ಶೀರ್ಷಿಕೆ : ಮುಗೆರ್ಲೆ ಕೋಲ ಮತ್ತು ಮಂಜದ ಬಗ್ಗೆ ಗೊತ್ತಾ?
ಲಿಂಕ್ : ಮುಗೆರ್ಲೆ ಕೋಲ ಮತ್ತು ಮಂಜದ ಬಗ್ಗೆ ಗೊತ್ತಾ?
ಮುಗೆರ್ಲೆ ಕೋಲ ಮತ್ತು ಮಂಜದ ಬಗ್ಗೆ ಗೊತ್ತಾ?
MOGERA WORLD NEWS:- ಮುಗೆರ್ಲೆಕೋಲವು ವರ್ಷಕೊಮ್ಮೆ ಗ್ರಾಮ ಮಟ್ಟದಲ್ಲಿ ನಡೆಯುವಸಾರ್ವತ್ರಿಕ ಆರಾಧನೆಯಾಗಿದೆ. ಈ ಕೋಲವನ್ನು ನಲಿಕೆಜಾತಿಯವರು ಕಟ್ಟುತ್ತಾರೆ. ಮುಗೇರರ ಆರಾಧನೆಯಲ್ಲಿ ಎರಡುವಿಧ ಕಳ ಮತ್ತು ಕೊಟ್ಯ. ಕಳದಲ್ಲಿ ಹೆಚ್ಚಾಗಿ ಪರಿವಾರ ದೈವಗಳ ಸಮೇತಕಲ್ಲುಗಳನ್ನು ಪ್ರತಿಷ್ಠಾಪಿಸಿರುತ್ತದೆ.ಇಲ್ಲಿ 3,5,7 ಅಥವಾ 10 ಕಲ್ಲುಗಳಿರುತ್ತವೆ. ದೈವಗಳ ಆಯುಧಗಳು ಕಾಪಾಡನಮನೆಯಲ್ಲಿರುತ್ತದೆ. ಕೊಟ್ಯದಲ್ಲಿ ಮುಗೇರ ದೈವಗಳ ಭಂಡಾರಇರುತ್ತದೆ. ಪೂರ್ವದಲ್ಲಿ 33 ಕಳ 66 ಕೊಟ್ಯ ತುಳುನಾಡಿನಲ್ಲಿಇತ್ತು ಎಂಬುದಾಗಿ ಭಾವಿಸಲಾಗಿದೆ. ಮುಗೇರರ ಕುಲ ದೈವಗಳಾದಮುದ್ದಕಳಲರು ಮುಗೇರ ಜಾತಿಯಲ್ಲಿ ಹುಟ್ಟಿಬೆಳೆದು ಅಪ್ರತಿಮ ಸಾಹಸವನ್ನು ಮರೆದುಅಕಾಲಿಕ ಮರಣಕ್ಕೆ ಮೋಸದಿಂದ ತುತ್ತಾದಅವಳಿ ವೀರರು. ಅವರ ತಂಗಿತನ್ನಿ ಮಾನಿಗ ಭಾವ ನಾರಾಂಬೋಡಿಕಳಲ. ತುಳುನಾಡಿನ ಬಡಗು ಭಾಗದಲ್ಲಿ ಎಣ್ಮೂರುದೈಯು ಮತ್ತು ತನ್ನಿಮಾನಿಗ ಅವಳಿಗಳಾಗಿದ್ದುತನ್ನಿ ಮಾನಿಗನ ಗಂಡ ಕೇಲತ್ತಪೆರ್ನ ಆರಾಧನೆಯಲ್ಲಿ ಕಂಡು ಬರುವ ದೈಯುಕೆಡೆಂಜು ಬೇರೆಯೆ ತಾಯಿ ಮಗಎಂಬುದಾಗಿ ನಂಬಲಾಗುತ್ತದೆ. ಮುಗೇರರಆರಾಧನೆಯಲ್ಲಿ ಕಂಡು ಬರುವ ವ್ಯತ್ಯಾಸಗಳುಸಂಪರ್ಕದ ಕೊರತೆಯಿಂದ ಕಾಲದ ಪ್ರಾದೇಶಿಕ ವ್ಯತ್ಯಾಸಗಳೆಂದು ಹೇಳಬಹುದು. ಮುಗೇರದೈವಗಳಿಗೆ ಮಂಜ ಕೊಡುವ ವಿಶೇಷಆರಾಧನೆ ಇದೆ. ಇದನ್ನು ಜಾತಿಯವರೆಲ್ಲ ಸೇರಿಕೊಂಡುಸಂಕ್ರಾಂತಿ ದಿನದಂದು ಕಳ ಅಥವಾಕೊಟ್ಯದ ಎದುರು ಮಾಡುತ್ತಾರೆ. ಇದನ್ನು ಕುಟುಂಬ ಮಟ್ಟದಲ್ಲೂ ಮಾಡುವುದಿದೆ.
ಬೇರೆ ಜಾತಿಯವರು ಹರಕೆಯಾಗಿ ಸಲ್ಲಿಸುವ ಮಂಜವನ್ನು ಹರಕೆ ಕೊಡುವವರ ಅಂಗಳದಲ್ಲೇ ಮಾಡಲಾಗುತ್ತದೆ. ಮಂಜಕ್ಕೆ ಅಕ್ಕಿಯನ್ನು ಹುರಿದು ,ತಿಂಗಿನಕಾಯಿ ಹೋಳುಗಳು ಮತ್ತು ಮೀನು ಅಥವಾ ಕೋಳಿ ಇಲ್ಲವೆ ಬೇಟೆಯ ಮಾಂಸದ ಪದಾರ್ಥಗಳನ್ನು ಬಡಿಸಿ ಎಡೆ ಹಾಕಲಾಗುತ್ತದೆ. ದೊಣ್ಣೆಯಲ್ಲಿ (ಬಾಳೆ ಎಳೆಯಲ್ಲಿ ಬಾಡಿಸಿ ತೆಂಗಿನಗರಿಯಿಂದ ಚುಚ್ಚಿ ದೋಣಿ ಆಕಾರದಲ್ಲಿ ಮಾಡಿದ್ದು )ಶೇಂದಿಯನ್ನು ಇಡಲಾಗುತ್ತದೆ. ದೈವಗಳ ಆಯುಧಗಳನ್ನಿಟ್ಟು ಪ್ರಾರ್ಥಿಸಿಕೊಳ್ಳಲಾಗುತ್ತದೆ.ಕೆಲವೊಮ್ಮೆ ಪಾತ್ರಿ ಮೂಲಕ ದರ್ಶನ ಬರಿಸುವ ರೂಢಿಯೂ ಇದೆ. ವರ್ಷಕ್ಕೆ ಒಂದಾವರ್ತಿ ಕುಟುಂಬದವರೆಲ್ಲಾ ಸೇರಿಕೊಂಡು ಕುಟುಂಬದ ದೈವಗಳಿಗೆ ತಂಬಿಲ ಕೊಡುವ ಕ್ರಮ ಇದೆ. ಇದಕ್ಕೆ ಕೋಳಿ ,ತೆಂಗಿನಕಾಯಿ, ಅಕ್ಕಿ, ದುಡ್ಡು ಇತ್ಯಾದಿ ವಂತಿಕೆ ರೂಪದಲ್ಲಿ ಸಮಪಾಲು ಕೊಡಬೇಕಾಗುತ್ತದೆ.ಕೋಲವನ್ನು ಕೂಡಾ ಇದೇ ರೀತಿ ವಂತಿಗೆಯಿಂದ ಭರಿಸಿ ಕೊಡುವುದುದೆ ಹೆಚ್ಚಾಗಿ ಗುಳಿಗ ಕಲ್ಲುರ್ಟಿ, ಪಂಜುರ್ಲಿ ಕುಟುಂಬದ ದೈವಗಳಾಗಿವೆ. ಮೇಲ್ವರ್ಗದವರು.ತಿರುಪತಿಗೆ ಮುಡಿಪು ಕಟ್ಟುವುದಾದರೆ ಮುಗೇರರು ಧರ್ಮಸ್ಥಳಕ್ಕೆ ಮುಡಿಪು ಕಟ್ಟುತ್ತಾರೆ.ಈ ಆರಾಧನೆಗಳು ಗ್ರಾಮ ಹಾಗೂ ಕುಟುಂಬದದ ಕ್ಷೇಮವನ್ನು ಬಯಸುವ ಸಾಮೂಹಿಕ ಪ್ರಾರ್ಥನೆಯಾಗಿದೆ.
ಮುಗೆರ್ಲೆ ಕೋಲ ಮತ್ತು ಮಂಜದ ಮಾಹಿತಿ
ಡಾ.ಕೊಯಿರಾ ಎನ್.ಬಾಳೆಪುಣಿ ಅವರು ಬರೆದಿರುವ ಮುಗೇರರ ದುಡಿ ಕುಣಿತಗಳು ಸ್ವರೂಪ ಮತ್ತು ಸಂಸ್ಕೃತಿ ಪುಸ್ತಕದಿಂದ)
ಮೊಗೇರ ಕೊಟ್ಯ ಮತ್ತು ಮೊಗೇರ ಕಳ ಬಗ್ಗೆ ತಿಳಿಯಿರಿ.
| ಮೊಗೇರ ರ ಮಂಜದಲ್ಲಿ ದುಡಿಯ ಬಳಕೆ |
ಮುಗೆರ್ಲೆ ಕೋಲ ಮತ್ತು ಮಂಜದ ಮಾಹಿತಿ
ಡಾ.ಕೊಯಿರಾ ಎನ್.ಬಾಳೆಪುಣಿ ಅವರು ಬರೆದಿರುವ ಮುಗೇರರ ದುಡಿ ಕುಣಿತಗಳು ಸ್ವರೂಪ ಮತ್ತು ಸಂಸ್ಕೃತಿ ಪುಸ್ತಕದಿಂದ)
ಮೊಗೇರ ಕೊಟ್ಯ ಮತ್ತು ಮೊಗೇರ ಕಳ ಬಗ್ಗೆ ತಿಳಿಯಿರಿ.
ಹೀಗಾಗಿ ಲೇಖನಗಳು ಮುಗೆರ್ಲೆ ಕೋಲ ಮತ್ತು ಮಂಜದ ಬಗ್ಗೆ ಗೊತ್ತಾ?
ಎಲ್ಲಾ ಲೇಖನಗಳು ಆಗಿದೆ ಮುಗೆರ್ಲೆ ಕೋಲ ಮತ್ತು ಮಂಜದ ಬಗ್ಗೆ ಗೊತ್ತಾ? ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮುಗೆರ್ಲೆ ಕೋಲ ಮತ್ತು ಮಂಜದ ಬಗ್ಗೆ ಗೊತ್ತಾ? ಲಿಂಕ್ ವಿಳಾಸ https://dekalungi.blogspot.com/2017/09/blog-post_4.html
0 Response to "ಮುಗೆರ್ಲೆ ಕೋಲ ಮತ್ತು ಮಂಜದ ಬಗ್ಗೆ ಗೊತ್ತಾ?"
ಕಾಮೆಂಟ್ ಪೋಸ್ಟ್ ಮಾಡಿ