ರೈತರ ಬೆನ್ನೆಲಬು ಮುರಿಯೋದನ್ನ ತಡೆದ ಸಾಲಮನ್ನಾ : ಫಲಾನುಭವಿಯ ಮನದಾಳ ಮಾತು

ರೈತರ ಬೆನ್ನೆಲಬು ಮುರಿಯೋದನ್ನ ತಡೆದ ಸಾಲಮನ್ನಾ : ಫಲಾನುಭವಿಯ ಮನದಾಳ ಮಾತು - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ರೈತರ ಬೆನ್ನೆಲಬು ಮುರಿಯೋದನ್ನ ತಡೆದ ಸಾಲಮನ್ನಾ : ಫಲಾನುಭವಿಯ ಮನದಾಳ ಮಾತು, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ರೈತರ ಬೆನ್ನೆಲಬು ಮುರಿಯೋದನ್ನ ತಡೆದ ಸಾಲಮನ್ನಾ : ಫಲಾನುಭವಿಯ ಮನದಾಳ ಮಾತು
ಲಿಂಕ್ : ರೈತರ ಬೆನ್ನೆಲಬು ಮುರಿಯೋದನ್ನ ತಡೆದ ಸಾಲಮನ್ನಾ : ಫಲಾನುಭವಿಯ ಮನದಾಳ ಮಾತು

ಓದಿ


ರೈತರ ಬೆನ್ನೆಲಬು ಮುರಿಯೋದನ್ನ ತಡೆದ ಸಾಲಮನ್ನಾ : ಫಲಾನುಭವಿಯ ಮನದಾಳ ಮಾತು



ಕೊಪ್ಪಳ ಸೆ. 22 (ಕರ್ನಾಟಕ ವಾರ್ತೆ) ರೈತರ ಬೆನ್ನಲಬು ಮುರಿಯೋದನ್ನ ತಡೆದಿದ್ದು, ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯಾಗಿದೆ ಎಂದು ಸಹಕಾರಿ ಸಂಘದಲ್ಲಿ ತಾನು ಪಡೆದ ಸಾಲ ಮನ್ನಾ ಆದ ಫಲಾನುಭವಿಯಾದ ಕೊಪ್ಪಳ ಜಿಲ್ಲೆಯ ಮಂಗಳೂರು ಗ್ರಾಮದ ರೈತ ನಿಂಗಪ್ಪ ಕಿನ್ನಾಳ ಅವರು ತಮ್ಮ ಮನದಾಳ ಮಾತನ್ನು ಹೇಳಿದರು.

    ಕೊಪ್ಪಳ ಜಿಲ್ಲಾಡಳಿತ ಹಾಗೂ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಹಯೋಗದಲ್ಲಿ ಕರ್ನಾಟಕ ಸರ್ಕಾರ ಕೊಪ್ಪಳ ಜಿಲ್ಲೆಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ/ ಉದ್ಘಾಟನೆ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶದಲ್ಲಿ ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯ ಫಲಾನುಭವಿಯಾಗಿ ರೈತ ನಿಂಗಪ್ಪ ಕಿನ್ನಾಳ ಅವರು ಮಾತನಾಡಿದರು.  

    ನಾನು ಸೊಸೈಟಿಯಲ್ಲಿ 20,000 ರೂ. ಗಳನ್ನು ಸಾಲ ಪಡೆದು ನನ್ನ ಹೊಲದಲ್ಲಿ ಉಳಿಮೆ ಮಾಡಿದ್ದೆ.  ಈ ಸಾಲವನ್ನು ನನಗೆ ತೀರಿಸಲು ಆಗಲಿಲ್ಲ.  ಏಕೇಂದರೆ ಸತತ 02 ವರ್ಷ ತೀವ್ರ ಬರಗಾಲದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮಳೆ ಬಾರದೇ ಇರುವ ಕಾರಣ ಬೆಳೆ ಸಂಪೂರ್ಣ ನಾಶಗೊಂಡು ಸಂಕಷ್ಟಕ್ಕೆ ಸಿಲುಕಿದ್ದೆ.  ಈ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವು ಸೂಸೈಟಿಗಳಲ್ಲಿ 50,000 ಗಳ ವರೆಗಿನ ಸಾಲವನ್ನು ಮನ್ನಾ ಮಾಡಿದ್ದು, ನಾನು ಮಾಡಿದ ಸಾಲವೂ ಮನ್ನಾ ಆಗಿದ್ದರಿಂದ ಸರ್ಕಾರದ ಈ  ಸಾಲಮನ್ನಾ ಯೋಜನೆ ನಮ್ಮಂತಹ ರೈತರ ಬೆನ್ನೆಲಬನ್ನು ಮುರಿಯೋದನ್ನು ತಡೆದಿದೆ. 
    “ಕ್ಷೀರಭಾಗ್ಯ” ಯೋಜನೆ ನಮಗೆ ಬಹಳ ಉಪಯೋಗವಾಗಿದೆ.  ನಮ್ಮ ಮನೆಯಲ್ಲಿ ಬಡತನ ಇರುವುದರಿಂದ ಸರಿಯಾದ ಸಮಯದಲ್ಲಿ ಊಟಮಾಡಲು ಆಗುತ್ತಿರಲಿಲ್ಲ.  ಶಾಲೆಗೆ ಬಂದಾಗ ಹಸಿವು ತಾಳಲಾರದೆ ಊಟದ ಸಮಯ ಯಾವಾಗ ಆಗುತ್ತದೆ ಎಂದು ಕಾಯುತ್ತಿದ್ದೆವು.  ಸರ್ಕಾರದ “ಕ್ಷೀರಭಾಗ್ಯ” ಯೋಜನೆಯಲ್ಲಿ ನಮಗೆ ಹಾಲು ಕೊಡುವುದರಿಂದ ನಮಗೆ ಹಸಿವು ತಡೆಯಲು ಅನುಕೂಲವಾಗಿದೆ.  ಮೊದಲು ವಾರದಲ್ಲಿ ಮೂರು ದಿನ ಹಾಲು ಕೊಡುತ್ತಿದ್ದರು.  ಈಗ ವಾರದಲ್ಲಿ 05 ದಿನ ಹಾಲು ಕೊಡುತ್ತಿದ್ದಾರೆ.  ವಾರದ ಆರೂ ದಿನಗಳಲ್ಲಿ ಹಾಲು ಸಿಕ್ಕರೆ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ಕ್ಷೀರಭಾಗ್ಯ ಯೋಜನೆಯ ಬಗ್ಗೆ   ಕೊಪ್ಪಳ ಸರ್ಕಾರಿ ಶಾಲೆಯ ವಿದ್ಯಾರ್ಥಿ ಐಶ್ವರ್ಯ ಸಮಾರಂಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದಳು.
    “ಅನ್ನಭಾಗ್ಯ” ಯೋಜನೆ ನಮಗೆ ಬಹಳ ಉಪಯೋಗವಾಗಿದೆ.  ಮಗ ಮನೆ ಬಿಟ್ಟು ಹೋಗಿದ್ದು, ಮನೆಯಲ್ಲಿ ದುಡಿಯೋರು ಯಾರೂ ಇಲ್ಲ.  ನಾನು ಮತ್ತು ನಮ್ಮ ತಾಯಿ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಸಹೋದರ ಸೇರಿದಂತೆ ನಮ್ಮ ಕುಟುಂಬವೀಗ ಅನ್ನಭಾಗ್ಯ ಯೋಜನೆಯಿಂದ ಬರುವ ಆಹಾರ ಪದಾರ್ಥಗಳಿಂದ ಜೀವನ ಸಾಗಿಸುತ್ತಿದ್ದೇವೆ.  ತೋಗರಿಬೆಳೆ ಅಂಗಡಿಗಳಲ್ಲಿ 70 ರಿಂದ 80 ರೂ. ಗಳಿಗೆ ಸಿಗುತ್ತಿದ್ದು, ನಮಗೆ ಈ ಯೋಜನೆಯಲ್ಲಿ ಕೇವಲ 38 ರೂ. ಗಳಿಗೆ ಸಿಗುತ್ತಿದೆ ಎಂದು ಕೊಪ್ಪಳ ತಾಲೂಕಿನ ಭಾಗ್ಯನಗರದ ನೀಲಮ್ಮ ಅವರು ಅನ್ನಭಾಗ್ಯ ಯೋಜನೆಯ ಬಗ್ಗೆ ತಮ್ಮ ಮನದಾಳ ಮಾತುಗಳನ್ನು ಆಡಿದರು. 
       ಅನ್ನಭಾಗ್ಯ, ಕ್ಷೀರಭಾಗ್ಯ ಹಾಗೂ ಸಾಲ ಮನ್ನಾ ಯೋಜನೆಯ ಬಗ್ಗೆ ಕಿರು ರೂಪಕ ಪ್ರದರ್ಶನ ಏರ್ಪಡಿಸಲಾಗಿತ್ತು.  ಈ ಸಂದರ್ಭದಲ್ಲಿ ಪ್ರತಿ ಯೋಜನೆಗೊಬ್ಬರು ಫಲಾನುಭವಿಗಳು ಯೋಜನೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಗಿತ್ತು.  ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು, ಫಲಾನುಭವಿಗಳು ವ್ಯಕ್ತಪಡಿಸಿದ ಅನಿಸಿಕೆಗಳನ್ನು ಆಲಿಸಿದರು, ಬಳಿಕ ತಮ್ಮ ಭಾಷಣ ಸಂದರ್ಭದಲ್ಲಿ ಫಲಾನುಭವಿಗಳ ಅನಿಸಿಕೆಗಳನ್ನು ಪ್ರಸ್ತಾಪಿಸಿದರು. 
        ಸಮಾರಂಭದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಸಚಿವ ಆರ್.ವಿ. ದೇಶಪಾಂಡೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಶಾಸಕರುಗಳಾದ ರಾಘವೇಂದ್ರ ಹಿಟ್ನಾಳ್, ಶಿವರಾಜ ಎಸ್ ತಂಗಡಗಿ, ದೊಡ್ಡನಗೌಡ ಪಾಟೀಲ್, ಇಕ್ಬಾಲ್ ಅನ್ಸಾರಿ, ವಿಧಾನಪರಿಷತ್ ಸದಸ್ಯರಾದ ಬಸವರಾಜ ಪಾಟೀಲ್ ಇಟಗಿ, ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ್, ಸಂಸದ ಕರಡಿ ಸಂಗಣ್ಣ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.


ಹೀಗಾಗಿ ಲೇಖನಗಳು ರೈತರ ಬೆನ್ನೆಲಬು ಮುರಿಯೋದನ್ನ ತಡೆದ ಸಾಲಮನ್ನಾ : ಫಲಾನುಭವಿಯ ಮನದಾಳ ಮಾತು

ಎಲ್ಲಾ ಲೇಖನಗಳು ಆಗಿದೆ ರೈತರ ಬೆನ್ನೆಲಬು ಮುರಿಯೋದನ್ನ ತಡೆದ ಸಾಲಮನ್ನಾ : ಫಲಾನುಭವಿಯ ಮನದಾಳ ಮಾತು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ರೈತರ ಬೆನ್ನೆಲಬು ಮುರಿಯೋದನ್ನ ತಡೆದ ಸಾಲಮನ್ನಾ : ಫಲಾನುಭವಿಯ ಮನದಾಳ ಮಾತು ಲಿಂಕ್ ವಿಳಾಸ https://dekalungi.blogspot.com/2017/09/blog-post_26.html

Subscribe to receive free email updates:

0 Response to "ರೈತರ ಬೆನ್ನೆಲಬು ಮುರಿಯೋದನ್ನ ತಡೆದ ಸಾಲಮನ್ನಾ : ಫಲಾನುಭವಿಯ ಮನದಾಳ ಮಾತು"

ಕಾಮೆಂಟ್‌‌ ಪೋಸ್ಟ್‌ ಮಾಡಿ