ಶೀರ್ಷಿಕೆ : NEWS AND PHOTO DATE: 30-08-2017
ಲಿಂಕ್ : NEWS AND PHOTO DATE: 30-08-2017
NEWS AND PHOTO DATE: 30-08-2017
ಹಕ್ಕು ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖ
ಕಲಬುರಗಿ,ಆ.30(ಕ.ವಾ.)-ಸಂವಿಧಾನ ಒದಗಿಸಿರುವ ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಕ್ಕುಗಳನ್ನು ಜಾರಿಗೊಳಿಸಲು ಕರ್ತವ್ಯ ಅವಶ್ಯಕ ಹಾಗೂ ಕರ್ತವ್ಯ ನಿರ್ವಹಿಸಲು ಹಕ್ಕುಗಳು ಅತ್ಯವಶ್ಯಕವಾಗಿವೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್.ಮಾಣಿಕ್ಯ ತಿಳಿಸಿದರು.
ಅವರು ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸಿದ್ದಾರ್ಥ ಕಾನೂನು ಮಹಾವಿದ್ಯಾಲಯ, ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ ಕಲಬುರಗಿ ಹಾಗೂ ಮಾನವ ಹಕ್ಕುಗಳ ಹಿತರಕ್ಷಣಾ ವೇದಿಕೆ ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ ಮಾನವ ಹಕ್ಕುಗಳು ಮತ್ತು ಪೊಲೀಸ್ ದೂರು ಪ್ರಾಧಿಕಾರ ಹಾಗೂ ಆಹಾರ ಸಂರಕ್ಷಣೆ ಮತ್ತು ಗುಣಮಟ್ಟದ ಬಗ್ಗೆ ಆಯೋಜಿಸಿದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೀವನದ ಪ್ರತಿಯೊಂದು ಹಂತದಲ್ಲಿಯೂ ಕಾನೂನಿನ ಅವಶ್ಯಕತೆ ಇದೆ. ಜೀವನ ಸುಗಮ ಹಾಗೂ ಘನತೆಯಿಂದ ನಡೆಸಲು ಎಲ್ಲರೂ ಕಾನೂನುಗಳನ್ನು ಪರಿಪಾಲಿಸಬೇಕು. ಯುವಕರು ನ್ಯಾಯ, ನೀತಿಗಳೆಂಬ ರಾಜಮಾರ್ಗದಲ್ಲಿ ನಡೆಯಬೇಕು. ನ್ಯಾಯಾಧೀಶರು ಮತ್ತು ವಕೀಲರು ನ್ಯಾಯಾಂಗದ ಘನತೆ ಗೌರವ ಕಾಪಾಡಬೇಕು ಎಂದರು.
ವೈದ್ಯಕೀಯ ಮತ್ತು ವಕೀಲಿ ವೃತ್ತಿಗಳು ಸಾರ್ವಜನಿಕರಿಗೆ ಬಹುಪಯೋಗಿ ಆಗಿದ್ದು, ತೊಂದರೆಯಲ್ಲಿರುವವರಿಗೆ ಸಹಾಯನೀಡಿ ಪರಿಹಾರ ದೊರಕಿಸುವ ವೃತ್ತಿಗಳಾಗಿವೆ. ಇವುಗಳನ್ನು ಶ್ರೇಷ್ಠ ವೃತ್ತಿಗಳೆಂದು ಕರೆಯಲಾಗುತ್ತದೆ. ಈ ವೃತ್ತಿಗಳಿಗೆ ಗೌರವ ನೀಡಬೇಕು. ಕಾನೂನು ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಾಗಿ ಕಾನೂನನ್ನು ಓದದೇ ಜ್ಞಾನಕ್ಕಾಗಿ ಓದಿ ಜೀವನಕ್ಕೆ ಉಪಯೋಗವಾಗುವ ಹಾಗೆ ಬಳಿಸಿಕೊಳ್ಳಬೇಕು. ಜ್ಞಾನ ವೃದ್ಧಿ ಮಾಡಿಕೊಂಡು ಸಮಾಜ ಸೇವೆ ಮಾಡಲು ಸದಾ ಸಿದ್ಧರಿರಬೇಕೆಂದು ಕಾನೂನು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನ್ಯಾಯವಾದಿ ಜ್ಯೋತಿ ಕಾಡಾದಿ ಅವರು ಆಹಾರ ಸಂರಕ್ಷಣೆ ಮತ್ತು ಗುಣಮಟ್ಟ ಕಾಯ್ದೆ ಕುರಿತು ಮಾತನಾಡಿ, ಆಹಾರದಲ್ಲಿ ಕಲಬೆರಕೆ ಮತ್ತು ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳು ಮಾರಾಟದಲ್ಲಿರುವುದರಿಂದ ಗ್ರಾಹಕರು ಆಹಾರ ಪದಾರ್ಥಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸಿ ಕೊಂಡುಕೊಳ್ಳಬೇಕು. ಕಲಬೆರಕೆ ಪದಾರ್ಥ ಎಂದು ಕಂಡುಬಂದಲ್ಲಿ ನಗರದಲ್ಲಿರುವ ಆಹಾರ ಪದಾರ್ಥ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಿಸಿ ಜಿಲ್ಲಾ ಆಹಾರ ಸಂರಕ್ಷಣಾಧಿಕಾರಿಗಳಲ್ಲಿ ಅಥವಾ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಬೇಕು. ಮನುಸ್ಮøತಿಯಲ್ಲಿಯೂ ಸಹಿತ ಆಹಾರ ಕಲಬೆರಕೆ ಬಗ್ಗೆ ಪ್ರಾಸ್ತಾಪಿಸಲಾಗಿದೆ. ಇತ್ತೀಚೆಗೆ ಎಲ್ಲ ಆಹಾರ ಪದಾರ್ಥಗಳು ಕಲಬೆರಕೆಯಾಗಿದ್ದು ಇದೊಂದು ಪಿಡುಗಾಗಿ ಪರಿಣಮಿಸಿದೆ. 1954 ರಲ್ಲಿ ಆಹಾರ ಸುರಕ್ಷತೆ ಕಾಯ್ದೆ ಮತ್ತು 7 ಕಾನೂನುಗಳನ್ನು ಜಾರಿಗೊಳಿಸಲಾಯಿತಾದರೂ ಅವುಗಳ ಸಮರ್ಪಕ ಅನುಷ್ಠಾನವಾಗಲಿಲ್ಲ. ಗ್ರಾಹಕರು ಎಚ್ಚೆತ್ತುಕೊಂಡು ಖರೀದಿಸುವ ಎಲ್ಲ ಪದಾರ್ಥಗಳನ್ನು ಕುಲಂಕುಶವಾಗಿ ಪರಿಶೀಲಿಸಿ ಕಲಬೆರಕೆ ಅಥವಾ ಕಳಪೆ ಎಂದು ಕಂಡುಬಂದಲ್ಲಿ ದೂರು ದಾಖಲಿಸಲು ಮರೆಯಬಾರದು ಎಂದು ತಿಳಿಸಿದರು.
ಮಾಹಿತಿ ಹಕ್ಕು ಕಾಯ್ದೆ ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ ಅವರು ಮಾನವ ಹಕ್ಕುಗಳು ಮತ್ತು ಪೊಲೀಸ್ ದೂರು ಪ್ರಾಧಿಕಾರದ ಬಗ್ಗೆ ಮಾತನಾಡಿ, ಮಾನವನು ಗರ್ಭದಲ್ಲಿದ್ದಾಗಿನಿಂದ ಮರಣಾನಂತರವೂ ಸಂವಿಧಾನ ಹಕ್ಕುಗಳನ್ನು ನೀಡಿದೆ. 6 ಮೂಲಭೂತ ಹಕ್ಕುಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಲೇಬೇಕಾಗಿದೆ. ಸಮಾಜದಲ್ಲಿ ಬೇರೆಯವರೊಂದಿಗೆ ವ್ಯವಹರಿಸುವಾಗ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಎಲ್ಲರೂ ಎಚ್ಚರ ವಹಿಸಬೇಕು. ಮಾನವ ಹಕ್ಕುಗಳ ಉಲ್ಲಂಘನೆಯಾದರೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಬೇಕೆಂದರು.
ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಕಾನೂನು ಸಂಚಾಲಕ ಪಿ. ಉಮೇಂದ್ರಾಚಾರ್ಯ ಪಾಲ್ಗೊಂಡಿದ್ದರು. ಕಾನೂನು ವಿದ್ಯಾರ್ಥಿಗಳಾದ ಸಂದೀಪ ಮತ್ತು ಸಂಗಡಿಗರು ಬುದ್ಧ ವಂದನೆಗೈದರು.
ಶಿಕ್ಷಕರ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ
ಕಲಬುರಗಿ.ಆ.30.(ಕ.ವಾ.)-ಕಲಬುರಗಿ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 2017-18ನೇ ಸಾಲಿಗಾಗಿ 6 ರಿಂದ 8ನೇ ತರಗತಿಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಒಟ್ಟು 1153 ಹುದ್ದೆಗಳ ಪೈಕಿ 920 ಹುದ್ದೆಗಳನ್ನು ಹೈದ್ರಾಬಾದ-ಕರ್ನಾಟಕ ಪ್ರದೇಶದ ಸ್ಥಳೀಯ ಅಭ್ಯರ್ಥಿಗಳಿಂದ ಹಾಗೂ ಉಳಿದ ಮೂಲ ವೃಂದದ ವಿವಿಧ ವಿಷಯ ಹಾಗೂ ಮಾಧ್ಯಮದ 233 ಹುದ್ದೆಗಳನ್ನು ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಿಕೊಳ್ಳಲು 2017ರ ಆಗಸ್ಟ್ 24ರಂದು ಎರಡು ಪ್ರತ್ಯೇಕವಾಗಿ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಆಡಳಿತ) ಶಾಂತಗೌಡ ತಿಳಿಸಿದ್ದಾರೆ.
920 ಹುದ್ದೆಗಳನ್ನು ಹೈದ್ರಾಬಾದ-ಕರ್ನಾಟಕ ಪ್ರದೇಶದ ಸ್ಥಳೀಯ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಪ್ರತ್ಯೇಕ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ವಿಷಯವಾರು ಮತ್ತು ಮಾಧ್ಯಮವಾರು ವಿವರ ಇಂತಿದೆ. ಕನ್ನಡ ಮಾಧ್ಯಮದ ಗಣಿತ ಮತ್ತು ವಿಜ್ಞಾನ ವಿಷಯ-291 ಮತ್ತು ಸಮಾಜ ಪಾಠ ವಿಷಯದ 145 ಶಿಕ್ಷಕರು. ಉರ್ದು ಮಾಧ್ಯಮದ ಗಣಿತ ಮತ್ತು ವಿಜ್ಞಾನ ವಿಷಯ-47 ಮತ್ತು ಸಮಾಜ ಪಾಠ ವಿಷಯದ-27 ಶಿಕ್ಷಕರು. ಮರಾಠಿ ಮಾಧ್ಯಮದ ಗಣಿತ ಮತ್ತು ವಿಜ್ಞಾನ ವಿಷಯ-01 ಮತ್ತು ಸಮಾಜ ಪಾಠ ವಿಷಯದ-04 ಶಿಕ್ಷಕರು. ತೆಲಗು ಮಾಧ್ಯಮದ ಗಣಿತ ಮತ್ತು ವಿಜ್ಞಾನ ವಿಷಯ-01 ಮತ್ತು ಸಮಾಜ ಪಾಠ ವಿಷಯದ-02 ಶಿಕ್ಷಕರು. ಆಂಗ್ಲ ಮಾಧ್ಯಮದ 402 ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಸದರಿ ಅಧಿಸೂಚಿತ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‍ಸೈಟ್ hಣಣಠಿ://sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ಮೂಲಕ ಆನ್‍ಲೈನ್‍ನಲ್ಲಿ ಸೆಪ್ಟೆಂಬರ್ 25ರೊಳಗಾಗಿ ಅರ್ಜಿ ಸಲ್ಲಿಸಬೇಕು. ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆಯು 2017ರ ನವೆಂಬರ್ 11 ಮತ್ತು 12ರಂದು ಜರುಗಲಿದೆ.
ಅದರಂತೆ ಉಳಿದ ಮೂಲ ವೃಂದದ ವಿವಿಧ ವಿಷಯ ಹಾಗೂ ಮಾಧ್ಯಮದ 233 ಹುದ್ದೆಗಳನ್ನು ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಪ್ರತ್ಯೇಕ ನೇಮಕಾತಿ ಅಧಿಸೂಚನೆಯನ್ನು ಸಹ ಹೊರಡಿಸಲಾಗಿದೆ. ಕನ್ನಡ ಮಾಧ್ಯಮದ ಗಣಿತ ಮತ್ತು ವಿಜ್ಞಾನ ವಿಷಯ-73 ಮತ್ತು ಸಮಾಜ ಪಾಠ ವಿಷಯದ 36 ಶಿಕ್ಷಕರು. ಉರ್ದು ಮಾಧ್ಯಮದ ಗಣಿತ ಮತ್ತು ವಿಜ್ಞಾನ ವಿಷಯ-11 ಮತ್ತು ಸಮಾಜ ಪಾಠ ವಿಷಯದ 08 ಶಿಕ್ಷಕರು. ಮರಾಠಿ ಮಾಧ್ಯಮದ ಗಣಿತ ಮತ್ತು ವಿಜ್ಞಾನ ವಿಷಯ-01 ಮತ್ತು ಸಮಾಜ ಪಾಠ ವಿಷಯದ 01 ಶಿಕ್ಷಕರು. ತೆಲಗು ಮಾಧ್ಯಮದ ಗಣಿತ ಮತ್ತು ವಿಜ್ಞಾನ ವಿಷಯ-01 ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಂಗ್ಲ ಭಾಷೆ ಮಾಧ್ಯಮದ 102 ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಮೇಲ್ಕಂಡ ಅಧಿಸೂಚಿತ ಹುದ್ದೆಗಳಿಗೆ ಇಲಾಖೆಯ ಅಧಿಕೃತ ವೆಬ್‍ಸೈಟ್‍ನಲ್ಲಿ ಸೆಪ್ಟೆಂಬರ್ 25ರೊಳಗಾಗಿ ಅರ್ಜಿ ಸಲ್ಲಿಸಬೇಕು. ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆಯು 2017ರ ನವೆಂಬರ್ 18 ಮತ್ತು 19 ರಂದು ಜರುಗಲಿದೆ. ಸದರಿ ಹುದ್ದೆಗಳಿಗೆ ಇತರೆ ಅಭ್ಯರ್ಥಿಗಳ ಜೊತೆ ಹೈದ್ರಾಬಾದ್-ಕರ್ನಾಟಕ ಪ್ರದೇಶದ ಸ್ಥಳೀಯ ಅಭ್ಯರ್ಥಿಗಳೂ ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‍ಸೈಟ್‍ನಲ್ಲಿ ನೀಡಿರುವ ಸೂಚನೆಗಳನ್ನು ಗಮನಿಸಬೇಕು. ಹಾಗೂ ಯಾವುದೇ ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ಕಲಬುರಗಿ ಆಯ್ಕೆ ಹಾಗೂ ನೇಮಕಾತಿ ಪ್ರಾಧಿಕಾರ ಮತ್ತು ಜಿಲ್ಲಾ ಉಪನಿರ್ದೇಶಕರು [ಆಡಳಿತ] ಕಚೆÉೀರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ವಿವಿಧ ಯೋಜನೆಗಳಡಿ ಪ್ರೋತ್ಸಾಹಧನ-ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಕಲಬುರಗಿ.ಆ.30.(ಕ.ವಾ.)-ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ರಾಜ್ಯದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಇಲಾಖೆಯ ವಿವಿಧ ಯೋಜನೆಗಳಡಿ ನೀಡಲಾಗುವ ಪ್ರೋತ್ಸಾಹಧನ ಮತ್ತು ಪ್ರಶಸ್ತಿಗಳಿಗಾಗಿ ಯುವ ಸಬಲೀಕರಣಕ್ಕಾಗಿ ಇಲಾಖೆಯ ವಿವಿಧ ಯೋಜನೆಗಳಡಿ ಉತ್ತೇಜನ ನೀಡಲು ಯುವ ಸಂಘ ಸಂಸ್ಥೆಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗಳಿಗಾಗಿ ಹಾಗೂ ಕ್ರೀಡಾ ವಿದ್ಯಾರ್ಥಿ ಯೋಜನೆ, ಶೈಕ್ಷಣಿಕ ಶುಲ್ಕ ಮರುಪಾವತಿ ಯೋಜನೆ, ಸಾಹಸ ಕ್ರೀಡೆ, ಸ್ಪೋಟ್ರ್ಸ್ ಅಕಾಡೆಮಿ ಫಾರ್ ಎಕ್ಸ್‍ಲೆನ್ಸ್, ಪ್ರತಿಭಾವಂತ ಕ್ರೀಡಾಪಟುಗಳಿಗೆ ನೀಡಲಾಗುವ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಯುವ ಚೈತನ್ಯ, ಯುವ ಕ್ರೀಡಾ ಮಿತ್ರ ಯುವ ಯೋಜನೆಗಳಡಿ ಸಂಘಗಳಿಗೆ ಕ್ರೀಡೋಪಕರಣಗಳನ್ನು ಒದಗಿಸಲು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2017-18ನೇ ಸಾಲಿನಲ್ಲಿ ಅಭಿವೃದ್ಧಿಪಡಿಸಲಾದ ಆಟದ ಮೈದಾನಗಳಿಗೆ ಕ್ರೀಡೋಪಕರಣಗಳ ಸೌಲಭ್ಯಕ್ಕಾಗಿ ಯುವ ಸಂಘ/ಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿದೆ.
ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಈವರೆಗೆ ಎಸ್.ಸಿ.ಪಿ./ಟಿ.ಎಸ್.ಪಿ. ಯೋಜನೆಯಡಿಯಲ್ಲಿ ವೈಯಕ್ತಿಕ ಕ್ರೀಡಾಪಟುಗಳಿಗೆ ಜಿಮ್ ಸಲಕರಣೆಗಳ ಸಹಾಯಧನ ಹಾಗೂ ಕ್ರೀಡಾಮಿತ್ರ ಮತ್ತು ಯುವ ಚೈತನ್ಯ ಅರ್ಜಿಗಳನ್ನು ಸಲ್ಲಿಸಲಾಗಿದೆ. ಆದರೆ ಈಗ ಆನ್‍ಲೈನ್ ಮೂಲಕ ಕಡ್ಡಾಯವಾಗಿ ಅರ್ಜಿ ಸಲ್ಲಿಸಿದರೆ ಮಾತ್ರ ಪರಿಗಣಿಸಲಾಗುವುದು. ಅಭ್ಯರ್ಥಿಗಳು ಇಲಾಖೆಯ ತಿತಿತಿ.ಜಥಿes.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ಸೆಪ್ಟೆಂಬರ್ 18 ರೊಳಗಾಗಿ ಅರ್ಜಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.
ಆಗಸ್ಟ್ 31 ಮತ್ತು ಸೆ.1ರಂದು ಗು.ವಿ.ವಿ. ಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ
ಕಲಬುರಗಿ.ಆ.30.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯದ ಶ್ರೀ ಮಹರ್ಷಿ ವಾಲ್ಮೀಕಿ ಬುಡಕಟ್ಟು ಅಧ್ಯಯನ ಮತ್ತು ಸಂಶೋಧನ ಕೇಂದ್ರ ಹಾಗೂ ಬುಡಕಟ್ಟು ಕಲ್ಯಾಣ ನಿರ್ದೇಶನಾಲಯ ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ “ಭಾರತೀಯ ಸಮಾಜಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಅವರ ಕೊಡುಗೆ ಮತ್ತು ಕರ್ನಾಟಕ ರಾಜ್ಯದ ಬುಡಕಟ್ಟು ಸಮುದಾಯಗಳ ಸಮಸ್ಯೆಗಳು ಮತ್ತು ಸವಾಲುಗಳು” ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಅಂಬೇಡ್ಕರ ಭವನದಲ್ಲಿ ಏರ್ಪಡಿಸಲಾಗಿದೆ.
ಆಗಸ್ಟ್ 31ರಂದು ಬೆಳಗಿನ 10.30 ಗಂಟೆಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಎಚ್. ಆಂಜನೇಯ ವಿಚಾರ ಸಂಕಿರಣವನ್ನು ಉದ್ಘಾಟಿಸುವರು. ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ, ಪ್ರವಾಸೋದ್ಯಮ ಹಾಗೂ ತಾಂತ್ರಿಕ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಸಚಿವ ಪ್ರಿಯಾಂಕ ಖರ್ಗೆ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ಸಮಿತಿಯು ಅಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸದಸ್ಯ ವಿ.ಎಸ್.ಉಗ್ರಪ್ಪ ಆಶಯ ನುಡಿ ಹೇಳುವರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ಆರ್. ನಿರಂಜನ್ ಅವರ ಅಧ್ಯಕ್ಷತೆಯಲ್ಲಿ ರಾಯಚೂರ ಲೋಕಸಭಾ ಸದಸ್ಯ ಬಿ.ವಿ. ನಾಯಕ, ಕಲಬುರಗಿ ಗ್ರಾಮೀಣ ಶಾಸಕ ಜಿ. ರಾಮಕೃಷ್ಣ, ಮಾಜಿ ಸಚಿವ ಹಾಗೂ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ, ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ರಾಜಾವೆಂಕಟಪ್ಪ ನಾಯಕ, ಮಾಜಿ ಸಚಿವ ಹಾಗೂ ದೇವದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಶಿವನಗೌಡ ನಾಯಕ ಅತಿಥಿಗಳಾಗಿ ಆಗಮಿಸುವರು. ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ನಾರಾಯಣರಾವ್ ಕಾಳೆ, ವಿದ್ಯಾವಿಷಯಕ ಪರಿಷತ್ ಸದಸ್ಯ ನಾಗೇಶ ಕೊಳ್ಳಿ, ಶಿವಮೊಗ್ಗ ವಿಭಾಗದ ಜಂಟಿ ಸಾರಿಗೆ ಆಯುಕ್ತ ಶಿವರಾಜ ಬಿ. ಪಾಟೀಲ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ವಿಚಾರ ಸಂಕಿರಣದ ಸಮಾರೋಪ ಸಮಾರಂಭವು ಸೆಪ್ಟೆಂಬರ್ 1ರಂದು ಮಧ್ಯಾಹ್ನ 3 ಗಂಟೆಗೆ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಜರುಗಲಿದೆ. ಹೈದ್ರಾಬಾದಿನ ಡಾ.ಬಿ.ಆರ್. ಅಂಬೇಡ್ಕರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ. ಸೀತಾರಾಮರಾವ್ ಸಮಾರೋಪ ಭಾಷಣ ಮಾಡುವರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ಆರ್. ನಿರಂಜನ್ ಅವರ ಅಧ್ಯಕ್ಷತೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯ ಡೀನ್ ಪ್ರೊ. ಎನ್. ಪಾರ್ವತಮ್ಮ, ಸಿಂಡಿಕೇಟ್ ಸದಸ್ಯ ಈಶ್ವರ ಇಂಗಿನ್, ವಿದ್ಯಾವಿಷಯಕ ಪರಿಷತ್ ಸದಸ್ಯೆ ರಾಣಿಚೆನ್ನಮ್ಮ ಹಲ್ಸೆ, ಮೌಲ್ಯಮಾಪನ ಕುಲಸಚಿವ ಡಾ.ಸಿ.ಎಸ್. ಪಾಟೀಲ ಮತ್ತು ಹಣಕಾಸು ಅಧಿಕಾರಿ ಪ್ರೊ. ಲಕ್ಷ್ಮಣ ರಾಜನಾಳಕರ್ ಅತಿಥಿಗಳಾಗಿ ಆಗಮಿಸುವರು.
ಹಿರಿಯ ನಾಗರಿಕರಿಗೆ ಕ್ರೀಡಾಕೂಟ: ಹೆಸರು ನೋಂದಣಿಗೆ ಸೂಚನೆ
ಕಲಬುರಗಿ.ಆ.30.(ಕ.ವಾ.)-ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚಾರಣೆ ಅಂಗವಾಗಿ ಹಿರಿಯ ನಾಗರಿಕರಿಗಾಗಿ ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಯನ್ನು ಸೆಪ್ಟೆಂಬರ್ 7ರಂದು ಕಲಬುರಗಿ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಆಸಕ್ತಿಯುಳ್ಳ 60 ವರ್ಷ ರಿಂದ 80 ವರ್ಷದೊಳಗಿನ ಹಿರಿಯ ನಾಗರಿಕರು ಸೆಪ್ಟೆಂಬರ್ 5 ರೊಳಗಾಗಿ ಕಲಬುರಗಿಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಲ್ಲಿ ತಮ್ಮ ಹೆಸರನ್ನು ನೊಂದಣಿ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
ಸೆಪ್ಟೆಂಬರ್ 8 ಹಾಗೂ 9ರಂದು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ
ಕಲಬುರಗಿ.ಆ.30.(ಕ.ವಾ.)-ಕಲಬುರಗಿ ಜಿಲ್ಲಾ ಮಟ್ಟದ 2017-18ನೇ ಸಾಲಿನ ದಸರಾ ಕ್ರೀಡಾಕೂಟವನ್ನು ಸೆಪ್ಟೆಂಬರ್ 8 ಹಾಗೂ 9ರಂದು ಕಲಬುರಗಿ ನಗರದ ಚಂದ್ರಶೇಖರ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸ್ಪರ್ಧೆಗಳ ವಿವರ ಇಂತಿದೆ. 100 ಮೀ., 200 ಮೀ., 400 ಮೀ., 800 ಮೀ, 1500 ಮೀ, 5000 ಮೀ. (ಮಹಿಳೆಯರಿಗಾಗಿ 3000ಮೀ.). ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ತ್ರಿಪಲ್ ಜಂಪ್, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, 100 ಮೀ. ಹರ್ಡಲ್ಸ್, 4ಘಿ100 ಮೀ ಮತ್ತು 4ಘಿ400 ಮೀ ರಿಲೇ, ವಾಲಿಬಾಲ್, ಕಬಡ್ಡಿ, ಖೋ-ಖೋ, ಬಾಲ್ ಬ್ಯಾಡ್ಮಿಂಟನ್, ಫುಟ್‍ಬಾಲ್ (ಪುರುಷರಿಗೆ ಮಾತ್ರ), ಹಾಕಿ, ಬಾಸ್ಕೇಟ್‍ಬಾಲ್, ಟೇಬಲ್ ಟೆನ್ನಿಸ್, ಥ್ರೋಬಾಲ್ ಸ್ಪರ್ಧೆಗಳು ಜರುಗಲಿವೆ.
ಸ್ವೀಮಿಂಗ್, ಹ್ಯಾಂಡ್‍ಬಾಲ್, ಟೇಬಲ್ ಟೆನ್ನಿಸ್, ನೆಟ್‍ಬಾಲ್ ಈ ಕ್ರೀಡೆಗಳ ಆಯ್ಕೆಯನ್ನು ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗುವುದು ಹಾಗೂ ಜಿಲ್ಲಾ ಮಟ್ಟದ ಆಯ್ಕೆಯಲ್ಲಿ ಭಾಗವಹಿಸಿ ಆಯ್ಕೆಯಾದ ಕ್ರೀಡಾಪಟುಗಳಿಗೆ ಮಾತ್ರ ಪ್ರವಾಸ ಭತ್ಯೆ ಮತ್ತು ದಿನಭತ್ಯೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಹಾಗೂ ದೂರವಾಣಿ ಸಂಖ್ಯೆ 08472-268637ನ್ನು ಸಂಪರ್ಕಿಸಲು ಕೋರಿದೆ.
ಮುಲ್ಲಾಮಾರಿ ಪ್ರವಾಹ ಮುನ್ನೆಚ್ಚರಿಕೆ
ಕಲಬುರಗಿ.ಆ.30.(ಕ.ವಾ.)-ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಾಳ ಗ್ರಾಮದ ಹತ್ತಿರ ನಿರ್ಮಾಣಗೊಂಡ ಕೆಳದಂಡೆ ಮುಲ್ಲಾಮಾರಿ ಯೋಜನೆ ಜಲಾಶಯದ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಪ್ರಯುಕ್ತ ಈ ಜಲಾಶಯಕ್ಕೆ ನಿರಂತರವಾಗಿ ಒಳಹರಿವಿನ ಪ್ರಮಾಣ ಹೆಚ್ಚುತ್ತಿದೆ. ಈ ಜಲಾಶಯವು ಯಾವುದೇ ಕ್ಷಣದಲ್ಲಿ ಭರ್ತಿಯಾಗುವ ಹಂತದಲ್ಲಿರುತ್ತದೆ. ಈ ಹಿನ್ನೆಲೆಯಲ್ಲಿ ಗರಿಷ್ಠ ಮಟ್ಟದ ನಂತರ ಬಂದ ಒಳಹರಿವಿನ ನೀರನ್ನು ಆಣೆಕಟ್ಟೆಯ ಕೋಡಿಯ ಮುಖಾಂತರ ನದಿ ಪಾತಳಿಗೆ ಬಿಡಲಾಗುವುದು.
ಈ ನದಿಯ ಪ್ರವಾಹದಿಂದ ಮುಲ್ಲಾಮಾರಿ ನದಿ ಪಾತಳಿಯ ಗ್ರಾಮಗಳಾದ ಚಿಮ್ಮನಚೋಡ, ತಾದ್ಲಾಪೂರ, ಕನಕಪೂರ, ಇರಗಪಳ್ಳಿ, ಖರ್ಚಖೇಡ್ ಹಾಗೂ ಜಟ್ಟೂರುಗಳಿಗೆ ತೊಂದರೆಯುಂಟಾಗಬಹುದಾಗಿದೆ. ಗ್ರಾಮಸ್ಧರಿಗೆ ನದಿ ಪಾತಳಿಯ ನೀರಿನ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ಆಸ್ತಿ ಹಾಗೂ ಧÀನಕರುಗಳಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಕರ್ನಾಟಕ ನೀರಾವರಿ ನಿಗಮದ ಐ.ಪಿ.ಸಿ. ವಿಭಾಗ ನಂ.1ರ ಕಾರ್ಯನಿರ್ವಾಹಕ ಇಂಜಿನಿಯರರು ತಿಳಿಸಿದ್ದಾರೆ.
ರಿಯಾಯಿತಿ ದರದಲ್ಲಿ ಟಾರ್ಪಲಿನ ವಿತರಣೆಗಾಗಿ ರೈತರಿಂದ ಅರ್ಜಿ ಆಹ್ವಾನ
ಕಲಬುರಗಿ.ಆ.30.(ಕ.ವಾ.)-ಆಳಂದ ತಾಲೂಕಿನ ಎಲ್ಲ ರೈತರಿಗೆ 2017-18 ನೇ ಸಾಲಿನಲ್ಲಿ ರಿಯಾಯಿತಿ ದರದಲ್ಲಿ ಟಾರ್ಪಲಿನ್‍ಗಳನ್ನು ವಿತರಿಸುವ ಕಾರ್ಯಕ್ರಮ ಇರುತ್ತದೆ. ಇದಕ್ಕಾಗಿ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಆಳಂದ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಇಚ್ಚೆಯುಳ್ಳ ರೈತರು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರದಲ್ಲಿ ಸೆಪ್ಟೆಂಬರ್ 7ರೊಳಗಾಗಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ರೈತರ ಆಯ್ಕೆಯನ್ನು ಸೆಪ್ಟೆಂಬರ್ 8ರಂದು ಲಾಟರಿ ಮುಖಾಂತರ ರೈತ ಸಂಪರ್ಕ ಕೇಂದ್ರದಲ್ಲಿ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
ಶೇ.80ರಷ್ಟು ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಕರೆ
ಅವರು ಬುಧವಾರ ಕಲಬುರಗಿ ನಗರದ ಸೆಂಟ್ ಮೇರಿ ಶಾಲೆಯಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯ, ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಬೆಂಗಳೂರು, ರಾಜ್ಯ ಸಂಪನ್ಮೂಲ ಕೇಂದ್ರ ಮೈಸೂರು, ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಲೋಕ ಶಿಕ್ಷಣ ಸಮಿತಿ ಸಂಯುಕ್ತಾಶ್ರಯದಲ್ಲಿ ಕಲಬುರಗಿ ಜಿಲ್ಲೆಯ ಲೋಕ ಶಿಕ್ಷಣ ಸಮಿತಿಯ ಸದಸ್ಯ ಕಾರ್ಯದರ್ಶಿಗಳು, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮುಖ್ಯ ಗುರುಗಳಿಗೆ ಆಯೋಜಿಸಿದ ಒಂದು ದಿನದ ವಿಷಯ ಪರಿಚಯ ಶಿಬಿರ ಉದ್ಘಾಟಿಸಿ ಮಾತನಾಡಿದರು.
2011ರ ಜನಗಣತಿ ಪ್ರಕಾರ ಕಲಬುರಗಿ ಜಿಲ್ಲೆಯ ಸಾಕ್ಷರತಾ ಪ್ರಮಾಣವು ಶೇ.65 ಇದ್ದರೆ, ರಾಜ್ಯ ಮತ್ತು ರಾಷ್ಟ್ರದ ಸಾಕ್ಷರತಾ ಪ್ರಮಾಣ ಕ್ರಮವಾಗಿ ಶೇ.75 ಮತ್ತು 74 ರಷ್ಟು ಇದೆ. 2010 ರಿಂದ ಕಲಬುರಗಿ ವಿಭಾಗದ 6 ಜಿಲ್ಲೆಗಳು ಸೇರಿದಂತೆ ರಾಜ್ಯದ 20 ಜಿಲ್ಲೆಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಾಯದೊಂದಿಗೆ “ಸಾಕ್ಷರ ಭಾರತ” ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. 2011ರ ಜನಗಣತಿಯಲ್ಲಿ ಹೈದ್ರಾಬಾದ ಕರ್ನಾಟಕ ಭಾಗದ ಕಲಬುರಗಿ-65.65%., ಯಾದಗಿರಿ-52.36%., ರಾಯಚೂರು 60.46%., ಕೊಪ್ಪಳ 67.28%., ಬಳ್ಳಾರಿ-67.83%., ಮತ್ತು ಬೀದರ-71.01% ರಷ್ಟು ಸಾಕ್ಷರತಾ ಪ್ರಮಾಣವಿದೆ. ಈ ಜಿಲ್ಲೆಗಳಲ್ಲಿ ಸಾಕ್ಷರತಾ ಪ್ರಮಾಣ ಕಡಿಮೆ ಇರುವುದನ್ನು ಮನಗಂಡು ಪ್ರಸಕ್ತ 2017-18ನೇ ಸಾಲಿನಲ್ಲಿಯೂ ಈ 6 ಜಿಲ್ಲೆಗಳಿಗೆ ಮಾತ್ರ ಸಾಕ್ಷರ ಭಾರತ ಕಾರ್ಯಕ್ರಮ ವಿಸ್ತರಣೆ ಮಾಡಿದೆ. ವಿಶ್ವದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 133ನೇ ಸ್ಥಾನದಲ್ಲಿ ಭಾರತ ಇದೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಸೂಚ್ಯಂಕದ ಅಳತೆಯಲ್ಲಿ ಸಾಕ್ಷರತಾ ಪ್ರಮಾಣವು ಸಹ ಪರಿಗಣೆನೆಗೆ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಗಮನಿಸಬೇಕು ಎಂದರು.
2018ರ ಮಾರ್ಚ್ ಅಂತ್ಯದ ಒಳಗೆ ಕಲಬುರಗಿ ಜಿಲ್ಲೆಯ 1.28 ಲಕ್ಷ., ಯಾದಗಿರಿ ಜಿಲ್ಲೆಯ 0.86 ಲಕ್ಷ., ರಾಯಚೂರು 1.27 ಲಕ್ಷ., ಕೊಪ್ಪಳ ಜಿಲ್ಲೆಯ 0.92 ಲಕ್ಷ., ಬಳ್ಳಾರಿ ಜಿಲ್ಲೆಯ 0.89 ಲಕ್ಷ ಮತ್ತು ಬೀದರ ಜಿಲ್ಲೆಯ 0.78 ಲಕ್ಷ ಅನಕ್ಷರಸ್ಥÀರನ್ನು ಸಾಕ್ಷರನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎನ್.ವಿ.ಶಿವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯದ ಇತರೆ ಭಾಗಕ್ಕೆ ಹೋಲಿಸಿದಲ್ಲಿ ಹೈದ್ರಾಬಾದ ಕರ್ನಾಟಕ ಭಾಗವು ಸಾಕ್ಷರತಾ ಪ್ರಮಾಣದಲ್ಲಿ ಹಿಂದಿರುವುದರಿಂದ ಸಾಕ್ಷರತಾ ಪ್ರಮಾಣದ ಜೊತೆಗೆ ಬೌದ್ಧಿಕ ಸಾಮಥ್ರ್ಯವನ್ನು ಹೆಚ್ಚಿಸಲು ಲೋಕ ಶಿಕ್ಷಣ ಸಮಿತಿಯ ಸದಸ್ಯ ಕಾರ್ಯದರ್ಶಿಗಳಿಗೆ ಮತ್ತು ಶಾಲಾ ಮುಖ್ಯ ಗುರುಗಳಿಗೆ ಈ ರೀತಿಯ ವಿಷಯ ಪರಿಚಯ ಶಿಬಿರಗಳನ್ನು ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ 1 ರಂದು ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಕಲಿಕಾ ಕೇಂದ್ರ ಉದ್ಘಾಟಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಮೋಹನ ಕುಮಾರ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಸಂಯೋಜಕರು ಭಾಗವಹಿಸಿದ್ದರು. ಕಾರ್ಯಕ್ರಮ ಸಹಾಯಕರಾದ ಅರ್ಚನಾ ಎಸ್.ಎಂ ನಿರೂಪಿಸಿದರು.
ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರ ಪ್ರವಾಸ
ಕಲಬುರಗಿ,ಆ.30(ಕ.ವಾ.)-ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ತೆಲಂಗಾಣ ಮತ್ತು ಕರ್ನಾಟಕ ರಾಜ್ಯದ ಸದಸ್ಯರಾದ ಜಗದೀಶ ಹಿರೇಮನಿ ಅವರು ಆಗಸ್ಟ್ 31ರಂದು ರಾತ್ರಿ 8 ಗಂಟೆಗೆ ಬೀದರದಿಂದ ರಸ್ತೆ ಮೂಲಕ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಸೆಪ್ಟೆಂಬರ್ 1ರಂದು ಬೆಳಗಿನ 11 ಗಂಟೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಜಾಗೃತಿ ಸಮಿತಿಯ ಅಧ್ಯಕ್ಷರು/ ಸದಸ್ಯರರೊಂದಿಗೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು, ಸಮಾಜ ಕಲ್ಯಾಣ ಅಧಿಕಾರಿಗಳು, ಸಫಾಯಿ ಕರ್ಮಚಾರಿಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಸ್ವಚ್ಛತೆ ಮತ್ತು ಡಿ. ದರ್ಜೆಯ ನೌಕರರ ಮತ್ತು ಸಫಾಯಿ ಕರ್ಮಚಾರಿಗಳ ಕುಂದುಕೊರತೆಗಳನ್ನು ಆಲಿಸುವರು. ಈ ಸಂದರ್ಭದಲ್ಲಿ ಸದಸ್ಯರು ಸಫಾಯಿ ಕರ್ಮಚಾರಿಗಳ ಮತ್ತು ಅವರ ಅವಲಂಬಿತರ ಸಾಮಾಜಿಕ, ಆರ್ಥಿಕ, ಪ್ರಾವಿಡೆಂಟ್ ಫಂಡ್, ಶಿಕ್ಷಣ ಮತ್ತು ಉದ್ಯೋಗದ ಕುರಿತು ಚರ್ಚಿಸುವರು. 10 ವರ್ಷಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಆಗಿರುವ ಸಫಾಯಿ ಕರ್ಮಚಾರಿಗಳ ಮರಣದ ಕುರಿತು ಹಾಗೂ ಅವರ ಪುನರ್ವಸತಿ ಕುರಿತು ಚರ್ಚಿಸುವರು.
ಮಧ್ಯಾಹ್ನ 3 ಗಂಟೆಗೆ ಮಹಾನಗರ ಪಾಲಿಕೆಯ ಆಯುಕ್ತರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಫಾಯಿ ಕರ್ಮಚಾರಿ, ಗ್ರೂಪ್ ಡಿ ದರ್ಜೆ ನೌಕರರಿಂದ ಅಹವಾಲು ಸ್ವೀಕರಿಸುವರು. ಸಂಜೆ 5 ಗಂಟೆಗೆ ಸಫಾಯಿ ಕರ್ಮಚಾರಿಗಳ ಕಾಲೋನಿಗಳಿಗೆ ಭೇಟಿ ನೀಡಿ, ರಾತ್ರಿ 8 ಗಂಟೆಗೆ ಬೆಂಗಳೂರಿಗೆ ಪ್ರಯಾಣಿಸುವರು.
ಕೃಷಿ ಯಂತ್ರೋಪಕರಣ-ಸೇವಾ ಕೇಂದ್ರ ಸ್ಥಾಪನೆ:
ಅಭ್ಯರ್ಥಿಗಳ ಆಯ್ಕೆಗಾಗಿ ಅರ್ಜಿ ಆಹ್ವಾನ
ಕಲಬುರಗಿ,ಆ.30(ಕ.ವಾ.)-ಕೃಷಿ ಇಲಾಖೆಯಿಂದ ಗ್ರಾಮೀಣ ಕೃಷಿ ಯಂತ್ರೋಪಕರಣ/ ಸೇವಾ ಕೇಂದ್ರಗಳನ್ನು ಸ್ಥಾಪಿಸಿ ಮತ್ತು ಮುನ್ನಡೆಸಲು ಅಭ್ಯರ್ಥಿಗಳ ಆಯ್ಕೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ರೈತರಿಗೆ ಸ್ಥಳೀಯವಾಗಿ ಕೃಷಿ ಯಂತ್ರೋಪಕರಣಗಳು, ಪಂಪ್‍ಸೆಟ್‍ಗಳು, ಕೊಳವೆ ಬಾವಿಗಳು ರಿಪೇರಿ ಮಾಡುವ ಮತ್ತು ಸೂಕ್ಷ್ಮ ನೀರಾವರಿ ಘಟಗಳ ದುರಸ್ತಿ ಮಾಡುವ ಸೌಲಭ್ಯಗಳನ್ನು ಸೃಷ್ಟಿಸುವಲ್ಲಿ ಪ್ರಾರಂಭಿಕವಾಗಿ ತಾಲೂಕಿನಲ್ಲಿ ಗ್ರಾಮೀಣ ಕೃಷಿ ಯಂತ್ರೋಪಕರಣ/ ಸೇವಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಸದರಿ ಕೇಂದ್ರಗಳನ್ನು ಬ್ಯಾಂಕ್ ಲೋನ್ ಆಧಾರದ ಮೇಲೆ ಒಂದು ಬಾರಿ (ಃಚಿಛಿಞ ಇಟಿಜeಜ Subsiಜಥಿ) ನೀಡುವ ಮೂಲಕ ಗ್ರಾಮೀಣ ಕೃಷಿ ಯಂತ್ರೋಪಕರಣ ಕೇಂದ್ರ ಸ್ಥಾಪಿಸಿ ಮತ್ತು ಮುನ್ನಡೆಸಲು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಒಟ್ಟು 7 ಹುದ್ದೆಗಳ ಪೈಕಿ 05 ಹುದ್ದೆಗಳನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ, ತಲಾ 1 ಹುದ್ದೆಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಿಡಲಾಗಿದೆ. ಕೃಷಿ ಇಂಜನಿಯರಿಂಗ್ ಡಿಪ್ಲೋಮಾ/ ಕೃಷಿಯಲ್ಲಿ ಡಿಪ್ಲೋಮಾ/ ಅಟೋಮೋಬೈಲ್ ಡಿಪ್ಲೋಮಾ/ ಮೆಕ್ಯಾನಿಕಲ್ ಡಿಪ್ಲೊಮಾ/ ಐಟಿಐ/ ಪಿ.ಯು.ಸಿ.ತೇರ್ಗಡೆ ಹೊಂದಿರುವ ಗ್ರಾಮೀಣ ಯುವಕರು ಕೃಷಿ ವಿಶ್ವವಿದ್ಯಾನಿಲಯದಿಂದ ಕೃಷಿ ಯಂತ್ರೋಪಕರಣಗಳ ದುರಸ್ತಿ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ತರಬೇತಿ ಪಡೆದಿರುವ ಬಗ್ಗೆ ಪ್ರಮಾಣಪತ್ರವನ್ನು ಹೊಂದಿರಬೇಕಲ್ಲದೇ ರೈತ ಕುಟುಂಬಕ್ಕೆ ಸೇರಿದವಾಗಿರಬೇಕು.
ನಿಗದಿತ ಅರ್ಜಿ ನಮೂನೆಯನ್ನು ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಿಂದ ಸೆಪ್ಟೆಂಬರ್ 1 ರಿಂದ 14 ರವರೆಗೆ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲಾತಿಗಳನ್ನು ಲಗತ್ತಿಸಿ ಸೆಪ್ಟೆಂಬರ್ 15ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯವನ್ನು ಅಥವಾ ಕಲಬುರಗಿಯ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯವನ್ನು ಸಂಪರ್ಕಿಸಲು ಕೋರಲಾಗಿದೆ.
ಸಂಕಲ್ಪದಿಂದ ಸಿದ್ಧಿ-ರೈತರ ಆದಾಯ ದ್ವಿಗುಣಗೊಳಿಸುವ ಜಾಗೃತಿ ಕಾರ್ಯಕ್ರಮ
ಕಲಬುರಗಿ,ಆ.30(ಕ.ವಾ.)-ಭಾರತ ಸರ್ಕಾರದ ನವದೆಹಲಿಯ ಕೃಷಿ ಹಾಗೂ ರೈತರ ಕಲ್ಯಾಣ ಮಂತ್ರಾಲಯ, ಕೃಷಿ ವಿಶ್ವವಿದ್ಯಾಲಯ ರಾಯಚೂರು, ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ ರದ್ದೇವಾಡ್ಗಿ ಹಾಗೂ ಕೃಷಿ ಇಲಾಖೆ ಕಲಬುರಗಿ (ಆತ್ಮ) ಇವುಗಳ ಸಹಯೋಗದಲ್ಲಿ ನವಭಾರತ ಮಂಥನ: ‘ಸಂಕಲ್ಪದಿಂದ ಸಿದ್ದಿ’- ನ್ಯೂ ಇಂಡಿಯಾ ಮೂವ್‍ಮೆಂಟ್ (2017-2022) 2022ರ ಒಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಏಳು ಅಂಶಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಮಾರಂಭವನ್ನು ಆಗಸ್ಟ್ 31ರಂದು ಬೆಳಗಿನ 10.30 ಗಂಟೆಗೆ ಜೇವರ್ಗಿಯ ಸಜ್ಜನ್ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ರದ್ದೇವಾಡ್ಗಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು NEWS AND PHOTO DATE: 30-08-2017
ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 30-08-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 30-08-2017 ಲಿಂಕ್ ವಿಳಾಸ https://dekalungi.blogspot.com/2017/08/news-and-photo-date-30-08-2017.html
0 Response to "NEWS AND PHOTO DATE: 30-08-2017"
ಕಾಮೆಂಟ್ ಪೋಸ್ಟ್ ಮಾಡಿ