ಶೀರ್ಷಿಕೆ : ತೋಟಗಾರಿಕೆಯಲ್ಲಿ ಕೃಷಿಭಾಗ್ಯ : ಅರ್ಜಿ ಆಹ್ವಾನ
ಲಿಂಕ್ : ತೋಟಗಾರಿಕೆಯಲ್ಲಿ ಕೃಷಿಭಾಗ್ಯ : ಅರ್ಜಿ ಆಹ್ವಾನ
ತೋಟಗಾರಿಕೆಯಲ್ಲಿ ಕೃಷಿಭಾಗ್ಯ : ಅರ್ಜಿ ಆಹ್ವಾನ
ಕೊಪ್ಪಳ ಸೆ. 23 (ಕರ್ನಾಟಕ ವಾರ್ತೆ): ಕೃಷಿಭಾಗ್ಯ ಯೋಜನೆಯನ್ನು ಸದ್ಯ ತೋಟಗಾರಿಕೆ ಇಲಾಖೆಗೂ ವಿಸ್ತರಿಸಲಾಗಿದ್ದು, ಪಾಲಿಹೌಸ್, ನೆರಳು ಪರದೆ, ಮತ್ತಿತರೆ ಸೌಲಭ್ಯ ಪಡೆಯಲು ಸಹಾಯಧನ ನೀಡಲಾಗುತ್ತಿದ್ದು, ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿಭಾಗ್ಯ ಯೋಜನೆಯಡಿ ಪಾಲಿಹೌಸ್, ನೆರಳು ಪರದೆ, ಪಾಲಿಹೌಸ್‍ನಲ್ಲಿ ನೀರು ಸಂಗ್ರಹಣಾ ಘಟಕದಲ್ಲಿ ಬಳಸಲು ಡೀಸೆಲ್/ಸೋಲಾರ್ ಮೋಟಾರ್ ಮತ್ತು ಕೃಷಿಹೊಂಡ ಘಟಕಗಳನ್ನು ನಿರ್ಮಿಸಿಕೊಳ್ಳಲು ಸಾಮಾನ್ಯ ರೈತರಿಗೆ ಶೇ.50 ರಂತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಶೇ.90% ರವರೆಗೆ ಸಹಾಯಧನ ನೀಡಲಾಗುತ್ತದೆ. ಈ ಘಟಕಗಳನ್ನು ಅನುಷ್ಠಾನಗೊಳಿಸಲು ಸರ್ಕಾರದಿಂದ ಅನುಮೋದಿತ ಸರಬರಾಜುದಾರರನ್ನು ನೇಮಿಸಿರುತ್ತಾರೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 19 ಕೊನೆಯ ದಿನವಾಗಿರುತ್ತದೆ.
ಆಸಕ್ತ ರೈತರು ಯೋಜನೆ ಕುರಿತು ಆಯಾ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಕೇಂದ್ರ ಕಛೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ .ಸಿ. ಉಕ್ಕುಂದ – 08539-231530, ಕೇಂದ್ರ ಸ್ಥಾನಿಯ ಸಹಾಯಕರು ತೋಟಗಾರಿಕೆ ಉಪನಿರ್ದೇಶಕ ಶಿವಯೋಗಪ್ಪ – 9743518608, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳಾದ ಕೊಪ್ಪಳ ನಜೀರ್ ಅಹ್ಮದ್ ಸೋಂಪೂರ – 8861294104, ಕುಷ್ಟಗಿ ಕೆ.ರಮೇಶ್ – 8310291867, ಗಂಗಾವತಿಯ ವಂಕಾ ದುರ್ಗಾ ಪ್ರಸಾದ್ – 8861697989, ಯಲಬುರ್ಗಾ ಮಂಜುನಾಥ ಲಿಂಗಣ್ಣನವರ – 9900929063 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ತೋಟಗಾರಿಕೆಯಲ್ಲಿ ಕೃಷಿಭಾಗ್ಯ : ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ತೋಟಗಾರಿಕೆಯಲ್ಲಿ ಕೃಷಿಭಾಗ್ಯ : ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ತೋಟಗಾರಿಕೆಯಲ್ಲಿ ಕೃಷಿಭಾಗ್ಯ : ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/09/blog-post_25.html
0 Response to "ತೋಟಗಾರಿಕೆಯಲ್ಲಿ ಕೃಷಿಭಾಗ್ಯ : ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ