ಶೀರ್ಷಿಕೆ : ಅರಳುತ್ತಿರುವ ಬಾಲ ಪ್ರತಿಭೆ: ಭರತನಾಟ್ಯಕ್ಕೆ ಹೆಜ್ಜೆ ಹಾಕಿದ ಬಿನುಷಾ
ಲಿಂಕ್ : ಅರಳುತ್ತಿರುವ ಬಾಲ ಪ್ರತಿಭೆ: ಭರತನಾಟ್ಯಕ್ಕೆ ಹೆಜ್ಜೆ ಹಾಕಿದ ಬಿನುಷಾ
ಅರಳುತ್ತಿರುವ ಬಾಲ ಪ್ರತಿಭೆ: ಭರತನಾಟ್ಯಕ್ಕೆ ಹೆಜ್ಜೆ ಹಾಕಿದ ಬಿನುಷಾ
MOGERAWORLD TEAM:- ನಮ್ಮಲ್ಲಿ ಮಕ್ಕಳಿಗೆ ಯಾವುದೇ ರೀತಿಯ ಪ್ರತಿಭೆಗಳಿಗೆ ಕೊರತೆಯಿಲ್ಲ. ಸರಿಯಾದ ದಿಕ್ಕಿನಲ್ಲಿ ಬೆಳೆಸಿದರೆ ಅದಕ್ಕೆ ಪೂರಕ ಮಾಹಿತಿ ಕೊಟ್ಟು , ಪ್ರತಿಭೆಯನ್ನು ಬೆಳಕಿಗೆ ತರುವಂತೆ ಪ್ರೇರಣೆ ನೀಡಿ ಪ್ರೋತ್ಸಾಹಿಸಿದರೆ ಪ್ರತಿಭಾವಂತ ಮಕ್ಕಳನ್ನು ತುಂಬಾ ಎತ್ತರಕ್ಕೆ ಬೆಳೆಸಬಹುದು. ಇಂತಹ ಪ್ರತಿಭಾವಂತ ಪುಟ್ಟ ಮಕ್ಕಳಲ್ಲಿ ಹೆತ್ತವರು ದೊಡ್ಡ ಕನಸು ಕಾಣುತ್ತ ನನಸು ಮಾಡಲು ಸಾಧ್ಯವಿದೆ. ಅಂತಹ ಎಳೆಯ ಪ್ರತಿಭೆ ಮೊಗೇರ ಸಮುದಾಯದಲ್ಲಿ ಇರುವುದು ಮತ್ತೊಂದು ಹೆಮ್ಮೆಯ ಸಂಗತಿ. ಕಾಸರಗೋಡು ಜಿಲ್ಲೆಯ ಮುಂಡಿತ್ತಡ್ಕದ ಕುಮಾರಿ ಎಸ್.ಜೆ. ಬಿನುಷಾ ಈಗ ಅರಳುತ್ತಿರುವ ಬಾಲ ಪ್ರತಿಭೆ . ಸುರೇಶ್ ಎಸ್ ಹಾಗೂ ಜಯಶ್ರೀ ದಂಪತಿಗಳ ಏಕೈಕ ಪುತ್ರಿಯಾಗಿರುವ ಬಿನುಷಾ ಪ್ರಸ್ತುತ ಮುಂಡಿತ್ತಡ್ಕದ ಎಸ್ ಎನ್ ಮಂಜಯ್ಯ ಮೆಮೋರಿಯಲ್ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ. ಇವಳ ಆಸಕ್ತಿಯನ್ನು ಕಂಡು ಹೆತ್ತವರು ದೂರದ ಕುಂಬಳೆಯ ವಿದುಷಿ ವಿದ್ಯಾಲಕ್ಷ್ಮಿಯರ ನಾಟ್ಯ ನಿಲಯದಲ್ಲಿ ನಾಲ್ಕು ವರ್ಷಗಳ ಹಿಂದೆ ಭರತನಾಟ್ಯ ತರಗತಿಗೆ ಸೇರಿಸಿದ್ದು,ಅರಳುತ್ತಿರುವ ಪ್ರತಿಭೆಗೆ ಮತ್ತಷ್ಟು ಬಲ ಬಂದಿದೆ. ನನ್ನ ಕಲಾಭಿರುಚಿಯನ್ನು ಅರಿಯುವಂತಹ ಗುರುಗಳು ನನಗೆ ಸಿಕ್ಕಿರುವುದು ಪುಣ್ಯ ಅನ್ನುತ್ತಾಳೆ ಬಿನುಷಾ .
ಮೂರು ವರ್ಷಗಳ ಹಿಂದೆ ಗೆಜ್ಜೆ ಪೂಜೆ ಮಾಡುವ ಮೂಲಕ ಮೊದಲ ಸಾರ್ವಜನಿಕ ಕಾರ್ಯಕ್ರಮ ನೀಡಿದ ಈಕೆ ಈಗ ಅನಿಯಮಿತ ಕಾರ್ಯಕ್ರಮಗಳನ್ನು ನೀಡಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಕುಮಾರ ಮಂಗಲ ಬೇಳ, ಸೋಮೇಶ್ವರ, ಬೇಂಗಪದವು, ಮುಳ್ಳೇರಿಯ, ಬಾಯಾರು ಪಂಚಲಿಂಗೇಶ್ವರ, ನೀರ್ಚಾಲ್ ಮುಂತಾದ ಕಡೆಗಳಲ್ಲಿ ಕಾರ್ಯಕ್ರಮ ನೀಡಿ ಗುರುಗಳಿಂದ ಹಾಗೂ ಸಾರ್ವಜನಿಕರಿಂದ ಭೇಷ್ ಅನಿಸಿಕೊಂಡಿದ್ದಾಳೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಸಿಕೊಟ್ಟ ಕಾರ್ಯಕ್ರಮ ಮರೆಯಲಾರದ್ದು ಅಂತ ಹೇಳುವ ಬಿನುಷಾ ಪೂಜ್ಯ ಪೇಜಾವರ ಸ್ವಾಮಿಗಳಿಂದ ಪ್ರಶಂಸಾ ಪತ್ರ ಪಡೆದಿರುವುದು ಖುಷಿ ತಂದಿದೆ ಅನ್ನುತ್ತಾಳೆ.ಶಾಲಾ ಪಠ್ಯದಲ್ಲೂ ಚುರುಕಾಗಿರುವ ವಿದ್ಯಾರ್ಥಿನಿಯಾಗಿರುವ ದಿನುಷಾ ಶಾಲಾ ವಾರ್ಷಿಕೋತ್ಸವದಲ್ಲಿ ಭರತನಾಟ್ಯ ಹಾಗೂ ಇನ್ನಿತರ ನೃತ್ಯ ಕಾರ್ಯಕ್ರಮದಲ್ಲಿ ಬಹುಮಾನ ಪಡೆದಿದ್ದಾಳೆ.
ಹೀಗಾಗಿ ಲೇಖನಗಳು ಅರಳುತ್ತಿರುವ ಬಾಲ ಪ್ರತಿಭೆ: ಭರತನಾಟ್ಯಕ್ಕೆ ಹೆಜ್ಜೆ ಹಾಕಿದ ಬಿನುಷಾ
ಎಲ್ಲಾ ಲೇಖನಗಳು ಆಗಿದೆ ಅರಳುತ್ತಿರುವ ಬಾಲ ಪ್ರತಿಭೆ: ಭರತನಾಟ್ಯಕ್ಕೆ ಹೆಜ್ಜೆ ಹಾಕಿದ ಬಿನುಷಾ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಅರಳುತ್ತಿರುವ ಬಾಲ ಪ್ರತಿಭೆ: ಭರತನಾಟ್ಯಕ್ಕೆ ಹೆಜ್ಜೆ ಹಾಕಿದ ಬಿನುಷಾ ಲಿಂಕ್ ವಿಳಾಸ https://dekalungi.blogspot.com/2017/09/blog-post_97.html
0 Response to "ಅರಳುತ್ತಿರುವ ಬಾಲ ಪ್ರತಿಭೆ: ಭರತನಾಟ್ಯಕ್ಕೆ ಹೆಜ್ಜೆ ಹಾಕಿದ ಬಿನುಷಾ"
ಕಾಮೆಂಟ್ ಪೋಸ್ಟ್ ಮಾಡಿ