ಮಾವಿನ ಗಿಡಗಳ ಪುನಶ್ಚೇತನಕ್ಕೆ ರೈತರಿಗೆ ತೋಟಗಾರಿಕೆ ಇಲಾಖೆ ಸಲಹೆ

ಮಾವಿನ ಗಿಡಗಳ ಪುನಶ್ಚೇತನಕ್ಕೆ ರೈತರಿಗೆ ತೋಟಗಾರಿಕೆ ಇಲಾಖೆ ಸಲಹೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಮಾವಿನ ಗಿಡಗಳ ಪುನಶ್ಚೇತನಕ್ಕೆ ರೈತರಿಗೆ ತೋಟಗಾರಿಕೆ ಇಲಾಖೆ ಸಲಹೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಮಾವಿನ ಗಿಡಗಳ ಪುನಶ್ಚೇತನಕ್ಕೆ ರೈತರಿಗೆ ತೋಟಗಾರಿಕೆ ಇಲಾಖೆ ಸಲಹೆ
ಲಿಂಕ್ : ಮಾವಿನ ಗಿಡಗಳ ಪುನಶ್ಚೇತನಕ್ಕೆ ರೈತರಿಗೆ ತೋಟಗಾರಿಕೆ ಇಲಾಖೆ ಸಲಹೆ

ಓದಿ


ಮಾವಿನ ಗಿಡಗಳ ಪುನಶ್ಚೇತನಕ್ಕೆ ರೈತರಿಗೆ ತೋಟಗಾರಿಕೆ ಇಲಾಖೆ ಸಲಹೆ

ಕೊಪ್ಪಳ ಆ. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ತೋಟಗಾರಿಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ.  2015-16ನೇ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಮಾವನ್ನು ಸುಮಾರು 300 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಬೇನಿಶಾನ್, ಕೇಸರ್, ಮಲ್ಲಿಕಾ, ಆಪೂಸ್, ದಶಹರಿ ಮತ್ತು ಇತರೆ ತಳಿಗೆಳು ವರ್ಷದಿಂದ ವರ್ಷಕ್ಕೆ ವಿಸ್ತೀರ್ಣ ಹೆಚ್ಚುತ್ತಲೇ ಇದೆ.  ಆದರೆ ಉತ್ಪಾದನೆ 35,140 ಟನ್ ಮತ್ತು ಉತ್ಪಾದಕತೆ 12.70 ಟನ್/ ಹೆಕ್ಟರ್. ರಾಷ್ಟ್ರೀಯ ಅಂಕಿ ಅಂಶಗಳಿಗೆ ಹೊಲಿಸಿದರೆ ತುಂಬಾ ಕಡಿಮೆ ಇದೆ. 

    ಮಾವಿನ ತೋಪುಗಳಲ್ಲಿ ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆಯಾಗುತ್ತದೆ.  ಇಂತಹ ಮರಗಳು ರೋಗ/ ಕೀಟಗಳಿಗೆ ಆಶ್ರಯ ಮರಗಳಾಗುತ್ತವೆ.  ಇದರಿಂದಾಗಿ ಮತ್ತು ಕೆಲವು ಅನುವಂಶಿಕ ಕಾರಣಗಳಿಂದಾಗಿ ಇಳುವರಿ ಕುಸಿಯುತ್ತಿದೆ.  ಇವೆಲ್ಲಾ ಸಮಸ್ಯೆಗಳನ್ನು ಮೀರಿ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸಲು ಮಾವಿನಲ್ಲಿ ಸವರುವಿಕೆ ಇಂದಿನ ಅನಿವಾರ್ಯತೆಯಾಗಿದೆ.  ಈ ನಿಟ್ಟಿನಲ್ಲಿ ಮಾವಿನ ಗಿಡಗಳಿಗೆ ಪುನಶ್ಚೇತನ ಕೊಡಲು ತೋಟಗಾರಿಕೆ ಇಲಾಖೆಯು ರೈತರಿಗೆ ಸಲಹೆಗಳನ್ನು ನೀಡಿದೆ.
    ಮೇಲ್ಛಾವಣಿ ಅಥವಾ ಗಿಡದ ಚೌಕಟ್ಟಿನ ನಿರ್ವಹಣೆ ಎಂದರೆ ಕೆಲವು ರೆಂಬೆಗಳನ್ನು ಸವರುವುದರ ಮೂಲಕ ಚೌಕಟ್ಟಿನ ಮಾರ್ಪಾಟು ಮಾಡುವುದರಿಂದಾಗಿ ಐಚ್ಛಿಕ ಇಳುವರಿ ಮತ್ತು ಗುಣಮಟ್ಟದ ಹಣ್ಣುಗಳನ್ನು ಉತ್ಪಾದಿಸುವುದೇ ಮೇಲ್ಛಾವಣಿ ನಿರ್ವಹಣೆಯ ಮೂಲ ತತ್ವ ಇದರಿಂದಾಗಿ ಸೂರ್ಯ ರಶ್ಮಿಯ ಸದ್ಬಳಕೆಯಾಗಿ ಗಿಡದ ಹೆಚ್ಚಿನ ಭಾಗ ಸೂರ್ಯರಶ್ಮಿಗೆ ಮೈವೊಡ್ಡಿದಂತಾಗಿ “ಬಯೋಮಾಸ್” ವೃದ್ಧಿಯಾಗುತ್ತದೆ.  ಗಿಡಗಳಿಗೆ ಛತ್ರಿಯಂತೆ ಸುಂದರ ಆಕಾರ ಕೊಡುವುದೂ ಈ ಪ್ರಕ್ರಿಯೆಯ ಒಂದು ಭಾಗ.
    ಬೆಳಕು ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಅತ್ಯಂತ ಅವಶ್ಯಕ ಎಲೆಗಳು ಪತ್ರ ಹರಿತ್ತಿನ ಸಹಾಯದಿಂದ ಸೂರ್ಯರಶ್ಮಿಯನ್ನು (ಬೆಳಕು) ಉಪಯೋಗಿಸಿಕೊಂಡು ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ ಉತ್ಪಾದಿಸಿ ಅವುಗಳು ಅವಶ್ಯವಿರುವ ಸ್ಥಳಕ್ಕೆ, ಅಂದರೆ ಮೊಗ್ಗ, ಹೂ ಮತ್ತು ಹಣ್ಣುಗಳಿಗೆ ಕೊಂಡೊಯ್ಯತ್ತವೆ. ಉತ್ತಮ ಬೆಳಕು ಉತ್ತಮ ಮತ್ತು ಗುಣಮಟ್ಟದ ಉತ್ಪಾದನೆಗೆ ಸಹಕಾರಿ.  ಸಾಂದ್ರ ಪದ್ದತಿಯಲ್ಲಿ ನಾಟಿ ಮಾಡಿದಾಗ ಚೌಕಟ್ಟಿನ ನಿರ್ವಹಣೆ ಅತಿ ಮುಖ್ಯ.
ವಯಸ್ಸಾದ ಗಿಡಗಳ ಪುನಃಶ್ಚೇತನ :
************ ವಯಸ್ಸಾದ (25-30 ವರ್ಷಗಳ) ಮಾವಿನ ಮರಗಳಿಂದ ಕೊಯ್ಲು ಮಾಡುವುದು ಕಷ್ಟ.  ಅಲ್ಲದೆ ಇಚಿತಹ ಮರಗಳು ಕೀಟ/ ರೋಗಗಳಿಗೆ ಆಶ್ರಯ ನೀಡುತ್ತವೆ.  ಇಂತಹ ಮರಗಳಲ್ಲಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದೂ ಕಷ್ಟ.  ಆದ್ದರಿಂದ ಇಂತಹ ಮರಗಳನ್ನು ಕತ್ತರಿಸುವುದರ ಮೂಲಕ ಪುನಶ್ಚೇತನ ಗೊಳಿಸಿದರೆ ಉತ್ತಮ ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯ ಎಂಬುವುದು ಲಕ್ನೋ ಸಿ.ಎಸ್.ಆಯ್.ಎಚ್.ಎಸ್ ಸಂಸ್ಥೆ ನಡೆಸಿದ ಪ್ರಾತ್ಯಕ್ಷಿಕೆಗಳಿಂದ ರುಜುವಾತಾಗಿದೆ.
    ಇಂತಹ ಮರಗಳನ್ನು ಕತ್ತರಿಸಿ ಅಸ್ಥಿಪಂಜರದಂತೆ ಉಳಿಸಿಕೊಂಡು ನಂತರ ಶಿಫಾರಿತ ಗೊಬ್ಬರ ಪೋಷಕಾಂಶಗಳನ್ನು ನೀಡಿದಲ್ಲಿ ಚಿಗುರುಗಳು ಒತ್ತೊತ್ತಾಗಿ ಬರುತ್ತವೆ.  ಉತ್ತಮ ಆರೋಗ್ಯವಂತ ಚಿಗುರುಗಳನ್ನಿಟ್ಟುಕೊಂಡು ಉಳಿದವುಗಳನ್ನು ಕತ್ತರಿಸಿ ಹಾಕಬೇಕು.  ಇದರಂತೆಯೇ ಮೂರನೇ ಹಂತದಲ್ಲಿ ರೆಂಬೆಗಳಿಂದ ಬರುವ ಅನುಪಯುಕ್ತ ರೆಂಬೆಗಳನ್ನು ಕತ್ತರಿಸಿ ಹಾಕಬೇಕು.  ಇಂತಹ ಗಿಡಗಳು 2 ವರ್ಷಗಳ ನಂತರ ಫಲ ನೀಡಲು ಆರಂಭಿಸುತ್ತವೆ.  ಒಂದೆರಡು ವರ್ಷ ನಷ್ಟವಾದರೂ ಮುಂದಿನ ವರ್ಷಗಳಲ್ಲಿ ಲಾಭದಾಯಕ ಇಳುವರಿ ಪಡೆಯಬಹುದಾಗಿದೆ.  ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳಿದ್ದಾಗ ಒಂದು ಸಾಲು ಬಿಟ್ಟು ಇನ್ನೊಂದು ಸಾಲಿನಲ್ಲಿ ಗಿಡಗಳನ್ನು ಕತ್ತರಿಸಬೇಕು.  ನಂತರ ಇಂತಹ ಗಿಡಗಳು ಆರ್ಥಿಕ ಇಳುವರಿ ಕೊಡಲು ಆರಂಭಿಸಿದ ನಂತರ ಮೊತ್ತೊಂದು ಸಾಲಿನಲ್ಲಿನ ಗಿಡಗಳನ್ನು ಕತ್ತರಿಸಬೇಕು.  ಈ ವಿಧಾನವನ್ನು ಅನುಸರಿಸುವುದರ ಮೂಲಕ ಆರ್ಥಿಕ ನಷ್ಟವಾಗುವುದನ್ನು ತಡೆಯಬಹುದಾಗಿದೆ. 
ಮುಖ್ಯ ಉದ್ದೇಶಗಳು :
*********** ಒಣಗಿದ ರೋಗ ಮತ್ತು ಕೀಟ ಬಾಧೆಗೆ ಹಾಗೂ ಅನುಪಯುಕ್ತ ಕೊಂಬೆಗಳನ್ನು ಕತ್ತರಿಸಿ ತೆಗೆಯುವುದು.  ಒತ್ತಾಗಿ ಬೆಳೆದ ಹೊಸ ಚಿಗುರುಗಳನ್ನು ವಿರಳಗೊಳಿಸಿ ಸಾಧ್ಯವಾದರೆ ಮಧ್ಯದಲ್ಲಿ ಸೂರ್ಯನ ಕಿರಣಗಳು/ ಬೆಳಕು ಎಲ್ಲಾ ದಿಕ್ಕಿಗೂ ಬೀಳುವಂತೆ ಮಾಡುವುದು.  ಮರದ ಎತ್ತರವನ್ನು ಮಿತಿಗೊಳಿಸಿ ಎಲ್ಲಾ ಬೇಸಾಯ ಕ್ರಮ ಕೈಗೊಳ್ಳಲು ಸುಲಭವಾಗುವಂತೆ ಮಾಡುವುದು.  ಹಳೆಯ ರೆಂಬೆಗಳಿಂದ ಆಗುವ ಉತ್ಪಾದಕತೆ ನೇರವಾಗಿ ಬರುವ ರೆಂಬೆಗಳಿಗೆ ಹೋಲಿಸಿದರೆ ಹೆಚ್ಚಾಗಿರುತ್ತದೆ ಹಾಗೂ ಕೆಳಗೆ ಬರುವ ರೆಂಬೆಗಳನ್ನು ಬುಡದಿಂದ 4 ಅಡಿ ತನಕ ಕತ್ತರಿಸಿ ಉಳುಮೆ, ಗೊಬ್ಬರ ಹಾಕಲು, ಕಳೆ ತೆಗೆಯಲು ಸಹಕಾರಿಯಾಗುವಂತೆ ನೋಡಿಕೊಳ್ಳುವುದು. 
ಸವರುವಿಕೆ - ಫಸಲು ಬಿಡುತ್ತಿರುವ ಮಾವಿನ ಮರಗಳನ್ನು ಹಣ್ಣು ಕಟಾವು ಮಾಡಿದ ನಂತರ ಪ್ರತಿ ವರ್ಷವು ಸ್ವಲ್ಪ ಮಟ್ಟಿಗೆ ಸವರುವಿಕೆಯನ್ನು (ಶೇ. 25-30% ವನ್ನು ಕತ್ತರಿಸುವುದು) ಕೈಗೊಳ್ಳಬೇಕಾಗುತ್ತದೆ.  ಮರದ ಎತ್ತರ ಹಾಗೂ ಆಕಾರವನ್ನು ಕಾಪಾಡಬೇಕಾಗುತ್ತದೆ.  ಸಮರುವಿಕೆಯು ಮರದ ಆಕಾರ ಹಾಗೂ ಎತ್ತರವನ್ನು ಅವಲಂಭಿಸಿ ಮಧ್ಯದ ಹಾಗೂ ಒತ್ತಾದ ರೆಂಬೆಗಳನ್ನು ತೆಗೆಯುವುದರಿಂದ ಸಾಧಿಸಲಾಗುತ್ತದೆ.  ಗಾಳಿ ಹಾಗೂ ಸೂರ್ಯನ ಕಿರಣ ಬೀಳುವುದರಿಂದ ಉತ್ಪಾದಕತೆ ಹೆಚ್ಚಿಸಲು ಸಹಕಾರಿಯಾಗುತ್ತದೆ.
ಹೊಸ ಮಾವಿನ ಮರಗಳ ಸವರುವಿಕೆ :
*************ಆಕಾರ ನೀಡುವುದು, ಇದು ಅತ್ಯದಿಕ (ಹೈ-ಡೆನ್‍ಸಿಟಿ) ಬೇಸಯ ಪದ್ದತಿಯಲ್ಲಿ ಅತ್ಯವಶ್ಯಕ.  ನಾಟಿ ಮಾಡಿದ ಗಿಡವು 70-75 ಸೆಂ.ಮೀ ಉದ್ದ ಬೆಳೆದ ನಂತರ ತುದಿಯನ್ನು ಚಿವುಟುವುದರಿಂದ ಪ್ರಥಮ ರೆಂಬೆಗಳು ಬೆಳೆಯಲು ಪ್ರಾರಂಭಿಸುತ್ತವೆ.  ನಂತರ 2-3 ವಿವಿಧ ದಿಕ್ಕಿನಲ್ಲಿ ಬೆಳೆದ ಒಳ್ಳೆಯ ರೆಂಬೆಗಳನ್ನು ಉಳಿಸಿ, ಉಳಿದವುಗಳನ್ನು ತೆಗೆಯಬೇಕು.  ರೆಂಬೆಗಳು 15-20 ಸೆಂ.ಮೀ ಅಂತರದಲ್ಲಿರಬೇಕು.  4-6 ತಿಂಗಳಲ್ಲಿ ಈ ರೆಂಬೆಗಳು ಬೆಳೆಯಲು ಪ್ರಚೋದಿಸುವುದು.  ನಂತರ ತೃತೀಯ ರೆಂಬೆಗಳು ಬೆಳೆದು ಗಿಡವು ಛತ್ರಿ ಆಕಾರದಲ್ಲಿ ಬೆಳೆಯುತ್ತದೆ. 
ಸವರುವಿಕೆ ಮಾಡುವ ವಿಧಾನ - ಹಣ್ಣುಗಳನ್ನು ಕೊಯ್ಲು ಮಾಡಿದ ನಂತರ ಅಂದರೆ, ಜೂನ್ ನಿಂದ ಜುಲೈ ಮಾಹೆಯ ಅಂತ್ಯದೊಳಗೆ ಸವರುವಿಕೆಯನ್ನು ಮಾಡಬೇಕಾಗಿರುತ್ತದೆ.  ಫಸಲು ನೀಡುತ್ತಿರುವ ವಯಸ್ಸಾದ ಮರಗಳನ್ನು ಸವರುವಿಕೆಗೆಯನ್ನು ಕೈ ಕತ್ತರಿ, ಕೈ ಗರಗಸ, ರೆಂಬೆ ಕತ್ತರಿಸುವ ಕೈ ಕತ್ತರಿ ಹಾಗೂ ಯಾಂತ್ರೀಕೃತ ಗರಗಸಗಳಿಂದ ಸವರುವಿಕೆ ಮಾಡಬಹುದು. 
ತುದಿ ಸವರುವಿಕೆ :
********* ಹೊಸ ಚಿಗುರುಗಳನ್ನು 15 ಸೆಂ.ಮೀ ಹಿಂಬಾಗ ಅಥವಾ ಬಲಿತ ಭಾಗದವರೆಗೂ ಕತ್ತರಿಸುವುದರಿಂದ ಹೂ ಕಚ್ಚಲು ಹಾಗೂ ಮರದ ಎತ್ತರವನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ.  ದೊಡ್ಡ ಗಾತ್ರದ ರೆಂಬೆಯನ್ನು ಕತ್ತರಿಸುವಾಗ (ಒಡಗಿರುವ ಅಥವಾ ಒತ್ತಾಗಿರುವ) ರೆಂಬೆಯ ಬುಡದ ಪ್ರದೇಶವನ್ನು ಕನಿಷ್ಠ ಒಂದು ಅಂಗುಲ ಬಿಟ್ಟು ಕತ್ತರಿಸಬೇಕು.  ಹೀಗೆ ಮಾಡುವುದರಿಂದ ಕಾಲರ್ ನಲ್ಲಿ ಮರವು ಉತ್ಪಾದಿಸುವ ರಾಸಾಯನಿಕದಿಂದ ಕ್ರಿಮಿ/ ಕೀಟ/ ರೋಗಗಳು ಮರವನ್ನು ಪ್ರವೇಶಿಸುವುದನ್ನು ತಡೆಯುತ್ತದೆ ಹಾಗೂ ಗಾಯದ ಭಾಗವನ್ನು ಮುಚ್ಚುತ್ತದೆ.
ಸವರುವಿಕೆ ಮಾಡಿದ ನಂತರ ಮರಗಳ ನಿರ್ವಹಣೆ
************* ಕೊಂಬೆಯ ಕತ್ತರಿಸಿದ ಭಾಗಕ್ಕೆ ಬ್ಲೈಟ್ಯಾಕ್ಸ್ (ಒಂದು ಲೀಟರ್ 8-10 ಗ್ರಾಮ) ಶಿಲೀಂದ್ರ ನಾಶಕದಿಂದ ಅಂಟು ಮಾಡಿ, ಬಳಿಯುವುದರಿಂದ ರೋಗದ/ ಕೀಟದ ಹಾನಿ ತಡೆಯಬಹುದು.  ನಂತರ ಇಡೀ ಮರಕ್ಕೆ ಕ್ಲೋರೋಪಿರಫೆÇಸ್ (1 ಮಿ.ಲೀ/ 1ಲೀ) ಬ್ಯಾವಿಸ್ಟಿನ (1 ಗ್ರಾಂ/ ಲೀ) ಹಾಗೂ ಲ್ಯಾಂಬಡಿಸಲೋಥರಿನ್ (0.5ಮಿ.ಲೀ/ 1ಲೀ) ಪ್ರತಿ ಲೀಟರ್ ನೀರಿಗೆ ಬೆರಿಸಿ ಮರಗಳಿಗೆ ಸಿಂಪರಿಸುವುದು.  ಮರದ ಬುಡಗಳಿಗೆ ನೆಲದಿಂದ 2-3 ಅಡಿವರೆಗೂ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಹೀಲರ್ ಕಮ್ ಸೀಲರ್ (ಆರ್ಕಾರಕ್ಷಕ) ಔಷದಿಯನ್ನು ಲೇಪಿಸುವುದು.  ಪ್ರತಿ 10-15 ದಿನಗಳ ಅಂತರದಲ್ಲಿ ಲಭ್ಯವಿದ್ದಲ್ಲಿ ಪ್ರತಿ ಮರಕ್ಕೆ 50-60 ಲೀ ನೀರನ್ನು ನೀಡಬೇಕಾಗುತ್ತದೆ.  ಪ್ರತಿ ಮರಕ್ಕೆ ಶಿಫಾರಸ್ಸಿನಂತೆ ಮರಗಳ ವಯಸಿಗೆ ಅನುಗುಣವಾಗಿ ಗೊಬ್ಬರಗಳನ್ನು ನೀಡುವುದು.  ಇದಾದ ನಂತರ ಡಿಸೆಂಬರ ತಿಂಗಳಿನಲ್ಲಿ ಮತ್ತೊಮ್ಮೆ ಈ ಎಲ್ಲಾ ಚಟುವಟಿಕೆಗಳನ್ನು ಹಂತ ಹಂತವಾಗಿ 7-10 ದಿನಗಳ ಅಂತರದಲ್ಲಿ ಮಾಡಿ ಮುಗಿಸಬೇಕು. 
    ಪ್ರತಿವರ್ಷ ಮಾವಿನಲ್ಲಿ ಇಳುವರಿ ಪಡೆಯಲು ರಾಸಾಯನಿಕಗಳ ಬಳಕೆ – ಮಾವಿನ ಗಿಡಗಳಲ್ಲಿ ಪ್ರತಿ ವರ್ಷವೂ ಇಳುವರಿ ಪಡೆಯಲು ಪ್ಯಾಕ್ಲೋಬುಟ್ರಜಾಲ್ ಸಂಯುಕ್ತ ವಸ್ತುವನ್ನು (5 ಮಿ.ಲೀ 10 ಲೀಟರ್) ನೀರಿನಲ್ಲಿ ಬೆರೆಸಿ ಕಾಂಡದಿಂದ 90 ಸೆ.ಮೀ ದೂರದಲ್ಲಿ ಸೆಪ್ಟೆಂಬರ್/ ಅಕ್ಟೋಬರ್ ತಿಂಗಳುಗಳಲ್ಲಿ ವಯಸ್ಸಾದ ಗಿಡಗಳಿಗೆ ಉಚಪರಿಸಬೇಕು.  ಈ ರಾಸಾಯನಿಕ ಬಳಕೆಯನ್ನು ತಜ್ಞರ ಸಲಹೆ ಪಡೆದು ಮಾಡಬೇಕು.  ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. 


ಹೀಗಾಗಿ ಲೇಖನಗಳು ಮಾವಿನ ಗಿಡಗಳ ಪುನಶ್ಚೇತನಕ್ಕೆ ರೈತರಿಗೆ ತೋಟಗಾರಿಕೆ ಇಲಾಖೆ ಸಲಹೆ

ಎಲ್ಲಾ ಲೇಖನಗಳು ಆಗಿದೆ ಮಾವಿನ ಗಿಡಗಳ ಪುನಶ್ಚೇತನಕ್ಕೆ ರೈತರಿಗೆ ತೋಟಗಾರಿಕೆ ಇಲಾಖೆ ಸಲಹೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಾವಿನ ಗಿಡಗಳ ಪುನಶ್ಚೇತನಕ್ಕೆ ರೈತರಿಗೆ ತೋಟಗಾರಿಕೆ ಇಲಾಖೆ ಸಲಹೆ ಲಿಂಕ್ ವಿಳಾಸ https://dekalungi.blogspot.com/2017/08/blog-post_28.html

Subscribe to receive free email updates:

0 Response to "ಮಾವಿನ ಗಿಡಗಳ ಪುನಶ್ಚೇತನಕ್ಕೆ ರೈತರಿಗೆ ತೋಟಗಾರಿಕೆ ಇಲಾಖೆ ಸಲಹೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ