NEWS DATE: 29-07--2017

NEWS DATE: 29-07--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS DATE: 29-07--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS DATE: 29-07--2017
ಲಿಂಕ್ : NEWS DATE: 29-07--2017

ಓದಿ


NEWS DATE: 29-07--2017

ಮೀನುಗಾರಿಕೆ ಸಚಿವರ ಪ್ರವಾಸ
****************************
ಕಲಬುರಗಿ,ಜು.29.(ಕ.ವಾ.)-ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ರಾಜ್ಯ ಸಚಿವ ಪ್ರಮೋದ್ ಮಧ್ವರಾಜ್ ಅವರು ಹೈದ್ರಾಬಾದಿನಿಂದ ರಸ್ತೆ ಮೂಲಕ ಜುಲೈ 30ರಂದು ಸಂಜೆ 5 ಗಂಟೆಗೆ ಕಲಬುರಗಿಗೆ ಆಗಮಿಸುವರು. ನಂತರ ಸಚಿವರು ನಗರದ ಎನ್.ವಿ. ಬಡಾವಣೆಯಲ್ಲಿರುವ ಮಾಜಿ ಮುಖ್ಯಮಂತ್ರಿ ದಿ. ಎನ್. ಧರ್ಮಸಿಂಗ್ ಅವರ ಮನೆಗೆ ಭೇಟಿ ನೀಡಿ ಅಂದು ಸಂಜೆ 6 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಬೀದರಿಗೆ ಪ್ರಯಾಣಿಸುವರು.

ಆಗಸ್ಟ್ 6ರಂದು ಅನುಯಾಯಿ ಹುದ್ದೆಗಳ ಲಿಖಿತ ಪರೀಕ್ಷೆ
************************************************
ಕಲಬುರಗಿ,ಜು.29.(ಕ.ವಾ.)-ಕಲಬುರಗಿ ಪೊಲೀಸ್ ತರಬೇತಿ ಕಾಲೇಜಿನಲ್ಲಿ ಖಾಲಿಯಿರುವ 15 ಅನುಯಾಯಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳ ಲಿಖಿತ ಪರೀಕ್ಷೆಯನ್ನು 2017ರ ಆಗಸ್ಟ್ 06ರಂದು ಬೆಳಗಿನ 10.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕಲಬುರಗಿ ಪೊಲೀಸ್ ತರಬೇತಿ ಕಾಲೇಜಿನಲ್ಲಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯ ಪ್ರವೇಶ ಪತ್ರವನ್ನು ಈಗಾಗಲೇ ಕಳುಹಿಸಲಾಗಿದೆ ಎಂದು ಕಲಬುರಗಿ ಪೊಲೀಸ್ ತರಬೇತಿ ಕಾಲೇಜಿನ ಎಸ್.ಪಿ. ಮತ್ತು ಪ್ರಾಂಶುಪಾಲರು ತಿಳಿಸಿದ್ದಾರೆ.
ಆಗಸ್ಟ್ 2ರಂದು ಜಮೀನು ಕಳೆದುಕೊಂಡ ಸಂತ್ರಸ್ತರಿಂದ ಅಹವಾಲು ಸ್ವೀಕಾರ
ಕಲಬುರಗಿ,ಜು.29.(ಕ.ವಾ.)-ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಲ್ಲಾಬಾದ್ ಏತ ನೀರಾವರಿ ಲಿಫ್ಟ್-2ರ ಮುಖ್ಯ ಕಾಲುವೆಯನ್ನು 10 ರಿಂದ 16.42 ಕಿ.ಮೀ. ವರೆಗೆ ನಿರ್ಮಿಸಲು ಇಜೇರಿ ಗ್ರಾಮದ ಕೆಲವು ಜಮೀನುಗಳು ಜಮೀನುಗಳನ್ನು ಭೂಸ್ವಾಧೀನ ಪಡಿಸಿಕೊಳ್ಳುತ್ತಿದೆ. ಅದೇ ರೀತಿ ಸನ್ನತಿ ಏತ ನೀರಾವರಿ ಯೋಜನೆಯಲ್ಲಿ ಕನ್‍ಸ್ಟ್ರಕ್ಷನ್ ಆಫ್ ಡಿ-1 ಚೈನೇಜ್ 12.470 ರಲ್ಲಿ ಲ್ಯಾ-19ರ 0.00 ರಿಂದ 1.240 ವರೆಗಿನ ಕಾಲುವೆ ನಿರ್ಮಾಣಕ್ಕಾಗಿ ಚಿತ್ತಾಪುರ ತಾಲೂಕಿನ ಸನ್ನತಿ ಗ್ರಾಮದ ಕೆಲವು ಜಮೀನುಗಳ ಮಾಲೀಕರಿಗಾಗಿ ಪುನರ್ವಸತಿ ಹಾಗೂ ಪುನರ್ ವ್ಯವಸ್ಥೆಯ ನ್ಯಾಯೋಚಿತ ಪರಿಹಾರಕ್ಕೆ ಹಕ್ಕು ಮತ್ತು ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಪಾರದರ್ಶಕತೆ, ಪುನರ್ವಸತಿ ಮತ್ತು ಪುನರ್ ವ್ಯವಸ್ಥೆ ಅಧಿನಿಯಮ 2013ರ ಪ್ರಕಾರ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಮಾಹಿತಿ ನೀಡಲು ಮತ್ತು ಅವರಿಂದ ದಾಖಲೆ ಪಡೆಯಲು ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು 2017ರ ಆಗಸ್ಟ್ 2ರಂದು ಮುಂಜಾನೆ 11.30 ಗಂಟೆಗೆ ಇಜೇರಿ ಗ್ರಾಮದ ದ್ಯಾಮವ್ವನ ದೇವಸ್ಥಾನದಲ್ಲಿ ಮತ್ತು ಅಂದು ಮಧ್ಯಾಹ್ನ 2 ಗಂಟೆಗೆ ಚಿತ್ತಾಪುರ ತಾಲೂಕಿನ ಸನ್ನತಿ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ ಎಂದು ನಾರಾಯಣಪುರ ಕೃಷ್ಣಾ ಮೇಲ್ದಂಡೆ ಯೋಜನೆ ಪದನಿಮಿತ್ತ ಪುನರ್ವಸತಿ ಅಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಗ್ರಾ.ಪಂ.-ತಾ.ಪಂ. ಸದಸ್ಯರು
**************************
ಜುಲೈ 31ರೊಳಗಾಗಿ ಆಸ್ತಿ ಘೋಷಣೆ ದಾಖಲೆ ಸಲ್ಲಿಸಲು ಸೂಚನೆ
*******************************************************
ಕಲಬುರಗಿ,ಜು.29.(ಕ.ವಾ.)-ಕಲಬುರಗಿ ತಾಲೂಕಿನ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸದಸ್ಯರು 2017ರ ಜುಲೈ 31ರೊಳಗಾಗಿ ತಮ್ಮ ಆಸ್ತಿ ಘೋಷಣೆ ದಾಖಲೆಗಳನ್ನು ಕಲಬುರಗಿ ತಾಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಸ್ವತ: ಸಲ್ಲಿಸಬೇಕು. ಇದು ಕೊನೆಯ ಅವಕಾಶವಾಗಿದ್ದು, ಒಂದು ವೇಳೆ ಆಸ್ತಿ ಘೋಷಣೆ ದಾಖಲೆಗಳನ್ನು ಸಲ್ಲಿಸದೇ ಇರುವ ಸದಸ್ಯರ ಹೆಸರನ್ನು ಮುಂದಿನ ಕ್ರಮಕ್ಕಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದೆಂದು ಕಲಬುರಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಕಾಂತ ಜೀವಣಗಿ ತಿಳಿಸಿದ್ದಾರೆ.
ಸದರಿ ದಾಖಲೆ ಸಲ್ಲಿಸಲು ತಾಲೂಕು ಪಂಚಾಯಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೆ ತಿಳಿಸಿದರೂ ಈವರೆಗೆ ಅನೇಕ ಸದಸ್ಯರು ದಾಖಲೆಗಳನ್ನು ತಾಲೂಕು ಪಂಚಾಯಿತಿಗೆ ಸಲ್ಲಿಸಿರುವುದಿಲ್ಲ. ಚುನಾವಣಾ ಆಯೋಗದ ಆದೇಶದ ಪ್ರಕಾರ ಜುಲೈ ಮೊದಲ ವಾರದಲ್ಲಿ ಘೋಷಣೆ ದಾಖಲೆ ಮಾಡಿದ ಸದಸ್ಯರ ಪಟ್ಟಿಯನ್ನು ಮತ್ತು ಘೋಷಣೆ ಮಾಡದೆ ಇರುವಂತಹ ಸದಸ್ಯರ ಪಟ್ಟಿಯನ್ನು ಆಯೋಗಕ್ಕೆ ಸಲ್ಲಿಸಲು ಸೂಚಿಸಿರುತ್ತಾರೆ.
ಕಲಬುರಗಿ ತಾಲೂಕಿನ ಚುನಾಯಿತ ತಾಲೂಕು ಪಂಚಾಯಿತಿ ಸದಸ್ಯರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಕರ್ನಾಟಕ ಗ್ರಾಮ ಸ್ವರಾಜ (ಗ್ರಾ.ಪಂ., ತಾ.ಪಂ., ಜಿ.ಪಂ. ಚುನಾಯಿತ ಆಸ್ತಿ ಘೋಷಣೆ) ನಿಯಮಗಳು 20(6) ರನ್ವಯ ಪ್ರಕರಣ 136(ಎ) ಹಾಗೂ ನಿಯಮಗಳು 3ರಂತೆ ತನ್ನ ಅಧಿಕಾರಾವಧಿ ಮುಗಿಯುವ ತನಕ ಪ್ರತಿ ಆರ್ಥಿಕ ವರ್ಷ ಮುಕ್ತಾಯದ ಒಂದು ತಿಂಗಳೊಳಗೆ ತಮ್ಮ ಮತ್ತು ತಮ್ಮ ಅವಿಭಕ್ತ ಕುಟುಂಬದ ಎಲ್ಲ ಸದಸ್ಯರ ಚರ ಮತ್ತು ಸ್ಥಿರ ಆಸ್ತಿಯ ಹೊಣೆಗಾರಿಕೆಯನ್ನು ರಾಜ್ಯ ಚುನಾವಣಾ ಆಯೋಗದ ಮುಂದೆ ಘೋಷಣೆ ಮಾಡುವುದು ಕಡ್ಡಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.

228 ಮರಗಳ ಬಹಿರಂಗ ಹರಾಜು
*******************************
ಕಲಬುರಗಿ,ಜು.29.(ಕ.ವಾ.)-ಕಲಬುರಗಿ ಪ್ರಾದೇಶಿಕ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಬರುವ ವಿವಿಧ ಜಾತಿಯ ಒಟ್ಟು 228 ಮರಗಳ ಬಹಿರಂಗ ಹರಾಜು 2017ರ ಆಗಸ್ಟ್ 17ರಂದು ಬೆಳಿಗ್ಗೆ 11.30 ಗಂಟೆಗೆÀ ಕಲಬುರಗಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿದೆ. ಆಗಸ್ಟ್ 17ರಂದು ಬಹಿರಂಗ ಹರಾಜು ನಡೆಯದಿದ್ದಲ್ಲಿ ಆಗಸ್ಟ್ 18ರಂದು ಮರು ಬಹಿರಂಗ ಹರಾಜು ಮಾಡಲಾಗುವುದು ಎಂದು ಕಲಬುರಗಿ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.
ಹರಾಜು ಮಾಡುವ ಮರಗಳ ವಿವರ ಇಂತಿದೆ. ವಿಜಯಪುರ-ಕಲಬುರಗಿ-ಹುಮನಾಬಾದ ರಾಷ್ಟ್ರೀಯ ಹೆದ್ದಾರಿ-218ರಲ್ಲಿ ಔರಾದದಿಂದ ಕಿಣ್ಣಿಸಡಕ್‍ವರೆಗೆ ರಸ್ತೆ ಬದಿಯ ನೀಲಗಿರಿ, ಸರಸ್, ಬೇವು, ಪೀಪಲ್, ಪೇಲ್ಟೋಫಾರಂ, ಹೊನ್ನೆ ಹಾಗೂ ಇತರ ಜಾತಿಯ 115 ಮರಗಳು. ರಾಮಮಂದಿರದಿಂದ ಭೀಮಾ ಬ್ರಿಜ್ಡ್‍ವರೆಗೆ ರಸ್ತೆ ಬದಿಯ ಬೇವು, ಹೊಂಗೆ ಜಾತಿಯ 70 ಮರಗಳು ಹಾಗೂ ಮೊರಟಗಿಯಿಂದ ಭೀಮಾ ನದಿಯವರೆಗಿನ ರಸ್ತೆ ಬದಿಯ ಬೇವು, ಅರಳಿ, ನೀಲಗಿರಿ, ಶಿರಸಿ, ಇತರೆ ಜಾತಿಯ 43 ನಿಂತ ಮರಗಳನ್ನು ಹರಾಜು ಮಾಡಲಾಗುವುದು.
ಇಚ್ಛೆಯುಳ್ಳವರು ಹರಾಜಿನಲ್ಲಿ ಭಾಗವಹಿಸಬಹುದಾಗಿದೆ. ಇ.ಎಂ.ಡಿ. ಮೊತ್ತ, ಷರತ್ತು ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.

ಐಟಿಐ ಪ್ರವೇಶ ದಿನಾಂಕ ಆಗಸ್ಟ್ 1ಕ್ಕೆ ಮುಂದೂಡಿಕೆ
*********************************************
ಕಲಬುರಗಿ,ಜು.29.(ಕ.ವಾ.)-ಜೇವರ್ಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎನ್.ಸಿ.ವಿ.ಟಿ. ವೃತ್ತಿಯ ಪಿ.ಪಿ.ಪಿ. ಯೋಜನೆಯಡಿ 2017ನೇ ಸಾಲಿನ ಒಂದು ವರ್ಷದ ಕೋಪಾ-08 ಸೀಟು ಹಾಗೂ ಎರಡು ವರ್ಷದ ಫಿಟ್ಟರ್ ಹಾಗೂ ಟರ್ನರ್ ತಲಾ 01 ಸೀಟುಗಳ ಪ್ರವೇಶಾತಿಯನ್ನು 2017ರ ಆಗಸ್ಟ್ 1ರಂದು ಬೆಳಗಿನ 10 ಗಂಟೆಗೆ ಜೇವರ್ಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರ ನಿಧನದ ಪ್ರಯುಕ್ತ ಜುಲೈ 28ರಂದು ಹಮ್ಮಿಕೊಳ್ಳಲಾದ ಪ್ರವೇಶವನ್ನು ಮುಂದೂಡಲಾಗಿದೆ. ಈ ಸಂಸ್ಥೆಯಲ್ಲಿ ಆಗಸ್ಟ್ 2017ನೇ ಸಾಲಿನ 4ನೇ ಸುತ್ತಿನ ನಂತರ ಉಳಿದಿರುವ ಸ್ಥಾನಗಳಿಗೆ ಮೆರಿಟ್ ಆಧಾರದ ಮೇಲೆ ಪ್ರವೇಶ ಪಡೆಯಲಿಚ್ಛಿಸುವ ಆಸಕ್ತ ಅಭ್ಯರ್ಥಿಗಳು ಸಂಸ್ಥೆಯಿಂದ ಅರ್ಜಿ ಪಡೆದು ಭರ್ತಿ ಮಾಡಿ ಜುಲೈ 31ರೊಳಗಾಗಿ ಎಲ್ಲ ಮೂಲ ದಾಖಲಾತಿಗಳು ಹಾಗೂ ಒಂದು ಸೆಟ್ ಜಿರಾಕ್ಸ್ ಪ್ರತಿಯೊಂದಿಗೆ ಹಾಜರಾಗಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.

ಆಗಸ್ಟ್ 2ರಿಂದ ರೆಡ್‍ಕ್ರಾಸ್ ಸಂಸ್ಥೆಯಿಂದ ಪ್ರಥಮ ಚಿಕಿತ್ಸಾ ತರಬೇತಿ ಶಿಬಿರ
****************************************************************
ಕಲಬುರಗಿ,ಜು.29.(ಕ.ವಾ.)-ಕಲಬುರಗಿ ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯಿಂದ ಬೆಂಗಳೂರಿನ ರಾಜ್ಯ ಶಾಖೆಯ ನುರಿತ ತಜ್ಞ ತರಬೇತುದಾರರಿಂದ ಪ್ರಥಮ ಚಿಕಿತ್ಸಾ ತರಬೇತಿ ಶಿಬಿರವನ್ನು 2017ರ ಆಗಸ್ಟ್ 2 ಮತ್ತು 3ರಂದು ಕಲಬುರಗಿ ನಗರದಲ್ಲಿ ಏರ್ಪಡಿಸಲಾಗಿದೆ ಎಂದು ಕಲಬುರಗಿ ರೆಡ್‍ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ ತಿಳಿಸಿದ್ದಾರೆ.
ಈ ತರಬೇತಿಯಲ್ಲಿ ಭಾಗವಹಿಸಿದವರಿಗೆ ತರಬೇತಿ ಪಡೆದ ಬಗ್ಗೆ ನವದೆಹಲಿಯ ಕೇಂದ್ರ ರೆಡ್‍ಕ್ರಾಸ್ ಸಂಸ್ಥೆಯಿಂದ ಪ್ರಮಾಣಪತ್ರ ನೀಡಲಾಗುವುದು. ಈ ಪ್ರಮಾಣಪತ್ರವು ಸರ್ಕಾರಿ ಮತ್ತು ಇತರೆ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಸಹಾಯಕವಾಗುವುದು. ತರಬೇತಿಯ ಶುಲ್ಕ 300 ರೂ. ಇದ್ದು, ತರಬೇತಿ ಪಡೆಯಲಿಚ್ಛಿಸುವವರು ಕಲಬುರಗಿ ಮಿನಿ ವಿಧಾನಸೌಧದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಜಿಲ್ಲಾ ರೆಡ್‍ಕ್ರಾಸ್ ಕಾರ್ಯಾಲಯದಲ್ಲಿ ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು 300 ರೂ. ಶುಲ್ಕವನ್ನು ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08472-2255317, ಮೊಬೈಲ್ ಸಂ. 9448204560, 9620646208 ಮತ್ತು 9986064176ಗಳನ್ನು ಸಂಪರ್ಕಿಸಲು ಕೋರಿದೆ.

ಜುಲೈ 30ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
*********************************************
ಕಲಬುರಗಿ,ಜು.29.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11ಕೆ.ವಿ. ಸಿದ್ದೇಶ್ವರ ಕಾಲನಿ ಫೀಡರ್ ವ್ಯಾಪ್ತಿಯಲ್ಲಿ ಯು.ಜಿ. ಕೇಬಲ್ ಕಾರ್ಯಕೈಗೊಳ್ಳುವ ಪ್ರಯುಕ್ತ ಜುಲೈ 30ರಂದು ಭಾನುವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಫೀಡರುಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ಅಂದು ಬೆಳಗಿನ 10.30 ರಿಂದ ಸಂಜೆ 4.30 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯವಾಗುವ ಬಡಾವಣೆಗಳ ಮತ್ತು ಸಮಯದ ವಿವರ ಇಂತಿದೆ.
11ಕೆ.ವಿ. ಸಿದ್ದೇಶ್ವರ ಫೀಡರ್: ಗುಬ್ಬಿ ಕಾಲೋನಿ, ಎಂ.ಜಿ. ರಸ್ತೆ 1ನೇ ಕ್ರಾಸ್, 2ನೇ ಕ್ರಾಸ್, ಪ್ರಗತಿ ಕಾಲೋನಿ, ಬಸವೇಶ್ವರ ಕಾಲೋನಿ-1,2,3 ಕ್ರಾಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.


ಹೀಗಾಗಿ ಲೇಖನಗಳು NEWS DATE: 29-07--2017

ಎಲ್ಲಾ ಲೇಖನಗಳು ಆಗಿದೆ NEWS DATE: 29-07--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS DATE: 29-07--2017 ಲಿಂಕ್ ವಿಳಾಸ https://dekalungi.blogspot.com/2017/07/news-date-29-07-2017.html

Subscribe to receive free email updates:

0 Response to "NEWS DATE: 29-07--2017"

ಕಾಮೆಂಟ್‌‌ ಪೋಸ್ಟ್‌ ಮಾಡಿ