಾ ಬೇಗಂ, ಆಡಳಿತ ಮಂಡಳಿ ಸದಸ್ಯ ನಸೀಮಾಖಾನ್, ಆಯುಷ್ ವೈದ್ಯರುಗಳಾದ ಡಾ|| ಗಿರೀಜಾ ಎಸ್.ಯು., ಡಾ|| ಅಪ್ಪಾರಾವ ಅರ್ಗಾಡೆ, ಡಾ|| ಎಂ.ಆರ್. ಕುಲಕರ್ಣಿ ಮತ್ತು ಸಿಬ್ಬಂದಿಗಳಾದ ಸಕ್ಕುಬಾಯಿ, ಅರುಣಕುಮಾರ ಉಪಸ್ಥಿತರಿದ್ದರು. 503 ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗ ಪಡೆದುಕೊಂಡಿದ್ದಾರೆ. 
ಸೆಪ್ಟೆಂಬರ್ 4ರಂದು ಕಲಬುರಗಿಯ ಜೀವನ ಪ್ರಕಾಶ ಶಾಲೆ ಮತ್ತು ಸಖೀನಾ ಬಟಿಸ್ಟಾ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡೆಂಗ್ಯೂ ಜಾಗೃತಿ ಮತ್ತು ಉಚಿತ ಚಿಕಿತ್ಸೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ಸುಮಾರು 1357 ವಿದ್ಯಾರ್ಥಿಗಳಿಗೆ ಔಷಧಿಗಳನ್ನು ವಿತರಿಸಲಾಯಿತು. ಆಗಸ್ಟ್ 31ರಂದು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಸರ್ಕಾರಿ ಹೋಮಿಯೋಪತಿ ಚಿಕಿತ್ಸಾಲಯದಲ್ಲಿ ಡೆಂಗ್ಯೂ ಜಾಗೃತಿ ಮತ್ತು ಉಚಿತ ಚಿಕಿತ್ಸೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. 525  ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗ ಪಡೆದುಕೊಂಡಿದ್ದಾರೆ. 
ಕಾನೂನು ಪದವಿಧರರಿಗೆ ನ್ಯಾಯಾಂಗ ಆಡಳಿತದ ವೃತ್ತಿ ತರಬೇತಿ
ಕಲಬುರಗಿ,ಸೆ.06(ಕ.ವಾ.)-ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2017-18ನೇ ಸಾಲಿಗಾಗಿ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಮತ್ತು 3(ಬಿ) ಜನಾಂಗಕ್ಕೆ ಸೇರಿದ ಕಲಬುರಗಿ ಜಿಲ್ಲೆಯ 14 ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ 2(ಎ), 3(ಎ) ಮತ್ತು 3(ಬಿ) ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷ ರೂ. ಮಿತಿಯೊಳಗಿರಬೇಕು. ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 3.50 ಲಕ್ಷ ರೂ. ಆದಾಯ ಮಿತಿಯೊಳಗಿರಬೇಕು. ಮಹಿಳಾ ಅಭ್ಯರ್ಥಿಗಳಿಗೆ ಶೇ.33 ರಷ್ಟು ಮೀಸಲಾತಿ ನೀಡಲಾಗುವುದು. ತರಬೇತಿ ಅವಧಿ 4 ವರ್ಷಗಳದ್ದಾಗಿದ್ದು, ತರಬೇತಿ ಅವಧಿಯಲ್ಲಿ ಪ್ರತಿ ಮಾಹೆಯಾನ 4000 ರೂ.ಗಳ ಭತ್ಯೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಕ್ಕೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ವಯಸ್ಸು 30 ವರ್ಷ ಮೀರಿರಬಾರದು. ಪ್ರವರ್ಗ-1ರಡಿ ಬರುವ ಅಭ್ಯರ್ಥಿಗಳ ವಯಸ್ಸು 31 ವರ್ಷ ಮೀರಿರಬಾರದು. ಅರ್ಜಿ ಸಲ್ಲಿಸಲು ನಗದಿಪಡಿಸಿದ 3 ವರ್ಷದೊಳಗೆ ಅಭ್ಯರ್ಥಿಗಳು ವಕೀಲ ವೃತ್ತಿ ಕೈಗೊಳ್ಳಲು ನಿಗದಿಪಡಿಸಿದ ಕಾನೂನು ಪದವಿ ಪಡೆದಿರಬೇಕು. 
ಎಲ್.ಎಲ್.ಬಿ. ಕೋರ್ಸಿನ ಎಲ್ಲ ವರ್ಷಗಳ ದೃಢೀಕೃತ ಅಂಕಪಟ್ಟಿ, ವಕೀಲ ವೃತ್ತಿ ಕೈಗೊಳ್ಳಲು ನೋಂದಣಿ ಮಾಡಿದ ಪ್ರಮಾಣಪತ್ರ ಹಾಗೂ ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣಪತ್ರ ದಾಖಲಾತಿಗಳನ್ನು ಲಗತ್ತಿಸಿ ಸೆಪ್ಟೆಂಬರ್ 30ರ ಸಂಜೆ 5.30 ಗಂಟೆಯೊಳಗಾಗಿ ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಸಲ್ಲಿಸಬೇಕು.  ಅಪೂರ್ಣವಾದ ಹಾಗೂ ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂ. 9243689100ನ್ನು ಸಂಪರ್ಕಿಸಲು ಕೋರಿದೆ.  
ಸೆಪ್ಟೆಂಬರ್ 7ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಸೆ.06(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11ಕೆ.ವಿ. ಆದರ್ಶ ನಗರ ಫೀಡರ್ ಮೇಲೆ ನಿರ್ವಹಣಾ ಕಾರ್ಯ ಹಾಗೂ 11ಕೆ.ವಿ. ಪೊಲೀಸ್ ಕಾಲೋನಿಯ ವ್ಯಾಪ್ತಿಯ ಫೀಡರ್ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾರ್ಯ ಹಾಗೂ ಕಂಬಗಳನ್ನು ಸ್ಥಳಾಂತರ ಕೈಗೊಳ್ಳುವ ಪ್ರಯುಕ್ತ ಸೆಪ್ಟೆಂಬರ್ 7ರಂದು ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯವಾಗುವ ಬಡಾವಣೆಗಳ ವಿವರ ಇಂತಿದೆ. 
11 ಕೆ.ವಿ. ಆದರ್ಶ ನಗರ ಫೀಡರ್:  ಅಂದು ಬೆಳಗಿನ 10 ರಿಂದ ಮಧ್ಯಾಹ್ನ 2.30 ಗಂಟೆಯವರೆಗೆ ಕೆ.ಹೆಚ್.ಬಿ. ಕಾಲೋನಿ, ಮಹಾಲಕ್ಷ್ಮಿ ಲೇಔಟ್, ಖಾನ್ ಕಾಲೋನಿ, ಬಿಲಾಲಬಾದ್, ಇಸ್ಲಾಮಾಬಾದ ಕೆಸಿಟಿ ಕಾಲೇಜ್, ಕೆಬಿಎನ್ ಕಾಲೇಜ್, ಸರಾಫ್ ಮಡ್ಡಿ , ಲಿಟಲ್ ಪ್ಲವರ್ ಸ್ಕೋಲ್, ಬ್ಯಾಂಕ್ ಕಾಲೋನಿ, ಶಿವಾಜಿ ನಗರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11 ಕೆ.ವಿ ಪೋಲಿಸ್À ಕಾಲೋನಿ ಫೀಡರ್: ಅಂದು ಬೆಳಗಿನ 10 ರಿಂದ ಸಂಜೆ 4 ಗಂಟೆಯವರೆಗೆ ಪೊಲೀಸ್ ಕಾಲೋನಿ, ಜಿ.ಡಿ.ಎ. ರಿಂಗ್ ರೋಡ್, ಪ್ರಶಾಂತ ನಗರ ಎ ಆಂಡ್, ಶಾಹಾಬಾದ, ಶಕ್ತಿ ನಗರ ನೃಪತುಂಗಾ ಕಾಲೋನಿ, ಬಂಜಾರ ಲೇಔಟ್, ರಾಜಾಪೂರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಅನುಸೂಚಿತ ಜಾತಿ-ಅನುಸೂಚಿತ ಬುಡಕಟ್ಟು ಆಯೋಗದ ಅಧ್ಯಕ್ಷರ ಪ್ರವಾಸ 
ಕಲಬುರಗಿ,ಸೆ.06.(ಕ.ವಾ.)-ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಎ. ಮುನಿಯಪ್ಪ ಹಾಗೂ ಸದಸ್ಯರಾದ ಎನ್. ದಿವಾಕರ ಅವರು ಉದ್ಯಾನ್ ಎಕ್ಸ್‍ಪ್ರೆಸ್ ರೈಲಿನ ಮೂಲಕ ಸೆಪ್ಟೆಂಬರ್ 7ರಂದು ಬೆಳಗಿನ 8.45 ಗಂಟೆಗೆ ಕಲಬುರಗಿಗೆ ಆಗಮಿಸುವರು.  
ಅಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿಯಿಂದ ತೆರಳಿ ಜೇವರ್ಗಿ ತಾಲೂಕಿನ ಚನ್ನಾಪುರ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಬಾವಿಗೆ ವಿಷ ಹಾಕಿರುವ ಬಗ್ಗೆ ಪರಿಶೀಲನೆ











ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ನಂತರ ಅಧ್ಯಕ್ಷರು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಹಾಗೂ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಲಬುರಗಿಯಿಂದ ಬೆಂಗಳೂರಿಗೆ ಪ್ರಯಾಣಿಸುವರು.

ಕೃಷಿ ಸಚಿವರ ಪ್ರವಾಸ 
ಕಲಬುರಗಿ,ಸೆ.06.(ಕ.ವಾ.)-ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಬೆಂಗಳೂರಿನಿಂದ ಯಶವಂತಪುರ-ಸೋಲಾಪುರ ಎಕ್ಸ್‍ಪ್ರೆಸ್ ರೈಲಿನ ಮೂಲಕ ಸೆಪ್ಟೆಂಬರ್ 8ರಂದು ಬೆಳಗಿನ 6.25 ಗಂಟೆಗೆ ಕಲಬುರಗಿಗೆ ಆಗಮಿಸುವರು.  
ಸಚಿವರು ಅಂದು ಬೆಳಗಿನ 10.30 ಗಂಟೆಗೆ ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದ ತಡಕಲ್ ಗ್ರಾಮದಲ್ಲಿ ಸಿರಿಧಾನ್ಯ ಬೆಳೆದ ರೈತರ ಹೊಲಗಳಿಗೆ ಹಾಗೂ ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಕೃಷಿ ಹೊಂಡದ ಉಪಯೋಗ ಪಡೆದು ತೊಗರಿ ಬೆಳೆ ಬೆಳೆದಿರುವ ರೈತರ ಹೊಲಗಳಿಗೆ ಭೇಟಿ ನೀಡುವರು. ನಂತರ ಮಧ್ಯಾಹ್ನ 12 ಗಂಟೆಗೆ ತಡಕಲ್ ಗ್ರಾಮದಿಂದ ಬೀದರ ಜಿಲ್ಲೆಯ ಔರಾದಗೆ ಪ್ರಯಾಣ ಮಾಡುವರು. 



ಹೀಗಾಗಿ ಲೇಖನಗಳು NEWS AND PHOTO DATE: 06-09-2017

ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 06-09-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 06-09-2017 ಲಿಂಕ್ ವಿಳಾಸ https://dekalungi.blogspot.com/2017/09/news-and-photo-date-06-09-2017.html

Subscribe to receive free email updates:

0 Response to "NEWS AND PHOTO DATE: 06-09-2017"

ಕಾಮೆಂಟ್‌‌ ಪೋಸ್ಟ್‌ ಮಾಡಿ