ಶೀರ್ಷಿಕೆ : ತೊಗರಿ ಅಧಿಕ ಇಳುವರಿ ಪಡೆಯಲು ಕುಡಿ ಚಿವುಟುವ ಪದ್ಧತಿ : ಕೃಷಿ ವಿವಿ ಸಂಶೋಧನೆ
ಲಿಂಕ್ : ತೊಗರಿ ಅಧಿಕ ಇಳುವರಿ ಪಡೆಯಲು ಕುಡಿ ಚಿವುಟುವ ಪದ್ಧತಿ : ಕೃಷಿ ವಿವಿ ಸಂಶೋಧನೆ
ತೊಗರಿ ಅಧಿಕ ಇಳುವರಿ ಪಡೆಯಲು ಕುಡಿ ಚಿವುಟುವ ಪದ್ಧತಿ : ಕೃಷಿ ವಿವಿ ಸಂಶೋಧನೆ
ಕೊಪ್ಪಳ ಸೆ. 11 (ಕರ್ನಾಟಕ ವಾರ್ತೆ): ರಾಯಚೂರಿನ ಕೃಷಿ ವಿಶ್ವವಿದ್ಯಾಲಯವು ತೊಗರಿ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಲು ನೂತನ ಸಂಶೋಧನೆಯನ್ನು ಮಾಡಿದ್ದು, ತೊಗರಿ ಗಿಡವು ಸುಮಾರು 40 ರಿಂದ 50 ದಿನಗಳ ಬೆಳೆ ಇದ್ದಾಗ ಗಿಡದ ಕುಡಿ ಚಿವುಟುವ ಮೂಲಕ ಗಿಡವು ಸಂವೃದ್ಧವಾಗಿ ಬೆಳೆದು, ಹೆಚ್ಚು ಕೊಂಬೆಗಳು ಮೂಡುವುದರಿಂದ ಅಧಿಕ ಇಳುವರಿಯನ್ನು ಪಡೆಯುವ ಸುಧಾರಿತ ಪದ್ಧತಿಯನ್ನು ರೈತರಿಗೆ ಪರಿಚಯಿಸಿದೆ.
ಕಲಬುರ್ಗಾ ತಾಲ್ಲೂಕಿನ ಸುಲ್ತಾನ್‍ಪುರದ ರೈತ ಶರಣಪ್ಪ ಪಾಟೀಲ (9900438541) ಅವರು ಸ್ಪ್ರೇಯರ್ ತುದಿಗೆ ಬ್ಲೇಡ್‍ಗಳನ್ನು ಅಳವಡಿಸಿ ಕುಡಿ ಕಟಾವು ಯಂತ್ರವನ್ನು ಸಂಶೋಧಿಸಿದ್ದಾರೆ. ಈ ಯಂತ್ರವು ಕಡಿಮೆ ಅವಧಿ ಹಾಗೂ ಕಡಿಮೆ ಖರ್ಚಿನಲ್ಲಿ ಅಧಿಕ ಕೆಲಸ ಮಾಡುತ್ತದೆ. ಬೆಳೆಯ ತುದಿ ಕಟಾವು ಮಾಡುವುದರಿಂದ ಗಿಡದ ಬೆಳವಣಿಗೆ ಕಡಿಮೆಯಾಗಿ, ಟೊಂಗೆಗಳು ಹೆಚ್ಚಾಗುತ್ತವೆ. ಅದರಿಂದ ಇಳುವರಿ ಹೆಚ್ಚಾಗುತ್ತದೆ. ಬೆಳೆಯ ಕುಡಿ ಕಟಾವು ಮಾಡಲು ಆಳುಗಳನ್ನು ಬಳಸಿಕೊಂಡರೆ ಅಧಿಕ ಆರ್ಥಿಕ ಹೊರೆ ಹಾಗೂ ಸರಿಯಾದ ಪದ್ಧತಿಯಲ್ಲಿ ಕಟಾವು ಮಾಡುವುದಿಲ್ಲ. ಈ ಸುಲಭ ಯಂತ್ರವನ್ನು ಬಳಸಿಕೊಂಡರೆ ಸಮಯ ಉಳಿಯುತ್ತದೆ. ಯಂತ್ರವನ್ನು ಸಿದ್ಧಗೊಳಿಸಲು ಕೇವಲ 1500 ರೂ. ಬೇಕಾಗುತ್ತದೆ. ಅದರಿಂದ ದಿನಕ್ಕೆ 5 ಎಕರೆ ಕುಡಿ ಕಟಾವು ಮಾಡಬಹುದು. ಯಂತ್ರವು ಬ್ಯಾಟರಿ ಚಾಲಿತವಾಗಿದ್ದು, ಒಮ್ಮೆ ಬ್ಯಾಟರಿಯನ್ನು ಸಂಪೂರ್ಣ ಚಾರ್ಜ್ ಮಾಡಿದರೆ 5 ಗಂಟೆ ಬಳಸಬಹುದು. ಈ ಯಂತ್ರವನ್ನು ಔಷಧಿ ಸಿಂಪರಣೆಗೂ ಬಳಸಬಹುದಾಗಿದೆ.
ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ಕಳೆದ ವರ್ಷ ಈ ಯಂತ್ರದದಿಂದ ತೊಗರಿ ಗಿಡದ ಕುಡಿ ಚಿವುಟುವ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಇದರ ಸದುಪಯೋಗವನ್ನು ಕೊಪ್ಪಳದ ರೈತರಿಗೆ ಪ್ರಥಮ ಬಾರಿಗೆ ಪರಿಚಯಿಸಿದ್ದು ಉತ್ತಮ ಇಳುವರಿ ಬಂದಿರುತ್ತದೆ. ಆದ್ದರಿಂದ ಈ ಬಾರಿಯೂ ರೈತರು ತೊಗರಿ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಲು ಗಿಡದ ಕುಡಿ ಚಿವುಟುವ ಪದ್ಧತಿಯನ್ನು ಕೈಗೊಳ್ಳಬೇಕೆಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ವಿಸ್ತರಣಾ ಮುಂದಾಳು ರವರು ಸಲಹೆ ನೀಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 08539-220305 ಹಾಗೂ ಮೊಬೈಲ್ 9480696319 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ತೊಗರಿ ಅಧಿಕ ಇಳುವರಿ ಪಡೆಯಲು ಕುಡಿ ಚಿವುಟುವ ಪದ್ಧತಿ : ಕೃಷಿ ವಿವಿ ಸಂಶೋಧನೆ
ಎಲ್ಲಾ ಲೇಖನಗಳು ಆಗಿದೆ ತೊಗರಿ ಅಧಿಕ ಇಳುವರಿ ಪಡೆಯಲು ಕುಡಿ ಚಿವುಟುವ ಪದ್ಧತಿ : ಕೃಷಿ ವಿವಿ ಸಂಶೋಧನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ತೊಗರಿ ಅಧಿಕ ಇಳುವರಿ ಪಡೆಯಲು ಕುಡಿ ಚಿವುಟುವ ಪದ್ಧತಿ : ಕೃಷಿ ವಿವಿ ಸಂಶೋಧನೆ ಲಿಂಕ್ ವಿಳಾಸ https://dekalungi.blogspot.com/2017/09/blog-post_11.html
0 Response to "ತೊಗರಿ ಅಧಿಕ ಇಳುವರಿ ಪಡೆಯಲು ಕುಡಿ ಚಿವುಟುವ ಪದ್ಧತಿ : ಕೃಷಿ ವಿವಿ ಸಂಶೋಧನೆ"
ಕಾಮೆಂಟ್ ಪೋಸ್ಟ್ ಮಾಡಿ