ಸೆ. 22 ರಂದು ಕೊಪ್ಪಳದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ಸಮಾರಂಭಕ್ಕೆ ಆಗಮಿಸುವ ಬಸ್ ಸಂಚಾರ ಮಾರ್ಗ ಹಾಗೂ ಪಾರ್ಕಿಂಗ್ ವ್ಯವಸ್ಥೆ

ಸೆ. 22 ರಂದು ಕೊಪ್ಪಳದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ಸಮಾರಂಭಕ್ಕೆ ಆಗಮಿಸುವ ಬಸ್ ಸಂಚಾರ ಮಾರ್ಗ ಹಾಗೂ ಪಾರ್ಕಿಂಗ್ ವ್ಯವಸ್ಥೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಸೆ. 22 ರಂದು ಕೊಪ್ಪಳದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ಸಮಾರಂಭಕ್ಕೆ ಆಗಮಿಸುವ ಬಸ್ ಸಂಚಾರ ಮಾರ್ಗ ಹಾಗೂ ಪಾರ್ಕಿಂಗ್ ವ್ಯವಸ್ಥೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಸೆ. 22 ರಂದು ಕೊಪ್ಪಳದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ಸಮಾರಂಭಕ್ಕೆ ಆಗಮಿಸುವ ಬಸ್ ಸಂಚಾರ ಮಾರ್ಗ ಹಾಗೂ ಪಾರ್ಕಿಂಗ್ ವ್ಯವಸ್ಥೆ
ಲಿಂಕ್ : ಸೆ. 22 ರಂದು ಕೊಪ್ಪಳದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ಸಮಾರಂಭಕ್ಕೆ ಆಗಮಿಸುವ ಬಸ್ ಸಂಚಾರ ಮಾರ್ಗ ಹಾಗೂ ಪಾರ್ಕಿಂಗ್ ವ್ಯವಸ್ಥೆ

ಓದಿ


ಸೆ. 22 ರಂದು ಕೊಪ್ಪಳದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ಸಮಾರಂಭಕ್ಕೆ ಆಗಮಿಸುವ ಬಸ್ ಸಂಚಾರ ಮಾರ್ಗ ಹಾಗೂ ಪಾರ್ಕಿಂಗ್ ವ್ಯವಸ್ಥೆ


ಕೊಪ್ಪಳ ಸೆ. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿನ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ಸೆ. 22 ರಂದು ಕೊಪ್ಪಳದಲ್ಲಿ ನೆರವೇರಿಸಲಿದ್ದು, ಈ ಸಮಾರಂಭಕ್ಕೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸರ್ಕಾರಿ ಯೋಜನೆಗಳ ಫಲಾನುಭವಿಗಳು ಬಸ್ ಹಾಗೂ ವಿವಿಧ ವಾಹನಗಳಲ್ಲಿ ಆಗಮಿಸಲಿದ್ದು, ವಾಹನಗಳ ಸಂಚಾರ ಹಾಗೂ ಪಾರ್ಕಿಂಗ್‍ಗಾಗಿ ಕೊಪ್ಪಳದಲ್ಲಿ ಅಗತ್ಯ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. 
         ಈಲ್ಲೆಯ ವಿವಿಧ ತಾಲೂಕುಗಳಿಂದ ಸೆ. 22 ರಂದು ಕೊಪ್ಪಳದಲ್ಲಿ ಜರುಗುವ ಸಮಾರಂಭಕ್ಕೆ ಆಗಮಿಸುವ ಬಸ್‍ಗಳ ಸಂಚಾರಮಾರ್ಗ ಹಾಗೂ ಈ ವಾಹನಗಳಿಗೆ ಪಾರ್ಕಿಂಗ್‍ಗಾಗಿ ಕೈಗೊಂಡಿರುವ ಸ್ಥಳದ ವಿವರ ಈ ಕೆಳಗಿನಂತಿದೆ.
ಕುಷ್ಟಗಿ : ಕುಷ್ಟಗಿ ತಾಲೂಕಿನ ಹನಮನಾಳ, ಹನಮಸಾಗರ, ಚಳಗೇರಿ, ಕೊರಡಕೇರಾ, ಹಿರೇಮನ್ನಾಪುರ, ಯರಗೇರಾ ಮತ್ತು ಮೆಣದಾಳ ಜಿ.ಪಂ. ಕ್ಷೇತ್ರಗಳಿಂದ ಬರುವ ಬಸ್‍ಗಳು ಕುಷ್ಟಗಿ, ಎನ್.ಹೆಚ್-50 ಮಾರ್ಗವಾಗಿ ಬೂದಗುಂಪಾ ಕ್ರಾಸ್ ಗಿಣಿಗೇರಿ ಬೈಪಾಸ್ ರಸ್ತೆ ಮುಖಾಂತರ ಸಮಾರಂಭ ಸ್ಥಳಕ್ಕೆ ಬರಬೇಕು  ಈ ವಾಹನಗಳಿಗೆ ಕೊಪ್ಪಳ ಹೊಸಪೇಟೆ ರಸ್ತೆ ಹಾಲವರ್ತಿ ಕ್ರಾಸ್ ಹತ್ತಿರ ಓಲ್ಡ್ ಡೆಮೊಲೆಶನ್ ಬಿಲ್ಡಿಂಗ್ ರೈಲ್ವೇ ಟ್ರ್ಯಾಕ್ ಸೈಡ್, ಹೊಸಪೇಟ್ ರವರ ಹೊಲದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.    
ಕೊಪ್ಪಳ : ಕೊಪ್ಪಳ ತಾಲೂಕಿನ ಅಳವಂಡಿ, ಹಿರೇಸಿಂದೋಗಿ ಮತ್ತು ಗೊಂಡಬಾಳ ಜಿ.ಪಂ. ಕ್ಷೇತ್ರಗಳಿಂದ ಬರುವ ಬಸ್‍ಗಳು ಸಿಂದೋಗಿ-ಕೊಪ್ಪಳ ರಸ್ತೆ ಮುಖಾಂತರ ಬೈಪಾಸ್ ಹೊಸ ರಸ್ತೆ ಮೂಲಕ ಆಗಮಿಸಬೇಕು.  ಈ ವಾಹನಗಳಿಗೆ ಹೊಸ ಫೋರ್ ವೇ, ಬೈ ಪಾಸ್ ರಸ್ತೆಯ ಬಲಬದಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.  ಲೇಬಗೇರಿ ಮತ್ತು ಇರಕಲ್ಲಗಡ ಜಿ.ಪಂ. ಕ್ಷೇತ್ರಗಳಿಂದ ಬರುವ ಬಸ್‍ಗಳು ಕೊಪ್ಪಳ-ಕುಷ್ಟಗಿ ರಸ್ತೆ, ಹಟ್ಟಿ ಕ್ರಾಸ್, ಕಾಮನೂರ ಕ್ರಾಸ್, ಭೀಮನೂರ ಗಿಣಿಗೇರಿ ಬೈಪಾಸ ರಸ್ತೆ ಮುಖಾಂತರ.  ಬಂಡಿಹರ್ಲಾಪುರ ಜಿ.ಪಂ. ಕ್ಷೇತ್ರದಿಂದ ಬರುವ ಬಸ್‍ಗಳು ಹಿಟ್ನಾಳ್ ಕ್ರಾಸ್, ಎನ್.ಹೆಚ್-63 ಗಿಣಿಗೇರಿ ಬೈಪಾಸ ರಸ್ತೆ ಮುಖಾಂತರ.  ಹಿಟ್ನಾಳ ಕ್ಷೇತ್ರದಿಂದ ಬರುವ ಬಸ್‍ಗಳು ಸಿಮ್ಲಾ ಟೋಲ್ ಗೇಟ್ ಎನ್.ಹೆಚ್-63 ಗಿಣಗೇರಿ ಬೈಪಾಸ್ ರಸ್ತೆ ಮುಖಾಂತರ.  ಗಿಣಿಗೇರಿ ಕ್ಷೇತ್ರದಿಂದ ಬರುವ ಬಸ್‍ಗಳು ಎನ್.ಹೆಚ್-63 ಗಿಣಿಗೇರಿ ಬೈಪಾಸ್ ರಸ್ತೆ ಮುಖಾಂತರ ಸಮಾರಂಭ ಸ್ಥಳಕ್ಕೆ ಆಗಮಿಸಬೇಕು.  ಈ ವಾಹನಗಳಿಗೆ ಕೊಪ್ಪಳ ಹೊಸಪೇಟೆ ರಸ್ತೆಯ ಹಾಲವರ್ತಿ ಕ್ರಾಸ್ ಹತ್ತಿರ ಇರುವ ಗವಿ ಕನಸ್ಟ್ರಕ್ಷನ್ ಕಂಪನಿಯ ಜಾಗೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.
ಗಂಗಾವತಿ : ಗಂಗಾವತಿ ತಾಲೂಕಿನ ಆನೆಗುಂದಿ, ಮರಳಿ, ಸಿದ್ದಾಪುರ, ಹೆರೂರ, ಹುಲಿಹೈದರ, ನವಲಿ, ಯರಡೋಣ ಮತ್ತು ಚಿಕ್ಕಮಾದಿನಾಳ ವೆಂಕಟಗಿರಿ ಜಿ.ಪಂ. ಕ್ಷೇತ್ರಗಳಿಂದ ಬರುವ ಬಸ್‍ಗಳು ಕೊಪ್ಪಳ-ಗಂಗಾವತಿ ಎಸ್.ಹೆಚ್-23 ಮಾರ್ಗವಾಗಿ ಬೂದಗುಂಪಾ ಕ್ರಾಸ್ ಎನ್.ಹೆಚ್-63 ಗಿಣಿಗೇರಿ ಬೈಪಾಸ್ ರಸ್ತೆ ಮುಖಾಂತರ ಸಮಾರಂಭ ಸ್ಥಳಕ್ಕೆ ಆಗಮಿಸಬೇಕು.  ಈ ವಾಹನಗಳಿಗೆ ಎನ್.ಹೆಚ್-63 ರಸ್ತೆಯ ಎರಡೂ ಬದಿಯಲ್ಲಿ, ಹಳ್ಳಕ್ಕೆ ಹೊಂದಿಕೊಂಡು ಬಲಬದಿಗೆ ಬಸ್ಸುಗಳು ಮತ್ತು ಎಡಬದಿಗೆ ಕಾರು, ಕ್ರಷರ್, ಇತರೆ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.   
ಯಲಬುರ್ಗಾ : ಯಲಬುರ್ಗಾ ತಾಲೂಕಿನ ಹಿರೆವಂಕಲಕುಂಟ ಜಿ.ಪಂ. ಕ್ಷೇತ್ರದಿಂದ ಬರುವ ಬಸ್‍ಗಳು ಎನ್.ಹೆಚ್-50, ಬೂದಗುಂಪಾ ಕ್ರಾಸ್, ಗಿಣಿಗೇರಿ ಬೈಪಾಸ್ ರಸ್ತೆ ಮುಖಾಂತರ.  ಚಿಕ್ಕಮ್ಯಾಗೇರಿ ಮತ್ತು ಮಂಗಳೂರ ಜಿ.ಪಂ. ಕ್ಷೇತ್ರದಿಂದ ಬರುವ ಬಸ್‍ಗಳು ಕೊಪ್ಪಳ-ಕುಷ್ಟಗಿ ರಸ್ತೆ, ಹಟ್ಟಿ ಕ್ರಾಸ್, ಕಾಮನೂರ ಕ್ರಾಸ್, ಭೀಮನೂರ ಗಿಣಿಗೇರಿ ಬೈಪಾಸ ರಸ್ತೆ ಮುಖಾಂತರ ಸಮಾರಂಭ ಸ್ಥಳಕ್ಕೆ ಆಗಮಿಸಬೇಕು. ಈ ವಾಹನಗಳಿಗೆ ಕೊಪ್ಪಳ-ಹೊಸಪೇಟೆ ರಸ್ತೆಯ ಹಾಲವರ್ತಿ ಕ್ರಾಸ್ ಹತ್ತಿರದ ಕೆ.ಕೆ ಸ್ವಾಮಿಯವರ ಫಾರ್ಮ ಹೌಸ್ ಮುಂದೆ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.  ತಳಕಲ್, ಇಟಗಿ, ಮುಧೋಳ, ಕುಕನೂರ ಕ್ಷೇತ್ರಗಳಿಂದ ಮತ್ತು ಯಲಬುರ್ಗಾದಿಂದ ಬರುವ ಬಸ್‍ಗಳು ಯಲಬುರ್ಗಾ-ಕೊಪ್ಪಳ ರಸ್ತೆಯ ಬಾನಾಪುರ ಕ್ರಾಸ್ ಮುಖಾಂತರ ಎನ್.ಹೆಚ್-63 ಹಲಗೇರಿ, ಗುಳಗಣ್ಣವರ ಕಾಲೇಜ, ಹೊಸ ಬೈಪಾಸ 4ವೇ ರಸ್ತೆ ಮಾರ್ಗವಾಗಿ ಸಮಾರಂಭ ಸ್ಥಳಕ್ಕೆ ಆಗಮಿಸಬೇಕು.  ಈ ವಾಹನಗಳಿಗೆ  ಹೊಸ 4ವೇ ಹತ್ತಿರದ ಹೊಸಪೇಟಿಯವರ ಹೊಲ, ಅಗ್ನಿಶಾಮಕ ದಳದ ಕಚೇರಿಗೆ ಹೊಂದಿಕೊಂಡ ಹಿಂದಿನ ಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ. 


ಹೀಗಾಗಿ ಲೇಖನಗಳು ಸೆ. 22 ರಂದು ಕೊಪ್ಪಳದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ಸಮಾರಂಭಕ್ಕೆ ಆಗಮಿಸುವ ಬಸ್ ಸಂಚಾರ ಮಾರ್ಗ ಹಾಗೂ ಪಾರ್ಕಿಂಗ್ ವ್ಯವಸ್ಥೆ

ಎಲ್ಲಾ ಲೇಖನಗಳು ಆಗಿದೆ ಸೆ. 22 ರಂದು ಕೊಪ್ಪಳದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ಸಮಾರಂಭಕ್ಕೆ ಆಗಮಿಸುವ ಬಸ್ ಸಂಚಾರ ಮಾರ್ಗ ಹಾಗೂ ಪಾರ್ಕಿಂಗ್ ವ್ಯವಸ್ಥೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಸೆ. 22 ರಂದು ಕೊಪ್ಪಳದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ಸಮಾರಂಭಕ್ಕೆ ಆಗಮಿಸುವ ಬಸ್ ಸಂಚಾರ ಮಾರ್ಗ ಹಾಗೂ ಪಾರ್ಕಿಂಗ್ ವ್ಯವಸ್ಥೆ ಲಿಂಕ್ ವಿಳಾಸ https://dekalungi.blogspot.com/2017/09/22_21.html

Subscribe to receive free email updates:

0 Response to "ಸೆ. 22 ರಂದು ಕೊಪ್ಪಳದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮ ಸಮಾರಂಭಕ್ಕೆ ಆಗಮಿಸುವ ಬಸ್ ಸಂಚಾರ ಮಾರ್ಗ ಹಾಗೂ ಪಾರ್ಕಿಂಗ್ ವ್ಯವಸ್ಥೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ