ಶೀರ್ಷಿಕೆ : ಈರುಳ್ಳಿ ಬೆಳೆಯಲ್ಲಿ ನುಸಿ ಬಾಧೆ ನಿವಾರಣೆ ಹಾಗೂ ಪೋಷಕಾಂಶಗಳ ನಿರ್ವಹಣೆ : ರೈತರಿಗೆ ಸಲಹೆಗಳು
ಲಿಂಕ್ : ಈರುಳ್ಳಿ ಬೆಳೆಯಲ್ಲಿ ನುಸಿ ಬಾಧೆ ನಿವಾರಣೆ ಹಾಗೂ ಪೋಷಕಾಂಶಗಳ ನಿರ್ವಹಣೆ : ರೈತರಿಗೆ ಸಲಹೆಗಳು
ಈರುಳ್ಳಿ ಬೆಳೆಯಲ್ಲಿ ನುಸಿ ಬಾಧೆ ನಿವಾರಣೆ ಹಾಗೂ ಪೋಷಕಾಂಶಗಳ ನಿರ್ವಹಣೆ : ರೈತರಿಗೆ ಸಲಹೆಗಳು
ಕೊಪ್ಪಳ ಸೆ. 07 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನಲ್ಲಿ ಈರುಳ್ಳಿ ಬೆಳೆಗೆ ಥ್ರಿಪ್ಸ್ ನುಸಿ ಬಾಧೆ ಕಂಡುಬಂದಿದ್ದು, ಇದರ ನಿವಾರಣೆ ಹಾಗೂ ಈರುಳ್ಳಿ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಗೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.
ಕೊಪ್ಪಳ ತಾಲೂಕು ವದಗನಾಳ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಈರುಳ್ಳಿಯನ್ನು ಸಾಕಷ್ಟು ಪ್ರದೇಶದಲ್ಲಿ ಬೆಳೆಯುತ್ತಿದ್ದು, ಈರುಳಿ ಬೆಳೆಯು ಥ್ರಿಪ್ಸ್ ನುಸಿ ಬಾಧೆಗೆ ಹಾನಿಯಾಗಿರುವುದು ಕಂಡುಬಂದಿರುತ್ತದೆ. ಥ್ರಿಪ್ಸ್ ನುಸಿಗಳು ಎಲೆಯ ಮೇಲೆ ಹೆಚ್ಚಾಗಿ ಕಂಡುಬರುತ್ತವೆ. ಎಲೆಗಳ ಸುಳಿಯಲ್ಲಿ ಮತ್ತು ಎಲೆಗಳ ಕೆಳಗೆ ಕುಳಿತು ರಸ ಹೀರುತ್ತವೆ. ಅಂತಹ ಸ್ಥಳದಲ್ಲಿ ಬಿಳಿಯಾದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ನಂತರ ತುದಿಯಿಂದ ಒಣಗುತ್ತವೆ. ಇದರ ನಿಯಂತ್ರಣಕ್ಕೆ, ಬಿತ್ತಿದ ಮೂರು ವಾರಗಳ ನಂತರ 0.3 ಮಿಲಿ ಇಮಿಡಾಕ್ಲೋಪ್ರಿಡ್ ಅಥವಾ 1.75 ಮಿಲಿ ಡೈಮಿಥೋಯೇಟ್ 30 ಇ.ಸಿ. ಅಥವಾ 0.5 ಮಿಲಿ. ಫಾಸ್ಮಾಮಿಡಾನ್ 85 ಡಬ್ಲ್ಯೂ ಎಸ್.ಸಿ. ಅಥವಾ 1.3 ಮಿಲಿ. ಆಕ್ಸಿಡೆಮೆಟಾನ್ ಮಿಥೈಲ್ 1 ಲೀ. ನೀರಿನಲ್ಲಿ ಕರಗಿಸಿ ಸಿಂಪಡಣೆ ಮಾಡಬೇಕು. ಬಿತ್ತನೆಯಾದ 6 ವಾರಗಳ ನಂತರ ಮೇಲೆ ಸೂಚಿಸಿದಂತಹ ಸಿಂಪಡಣೆಯನ್ನು 1 ಹೆಕ್ಟೇರ್ ಗೆ 360 ಲೀಟರ್ ಸಿಂಪಡಣಾ ದ್ರಾವಣ ಬಳಸಬೇಕು. ಬಿತ್ತನೆಯಾದ 9 ಮತ್ತು 11 ವಾರಗಳ ನಂತರ 450 ಲೀಟರ್ ಸಿಂಪಡಣಾ ದ್ರಾವಣವನ್ನು ಬಳಸಬೇಕು.
ಈರುಳ್ಳಿಯಲ್ಲಿ ಎಲೆ ಕತ್ತರಿಸುವ ಹುಳ ಬಾಧೆಯ ನಿಯಂತ್ರಣಕ್ಕೆ ಕ್ಲೋರೋಪ್ಯಾರಿಫಾಸ್ 20 ಇ.ಸಿ.ಯನ್ನು ಅಥವಾ ಕ್ವಿನಾಲ್‍ಫಾಸ್ 25 ಇ.ಸಿ. ಯನ್ನು 2 ಮಿಲಿರಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಗಿಡದ ಸುತ್ತಲೂ ತೋಯಿಸಬೇಕು.
ಈರುಳ್ಳಿಯಲ್ಲಿ ಪೋಷÀಕಾಂಶಗಳ ನಿರ್ವಹಣೆಗೆ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರ, ಹೇಸರಘಟ್ಟ, ಬೆಂಗಳೂರು ಇವರ ಸಂಶೋಧನೆಯಿಂದ ಬಿಡುಗಡೆ ಮಾಡಿರುವ ಅರ್ಕಾ ತರಕಾರಿ ಸ್ಪೆಷಲ್ ಅನ್ನು ಸಸಿ ನಾಟಿ ಮಾಡಿದ 30 ದಿನಗಳ ನಂತರ ಅಥವಾ ನೇರವಾಗಿ ಬಿತ್ತನೆ ಮಾಡಿದಂತಹ ಬೆಳೆಗೆ 45 ದಿನಗಳ ನಂತರ ಪ್ರತಿ ಲೀಟರ್ ನೀರಿಗೆ 5 ಗ್ರಾಂ ನಂತೆ ಬೆರೆಸಿ ಸಿಂಪಡಣೆ ಮಾಡಬೇಕು ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ಶಿಫಾರಸ್ಸು ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ತಜ್ಞ ಪ್ರದೀಪ ಬಿರಾದರ್ 9743064405 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಈರುಳ್ಳಿ ಬೆಳೆಯಲ್ಲಿ ನುಸಿ ಬಾಧೆ ನಿವಾರಣೆ ಹಾಗೂ ಪೋಷಕಾಂಶಗಳ ನಿರ್ವಹಣೆ : ರೈತರಿಗೆ ಸಲಹೆಗಳು
ಎಲ್ಲಾ ಲೇಖನಗಳು ಆಗಿದೆ ಈರುಳ್ಳಿ ಬೆಳೆಯಲ್ಲಿ ನುಸಿ ಬಾಧೆ ನಿವಾರಣೆ ಹಾಗೂ ಪೋಷಕಾಂಶಗಳ ನಿರ್ವಹಣೆ : ರೈತರಿಗೆ ಸಲಹೆಗಳು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಈರುಳ್ಳಿ ಬೆಳೆಯಲ್ಲಿ ನುಸಿ ಬಾಧೆ ನಿವಾರಣೆ ಹಾಗೂ ಪೋಷಕಾಂಶಗಳ ನಿರ್ವಹಣೆ : ರೈತರಿಗೆ ಸಲಹೆಗಳು ಲಿಂಕ್ ವಿಳಾಸ https://dekalungi.blogspot.com/2017/09/blog-post_87.html
0 Response to "ಈರುಳ್ಳಿ ಬೆಳೆಯಲ್ಲಿ ನುಸಿ ಬಾಧೆ ನಿವಾರಣೆ ಹಾಗೂ ಪೋಷಕಾಂಶಗಳ ನಿರ್ವಹಣೆ : ರೈತರಿಗೆ ಸಲಹೆಗಳು"
ಕಾಮೆಂಟ್ ಪೋಸ್ಟ್ ಮಾಡಿ