ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿಸಿ

ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿಸಿ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿಸಿ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿಸಿ
ಲಿಂಕ್ : ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿಸಿ

ಓದಿ


ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿಸಿ


ಕೊಪ್ಪಳ ಆ. 22 (ಕರ್ನಾಟಕ ವಾರ್ತೆ):  ಗಣೇಶ ಚತುರ್ಥಿ ಹಬ್ಬ ಬಂದಿದೆ. ಹಲವು ದಿನಗಳ ಕಾಲ ನಾಡಿನ ಎಲ್ಲೆಡೆ ಗಣೇಶ ಮೂರ್ತಿ ಸ್ಥಾಪಿಸಿ ಆರಾಧಿಸುವ ಸಾಂಸ್ಕøತಿಕ  ಪರಂಪರೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಹಬ್ಬವನ್ನು ಆಚರಿಸುವ ಎಲ್ಲಾ ನಾಗರಿಕರು ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಸ್ಥಾಪಿಸಿ ಆಚರಿಸಿದರೆ, ಪರಿಸರ ರಕ್ಷಣೆ ಮಾಡಿದ ಕೀರ್ತಿ ಹಾಗೂ ಭಗವಂತನ ಕೃಪೆ ಎಲ್ಲರಿಗೂ ದೊರೆಯಲಿದೆ. 
     ಗಣೇಶ ಹಬ್ಬದ ಸಂದರ್ಭದಲ್ಲಿ ನಮಗೆ ಅರಿವಿಲ್ಲದೆ ಪರಿಸರ ಮಾಲಿನ್ಯವಾಗುತ್ತಿದ್ದು, ಇದನ್ನು ತಡೆಗಟ್ಟಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಯತ್ನಿಸುತ್ತಿದೆ.
  ರಾಸಾಯನಿಕಯುಕ್ತ ಬಣ್ಣ ಬಳಕೆ ಮಾಡಿದ ಗಣೇಶ ಮೂರ್ತಿಯಿಂದಾಗ, ನೆಲ, ಜಲದ ಮಾಲಿನ್ಯ ಆಗುವುದಲ್ಲದೆ, ಅಂತಹ ನೀರು ಬಳಕೆಯಿಂದ, ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.  ಸಾಂಪ್ರದಾಯಿಕವಾಗಿ ಜೇಡಿ ಮಣ್ಣಿನಿಂದಲೇ ಪುಟ್ಟದಾಗಿ ಗಣೇಶನ ಮೂರ್ತಿಗಳನ್ನು ತಯಾರಿಸಲು ತಯಾರಕರು ಮುಂದಾಗಬೇಕು. ಇಂಥ ಮಣ್ಣಿನ ಮೂರ್ತಿಗಳನ್ನೇ ಖರೀದಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಬೇಕು. ರಾಸಾಯನಿಕಯುಕ್ತ ಬಣ್ಣ ಬಳಿದಿರುವ ಮೂರ್ತಿಗಳನ್ನು ಸಾರ್ವಜನಿಕರು ಆದಷ್ಟು ತಿರಸ್ಕರಿಸಬೇಕು. ವಿಷಯುಕ್ತ ಮತ್ತು ನೀರಿನಲ್ಲಿ ಕರಗದ ರಾಸಾಯನಿಕಗಳನ್ನು ಬಳಸಿದ ಗಣಪನ ಮೂರ್ತಿಗಳಿಂದ ಉಂಟಾಗುವ ಅಪಾಯ, ಜಲಮೂಲಗಳಿಗೆ ಒದಗುವ ಹಾನಿಯನ್ನು ಅರಿತು ಸಾರ್ವಜನಿಕರು ಇನ್ನಾದರೂ ಜಾಗೃತಗೊಳ್ಳಬೇಕು.
 ಗಣೇಶನ ಮೂರ್ತಿಗಳನ್ನು ವಿಜಸರ್ಜಿಸುವಾಗ ಮಾಲಿನ್ಯದ ಪ್ರಮಾಣವನ್ನು ಸಾಕಷ್ಟು ತಗ್ಗಿಸಬೇಕಿದೆ. ಹೆಚ್ಚಿನ ಜನದಟ್ಟಣೆಯಾಗದಂತೆ ನೋಡಿಕೊಂಡು, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಎಚ್ಚರಿಕೆ ವಹಿಸಬೇಕು.  ಈ ನಿಟ್ಟಿನಲ್ಲಿ ಪೊಲೀಸ್ ಹಾಗೂ ಸ್ಥಳೀಯ ಸಂಸ್ಥೆಗಳ ಪಾತ್ರ ಇದರಲ್ಲಿ ಮಹತ್ವದ್ದಾಗಿದೆ.
ಸ್ಥಳೀಯ ಸಂಸ್ಥೆಗಳು, ಕೆರೆ-ಬಾವಿಗಳಲ್ಲಿ ಮೂರ್ತಿ ವಿಸರ್ಜಿಸುವಾಗ ಗಣೇಶನಿಗೆ ಮಾಡಿದ ಪೂಜಾ ವಸ್ತುಗಳನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಲು ಸಾಕಷ್ಟು ಪ್ರಮಾಣದಲ್ಲಿ ತಾತ್ಕಾಲಿಕ ಹೊಂಡ ಮತ್ತು ತೊಟ್ಟಿಗಳನ್ನು ನಿರ್ಮಿಸಬಹುದಾಗಿದ್ದು, ಅಲಂಕಾರದ ವಸ್ತುಗಳನ್ನು (ಕಾಗದ, ಪ್ಲಾಸ್ಟಿಕ್‍ನಲ್ಲಿ ಮಾಡಿದ ಹೂವು, ವಸ್ತ್ರ, ಇತ್ಯಾದಿ) ಪ್ರತ್ಯೇಕ ಮಾಡಿ ಅವುಗಳ ಮರುಬಳಕೆ ಅಥವಾ ಜೈವಿಕ ಕರಗಿಸುವಿಕೆಗೆ ಮುಂದಾಗಬೇಕು. ಇಲ್ಲಿ ಜೈವಿಕವಾಗಿ ಕರಗದ ವಸ್ತುಗಳನ್ನು ವಿಸರ್ಜನೆಯಾದ 24 ಗಂಟೆಗಳ ಒಳಗೆ ಕಾನೂನು ರೀತ್ಯಾ ವಿಲೇವಾರಿ ಮಾಡಬೇಕಾಗುತ್ತದೆ. ವಿಸರ್ಜನಾ ಪ್ರದೇಶಗಳಲ್ಲಿ ಘನತ್ಯಾಜ್ಯ ವಸ್ತುಗಳನ್ನು ಸುಡುವುದಕ್ಕೆ ಅವಕಾಶ ನೀಡಬಾರದು.
ವಿಷಕಾರಿ ರಾಸಾಯನಿಕ ಲೋಹದ ಲೇಪದ, ಪ್ಲಾಸ್ಟರ್ ಆಫ್ ಪ್ಯಾರಿಸ್‍ನ ಗಣೇಶನ ಮೂರ್ತಿ ಬಳಕೆ ಮಾಡುವುದು ಸೂಕ್ತವಲ್ಲ. ಸಾದಾ ಜೇಡಿ ಮಣ್ಣಿನ ಮುದ್ದಾದ ಪುಟ್ಟ ಗಣೇಶ ಮೂರ್ತಿ ಸ್ಥಾಪಿಸಬೇಕು.  ಎಲೆ, ಹೂವುಗಳಿಂದ ಮಾಡಿದ ನೈಸರ್ಗಿಕ ಬಣ್ಣ ಹಚ್ಚಿದ ಗಣಪನನ್ನೇ ಪೂಜಿಸಿ. ಎಲ್ಲೂ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡದಂತೆ ನೋಡಿಕೊಳ್ಳಬೇಕು.
ಸಾಮೂಹಿಕವಾಗಿ ನಡೆಸುವ ಗಣೇಶನ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಿ. ಗಣೇಶ ಮೂರ್ತಿ ವಿಸರ್ಜಿಸುವ ಮುನ್ನ ಹೂವು, ವಸ್ತ್ರ, ಪ್ಲಾಸ್ಟಿಕ್ ಹಾರ ಎಲ್ಲವನ್ನೂ ತೆಗೆದು, ನಂತರವೇ ವಿಸರ್ಜನೆ ಮಾಡಬೇಕು.    ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಬೇಡಿ. ಪಟಾಕಿ ಹೊಗೆ ವಿಷಪೂರಿತವಾಗಿದೆ ಅಲ್ಲದೆ ರಸ್ತೆ ತುಂಬಾ ಕಸವಾಗುತ್ತದೆ.  ಗಡಚಿಕ್ಕುವ ಶಬ್ದವೂ ಕಿವಿಗೆ ಹಾಗೂ ಹೃದಯ ರೋಗಿಗಳಿಗೆ, ಮಕ್ಕಳಿಗೆ ಹಾನಿಕರ.  ಗಣೇಶ ಹಬ್ಬದಲ್ಲಿ ರಸ್ತೆ, ಚರಂಡಿಯಲ್ಲಿ ಹೂವಿನ ಹಾರ, ತಟ್ಟೆ, ಲೋಟ, ಎಲೆ ಎಸೆಯಬೇಡಿ, ಕಸದ ವಾಹನ ಬಳಸುವುದು ಸೂಕ್ತ.
     ಗಣೇಶ ಹಬ್ಬ ಎಲ್ಲ ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ಸಂಭ್ರಮವನ್ನು ಹಂಚಿಕೊಳ್ಳುವಂತಾಗಬೇಕು.  ಈ ನಿಟ್ಟಿನಲ್ಲಿ ಗಣೇಶ ಮೂರ್ತಿ ಸ್ಥಾಪಿಸುವವರು, ಸಾರ್ವಜನಿಕರ ಸಹಕಾರ ತುಂಬಾ ಅಗತ್ಯವಾಗಿದೆ. ಬನ್ನಿ, ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ ಹಾಗೂ ಪರಿಸರವನ್ನು ಸಂರಕ್ಷಿಸೋಣ ಎನ್ನುತ್ತಾರೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು.


ಹೀಗಾಗಿ ಲೇಖನಗಳು ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿಸಿ

ಎಲ್ಲಾ ಲೇಖನಗಳು ಆಗಿದೆ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿಸಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿಸಿ ಲಿಂಕ್ ವಿಳಾಸ https://dekalungi.blogspot.com/2017/08/blog-post_68.html

Subscribe to receive free email updates:

0 Response to "ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿಸಿ"

ಕಾಮೆಂಟ್‌‌ ಪೋಸ್ಟ್‌ ಮಾಡಿ