ಶೀರ್ಷಿಕೆ : NEWS AND PHOTO DATE: 05-09-2017
ಲಿಂಕ್ : NEWS AND PHOTO DATE: 05-09-2017
NEWS AND PHOTO DATE: 05-09-2017
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಸಚಿವರ ಪ್ರವಾಸ
ಕಲಬುರಗಿ,ಸೆ.05.(ಕ.ವಾ.)-ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ್ ಅವರು ಹೈದ್ರಾಬಾದಿನಿಂದ ರಸ್ತೆ ಮೂಲಕ ಸೆಪ್ಟೆಂಬರ್ 6ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಸೆಪ್ಟೆಂಬರ್ 07ರಂದು ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ
ಪ್ರಶಸ್ತಿ ಪ್ರದಾನ ಸಮಾರಂಭ
ಕಲಬುರಗಿ,ಸೆ.05.(ಕ.ವಾ.)-ಜಿಲ್ಲಾ ಪಂಚಾಯಿತಿ ಹಾಗೂ ಉಪನಿರ್ದೆಶಕರ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ 2017-18ನೇ ಸಾಲಿನ ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆ ಹಾಗೂ ಜಿಲ್ಲಾ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆಪ್ಟೆಂಬರ್ 7ರಂದು ಬೆಳಗಿನ 11 ಗಂಟೆಗೆ ಕಲಬುರಗಿಯ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಅವರ ಘನ ಉಪಸ್ಥಿತಿಯಲ್ಲಿ ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಮಾರಂಭದಲ್ಲಿ ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ್ ಸೇಡಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲಿಕಯ್ಯ ವ್ಹಿ. ಗುತ್ತೇದಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ವಿಧಾನಸಭಾ ಶಾಸಕರುಗಳಾದ ಡಾ. ಖಮರುಲ್ ಇಸ್ಲಾಂ, ಜಿ. ರಾಮಕೃಷ್ಣ, ಬಿ.ಆರ್. ಪಾಟೀಲ, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಶರಣಕುಮಾರ ಮೋದಿ, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸಗರ್ ಚುಲಬುಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕಮ್ಮ ಚನ್ನಮಲ್ಲಯ್ಯ ಹಿರೇಮಠ ಅತಿಥಿಗಳಾಗಿ ಆಗಮಿಸುವರು.
ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತಾಲಯದ ನಿರ್ದೇಶಕಿ ಫಾತೀಮಾ ಬಿ., ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಹಣಮಂತ (ರಾಜು) ಲೇಂಗಟಿ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಕಟ್ಟೀಮನಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯ ಬಿ. ಗುತ್ತೇದಾರ್, ಕಲಬುರಗಿ ಉತ್ತರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಭೀಮಸಿಂಗ್ ರಾಠೋಡ, ಕಲಬುರಗಿ ಉತ್ತರ ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣಬಸಪ್ಪ ಎಂ. ಜೋಗದ, ಕಲಬುರಗಿ ದಕ್ಷಿಣ ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ತುಕಾರಾಮ ಚಿತ್ತಾಪುರ, ಕಲಬುರಗಿ ದಕ್ಷಿಣ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಮೂಲಗೆ ವಿಶೇಷ ಆಹ್ವಾನಿತರಾಗಿ ಆಗಮಿಸುವರು. 2017-18ನೇ ಸಾಲಿನಲ್ಲಿ ಜಿಲ್ಲೆಯ ಅತ್ಯುತ್ತಮ ಶಿಕ್ಷಕರೆಂದು ಪ್ರೌಢ ಶಾಲಾ ವಿಭಾಗದಿಂದ 8 ಶಿಕ್ಷಕರ ಹಾಗೂ ಪ್ರಾಥಮಿಕ ಶಾಲಾ ವಿಭಾಗದಿಂದ 8 ಶಿಕ್ಷಕರು ಆಯ್ಕೆಯಾಗಿರುತ್ತಾರೆ. ಆಯ್ಕೆಯಾದ ಶಿಕ್ಷಕರ ವಿವರ ಇಂತಿದೆ.
ಪ್ರೌಢಶಾಲಾ ವಿಭಾಗ: ಸೇಡಂ ತಾಲೂಕಿನ ದುಗನೂರ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಶಂಕರ ಹಾವೇರಿ, ಮುಧೋಳ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ಜಗದೇವಿ, ಕಲಬುರಗಿ ತಾಲೂಕಿನ (ದ) ನಂದೂರ ಕೆ. ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಸಂತೋಷ ಕುಮಾರ, ಅಫಜಲಪುರ ತಾಲೂಕಿನ ಬಂದರವಾಡ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ಸುರೇಖಾ ಜಗನ್ನಾಥ, ಆಳಂದ ತಾಲೂಕಿನ ನೆಲ್ಲೂರ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ದೇವಿಂದ್ರಪ್ಪ ಎನ್. ಪಾಟೀಲ, ಕಲಬುರಗಿ ತಾಲೂಕಿನ ಖಣದಾಳ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕ ವೀರೇಶ ಹೂಗಾರ, ಜೇವರ್ಗಿ ತಾಲೂಕಿನ ಕೋಳಕೂರ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಶರಣಗೌಡ ಬಿ. ಪಾಟೀಲ, ಕಲಬುರಗಿ ತಾಲೂಕಿನ (ಉ) ತಾಜ ನಗರ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ರಿಯಾಜ್ ಅಹ್ಮದ್ ಸೈಯ್ಯದ್ ಆಯ್ಕೆಯಾಗಿರುತ್ತಾರೆ.
ಪ್ರಾಥಮಿಕ ಶಾಲಾ ವಿಭಾಗ: ಆಳಂದ ವಿವೇಕ ವರ್ದಿನಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ವಿಶ್ವನಾಥ ಭಕರೆ, ಕಲಬುರಗಿ ತಾಲೂಕಿನ (ಉ) ಅಷ್ಠಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ನವಾಬ್‍ಖಾನ್, ಕಲಬುರಗಿ (ದ) ನಂದಿಕೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ವಿಜಯಲಕ್ಷ್ಮೀ ದೊಡ್ಡಮನಿ, ಸೇಡಂ ತಾಲೂಕಿನ ಚಂದೂನಾಯಕ ತಾಂಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಕರಿಬಸಪ್ಪ, ಇಟಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ನೀಲಪ್ಪ, ಅಫಜಲಪುರ ತಾಲೂಕಿನ ರಾಮನಗರ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಹುಸೇನಿ ಮುಜಾವರ್, ಚಿತ್ತಾಪುರ ತಾಲೂಕಿನ ರಾವೂರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಅನ್ನಪೂರ್ಣ ಹಾಗೂ ಜೇವರ್ಗಿ ತಾಲೂಕಿನ ಕಲ್ಲಹಂಗರಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಗುರಪ್ಪಾ ಶರಣಪ್ಪಾ ಆಯ್ಕೆಯಾಗಿರುತ್ತಾರೆ.
ಜಿಲ್ಲೆಯಾದ್ಯಂತ ಬೈಕ್/ವಾಹನ ರ್ಯಾಲಿ ನಿಷೇಧ
ಕಲಬುರಗಿ,ಸೆ.05.(ಕ.ವಾ.)-ಕಲಬುರಗಿ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 5 ರಿಂದ 7ರ ಸಂಜೆ 6 ಗಂಟೆಯವರೆಗೆ ಯಾವುದೇ ವ್ಯಕ್ತಿಗಳು, ಸಂಘಟನೆ ಸದಸ್ಯರು ಹಾಗೂ ಯಾವುದೇ ರಾಜಕೀಯ ಪಕ್ಷದಿಂದ ಬೈಕ್/ವಾಹನ ರ್ಯಾಲಿ, ಮೆರವಣಿಗೆ ಹಾಗೂ ಸಭೆ ಸಮಾರಂಭವನ್ನು ನಡೆಸುವುದನ್ನು ಕರ್ನಾಟಕ ಪೊಲೀಸ್ ಕಾಯ್ದೆ 1963, ಕಲಂ 35(3) ರನ್ವಯ ನಿಷೇಧಿಸಿ ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆರ್. ವೆಂಕಟೇಶಕುಮಾರ್ ಆದೇಶ ಹೊರಡಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಹಲವು ಕಡೆಯಿಂದ ಬೈಕ್ ರ್ಯಾಲಿ ನಡೆಸುವುದರಿಂದ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 7ರಂದು ಮುಂದೂಡಿದ ಮಹಾನಗರ ಪಾಲಿಕೆ ಸಾಮಾನ್ಯ ಸಭೆ
ಕಲಬುರಗಿ,ಸೆ.05.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆಯ ಮುಂದೂಡಿದ ಸಾಮಾನ್ಯ ಸಭೆಯು ಸೆಪ್ಟೆಂಬರ್ 7ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ಇಂದಿರಾ ಸ್ಮಾರಕ ಸಭಾಭವನ (ಟೌನ್‍ಹಾಲ್) ದಲ್ಲಿ ಜರುಗಲಿದೆ. ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಶರಣಕುಮಾರ ಮೋದಿ ಸಭೆಯ ಅಧ್ಯಕ್ಷತೆ ವಹಿಸುವರು.
ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರು, ಉಪಹಾಪೌರರು, ಎಲ್ಲ ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳು ಮತ್ತು ಸದಸ್ಯರು ಈ ಸಭೆಗೆ ಆಗಮಿಸಬೇಕೆಂದು ಸಭಾ ಕಾರ್ಯದರ್ಶಿಗಳು ಕೋರಿದ್ದಾರೆ.
ಸೆಪ್ಟೆಂಬರ್ 7ರಂದು ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಕಿರುಚಿತ್ರ ಸ್ಪರ್ಧೆ
ಕಲಬುರಗಿ,ಸೆ.05.(ಕ.ವಾ.)-ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಕಲಬುರಗಿ ನೆಹರು ಯುವ ಕೇಂದ್ರದಿಂದ ಭಾರತದ ಪ್ರಧಾನಮಂತ್ರಿಗಳ ಸಂಕಲ್ಪ-ನವ ಭಾರತ 2022 “ಸ್ವಚ್ಛ ಸಂಕಲ್ಪದಿಂದ ಸ್ವಚ್ಛ ಸಿದ್ದಿ” ಶೀರ್ಷಿಕೆಯಡಿಯಲ್ಲಿ ಯುವಕ/ ಯುವತಿಯರಿಗಾಗಿ ಪ್ರಬಂಧ ಮತ್ತು ಕಿರುಚಿತ್ರ (Sಊಔಖಖಿ ಈIಐಒ ಅಔಒPಇಖಿIಖಿIಔಓ) ಸ್ಪರ್ಧೆಯನ್ನು ಸೆಪ್ಟೆಂಬರ್ 7ರಂದು ಬೆಳಿಗ್ಗೆ 10.30 ಗಂಟೆಗೆ ಆಳಂದ ರಸ್ತೆಯಲ್ಲಿರುವ ಶೆಟ್ಟಿ ಕಾಂಪ್ಲೆಕ್ಸ್‍ನ ಮೂರನೇ ಮಹಡಿಯಲ್ಲಿರುವ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿಗಳು ತಿಳಿಸಿದ್ದಾರೆ.
ದಿನಾಂಕ: 07-09-2017ಕ್ಕೆ ವಿದ್ಯಾರ್ಥಿಗಳ ವಯೋಮಿತಿ 15 ರಿಂದ 29 ವರ್ಷದೊಳಗಿನವರಾಗಿರಬೇಕು. ಸ್ವಚ್ಛತೆಗಾಗಿ ನಾನು ಏನು ಮಾಡಬಲ್ಲೆ? ಪ್ರಬಂಧ ಸ್ಪರ್ಧೆಯ ವಿಷಯವಾಗಿದೆ. 250 ಪದಗಳಿಗೆ ಮೀರದಂತೆ ಇರಬೇಕು. ಮೀರಿದರೆ ಅದಕ್ಕೆ ತಕ್ಕಂತೆ ಅಂಕಗಳನ್ನು ಕಡಿತಗೊಳಿಸಲಾಗುವುದು. ನೀಲಿ ಬಾಲ್ ಪಾಯಂಟ್ ಪೆನ್‍ನಿಂದ ಬರೆಯಬೇಕು. ಪ್ರಬಂಧ ಬರೆಯಲು ಒಂದು ಗಂಟೆ ಸಮಯ ಇರುತ್ತದೆ. ಹಿಂದಿ, ಇಂಗ್ಲೀಷ್ ಅಥವಾ ಪ್ರಾದೇಶಿಕ ಭಾಷೆಯಾದ ಕನ್ನಡದಲ್ಲಿ ಸಹ ಬರೆಯಬಹುದು. “ನನ್ನ ದೇಶದ ಸ್ವಚ್ಛತೆಗಾಗಿ ನನ್ನ ಕೊಡುಗೆ” ಕಿರು ಚಿತ್ರ ಸ್ಪರ್ಧೆಯ ವಿಷಯವಾಗಿದೆ. ಸಮಯ 2-3 ನಿಮಿಷಗಳು ಇದ್ದು, ಹೆಚ್ಚಿನ ಸಮಯಕ್ಕೆ ಅಂಕಗಳನ್ನು ಕಡಿತಗೊಳಿಸಲಾಗುವುದು. ಕಿರುಚಿತ್ರದ ಸಿ.ಡಿ.ಯನ್ನು ಸ್ಪರ್ಧೆಯ ದಿನದಂದು ಸಲ್ಲಿಸಬೇಕು.
ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಥಮ, ದ್ವಿತೀಯ, ತೃತಿಯ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಂದವರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ರಾಜ್ಯ ಮಟ್ಟದಲ್ಲಿ ಪ್ರಥಮ ಬಂದವರಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಗುರುತಿನ ಚೀಟಿ, ಆಧಾರ ಕಾರ್ಡ್, ಚುನಾವಣೆ ಗುರುತಿನ ಚೀಟಿ, ಇತರೆ ಗುರುತಿನ ಚೀಟಿಗಳ ಜಿರಾಕ್ಸ ಪ್ರತಿ ಹಾಗೂ ಮೂಲ ದಾಖಲಾತಿಗಳು, ಇತ್ತೀಚಿನ ಭಾವಚಿತ್ರದ ಫೋಟೋಗಳನ್ನು ಲಗತ್ತಿಸಿ ಸಲ್ಲಿಸಬೇಕು. ತಮ್ಮ ಹೆಸರು ನೋಂದಣಿಗಾಗಿ ಜಿಲÁ್ಲ ಯುವ ಸಮನ್ವಯಾಧಿಕಾರಿಗಳು, ನೆಹರು ಯುವ ಕೇಂದ್ರ ನಂ. 01/886/8213, ವಾಸವಿ ಬಿಡ್ಲಿಂಗ್, ಭಗವತಿ ನಗರ, ಸಂಗಮೇಶ್ವರ ಆಸ್ಪತ್ರೆ ಹಿಂದುಗಡೆ, ಎಂ.ಎಸ್.ಕೆ.ಮಿಲ್ ರೋಡ, ಕಲಬುರಗಿ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-248528ನ್ನು ಸಂಪರ್ಕಿಸಲು ಕೋರಲಾಗಿದೆ
ಮರು ಮೌಲ್ಯಮಾಪನ: ಎಸ್.ಎಸ್.ಎಲ್.ಸಿ. ಟಾಪರ್ಸ್‍ನಲ್ಲಿ ಬದಲಾವಣೆ
ಕಲಬುರಗಿ,ಸೆ.05.(ಕ.ವಾ.)-ಕಳೆದ ಮಾರ್ಚ್/ಏಪ್ರಿಲ್-2017ರ ಮಾಹೆಯಲ್ಲಿ ಜರುಗಿದ 2016-17ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ ಮೂರು ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ 3 ಹೆಚ್ಚು ಅಂಕ ಪಡೆಯುವುದರ ಮೂಲಕ ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಕುಮಾರಿ ಶ್ರೀರಕ್ಷಾ ಶೇಷಮೂರ್ತಿ ಅವಧಾನಿ ಎರಡನೇ ಸ್ಥಾನದ ವಿದ್ಯಾರ್ಥಿಯಾಗಿ ಸೇರ್ಪಡೆಗೊಂಡಿರುತ್ತಾರೆ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ್ ತಿಳಿಸಿದ್ದಾರೆ.
ಜಿಲ್ಲೆಯ ಪರಿಷ್ಕøತ ಟಾಪರ್ಸ್ ಪಟ್ಟಿ ವಿವರ ಇಂತಿದೆ:- ಕಲಬುರಗಿಯ ಚಂದ್ರಕಾಂತ ಪಾಟೀಲ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸೋನಾಲಿ ದೇವಾನಂದ ಬಿರಾದಾರ್ ಅವರು ಗರಿಷ್ಠ 625 ಅಂಕಗಳ ಪೈಕಿ 624 ರಷ್ಟು ಅಂಕ ಪಡೆದು (ಪ್ರತಿಶತ 99.84ರಷ್ಟು) ಪ್ರಥಮ ಸ್ಥಾನದಲ್ಲಿದ್ದಾರೆ. ಕಲಬುರಗಿ ನ್ಯೂ ನೋಬಲ್ ಬಾಲಕಿಯರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸೈಯಿದಾ ನಾಯಿಮಾ ಟಸ್ಕಿನ್ ಸೈಯದ್ ಅಬ್ದುಲ್ ಖಯ್ಯೂಮ್ ಹಾಗೂ ಕಲಬುರಗಿ ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಶ್ರೀರಕ್ಷಾ ಶೇಷಮೂರ್ತಿ ಅವಧಾನಿ ಅವರು ತಲಾ ಗರಿಷ್ಠ 625 ಅಂಕಗಳ ಪೈಕಿ 620 ಅಂಕ (ಪ್ರತಿಶತ 99.20 ರಷ್ಟು) ಪಡೆದು ದ್ವಿತೀಯ ಸ್ಥಾನದಲ್ಲಿರುತ್ತಾರೆ. ಕಲಬುರಗಿ ಎಸ್.ಆರ್.ಎನ್. ಮೆಹತಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಹರ್ಷ ಮರೆಪ್ಪ ಅವರು ಗರಿಷ್ಠ 625 ಅಂಕಗಳ ಪೈಕಿ 618 ಅಂಕ (ಪ್ರತಿಶತ 98.88 ರಷ್ಟು) ಪಡೆದು ತೃತೀಯ ಸ್ಥಾನದಲ್ಲಿದ್ದಾರೆ ಎಂದು ಉಪನಿರ್ದೇಶಕರು ಸಪಷ್ಠಪಡಿಸಿದ್ದಾರೆ.
ಆಳಂದ ಪಟ್ಟಣದಲ್ಲಿ ಗ್ರಾಹಕರಿಗೆ ಆಹಾರ ಸಂರಕ್ಷಣೆ-ಗುಣಮಟ್ಟ ಬಗ್ಗೆ ತಿಳುವಳಿಕೆ
ಕಲಬುರಗಿ,ಸೆ.05.(ಕ.ವಾ.)-ಆಳಂದ ತಾಲೂಕು ಆಹಾರ ಸುರಕ್ಷತಾಧಿಕಾರಿ ಪಿ.ಪಿ. ನಾಯಕÀ ಅವರು ಸೋಮವಾರ ಆಳಂದ ಪಟ್ಟಣದ ಆಹಾರ ಸುರಕ್ಷತಾ ಕಾಯ್ದೆ ಅನ್ವಯ ಆಹಾರ ತಯಾರಿಕಾ ಘಟಕಗಳಾದ ಹೊಟೇಲ್, ದಾಬಾ, ರೇಸ್ಟೊರೆಂಟ್, ಬೇಕರಿ ಹಾಗೂ ಇತರೆ ಮಳಿಗೆಗಳಿಗೆ ಭೇಟಿ ನೀಡಿ ಸ್ವಚ್ಚತೆ ಹಾಗೂ ನೈರ್ಮಲ್ಯದ ಕುರಿತು ಮಾಲೀಕರಿಗೆ, ಕಾರ್ಮಿಕರಿಗೆ ಹಾಗೂ ಗ್ರಾಹಕರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ತಿಳುವಳಿಕೆ ಮೂಡಿಸಿದರು.
ಇದೇ ಸಂದರ್ಭದಲ್ಲಿ ಅವರು ಹಲವು ಚಹಾ ಅಂಗಡಿಗಳಲ್ಲಿ ಚಹಾಪುಡಿಯನ್ನು ಪರೀಕ್ಷಿಸಲಾಗಿ ನಕಲಿ ಹಾಗೂ ಕೃತಕ ಬಣ್ಣ ಮಿಶ್ರಿತ ಚಹಾಪುಡಿಯನ್ನು ಬಳಕೆ ಮಾಡದಂತೆ ಎಚ್ಚರಿಕೆ ನೀಡಿದರು.
ಬಲಭೀಮೇಶ್ವರ ದೇವಸ್ಥಾನ: ಸ್ಟೇಜ್ ಅಲಂಕಾರ/ಪೆಂಡಲ್ ಹಾಕುವ ಹರಾಜು
ಕಲಬುರಗಿ,ಸೆ.05.(ಕ.ವಾ.)-ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಭೀಮರಾಯನಗುಡಿ (ಅಮಲಾಪುರ) ಗ್ರಾಮದ ಶ್ರೀ ಬಲಭೀಮೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜರುಗುವ ಮದುವೆ, ಇತರೆ ಸಮಾರಂಭಗಳಿಗೆ ಸ್ಟೇಜ್ ಅಲಂಕಾರ ಮತ್ತು ಪೆಂಡಾಲ್ ಹಾಕುವ ಹರಾಜು ಪ್ರಕ್ರಿಯೆಯು ಸೆಪ್ಟೆಂಬರ್ 13ರಂದು ಬೆಳಿಗ್ಗೆ 11.30ಗಂಟೆಗೆ ಶಹಾಪುರ ತಹಶೀಲ್ದಾರರ ಕಾರ್ಯಾಲಯದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಕಾರ್ಯದರ್ಶಿಗಳಾಗಿರುವ ಶಹಾಪುರ ತಹಶೀಲ್ದಾರ್ ಅವರು ತಿಳಿಸಿದ್ದಾರೆ.
ಹರಾಜಿನಲ್ಲಿ ಭಾಗವಹಿಸುವವರು ಸರಿಯಾದ ಸಮಯಕ್ಕೆ 25 ಸಾವಿರ ರೂ.ಗಳ ಠೇವಣಿ ಇಟ್ಟು ಭಾಗವಹಿಸಬೇಕು. ಹರಾಜಿನ ನಂತರ 3 ದಿನದೊಳಗಾಗಿ ಹರಾಜಿನ ಪೂರ್ತಿ ಹಣವನ್ನು ತುಂಬಬೇಕು. ತಪ್ಪಿದ್ದಲ್ಲಿ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡು ಪುನಃ ಹರಾಜನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಕೋಟ್ಪಾ ಕಾಯ್ದೆ ಕಾರ್ಯಾಚರಣೆ: 1000 ರೂ. ದಂಡ
ಕಲಬುರಗಿ,ಸೆ.05.(ಕ.ವಾ.)-ಜಿಲ್ಲೆಯಲ್ಲಿ ಕೋಟ್ಪಾಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಷ್ಟೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ತಂಬಾಕು ನಿಷೇಧ ಕೋಶದಡಿ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ|| ಶಿವಶರಣಪ್ಪ ನೇತೃತ್ವದಲ್ಲಿ ಸಮೀಕ್ಷಾಧಿಕಾರಿಗಳ ನೇತೃತ್ವದ ತಂಡವು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಪ್ರಮುಖ ಪಾನ್‍ಶಾಪ್, ಹೋಟೆಲ್ ಹಾಗೂ ಸಾರ್ವಜನಿಕ ಪ್ರದೇಶಗಳಿಗೆ ಭೇಟಿ ನೀಡಿ ಧೂಮಪಾನ ಮಾಡುತ್ತಿರುವ ಹಾಗೂ ನಿಯಮ ಬಾಹಿರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಅಂಗಡಿಗಳಿಗೆ ರೂ.1000 ದಂಡ ವಿಧಿಸಲಾಯಿತು.
ಆಳಂದ ತಾಲೂಕಾ ಆಹಾರ ಸುರಕ್ಷತಾಧಿಕಾರಿ ಪಿ.ಪಿ. ನಾಯಕ ಅವರು ಆಹಾರ ಸುರಕ್ಷತಾ ಕಾಯ್ದೆ ಅನ್ವಯ ಆಹಾರ ತಯಾರಿಕಾ ಘಟಕಗಳಾದ ಹೋಟೆಲ್, ದಾಬಾ, ರೇಸ್ಟೋರೇಂಟ್ ಹಾಗೂ ಬೇಕರಿ ಮಳಿಗೆಗಳಿಗೆ ಭೇಟಿ ನೀಡಿ ಸ್ವಚ್ಚತೆ ಹಾಗೂ ನೈರ್ಮಲ್ಯದ ಕುರಿತು ಮಾಲೀಕರಲ್ಲಿ, ಕಾರ್ಮಿಕರಿಗೆ ಹಾಗೂ ಗ್ರಾಹಕರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ತಿಳುವಳಿಕೆ ನೀಡಿದರು. ಈ ಜಿಲ್ಲಾ ಮಟ್ಟದ ತನಿಖಾ ದಳದಲ್ಲಿ ಜಿಲ್ಲಾ ತಂಬಾಕು ನಿಷೇಧ ಕೋಶದ ಸುಜಾತ ಜೆ. ಪಾಟೀಲ್, ಆಹಾರ ಸುರಕ್ಷತಾಧಿಕಾರಿ ಕಿರಣ ಚಲವಾದಿ, ಹಿರಿಯ ಆರೋಗ್ಯ ಸಹಾಯಕ ಗಣೇಶ ಚಿನ್ನಾಕರ, ಬಸಮ್ಮಾ ಚಿತ್ತರಗಿ ಇತರೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಹೀಗಾಗಿ ಲೇಖನಗಳು NEWS AND PHOTO DATE: 05-09-2017
ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 05-09-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 05-09-2017 ಲಿಂಕ್ ವಿಳಾಸ https://dekalungi.blogspot.com/2017/09/news-and-photo-date-05-09-2017.html
0 Response to "NEWS AND PHOTO DATE: 05-09-2017"
ಕಾಮೆಂಟ್ ಪೋಸ್ಟ್ ಮಾಡಿ