ಶೀರ್ಷಿಕೆ : news and photo datte: 04--08--2017
ಲಿಂಕ್ : news and photo datte: 04--08--2017
news and photo datte: 04--08--2017
ಡೆಂಗ್ಯೂ ನಿಯಂತ್ರಣಕ್ಕೆ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಸೂಚನೆ
**********************************************************************
ಕಲಬುರಗಿ.ಆಗಸ್ಟ್.04.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ಡೆಂಗ್ಯೂ ರೋಗದ ಪ್ರಕರಣಗಳನ್ನು ತಗ್ಗಿಸಲು ಸೊಳ್ಳೆಗಳ ಸಂತಾನೋತ್ಪತ್ತಿ ಮತ್ತು ವಯಸ್ಕ ಸೊಳ್ಳೆಗಳ ನಿಯಂತ್ರಣವೇ ಮಾರ್ಗವಾಗಿದ್ದು, ಮಹಾನಗರ ಪಾಲಿಕೆ ಮತ್ತು ಆರೋಗ್ಯ ಇಲಾಖೆ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಕಲಬುರಗಿ ನಗರದಲ್ಲಿ ಡೆಂಗ್ಯೂ ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೊಳ್ಳೆಗಳ ಸಂತಾನೋತ್ಪತ್ತಿ ತಡೆಗೆ ಆರೋಗ್ಯ ಇಲಾಖೆ, ನಗರದಲ್ಲಿ ಸ್ವಚ್ಛತೆ ಮತ್ತು ಜಾಗೃತಿ ಕಾರ್ಯಕ್ರಮ ಮೂಡಿಸುವಲ್ಲಿ ಮಹಾನಗರ ಪಾಲಿಕೆ ಜವಾಬ್ದಾರಿವಹಿಸಬೇಕೆಂದು ತಿಳಿಸಿದರು.
ಆರೋಗ್ಯ ಇಲಾಖೆಯವರು ಬೂತ ಮಟ್ಟದಲ್ಲಿ ಆರೋಗ್ಯ ಮತ್ತು ಆಶಾ ಕಾರ್ಯಕರ್ತರು, ಮಹಾನಗರ ಪಾಲಿಕೆ ಸಿಬ್ಬಂದಿಗಳನ್ನೊಳಗೊಂಡ ತಂಡಗಳನ್ನು ರಚಿಸಿ ಕಲಬುರಗಿ ನಗರದ ಪ್ರತಿ ಮನೆಗೂ ಭೇಟಿ ನೀಡಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುವ ಸ್ಥಳಗಳನ್ನು ಗುರುತಿಸಿ ಅವುಗಳನ್ನು ನಾಶಪಡಿಸಬೇಕು. ಮನೆಯಲ್ಲಿ ಸಂಗ್ರಹಿಸುವ ಕುಡಿಯುವ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಟೆಮಿಫಾಸ್ ಲಾರ್ವಾ ನಾಶಕವನ್ನು ಸಿಂಪಡಿಸುವಂತೆ ತಿಳಿಸಿದರು.
ವಯಸ್ಕ ಸೊಳ್ಳೆಗಳನ್ನು ನಿಯಂತ್ರಿಸಲು ಮಹಾನಗರ ಪಾಲಿಕೆ ಮತ್ತು ಆರೋಗ್ಯ ಇಲಾಖೆಯಿಂದ ವಾರ್ಡ್‍ವಾರು ಧೂಮೀಕರಣ ಹಮ್ಮಿಕೊಳ್ಳಬೇಕು. ಮಹಾನಗರ ಪಾಲಿಕೆಯವರು ನಗರದ ಒಂದು ಮನೆಯನ್ನು ಬೀಡದೇ ಸ್ವಚ್ಛತೆ ಮತ್ತು ಜಾಗೃತಿ ಕೈಗೊಳ್ಳಬೇಕು. ಇದಕ್ಕಾಗಿ ಕ್ರಿಯಾ ಯೋಜನೆ ರೂಪಿಸಬೇಕು. ವೈದ್ಯಕೀಯ, ಎಂ.ಎಸ್.ಡಬ್ಲ್ಯೂ., ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳ ಸಹಾಯ ಪಡೆದು ತಂಡಗಳನ್ನು ರಚಿಸಿ ಈ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚಿಸಿದರು.
ನಗರದಲ್ಲಿರುವ ಹೊಟೇಲ್, ಬೀದಿ ವ್ಯಾಪಾರಿಗಳು ತಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಮಹಾನಗರ ಪಾಲಿಕೆಯ ಸ್ವಚ್ಛತಾ ತಂಡಗಳು ಭೇಟಿ ನೀಡಿದ ಸಂದರ್ಭದಲ್ಲಿ ಸ್ವಚ್ಛತೆ ಕಂಡು ಬರದಿದ್ದರೆ ಅಂಥಹ ಹೊಟೇಲ್ ಮತ್ತು ಬೀದಿ ವ್ಯಾಪಾರಿಗಳಿಗೆ ದಂಡ ವಿಧಿಸಲಾಗುವುದು. ಕಟ್ಟಡ ನಿರ್ಮಾಣ ಸ್ಥಳಗಳಲ್ಲಿಯೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.
ಯಾರಿಗಾದರೂ ಜ್ವರ ಕಂಡು ಬಂದಲ್ಲಿ ಅದು ಡೆಂಗ್ಯೂ ಜ್ವರವೆಂದು ಭಾವಿಸಿ ಸಾರ್ವಜನಿಕರು ಭಯಭೀತರಾಗಬಾರದು. ಆರೋಗ್ಯ ಇಲಾಖೆಯ ಸರ್ವಲೆನ್ಸ್ ಕಚೇರಿಯಲ್ಲಿ ಸ್ಥಾಪಿಸಲಾಗಿರುವ 9449843258 ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿದಲ್ಲಿ ಅಂಥವರ ರಕ್ತ ತಪಾಸಣೆ ಕೈಗೊಂಡು ಚಿಕಿತ್ಸೆ ನೀಡಲಾಗುವುದು. ಕಲಬುರಗಿ ನಗರದಲ್ಲಿರುವ ವೈದ್ಯಕೀಯ ಬೋಧನಾ ಆಸ್ಪತ್ರೆಗಳಲ್ಲಿ ದಾಖಲಾಗುವ ಕಡು ಬಡವರಿಗೆ ಪ್ಲೇಟ್‍ಲೆಟ್ ಅವಶ್ಯಕವಾಗಿ ಬೇಕಾದ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನೀಡುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಶಿವರಾಜ ಸಜ್ಜನಶೆಟ್ಟಿ, ಸರ್ವೇಕ್ಷಣಾ ಅಧಿಕಾರಿ ಡಾ. ಶಿವಶರಣಪ್ಪ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ|| ಬಿ.ಎಸ್. ಗುಳಗಿ, ನಗರ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಮಹಾನಗರ ಪಾಲಿಕೆ ಅಧಿಕಾರಿಗಳು, ಹೊಟೇಲ್ ಸಂಘದ ಪದಾಧಿಕಾರಿಗಳು ಮತ್ತಿತರರು ಹಾಜರಿದ್ದರು.
ಆಹಾರ ಧಾನ್ಯಗಳ ಸೋರಿಕೆ ತಡೆಗೆ ಪಾಸ್ ಯಂತ್ರ ಅಳವಡಿಕೆ
*******************************************************
ಕಲಬುರಗಿ,ಆಗಸ್ಟ್.04.(ಕ.ವಾ.)-ರಾಜ್ಯದಲ್ಲಿ ಸುಮಾರು 20,000 ನ್ಯಾಯಬೆಲೆ ಅಂಗಡಿಗಳಿದ್ದು, ಈ ಪೈಕಿ 7000 ಅಂಗಡಿಗಳಲ್ಲಿ ಪಾಸ್ (Poiಟಿಣ ಔಜಿ Sಚಿಟe) ಯಂತ್ರಗಳನ್ನು ಅಳವಡಿಸಿರುವುದರಿಂದ ಆಹಾರಧಾನ್ಯಗಳ ಸೋರಿಕೆಯಲ್ಲಿ ಶೇ. 10ರಷ್ಟು ಉಳಿತಾಯವಾಗಿದೆ ಎಂದು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ತಿಳಿಸಿದರು.
ಅವರು ಶುಕ್ರವಾರ ಎಸ್.ಬಿ.ಹೆಚ್. ಗಂಜ್ ಕಾಲೋನಿಯ ಪಡಿತರ ಅಂಗಡಿ ಸಂಖ್ಯೆ 189ರಲ್ಲಿ ಪಾಸ್ ಯಂತ್ರದ ಮೂಲಕ ಪಡಿತರ ವಿತರಣೆ ವ್ಯವಸ್ಥೆ ಪರಿಶೀಲಿಸಿ ಮಾತನಾಡಿದರು.
ರಾಜ್ಯದಾದ್ಯಂತ ಈಗಾಗಲೇ ಪಡಿತರ ಚೀಟಿಗಳಿಗೆ ಆಧಾರ್ ಸಂಖ್ಯೆಗಳನ್ನು ನೋಂದಾಯಿಸಲಾಗಿದ್ದು, ಇದರಿಂದ ಆಹಾರ ಧಾನ್ಯ ಸೋರಿಕೆಯಲ್ಲಿ ಶೇ. 15ರಷ್ಟು ಉಳಿಕೆಯಾಗುತ್ತಿತ್ತು. ಈಗ ಪಾಸ್ ಯಂತ್ರ ಅಳವಡಿಸುವುದರಿಂದ ಒಟ್ಟು ಶೇ. 25ರಷ್ಟು ಸೋರಿಕೆ ಉಳಿತಾಯವಾಗಲಿದೆ. ಇದೊಂದು ಕ್ರಾಂತಿಕಾರಿ ಬದಲಾವಣೆಯಾಗಿದೆ ಎಂದು ಅವರು ಹೇಳಿದರು.
ನ್ಯಾಯ ಬೆಲೆ ಅಂಗಡಿಯವರು ಲ್ಯಾಪ್‍ಟಾಪ್ ಅಥವಾ ಡೆಸ್ಕ್‍ಟಾಪ್ ಸಹಾಯದೊಂದಿಗೆ ಪಡಿತರ ಚೀಟಿದಾರರ ಹೆಬ್ಬಟ್ಟಿನ ಗುರುತು ಪಡೆದು ಅಥವಾ ಟ್ಯಾಬ್‍ದಿಂದ ಐರಿಸ್ ಸ್ಕ್ಯಾನ್ ಮಾಡುವ ಮೂಲಕ ಪಡಿತರವನ್ನು ವಿತರಿಸಬಹುದು. ಆಯಾ ತಿಂಗಳು ಪಡಿತರ ಚೀಟಿದಾರರು ಹೆಬ್ಬಟ್ಟಿನ ಗುರುತು ಅಥವಾ ಐರಿಸ್ ಸ್ಕ್ಯಾನ್ ಮಾಡಿದ ತಕ್ಷಣ ಅವರ ಮೊಬೈಲ್‍ಗೆ ತಕ್ಷಣ ಪಡಿತರ ಪ್ರಮಾಣ ಮತ್ತು ದರ ಬಗ್ಗೆ ವಿವರ ದೊರೆಯುತ್ತದೆ. ಇದರಿಂದ ಪಡಿತರ ಚೀಟಿದಾರರಿಗೆ ಸರಿಯಾದ ಪ್ರಮಾಣದಲ್ಲಿ ಪಡಿತರ ದೊರೆಯುತ್ತದೆ. ನ್ಯಾಯ ಬೆಲೆ ಅಂಗಡಿಯವರಿಗೆ ದಾಸ್ತಾನು ವಹಿ ಬರೆಯುವ ಅವಶ್ಯಕತೆ ತಪ್ಪುತ್ತದೆ ಎಂದರು.
ಪಾಸ್ ಯಂತ್ರಗಳನ್ನು ಅಳವಡಿಸಿರುವ ನ್ಯಾಯ ಬೆಲೆ ಅಂಗಡಿಯವರಿಗೆ ಸುಮಾರು ಶೇ. 75ರಷ್ಟು ಕಮಿಷನ್ ದೊರೆಯಲಿದ್ದು, 500 ಪಡಿತರ ಚೀಟಿ ಹೊಂದಿದ ನ್ಯಾಯ ಬೆಲೆ ಅಂಗಡಿಯವರು ಪ್ರತಿ ತಿಂಗಳು ಸುಮಾರು 17,000 ರೂ. ಕಮಿಷನ್ ದೊರೆಯಲಿದೆ. ಈ ಹಿಂದೆ ಅವರಿಗೆ 7000-8000ರೂ. ಕಮಿಷನ್ ದೊರೆಯುತ್ತಿತ್ತು. ಕಾರಣ ಹೈದ್ರಾಬಾದ್ ಕರ್ನಾಟಕ ವಿಭಾಗದ ಎಲ್ಲ ನ್ಯಾಯಬೆಲೆ ಅಂಗಡಿಯವರು ಪಾಸ್ ಯಂತ್ರಗಳನ್ನು ಅಳವಡಿಸಿಕೊಂಡು ಪಡಿತರ ವಿತರಣೆ ಮಾಡುವಂತೆ ಮನವಿ ಮಾಡಿದರು.
ಕಲಬುರಗಿ ಜಿಲ್ಲೆಯ 984 ನ್ಯಾಯಬೆಲೆ ಅಂಗಡಿಗಳ ಪೈಕಿ 142, ಬೀದರ ಜಿಲ್ಲೆಯ 738 ನ್ಯಾಯಬೆಲೆ ಅಂಗಡಿಗಳ ಪೈಕಿ 127, ಯಾದಗಿರಿ ಜಿಲ್ಲೆಯ 400 ನ್ಯಾಯಬೆಲೆಯ ಅಂಗಡಿಗಳ ಪೈಕಿ 128, ರಾಯಚೂರ ಜಿಲ್ಲೆಯ 728 ನ್ಯಾಯ ಬೆಲೆ ಅಂಗಡಿಗಳ ಪೈಕಿ 176, ಬಳ್ಳಾರಿ ಜಿಲ್ಲೆಯ 602 ನ್ಯಾಯಬೆಲೆ ಅಂಗಡಿಗಳ ಪೈಕಿ 256 ಹಾಗೂ ಕೊಪ್ಪಳ ಜಿಲ್ಲೆಯ 442 ನ್ಯಾಯಬೆಲೆ ಅಂಗಡಿಗಳ ಪೈಕಿ 283 ಅಂಗಡಿಗಳಲ್ಲಿ ಪಾಸ್ ಯಂತ್ರಗಳನ್ನು ಅಳವಡಿಸಲಾಗಿದೆ. ಹೈದ್ರಾಬಾದ್ ಕರ್ನಾಟಕ ವಿಭಾಗದಲ್ಲಿ ಈ ತಿಂಗಳು ಅಥವಾ ಮುಂದಿನ ತಿಂಗಳಲ್ಲಿ ಸಂಪೂರ್ಣವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಾಸ್ ಯಂತ್ರಗಳ ಅಳವಡಿಕೆಗೆ ಹಾಗೂ ಎಲ್ಲ ಗ್ರಾಮಗಳಲ್ಲಿ ಇಂಟರ್‍ನೆಟ್ ಸೌಲಭ್ಯ ದೊರಕುವ ಹಾಗೆ ಕ್ರಮ ಜರುಗಿಸಲಾಗುತ್ತಿದೆ ಎಂದರು.
ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಾಸ್ ಯಂತ್ರಗಳು ಅಳವಡಿಸುವುದರಿಂದ ಪಡಿತರ ಚೀಟಿದಾರರು ಯಾವುದೇ ಜಿಲ್ಲೆಯಲ್ಲಿ ಅಥವಾ ತಮಗಿಷ್ಟವಾದ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಧಾನ್ಯಗಳನ್ನು ಪಡೆಯಬಹುದು. ಪ್ರತಿ ನ್ಯಾಯ ಬೆಲೆ ಅಂಗಡಿಗಳಲ್ಲಿ 3 ಜನ ಪಡಿತರ ಚೀಟಿದಾರರಿಗೆ ವಿಜಲನ್ಸ್ ತಂಡದಲ್ಲಿ ಸದಸ್ಯರನ್ನಾಗಿಸಿದ್ದು, ಅವರು ಪಡಿತರ ವಿತರಣೆಯ ಬಗ್ಗೆ ಮೇಲ್ವಿಚಾರಣೆ ಮಾಡುವರು. ಈ ಮೂರು ಜನ ದೂರನ್ನು ನೀಡಿದಲ್ಲಿ ಅಂಥಹ ನ್ಯಾಯ ಬೆಲೆ ಅಂಗಡಿಯನ್ನು ರದ್ದುಗೊಳಿಸಲಾಗುವುದು ಎಂದರು.
ಹೀಗಾಗಿ ಲೇಖನಗಳು news and photo datte: 04--08--2017
ಎಲ್ಲಾ ಲೇಖನಗಳು ಆಗಿದೆ news and photo datte: 04--08--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo datte: 04--08--2017 ಲಿಂಕ್ ವಿಳಾಸ https://dekalungi.blogspot.com/2017/08/news-and-photo-datte-04-08-2017.html
0 Response to "news and photo datte: 04--08--2017"
ಕಾಮೆಂಟ್ ಪೋಸ್ಟ್ ಮಾಡಿ