NEWS AND PHOTO DATE: 02-08-2017

NEWS AND PHOTO DATE: 02-08-2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS AND PHOTO DATE: 02-08-2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS AND PHOTO DATE: 02-08-2017
ಲಿಂಕ್ : NEWS AND PHOTO DATE: 02-08-2017

ಓದಿ


NEWS AND PHOTO DATE: 02-08-2017

ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಸಚಿವರ ಪ್ರವಾಸ
********************************************
ಕಲಬುರಗಿ,ಆಗಸ್ಟ್.02.(ಕ.ವಾ.)-ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ್ ಅವರು ಆಗಸ್ಟ್ 3ರಿಂದ 7ರವರೆಗೆ ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಅಪಘಾತ ಸಂಭವಿಸಿದಾಗ ಪ್ರಥಮ ಚಿಕಿತ್ಸೆ ಸಹಕಾರಿ
ಕಲಬುರಗಿ,ಆಗಸ್ಟ್.02.(ಕ.ವಾ.)-ದೈನಂದಿನ ಜೀವನದಲ್ಲಿ ಪ್ರಥಮ ಚಿಕಿತ್ಸೆ ಅತೀ ಮುಖ್ಯವಾಗಿದ್ದು, ಅಪಘಾತ ಅಥವಾ ಅವಘಡ ಸಂಭವಿಸಿದಾಗ ವ್ಯಕ್ತಿಯನ್ನು ಸಾವಿನ ದವಡೆಯಿಂದ ಪಾರು ಮಾಡಲು ಪ್ರಥಮ ಚಿಕಿತ್ಸೆ ಸಂಜೀವಿನಿಯಂತೆ ಕೆಲಸ ನಿರ್ವಹಿಸುತ್ತದೆ. ಇದನ್ನು ಎಲ್ಲರೂ ತಿಳಿಯುವುದು ಅಗತ್ಯವಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಉಪನಿರ್ದೇಶಕ ಜಿ. ಚಂದ್ರಕಾಂತ ತಿಳಿಸಿದರು.
ಅವರು ಬುಧವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಭಾಂಗಣದಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಹಮ್ಮಿಕೊಂಡಿರುವ ಎರಡು ದಿನಗಳ ಪ್ರಥಮ ಚಿಕಿತ್ಸಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಥಮ ಚಿಕಿತ್ಸೆಯ ಸರ್ಟಿಫಿಕೇಟ್ ತರಬೇತಿ ಶಿಬಿರಗಳನ್ನು ರೆಡ್‍ಕ್ರಾಸ್ ಸಂಸ್ಥೆಯು ಆಯೋಜಿಸುತ್ತಿದೆ. ಪ್ರಥಮ ಚಿಕಿತ್ಸೆಯ ಕೌಶಲ್ಯಗಳನ್ನು ಕಾಪಾಡಿಕೊಳ್ಳಲು ಪುನಶ್ಚೇತನ ತರಬೇತಿ ಸೇರುವುದು ಅವಶ್ಯಕ. ಈ ತರಬೇತಿಯಿಂದ ಅಪಘಾತವಾಗಿರುವ ವ್ಯಕ್ತಿಗೆ ಸಮರ್ಪಕ ಚಿಕಿತ್ಸೆ ನೀಡಲು ಅನುಕೂಲವಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೆಡ್‍ಕ್ರಾಸ್ ಸಂಸ್ಥೆಯ ಕಲಬುರಗಿ ಜಿಲ್ಲಾ ಘಟಕದ ಸಭಾಪತಿ ಅಪ್ಪಾರಾವ ಅಕ್ಕೋಣಿ ಮಾತನಾಡಿ, ಪ್ರಥಮ ಚಿಕಿತ್ಸೆ ತರಬೇತಿ ಪಡೆದು ವ್ಯಕ್ತಿಗಳು ಅಪಘಾತ ಸಂಭವಿಸಿದ ಒಬ್ಬ ವ್ಯಕ್ತಿಯ ಜೀವ ಉಳಿಸಿದರೆ ಅವರ ಜೀವನ ಧನ್ಯವಾಗುತ್ತದೆ. ಭೂಮಿಯ ಮೇಲೆ ಜನಿಸಿದ ಮೇಲೆ ತಾಯಿ-ತಂದೆ, ಗುರುಗಳ ಹಾಗೂ ಸಮಾಜದ ಋಣ ತಿರಿಸಬೇಕಾಗುತ್ತದೆ. ಸಮಾಜದ ಋಣ ತಿರಿಸಲು ಪ್ರಥಮ ಚಿಕಿತ್ಸೆ ಬಹು ಉಪಯುಕ್ತವಾಗಿದೆ. ತೊಂದರೆಯಲ್ಲಿರುವವರಿಗೆ ಸಹಾಯ ಮಾಡಿ ಸಮಾಜದ ಋಣವನ್ನು ತಿರಿಸಬಹುದು. ಪ್ರಥಮ ಚಿಕಿತ್ಸೆಯನ್ನು ಸಮಾಜ ಸೇವೆಯಾಗಿ ಬಳಸಿಕೊಂಡರೆ ಅಂಥವರು ಹಲವರ ಜೀವ ಉಳಿಸಿ ದೇವರಿಗೆ ಸಮಾನರಾಗಿ ಹೊರಹೊಮ್ಮುವರು. ಪ್ರಥಮ ಚಿಕಿತ್ಸೆ ತರಬೇತಿಯನ್ನು ತಾತ್ಸಾರ ಭಾವದಿಂದ ನೋಡದೇ ಸಂಪೂರ್ಣ ಹಾಗೂ ಪರಿಪೂರ್ಣ ಪ್ರಥಮ ಚಿಕಿತ್ಸೆ ಕ್ರಮಗಳನ್ನು ತಿಳಿಯಬೇಕೆಂದು ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವೈದ್ಯ ಡಾ|| ಮಲ್ಲಾರಾವ ಮಲ್ಲೆ, ಡಾ|| ಶರಣಬಸಪ್ಪ ಕೋಳಾರ ಪ್ರಥಮ ಚಿಕಿತ್ಸೆ ತರಬೇತಿ ನೀಡಿದರು. ರೆಡ್‍ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ರವೀಂದ್ರ ಶಾಬಾದಿ ಹಾಜರಿದ್ದರು.

ಶೀಘ್ರದಲ್ಲಿ 700 ವಾರ್ಡನ್‍ಗಳ ನೇಮಕ
**********************************
ಕಲಬುರಗಿ,ಆಗಸ್ಟ್.02.(ಕ.ವಾ.)-ರಾಜ್ಯದಲ್ಲಿ ಖಾಲಿಯಿರುವ 700 ವಸತಿ ನಿಲಯಗಳ ವಾರ್ಡನ್‍ಗಳ ನೇಮಕಕ್ಕೆ ಕ್ರಮ ಜರುಗಿಸಲಾಗಿದ್ದು, ಶೀಘ್ರದಲ್ಲಿ ಭರ್ತಿ ಮಾಡಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಗಳ ಸರ್ಕಾರ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಆಡಳಿತಾಧಿಕಾರಿ ಮೊಹಮ್ಮದ್ ಮೊಹಸಿನ್ ಅವರು ತಿಳಿಸಿದರು.
ಅವರು ಬುಧವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಅಧಿಕಾರಿಗಳೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲಬುರಗಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ 130 ವಸತಿ ನಿಲಯಗಳಲ್ಲಿ ಸುಮಾರು 9430 ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಈ ಪೈಕಿ ಶೇ. 75 ಹಿಂದುಳಿದ ವರ್ಗ ಮತ್ತು ಶೇ. 25 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಈ ವಿದ್ಯಾರ್ಥಿಗಳನ್ನು ಮೇರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಆದಾಗ್ಯೂ ವಸತಿ ನಿಲಯಗಳ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಶೇ. 79ರಷ್ಟಿದ್ದು, ಇದನ್ನು ಶೇ. 100ಕ್ಕೆ ಹೆಚ್ಚಿಸಬೇಕು. ಇದಕ್ಕಾಗಿ ವಸತಿ ನಿಲಯ ವಾರ್ಡನ್‍ಗಳಿಗೆ ಪುನಶ್ಚೇತನ ತರಬೇತಿ ನೀಡಿ ವಾರ್ಡನ್‍ಗಳು ರಾತ್ರಿ ವೇಳೆ ವಸತಿ ನಿಲಯದ ಮಕ್ಕಳಿಗೆ ಪಾಠ ಮಾಡುವ ಮೂಲಕ ಅವರ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಪರೀಕ್ಷೆಯಲ್ಲಿ ಉತ್ತರ ಬರುತ್ತಿದ್ದರೂ ಅದನ್ನು ಸರಿಯಾದ ಕ್ರಮದಲ್ಲಿ ಬರೆಯಲು ಬರುವುದಿಲ್ಲ. ಈ ನಿಟ್ಟಿನಲ್ಲಿ ಮಕ್ಕಳಿಗೆ ಬರವಣಿಗೆ ಕೌಶಲ್ಯವನ್ನು ವಾರ್ಡನ್‍ಗಳು ಹೇಳಿ ಕೊಡಬೇಕೆಂದು ತಿಳಿಸಿದರು.
ರಾಜ್ಯದ ಎಲ್ಲ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿಗಳ ಮತ್ತು ವಾರ್ಡನ್‍ಗಳ ಹಾಜರಾತಿಯನ್ನು ಬಯೋಮೆಟ್ರಿಕ್ ವಿಧಾನದಿಂದ ಪಡೆಯಲಾಗುತ್ತಿದೆ. ಇದರಿಂದ ವಸತಿ ನಿಲಯಗಳಲ್ಲಿ ವಾಸವಾಗಿರುವ ವಿದ್ಯಾರ್ಥಿಗಳ ಸಂಖ್ಯೆ ನಿಖರವಾಗಿ ತಿಳಿದು ಇಲಾಖೆಗೆ ಶೇ. 30ರಷ್ಟು ಉಳಿತಾಯವಾಗುತ್ತಿದೆ ಎಂದು ತಿಳಿಸಿದ ಅವರು ಹಲವು ಸಂಘ ಸಂಸ್ಥೆಗಳಿಗೆ ದೇವರಾಜ ಅರಸ ಭವನ ನಿರ್ಮಿಸಲು ಮಂಜೂರಾತಿ ನೀಡಲಾಗಿದೆ. ಅವರು ಭವನ ನಿರ್ಮಿಸಲು ಅನುದಾನ ಸಹಿತ ಲಭ್ಯವಿದೆ. ಆದರೆ ಸಾಕಷ್ಟು ಸಂಘ ಸಂಸ್ಥೆಗಳು ಭವನ ನಿರ್ಮಿಸಲು ಮುಂದೆ ಬರುತ್ತಿಲ್ಲ. ಅಂಥವರ ಮಂಜೂರಾತಿಯನ್ನು ರದ್ದುಪಡಿಸುವಂತೆ ತಿಳಿಸಿದರು.
ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಮಾತನಾಡಿ, ಕಲಬುರಗಿ ವಿಭಾಗದಲ್ಲಿ ಖಾಲಿಯಿರುವ ಡಿ ವೃಂದದ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಲ್ಲಿ ಖಾಲಿಯಿರುವ ಮತ್ತಿತರ ಹುದ್ದೆಗಳ ವಿವರವನ್ನು ನೀಡಿದಲ್ಲಿ ಅವುಗಳಲ್ಲಿ ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಜರುಗಿಸಬಹುದಾಗಿದೆ. ಜಿಲ್ಲೆಯಲ್ಲಿ 71 ವಸತಿ ನಿಲಯ ಕಟ್ಟಡಗಳ ನಿರ್ಮಾಣ ಕೈಗೊಂಡಿದ್ದು, 25 ವಸತಿ ನಿಲಯಗಳು ಪ್ರಗತಿಯಲ್ಲಿವೆ. ಇವುಗಳನ್ನು ಅನುಷ್ಠಾನ ಸಂಸ್ಥೆಗಳು ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದರು. ನೂತನ ವಸತಿ ನಿಲಯ ಕಟ್ಟಡಗಳು ಬೇಕಾದಲ್ಲಿ ಇಲಾಖೆ ನೀಡುವ ಅನುದಾನದ ಜೊತೆಗೆ ಹೆಚ್ಚಿನ ಅನುದಾನ ಬೇಕಾದಲ್ಲಿ ಹೆಚ್.ಕೆ.ಆರ್.ಡಿ.ಬಿ. ವತಿಯಿಂದ ನೀಡಲಾಗುವುದು. ವಸತಿ ನಿಲಯಗಳಲ್ಲಿ ಅಳವಡಿಸಿರುವ ಬಯೋಮೆಟ್ರಿಕ್ ಹಾಜರಾತಿಯಲ್ಲಿ ಕಡ್ಡಾಯವಾಗಿ ವಾರ್ಡನ್‍ಗಳು ದಿನಕ್ಕೆ ಮೂರು ಬಾರಿ ಹಾಗೂ ವಿದ್ಯಾರ್ಥಿಗಳು ಎರಡು ಬಾರಿ ಹಾಜರಾತಿ ನೀಡಬೇಕು. ಈ ಕುರಿತು ಶೀಘ್ರ ಎಲ್ಲ ವಸತಿ ನಿಲಯಗಳಿಗೆ ಆದೇಶ ಹೊರಡಿಸಲಾಗುವುದು ಎಂದರು.
ಸಭೆಯಲ್ಲಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಜಹೀರಾ ನಸೀಂ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಮೆಹಬೂಬ ಪಾಷಾ ಕಾರಟಗಿ, ವಕ್ಫ್ ಅಧಿಕಾರಿಗಳು, ತಹಶೀಲ್ದಾರರು ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ವಕ್ಫ್ ಆಸ್ತಿಗಳ ಗಜೆಟ್ ನೋಟಿಫಿಕೇಶನ್ ಮಾಡಲು ಆದೇಶ
**************************************************
ಕಲಬುರಗಿ,ಆಗಸ್ಟ್.02.(ಕ.ವಾ.)-ಕಲಬುರಗಿ ಜಿಲ್ಲೆಯ ವಕ್ಫ್ ಇಲಾಖೆಯಡಿ ನೂತನವಾಗಿ 497 ಆಸ್ತಿಗಳು ನೋಂದಣಿಯಾಗಿವೆ. ಈ ಪೈಕಿ 455 ಆಸ್ತಿಗಳ ಸರ್ವೇ ಪೂರ್ಣಗೊಂಡಿವೆ. ಅವುಗಳ ಮಾಹಿತಿಯನ್ನು ಶೀಘ್ರವೇ ಗಜೆಟ್ ನೋಟಿಫಿಕೇಶನ್ ಮಾಡುವಂತೆ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ತಿಳಿಸಿದರು.
ಅವರು ಬುಧವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಅಧಿಕಾರಿಗಳೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸುಮಾರು ಒಟ್ಟು 3400 ವಕ್ಫ್ ಸಂಸ್ಥೆಗಳ ಮಾಹಿತಿ ಲಭ್ಯವಿದ್ದು, ಇವುಗಳಡಿ ಹಲವಾರು ಸ್ವತ್ತುಗಳಿವೆ. ಅವುಗಳಲ್ಲಿ ಬಹಳಷ್ಟು ಆಸ್ತಿಗಳು ಒತ್ತುವರಿಯಾಗಿರುವುದು ತಿಳಿದು ಬಂದಿದೆ. ಅವುಗಳ ನಿಖರ ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸಹಾಯಕ ಆಯುಕ್ತ ಹಾಗೂ ತಹಶೀಲ್ದಾರನ್ನೊಳಗೊಂಡ ಸಭೆಯನ್ನು ಕರೆಯಲಾಗುವುದು. ವಕ್ಫ್ ಅಧಿಕಾರಿಗಳು ವಕ್ಫ್ ಆಸ್ತಿಗಳ ಅತಿಕ್ರಮಣವನ್ನು ತೆರವುಗೊಳಿಸಲು ಸರ್ಕಾರ ಈ ಹಿಂದೆ ಹೊರಡಿಸಿರುವ ಆದೇಶಗಳನ್ನು ಹಾಗೂ ವಕ್ಫ್ ಆಸ್ತಿಗಳ ವಿವರವನ್ನು ನೀಡುವಂತೆ ತಿಳಿಸಿದರು.
ಕಲಬುರಗಿ ಜಿಲ್ಲೆಯ 96 ವಕ್ಫ್ ಆಸ್ತಿಗಳಲ್ಲಿ ಆಗಿರುವ ಅತಿಕ್ರಮಣವನ್ನು ತೆರವುಗೊಳಿಸಲು ಸರ್ಕಾರ ಆದೇಶ ಹೊರಡಿಸಿತ್ತು. ಈ ಪೈಕಿ 21 ಆಸ್ತಿಗಳ ಅತಿಕ್ರಮಣ ತೆರವುಗೊಳಿಸಲಾಗಿದೆ. ಉಳಿದ ಆಸ್ತಿಗಳ ಅತಿಕ್ರಮಣ ತೆರವುಗೊಳಿಸಲು ಸಾಧ್ಯವಾಗಿಲ್ಲ. 44 ಪ್ರಕರಣಗಳು ಅತಿಕ್ರಮಣ ತೆರವಿಗೆ ಯೋಗ್ಯವಾಗಿವೆ. ಕಲಬುರಗಿಯ ವಿವಿಧ ತಾಲೂಕುಗಳಲ್ಲಿ 250 ಎಕರೆ ಪ್ರದೇಶ ಅತಿಕ್ರಮಣವಾಗಿದೆ. ನಗರ ಪ್ರದೇಶದಲ್ಲಿ 97 ಎಕರೆ ಅತಿಕ್ರಮಣವಾಗಿದ್ದು, ವಕ್ಫ್ ಇಲಾಖೆಯವರು 33 ಎಕರೆ ಅತಿಕ್ರಮಣವನ್ನು ತೆರವುಗೊಳಿಸಿದ್ದಾರೆ. ಉಳಿದ ಎಲ್ಲ ಅತಿಕ್ರಮಣವಾದ ಆಸ್ತಿಯನ್ನು ಆದಷ್ಟು ಬೇಗ ತೆರವುಗೊಳಿಸಲು ಕ್ರಮ ಜರುಗಿಸಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಮಾಹಿತಿಯನ್ನು ಸಂಗ್ರಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಜಹೀರಾ ನಸೀಂ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಮೆಹಬೂಬ ಪಾಷಾ ಕಾರಟಗಿ, ವಕ್ಫ್ ಅಧಿಕಾರಿಗಳು, ತಹಶೀಲ್ದಾರರು ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಗಡಿ ಪ್ರದೇಶ ಅಭಿವೃದ್ಧಿ ಅಧ್ಯಕ್ಷರ ಪ್ರವಾಸ
***********************************
ಕಲಬುರಗಿ,ಆಗಸ್ಟ್.02.(ಕ.ವಾ.)-ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಅವರು ಆಗಸ್ಟ್ 3ರಂದು ಯಾದಗಿರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಗುರುಮಿಠಕಲ್ ಮತಕ್ಷೇತ್ರದ 2017-18ರ ಆಯವ್ಯಯದಲ್ಲಿ ಘೋಷಣೆಯಾದ ಕೆರೆಗಳ ನೀರು ತುಂಬಿಸುವ ಯೋಜನೆಯಡಿಯಲ್ಲಿ ಬರುವ ಕೆರೆಗಳ ಪರಿವೀಕ್ಷಣೆ ಮಾಡಿ ಯಾದಗಿರಿಯಿಂದ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಆಗಸ್ಟ್ 4ರಂದು ಕಲಬುರಗಿಯಿಂದ ಯಾದಗಿರಿಗೆ ಪ್ರಯಾಣಿಸಿ, ಮಧ್ಯಾಹ್ನ 12 ಗಂಟೆಗೆ ಸಾರ್ವಜನಿಕರನ್ನು ಭೇಟಿ ಮಾಡಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು. ಆಗಸ್ಟ್ 5ರಂದು ಕಲಬುರಗಿಯಿಂದ ಯಾದಗಿರಿಗೆ ಪ್ರಯಾಣಿಸಿ, ಸೈದಾಪುರ, ಅಜಲಾಪುರ, ಬದ್ದೇಪಲ್ಲಿ, ಗ್ರಾಮಗಳ ಸಿಸಿ. ರಸ್ತೆ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು. ಆಗಸ್ಟ್ 6 ಹಾಗೂ 7ರಂದು ಕಲಬುರಗಿಯಿಂದ ಯಾದಗಿರಿ ಮತ್ತು ಗುರುಮಿಠಕಲ್‍ಗೆ ಪ್ರಯಾಣಿಸಿ, ಸಾರ್ವಜನಿಕರನ್ನು ಭೇಟಿಯಾಗಿ ಕಲಬುರರಿಯಲ್ಲಿ ವಾಸ್ತವ್ಯ ಮಾಡುವರು.

ಆಗಸ್ಟ್ 10ರಂದು ಪಿ.ಪಿ.ಪಿ. ಯೋಜನೆಯಡಿ ಐ.ಟಿ.ಐ. ಪ್ರವೇಶ
*****************************************************
ಕಲಬುರಗಿ,ಆಗಸ್ಟ್.02.(ಕ.ವಾ.)-ಚಿತ್ತಾಪುರ ತಾಲೂಕಿನ ವಾಡಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪಿಪಿಪಿ ಯೋಜನೆಯಡಿಯಲ್ಲಿ (ಎನ್.ಸಿ.ವಿ.ಟಿ.) 2017-18ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಎರಡು ವರ್ಷದ ಫಿಟ್ಟರ್ ವೃತ್ತಿಯ 5 ಸ್ಥಾನಗಳು ಹಾಗೂ ಒಂದು ವರ್ಷದ ವೆಲ್ಡರ್ ವೃತ್ತಿಯ 10 ಸ್ಥಾನಗಳು ಲಭ್ಯವಿದೆ. ಈ ಸ್ಥಾನಗಳಿಗೆ ಕೇಂದ್ರ ಸರ್ಕಾರದ ಡಿ.ಜಿ.ಇ.ಟಿ. ನಿಯಮಾವಳಿಯಂತೆ ಬಹಿರಂಗ ಹರಾಜಿನ ಮೂಲಕ ಪ್ರವೇಶ ನೀಡಲಾಗುತ್ತದೆ ಎಂದು ವಾಡಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಚಂದ್ರಕಾಂತ ತಿಳಿಸಿದ್ದಾರೆ.
ಈ ಹಿಂದೆ ಆನ್‍ಲೈನ್‍ನಲ್ಲಿ ಅರ್ಜಿಯಲ್ಲಿ ಸಲ್ಲಿಸದೇ ಇರುವ ಮತ್ತು 10ನೇ ತರಗತಿ ಪೂರಕ ಪರೀಕ್ಷೆಯಲ್ಲಿ ಪಾಸಾದ ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲ ಮೂಲ ದಾಖಲಾತಿಗಳೊಂದಿಗೆ 2017ರ ಆಗಸ್ಟ್ 10ರಂದು ಬೆಳಿಗ್ಗೆ 11 ಗಂಟೆಗೆ ವಾಡಿಯ ಗಾಂಧಿ ನಗರದ ರಾವೂರ ಆಸ್ಪತ್ರೆ ಎದುರುಗಡೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9740621819ನ್ನು ಸಂಪರ್ಕಿಸಲು ಕೋರಿದೆ.
ಆಗಸ್ಟ್ 10ರವರೆಗೆ ಅಮರ್ಜಾ ಯೋಜನೆಯ ಅಚ್ಟುಕಟ್ಟು ಪ್ರದೇಶಕ್ಕೆ ನೀರು ಬಿಡುಗಡೆ
ಕಲಬುರಗಿ.ಆಗಸ್ಟ್.02.(ಕ.ವಾ.)-ಆಳಂದ ಶಾಸಕರ ಸೂಚನೆ ಮೇರೆಗೆ ಅಮರ್ಜಾ ಯೋಜನೆಯ ಬಲದಂಡೆ ಕಾಲುವೆ ಮತ್ತು ಎಡದಂಡೆ ಕಾಲುವೆಗಳಿಗೆ ಆಗಸ್ಟ್ 10ರವರೆಗೆ ನೀರು ಬಿಡಲಾಗುತ್ತಿದೆ. ಈ ಯೋಜನೆಯ ಅಚ್ಟುಕಟ್ಟು ಪ್ರದೇಶದ ಎಲ್ಲ ರೈತರು ಇದರ ಸದುಪಯೋಗ ಪಡೆಯಬೇಕೆಂದು ಕರ್ನಾಟಕ ನೀರಾವರಿ ನಿಗಮದ ಕಲಬುರಗಿ ಐ.ಪಿ.ಸಿ. ವಿಭಾಗ ನಂ. 1ರ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಅಖಿಲ ಭಾರತ ವೃತ್ತಿ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
*********************************************************
ಕಲಬುರಗಿ.ಆಗಸ್ಟ್.02.(ಕ.ವಾ.)-ಅಖಿಲ ಭಾರತ ವೃತ್ತಿ ಪರೀಕ್ಷೆಯು 2017ರ ಆಗಸ್ಟ್ 10ರವರೆಗೆ ಪ್ರತಿದಿನ ಬೆಳಗಿನ 9.30 ರಿಂದ ಮಧ್ಯಾಹ್ನ 2.30 ಗಂಟೆಯವರೆಗೆ ಕಲಬುರಗಿ ನಗರದ 5 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ.
ಈ ಪರೀಕ್ಷೆಗಳಲ್ಲಿ ಅಕ್ರಮ ಮತ್ತು ನಕಲು ಅವ್ಯವಹಾರ ತಡೆಯಲು ಹಾಗೂ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಅನುವಾಗುವಂತೆ ಈ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯ 200 ಮೀಟರ್ ಪ್ರದೇಶÀದಲ್ಲಿ 1973ರ ಸಿಆರ್.ಪಿ.ಸಿ. ಕಾಯ್ದೆಯ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿರಾಕ್ಸ್/ಪುಸ್ತಕ ಅಂಗಡಿಗಳನ್ನು ಮುಚ್ಚುವಂತೆ ಕಲಬುರಗಿ ತಹಸೀಲ್ದಾರ್ ಅಶೋಕ ಹಿರೊಳ್ಳಿ ಅವರು ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕೋಣೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಮೊಬೈಲ್ ಹಾಗೂ ಇತರೆ ಚಿಕ್ಕ ಎಲೆಕ್ಟ್ರಾನಿಕ್ಸ್ ವಸ್ತು ಮತ್ತು ಚಿಕ್ಕಗಾತ್ರದ ಪುಸ್ತಕ ಸೇರಿದಂತೆ ಮತ್ತಿತರ ಯಾವುದೇ ವಸ್ತುಗಳನ್ನು ತರಕೂಡದು ಎಂದು ಸೂಚಿಸಿದ್ದಾರೆ.

ಆಗಸ್ಟ್ 3ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
********************************************
ಕಲಬುರಗಿ.ಆಗಸ್ಟ್.02.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11ಕೆ.ವಿ. ಶಕ್ತಿ ನಗರ, 11 ಕೆ.ವಿ. ಟಿ.ವಿ. ಸ್ಟೇಶನ್ ಹಾಗೂ 11ಕೆವಿ. ಮೆಹಬೂಬನಗರ ಫೀಡಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸ ಕಾರ್ಯಕೈಗೊಳ್ಳುವ ಪ್ರಯುಕ್ತ ಆಗಸ್ಟ್ 3ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಫೀಡರುಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ಅಂದು ಬೆಳಗಿನ 10.30 ರಿಂದ ಸಂಜೆ 4.30 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯವಾಗುವ ಬಡಾವಣೆಗಳ ಮತ್ತು ಸಮಯದ ವಿವರ ಇಂತಿದೆ.
11 ಕೆ.ವಿ ಶಕ್ತಿ ನಗರ: ಗೋದುತಾಯಿ ನಗರ, ಭಗವತಿ ನಗರ, ಕೋತಂಬರಿ ಲೇಔಟ್, ಸಿದ್ದಾರ್ಥ ನಗರ, ಕಾಂತಾ ಕಾಲೋನಿ, ಘಾಟ್ಗೆ ಲೇಔಟ್, ಕೊತಂಬರಿ ಲೇಔಟ್, ಶಕ್ತಿ ನಗರ, ಸಿ.ಐ.ಬಿ. ಕಾಲೋನಿ, ಕೇಡೆಕರ ಲೇಔಟ್, ಎಂ.ಎಸ್.ಕೆ. ಮಿಲ್, ವಿದ್ಯಾನಗರ, ಜಿ.ಡಿ.ಎ, ಬಸ್ ಸ್ಟ್ಯಾಂಡ್, ಎಂ.ಎಸ್.ಕೆ. ಮಿಲ್ ರೆಸಿಡೆನ್ಸ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11 ಕೆ.ವಿ ಟಿ.ವಿ.ಸ್ಟೇಶನ್: ಮುನಿಂ ಸಂಘ, ಕಾಕಡೆ ಚೌಕ್, ರಾಮನಗರ, ರೇವಣ ಸಿದ್ದೇಶ್ವರ ಕಾಲೋನಿ, ಕೆ.ಕೆ. ನಗರ, ಶಿವಾಜಿ ನಗರ, ಭವಾನಿ ನಗರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.




11 ಕೆ.ವಿ ಮಹೆಬೂಬ್ ನಗರ: ಸೈಯ್ಯದ್ ಗಲ್ಲಿ, ಜಲಾಲವಾಡಿ, ಪಯನ್À, ಪಾಶಾಪುರ, ದರ್ಗಾ, ಹಳೆಕಾಲಿ ಗುಮಜ್, ಮಕಬರಾ, ಬಡಿದೇವಡಿ, ಛೋಟಾ ದೆವಡಿ, ದರ್ಗಾ ಮತ್ತು ನೂರ್ ಬಾಗ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.


ಹೀಗಾಗಿ ಲೇಖನಗಳು NEWS AND PHOTO DATE: 02-08-2017

ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 02-08-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 02-08-2017 ಲಿಂಕ್ ವಿಳಾಸ https://dekalungi.blogspot.com/2017/08/news-and-photo-date-02-08-2017.html

Subscribe to receive free email updates:

0 Response to "NEWS AND PHOTO DATE: 02-08-2017"

ಕಾಮೆಂಟ್‌‌ ಪೋಸ್ಟ್‌ ಮಾಡಿ