News and photo Date: 21--08--2017

News and photo Date: 21--08--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and photo Date: 21--08--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and photo Date: 21--08--2017
ಲಿಂಕ್ : News and photo Date: 21--08--2017

ಓದಿ


News and photo Date: 21--08--2017

ಗಣೇಶ ಚತುರ್ಥಿ–ಮಾಂಸ ಮಾರಾಟ ನಿಷೇಧ
*****************************************
ಕಲಬುರಗಿ,ಆ.21.(ಕ.ವಾ.)-ಕಲಬುರಗಿ ನಗರದಾದ್ಯಂತ ಆಗಸ್ಟ್ 25 ರಂದು ಗಣೇಶ ಚತುರ್ಥಿ ಹಬ್ಬ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಅಂದು ನಗರದಾದ್ಯಂತ ಯಾವುದೇ ರೀತಿಯ ಪ್ರಾಣಿ ವಧೆ ಮಾಡುವುದನ್ನು ಅಥವಾ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ನಗರದಲ್ಲಿ ಮಾಂಸ ಮಾರಾಟ ಮಾಡುವ ಅಂಗಡಿಗಳ ಹಾಗೂ ಕಸಾಯಿ ಖಾನೆ ಮಾಲೀಕರು ಈ ಆದೇಶವÀನ್ನು ಕಟ್ಟುನಿಟ್ಟಾಗಿ ಪರಿಪಾಲಿಸುವಂತೆ ಸೂಚಿಸಿದ್ದಾರೆ. ತಪ್ಪಿದಲ್ಲಿ ಕೆ.ಎಂ.ಸಿ. ಕಾಯ್ದೆ 1976ರ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸೇಡಂ: ಉದ್ಯೋಗಿನಿ ಯೋಜನೆಗಾಗಿ ಅರ್ಜಿ ಆಹ್ವಾನ
**********************************************
ಕಲಬುರಗಿ,ಆ.21.(ಕ.ವಾ.)-ಸೇಡಂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ 2017-18ನೇ ಸಾಲಿನ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಉದ್ಯೋಗಿನಿ ಯೊಜನೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 2 ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸೇಡಂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಹಾಗೂ ಮೊಬೈಲ್ ಸಂಖ್ಯೆ 08441-276136ನ್ನು ಸಂಪರ್ಕಿಸಲು ಕೋರಿದೆ.

ಮಾಜಿ ಸೈನಿಕರ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವಭಾವಿ ತರಬೇತಿ
***************************************************************
ಕಲಬುರಗಿ,ಆ.21.(ಕ.ವಾ.)-ಕಲಬುರಗಿಯ ಪೋರ್ಸ್ ಅಕಾಡೆಯಿಂದ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಆಸಕ್ತಿಯುಳ್ಳ ಮಾಜಿ ಸೈನಿಕರ ಮಕ್ಕಳಿಗೆ ಸೈನಿಕ/ ಕಾನ್ಸ್‍ಸ್ಟೇಬಲ್ ಹಾಗೂ ಆಫೀಸರ್ ಹುದ್ದೆಗೆ ತಲಾ ಮೂರು ಹಾಗೂ ಎರಡು ತಿಂಗಳಿನ ಪೂರ್ವಭಾವಿ ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಇದಲ್ಲದೇ ಭಾರತೀಯ ಭೂ ಸೇನೆ, ನೇವಿ, ಏರ್‍ಫೋರ್ಸ್, ಬಿ.ಎಸ್.ಎಫ್., ಸಿ.ಆರ್.ಪಿ.ಎಫ್., ಐ.ಟಿ.ಬಿ.ಪಿ., ಸಿ.ಐ.ಎಸ್.ಎಫ್., ಎಸ್.ಎಸ್.ಬಿ., ಆರ್.ಪಿ.ಎಫ್., ಕರ್ನಾಟಕ ರಾಜ್ಯ ಪೊಲೀಸ್, ದೈಹಿಕ ಪರೀಕ್ಷಾ ತಯಾರಿ, ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಜಿಮ್, ಈಜು ಸೇರಿದಂತೆ ಮತ್ತಿತರ ಪೂರ್ವಭಾವಿ ತರಬೇತಿ ನೀಡಲಾಗುತ್ತಿದೆ. ಆಸಕ್ತಿಯುಳ್ಳ ಮಾಜಿ ಸೈನಿಕರ ಮಕ್ಕಳು ಕಲಬುರಗಿ ಶಹಾಬಾದ್ ರಸ್ತೆಯಲ್ಲಿರುವ ಗೋಲ್ಡನ್ ಸಿಟಿ ಲೇಔಟ್‍ನಲ್ಲಿರುವ ಪೋರ್ಸ್ ಅಕಾಡೆಮಿ ಕಚೇರಿಯನ್ನು ಹಾಗೂ ಮೊಬೈಲ್ ಸಂಖ್ಯೆ 8884455288/ 8884455299ಗಳನ್ನು ಸಂಪರ್ಕಿಸಲು ಕೋರಿದೆ.
ಗುಂಡಗುರ್ತಿ ವಸತಿ ಶಾಲೆಯ ವಿದ್ಯಾರ್ಥಿನಿಯರು ವಿವಿಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
ಕಲಬುರಗಿ,ಆ.21.(ಕ.ವಾ.)-ದಂಡೋತಿಯಲ್ಲಿ 2017ರ ಆಗಸ್ಟ್ 18ರಂದು ಜರುಗಿದ 2017-18ನೇ ಸಾಲಿನ ಪ್ರಾಥಮಿಕ ಶಾಲಾ ವಲಯಮಟ್ಟದ ಕ್ರೀಡಾಕೂಟದಲ್ಲಿ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ಭಾಗವಹಿಸಿ ಖೋಖೋ, ಕಬಡ್ಡಿ, ಥ್ರೋಬಾಲ್, 4*100ಮೀ ರಿಲೇ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಮತ್ತು ವಾಲಿಬಾಲ್ ಸ್ಪರ್ಧೆಯಲ್ಲಿ ದ್ವಿತಿಯ ಸ್ಥಾನ ಪಡೆದುಕೊಂಡಿದ್ದಾರೆ.
ಅದರಂತೆ ಶಾಟಪುಟ್‍ನಲ್ಲಿ ಕು.ಪ್ರಿಯಾಂಕ ನರಸಿಂಗ್ ಪ್ರಥಮ ಸ್ಥಾನ ಹಾಗೂ ಕು. ಪ್ರೇಮಾ ಬಾಬುರಾವ ದ್ವಿತಿಯ ಸ್ಥಾನ. ಲಾಂಗಜಂಪ್‍ನಲ್ಲಿ ಕು. ಮೇಘಾ ಮಲ್ಲೇಶಪ್ಪ ಪ್ರಥಮ ಸ್ಥಾನ ಮತ್ತು ಕು ಅರ್ಪಿತಾ ರವಿ ದ್ವಿತೀಯ ಸ್ಥಾನ. 100ಮೀ ಓಟದಲ್ಲಿ ಕು.ಸೇವಂತಾ ಪ್ರಥಮ ಸ್ಥಾನ. 200ಮೀ ಓಟದಲ್ಲಿ ಕು. ಮೇಘಾ ಮಲ್ಲೇಶಪ್ಪ ದ್ವಿತೀಯ ಸ್ಥಾನ. 400ಮೀ. ಓಟದಲ್ಲಿ ಕು.ಭಾಗ್ಯಶ್ರೀ ಯಲ್ಲಪ್ಪ ಪ್ರಥಮ ಸ್ಥಾನ. ಅರ್ಪಿತಾ ರವಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಈ ವಸತಿ ಶಾಲೆಯ ವಿದ್ಯಾರ್ಥಿಗಳ ಸಾಧನೆಗೆ ವಸತಿ ಶಾಲೆಯ ಪ್ರಾಂಶುಪಾಲ ಶ್ರೀ ಸುರೇಶ ಆಲ್ದಾರ್ಥಿ, ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಬಿರಾದಾರ ಹಾಗೂ ಸಿಬ್ಬಂದಿಗಳಾದ ಜ್ಯೋತಿ ಲಕ್ಷ್ಮೀ, ವಾಣಿಶ್ರೀ, ತ್ಯಾಗರಾಜ ಮಡಿವಾಳರ, ಪವಿತ್ರ, ವಿಜಯಲಕ್ಷ್ಮಿ, ಶೀಲಾಬಾಯಿ, ಕೌಶಲ್ಯ, ಲಕ್ಷ್ಮೀ ಹರ್ಷ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 22ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
**********************************************
ಕಲಬುರಗಿ.ಆ.21.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11 ಕೆ.ವಿ. ಪೊಲೀಸ್ ಕಾಲೋನಿ ಫೀಡರಿನ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಮತ್ತು ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಕೈಗೊಳ್ಳುವ ಪ್ರಯುಕ್ತ ಆಗಸ್ಟ್ 22ರಂದು ಮಂಗಳವಾರ ಬೆಳಗಿನ 10ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯವಾಗುವ ಫೀಡರ್ ಮತ್ತು ಬಡಾವಣೆಗಳ ವಿವರ ಇಂತಿದೆ.
11 ಕೆ.ವಿ ಪೋಲಿಸ್ ಕಾಲೋನಿ: ಪೋಲಿಸ್À ಕಾಲೋನಿ, ಜಿ.ಡಿ.ಎ. ರಿಂಗ್ ರೋಡ್, ಪ್ರಶಾಂತ ನಗರ, ಶಹಬಾದ, ಶಕ್ತಿ ನಗರ ನೃಪತುಂಗಾ ಕಾಲೋನಿ, ಬಂಜಾರ ಲೇಔಟ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.

ಆಗಸ್ಟ್ 22ರಂದು ಖಾಯಂ ಜನತಾ ನ್ಯಾಯಾಲಯ ಕುರಿತು ಕಾನೂನು ಅರಿವು ನೆರವು
**************************************************************************
ಕಾರ್ಯಕ್ರಮ
**********
ಕಲಬುರಗಿ,ಆ.21.(ಕ.ವಾ.)-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸಹರಾ ಸೇವಾ ಸಂಸ್ಥೆ ಹಾಗೂ ರೆಹನುಮಾ ಕಾನೂನು ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಲಬುರಗಿ ಹಾಗೂ ಸೈಯ್ಯದ್ ಚಿಂಚೋಳಿ ಗ್ರಾಮ ಪಂಚಾಯಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ “ಖಾಯಂ ಜನತಾ ನ್ಯಾಯಾಲಯ ಮತ್ತು ಐ.ಸಿ.ಡಿ.ಸಿ.ಎಸ್. ಯೋಜನೆಗಳ” ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಆಗಸ್ಟ್ 22ರಂದು ಮಂಗಳವಾರ ಬೆಳಗಿನ 10 ಗಂಟೆಗೆ ಸೈಯದ್ ಚಿಂಚೋಳಿ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರದಲ್ಲಿ ಆಯೋಜಿಸಲಾಗಿದೆ.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು. ತಾಜ್ ಸುಲ್ತಾನಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿಠ್ಠಲ ಗೌಳಿ ಅಧ್ಯಕ್ಷತೆ ವಹಿಸುವರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ, ಸಹರಾ ಸೇವಾ ಸಂಸ್ಥೆಯ ನಿರ್ದೇಶಕ ಮಸ್ತಾನ್ ಬಿರಾದರ್, ಸೈಯ್ಯದ್ ಚಿಂಚೋಳಿಯ ಹೊಸ ಬಡಾವಣೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಶರಣಬಸಪ್ಪ ಸಂಗೋಳಗಿ, ತಾಜ್ ಸುಲ್ತಾನಪುರ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅನೀಲಕುಮಾರ ಡಾಂಗೆ, ಸೈಯ್ಯದ್ ಚಿಂಚೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಅಶೋಕ ದೊಡ್ಡಮನಿ, ಉರ್ದು ಮಾಧ್ಯಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಮಹ್ಮದ್ ನೈಮೋದ್ದೀನ್ ಖತೀಬ್ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ವಿ. ರಾಮನ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಹಿಳೆಯರಿಗೆ ದೊರೆಯುವ ವಿಶೇಷ ಸೌಲಭ್ಯಗಳು ಮತ್ತು ಮಕ್ಕಳ ರಕ್ಷಣಾ ಸಮಿತಿಯ ಕುರಿತು ಮಾತನಾಡುವರು.

ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನ
*********************************
ಕಲಬುರಗಿ,ಆ.21.(ಕ.ವಾ.)-ಕಲಬುರಗಿ ಉಚ್ಚ ನ್ಯಾಯಾಲಯದ ಓ.ಎಸ್. ನಂ. 242/2000ರ ಆದೇಶದಂತೆ ನಗರದ ಕೋಟನೂರ(ಡಿ) ಸರ್ವೆ ನಂ. 27/2 ಮತ್ತು 27/2ಎ ವಿನ್ಯಾಸದಲ್ಲಿರುವ ಸಂಖ್ಯೆ 27 ರಿಂದ 55 ರವರೆಗಿನ ನಿವೇಶನಗಳ ಮಾಲೀಕತ್ವವನ್ನು ವಿಲಾಸ ಶ್ರೀಧರರಾವ್ ಹರವಾಳಕರ ಹೊಂದಿರುತ್ತಾರೆ. ಈ ನಿವೇಶನಗಳನ್ನು ಮಹಾನಗರ ಪಾಲಿಕೆಯ ಆಸ್ತಿ ವಹಿಯಲ್ಲಿ ನೋಂದಣಿ ಮಾಡಬೇಕಾಗಿದೆ.
ಸಾರ್ವಜನಿಕರಿಂದ ಇದಕ್ಕೆ ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ ತಮ್ಮ ಲಿಖಿತ ಅಭಿಪ್ರಾಯವನ್ನು ಅಗತ್ಯ ದಾಖಲಾತಿಗಳೊಂದಿಗೆ ಕಲಬುರಗಿ ಮಹಾನಗರ ಪಾಲಿಕೆಯ ವಲಯ-1ರ ಕಚೇರಿಯ ಉಪ ಆಯುಕ್ತರು ಹಾಗೂ ವಲಯ ಆಯುಕ್ತರ ಕಚೇರಿಯಲ್ಲಿ ಪ್ರಕಟಣೆ ಪ್ರಕಟಗೊಂಡ 30 ದಿನದೊಳÀಗಾಗಿ ಸಲ್ಲಿಸಬೇಕು. ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸದ ಅಹವಾಲುಗಳನ್ನು ಪರಿಗಣಿಸಲಾಗುವುದಿಲ್ಲ. ಇದಕ್ಕೆ ತಪ್ಪಿದ್ದಲ್ಲಿ ಉಚ್ಚ ನ್ಯಾಯಾಲಯದ ಆದೇಶದಂತೆ ನಿವೇಶನಗಳ ನೋಂದಣಿಗೆ ಕ್ರಮ ವಹಿಸಲಾಗುವುದು ಎಂದು ಕಲಬುರಗಿ ಮಹಾನಗರ ಪಾಲಿಕೆಯ ವಲಯ-1ರ ವಲಯ ಆಯುಕ್ತರು ಕೋರಿದ್ದಾರೆ.


ಹೀಗಾಗಿ ಲೇಖನಗಳು News and photo Date: 21--08--2017

ಎಲ್ಲಾ ಲೇಖನಗಳು ಆಗಿದೆ News and photo Date: 21--08--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo Date: 21--08--2017 ಲಿಂಕ್ ವಿಳಾಸ https://dekalungi.blogspot.com/2017/08/news-and-photo-date-21-08-2017.html

Subscribe to receive free email updates:

0 Response to "News and photo Date: 21--08--2017"

ಕಾಮೆಂಟ್‌‌ ಪೋಸ್ಟ್‌ ಮಾಡಿ