ಶೀರ್ಷಿಕೆ : ಕಿನ್ನಾಳದಲ್ಲಿ ಮಿಷನ್ 200 ಅಭಿಯಾನಕ್ಕೆ ಚಾಲನೆ
ಲಿಂಕ್ : ಕಿನ್ನಾಳದಲ್ಲಿ ಮಿಷನ್ 200 ಅಭಿಯಾನಕ್ಕೆ ಚಾಲನೆ
ಕಿನ್ನಾಳದಲ್ಲಿ ಮಿಷನ್ 200 ಅಭಿಯಾನಕ್ಕೆ ಚಾಲನೆ
ಕೊಪ್ಪಳ ಸೆ. 08 (ಕರ್ನಾಟಕ ವಾರ್ತೆ): ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ನಿರ್ಮಿಸಲು ಗ್ರಾಮ ಪಂಚಾಯತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ, “ಮಿಷನ್-200” ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲಾ ಪಂಚಾಯತಿ ಸದಸ್ಯ ಗವಿಸಿದ್ದಪ್ಪ ಕರಡಿ ಅವರು ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೊಪ್ಪಳ ಜಿಲ್ಲಾ ಪಂಚಾಯತಿ ಸದಸ್ಯ ಗವಿಸಿದ್ದಪ್ಪ ಕರಡಿ ಅವರು ಮಾತನಾಡಿ, ಗ್ರಾಮದ ಎಲ್ಲಾ ಕುಟುಂಬಗಳು ತಪ್ಪದೆ ಶೌಚಾಲಯವನ್ನು ಕಟ್ಟಿಸಿಕೊಂಡು ಬಳಸಬೇಕು. ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆ “ಮಿಷನ್-200” ಕಾರ್ಯಕ್ರಮ ಯಶಸ್ವಿಗೊಳಿಸಿ, ಕಿನ್ನಾಳ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿಸಲು ಸಹಕರಿಸಿ ಎಂದು ಗ್ರಾಮಸ್ಥರಿಗೆ ಕರೆ ನೀಡಿದರು. ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಹಾಗೂ ಕಿನ್ನಾಳ ಗ್ರಾ.ಪಂ ಸದಸ್ಯ ಬಸವರಾಜ ಚಿಲವಾಡಗಿ ಮಾತನಾಡಿ, “ಮಿಷನ್-200” ಕಾರ್ಯಕ್ರಮದಡಿ ಕಾರ್ಮಿಕರು ಶೌಚಾಲಯಗಳನ್ನು ನಿರ್ಮಾಣ ಮಾಡುವ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಮಿಷನ್ 200 ಅನ್ನು ಯಶಸ್ವಿಗೊಳಿಸಲು ಸಹಕರಿಸುವಂತೆ ಮನವಿ ಮಾಡಿದರು.
ಕಿನ್ನಾಳ ಗ್ರಾ.ಪಂ ಅಧ್ಯಕ್ಷೆ ಗಂಗಮ್ಮ ಬನ್ನಿಕೊಪ್ಪ, ಎಪಿಎಂಸಿ ಸದಸ್ಯ ಬಸವರಾಜ್, ಪಿ.ಡಿ.ಓ ವೀರನಗೌಡ ಚೆನ್ನವೀರಗೌಡ್ರ, ಕೆ.ಎಂ. ಬಸವರಾಜ್ ಸೇರಿದಂತೆ ಶಾಲಾ/ ಕಾಲೇಜುಗಳ ಮುಖ್ಯಸ್ಥರು, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗ್ರಾ.ಪಂ. ಸರ್ವಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹೀಗಾಗಿ ಲೇಖನಗಳು ಕಿನ್ನಾಳದಲ್ಲಿ ಮಿಷನ್ 200 ಅಭಿಯಾನಕ್ಕೆ ಚಾಲನೆ
ಎಲ್ಲಾ ಲೇಖನಗಳು ಆಗಿದೆ ಕಿನ್ನಾಳದಲ್ಲಿ ಮಿಷನ್ 200 ಅಭಿಯಾನಕ್ಕೆ ಚಾಲನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕಿನ್ನಾಳದಲ್ಲಿ ಮಿಷನ್ 200 ಅಭಿಯಾನಕ್ಕೆ ಚಾಲನೆ ಲಿಂಕ್ ವಿಳಾಸ https://dekalungi.blogspot.com/2017/09/200.html
0 Response to "ಕಿನ್ನಾಳದಲ್ಲಿ ಮಿಷನ್ 200 ಅಭಿಯಾನಕ್ಕೆ ಚಾಲನೆ"
ಕಾಮೆಂಟ್ ಪೋಸ್ಟ್ ಮಾಡಿ