ಶೀರ್ಷಿಕೆ : news and photo date: 25-7-2017
ಲಿಂಕ್ : news and photo date: 25-7-2017
news and photo date: 25-7-2017
ರಾಜ್ಯದ 11 ಜಿಲ್ಲೆಗಳಲ್ಲಿ ಸುಜಲಾ-3 ಯೋಜನೆ ಜಾರಿ
**********************************************
ಕಲಬುರಗಿ,ಜು.25.(ಕ.ವಾ.)-ಕಲಬುರಗಿ ಜಿಲ್ಲೆಯು ಸೇರಿದಂತೆ ಕರ್ನಾಟಕ ರಾಜ್ಯದ ಒಟ್ಟು 11 ಜಿಲ್ಲೆಗಳಲ್ಲಿ ಸುಜಲಾ-3 ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ|| ಶರಣ ಪ್ರಕಾಶ ಪಾಟೀಲ ಹೇಳಿದರು.
ಅವರು ಮಂಗಳವಾರ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ದೋಟಿಕೊಳ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಆಯೀಜಿಸಿರುವ ಸುಜಲಾ-3 ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಸುಜಲಾ-3 ಯೋಜನೆಯ ವ್ಯಾಪ್ತಿಯಲ್ಲಿ ಚಿಂಚೋಳಿ ತಾಲೂಕಿನ ಆರು ಗ್ರಾಮ ಪಂಚಾಯಿತಿಗಳ ದೋಟಿಕೊಳ ಗ್ರಾಮ ಸೇರಿದಂತೆ 11 ಗ್ರಾಮಗಳು ಒಳಪಟ್ಟಿದ್ದು, ಯೋಜನೆಯ ಅನುಷ್ಠಾನಕ್ಕಾಗಿ ಒಟ್ಟು 17 ಕೋಟಿ ರೂ. ವಿನಿಯೋಗಿಸಲಾಗುವುದು. ಈ ಯೋಜನೆಯಲ್ಲಿ ಒಟ್ಟು 8 ಕಿರು ಜಲಾನಯನಗಳನ್ನು ಹೊಂದಿದ್ದು, 5663 ಹೆಕ್ಟೇರ್ ಪ್ರದೇಶದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. ಇದಕ್ಕಾಗಿ ರಾಯಚೂರಿನ ಕೃಷಿ ವಿಶ್ವವಿದ್ಯಾಲಯವು 11 ಗ್ರಾಮಗಳ 6015 ಕುಟುಂಬಗಳ ಸಮೀಕ್ಷೆ ಕೈಗೊಳ್ಳಲಾಗಿದ್ದು, 36 ಸ್ವಸಹಾಯ ಸಂಘಗಳನ್ನು ಹಾಗೂ 46 ಬಳಕೆದಾರರ ಗುಂಪುಗಳನ್ನು ರಚಿಸಿಕೊಂಡು 2497 ಫಲಾನುಭವಿಗಳ ವೈಜ್ಞಾನಿಕ ಸವಿಸ್ತಾರ ವಿಸ್ತøತ ಯೋಜನಾ ವರದಿಯನ್ನು ಸಿದ್ಧಪಡಿಸಿದೆ ಎಂದರು.
ಈ ಯೋಜನೆಯ ಅನುಷ್ಠಾನದಿಂದ ಪ್ರತಿ ಕುಟುಂಬದ ಮೇಲೆ ಆರ್ಥಿಕ ಪರಿಣಾಮ ಬೀರÀಲಿದ್ದು, ಸಾಮಾನ್ಯ ಜನರ ಮತ್ತು ರೈತರ ಜೀವನದಲ್ಲಿ ಬದಲಾವಣೆ ತರುವುದು ಹಾಗೂ ಅವರ ಕಷ್ಟಗಳನ್ನು ಹೋಗಲಾಡಿಸುವುದೇ ಈ ಯೋಜನೆಯ ಪ್ರಮುಖ ಧ್ಯೇಯವಾಗಿದೆ. ಈ ಯೋಜನೆಯಿಂದ ನೆಲ ಮತ್ತು ಜಲ ಸಂರಕ್ಷಣೆ, ಸ್ವಸಹಾಯ ಗುಂಪುಗಳ ಬಲವರ್ಧನೆ, ಭೂ ರಹಿತ ಕಾರ್ಮಿಕರ ಕೌಶಲ್ಯಾಭಿವೃದ್ಧಿಪಡಿಸುವ ಹಾಗೂ ಅಂತರ್ಜಲಮಟ್ಟ ಸುಧಾರಿಸುವ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪ್ರತಿ ಕುಟುಂಬದ ಜೀವನ ಮಟ್ಟ ಸುಧಾರಿಸಲಾಗುವುದು ಎಂದು ನುಡಿದರು.
ಯುವ ಸಮುದಾಯ ಸ್ವಯಂ ಮತ್ತು ನಿರಂತರ ಪ್ರಯತ್ನದ ಮೂಲಕ ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಲು ಈ ಯೋಜನೆಯ ಲಾಭ ಪಡೆಯಬೇಕೆಂದರು. ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಇಲಾಖಾಧಿಕಾರಿಗಳು ಶೇ. 100 ರಷ್ಟು ಗುಣಮಟ್ಟದ ಕಾರ್ಯ ಕೈಗೊಳ್ಳಬೇಕು. ಯೋಜನೆ ವ್ಯಾಪ್ತಿಗೊಳಪಡುವ ಎಲ್ಲ ಜನರು ಮತ್ತು ರೈತರೊಂದಿಗೆ ಉತ್ತಮ ಸಂಪರ್ಕ ಹೊಂದುವ ಮೂಲಕ ಸದರಿ ಯೋಜನೆಯ ಬಗ್ಗೆ ಸವಿಸ್ತಾರವಾಗಿ ತಿಳಿ ಹೇಳಬೇಕು. ಅಧಿಕಾರಿಗಳು ಪ್ರಾಮಾಣಿಕತೆ ಮತ್ತು ನಿಸ್ವಾರ್ಥತೆಯಿಂದ ಕಾರ್ಯ ಮಾಡಬೇಕು. ಮಹಿಳೆ ಮತ್ತು ರೈತರು ಹೆಚ್ಚು ಜಾಗೃತರಾಗಿ ಯೋಜನೆಯ ಅನುಷ್ಠಾನದ ಮೇಲೆ ತೀವ್ರ ನಿಗಾ ವಹಿಸಬೇಕಲ್ಲದೆ ಯೋಜನೆಯಲ್ಲಿ ಸಕ್ರಿಯವಾಗಿ ಸಹಭಾಗಿತ್ವ ವಹಿಸಬೇಕು ಎಂದು ಹೇಳಿದರು.
ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ ಅಧ್ಯಕ್ಷತೆವಹಿಸಿ ಕಲಬುರಗಿ ಜಿಲ್ಲೆಯಲ್ಲಿಯೇ ಅತ್ಯಧಿಕ ಅರಣ್ಯ ಪ್ರದೇಶ ಹೊಂದಿರುವ ಚಿಂಚೋಳಿ ತಾಲೂಕಿನಲ್ಲಿ ಕೃಷಿ-ಅರಣ್ಯ ಕಾಲೇಜು ಸ್ಥಾಪಿಸಬೇಕಲ್ಲದೇ ಕೃಷಿ ವಿಸ್ತರಣಾ ಘಟಕ ಪ್ರಾರಂಭಿಸಬೇಕೆಂದರು. ದೋಟಿಕೊಳ ಗ್ರಾಮದಲ್ಲಿರುವ ನಾಲೆಗೆ ತಡೆಗೋಡೆ ನಿರ್ಮಿಸಬೇಕು ಹಾಗೂ ಗ್ರಾಮಕ್ಕೆ ಸಾಂಸ್ಕøತಿಕ ಭವನ ಮಂಜೂರು ಮಾಡಬೇಕು. ಚಿಂಚೋಳಿ ತಾಲೂಕಿನ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮುಲ್ಲಾಮಾರಿ ಕೆಳದಂಡೆ ಯೋಜನೆಯ ಜಲಾಶಯ ಬಲವರ್ಧನೆ ಕಾರ್ಯವನ್ನು ಕೈಗೊಳ್ಳಲು ಸರ್ಕಾರ 36 ಕೋಟಿ ರೂ. ಮಂಜೂರು ಮಾಡಿದೆ ಎಂದರು.
ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಡಾ|| ಪಿ.ಎಂ. ಸಾಲಿಮಠ ಮಾತನಾಡಿ, ಸುಜಲಾ-3 ಯೋಜನೆಯಡಿ ಮುಖ್ಯವಾಗಿ ಕೃಷಿ, ಖುಷ್ಕಿ ತೋಟಗಾರಿಕೆ, ಕೃಷಿ-ಅರಣ್ಯ, ಪಶು ಸಂಗೋಪನೆ, ಸ್ವಸಹಾಯ ಗುಂಪುಗಳ ರಚನೆ ಮತ್ತು ಬಲವರ್ಧನೆ, ಆಸ್ತಿ ರಹಿತರ ಜೀವನೋಪಾಯ ಅಭಿವೃದ್ಧಿ ಚಟುವಟಿಕೆಗಳನ್ನು ಮುಂತಾದವುಗಳನ್ನು ಕೈಗೊಳ್ಳಲಾಗುವುದು. ಸಾಗುವಳಿಗೆ ಯೋಗ್ಯವಿಲ್ಲದ ಹಾಗೂ ಸಾಗುವಳಿ ಜಮೀನಿನ ಉಪಚಾರಗಳಾದ ಕಾಂಟೂರ್ ಟ್ರೆಂಚ್, ಬೆಂಚ್ ಟೆರೆಸ್, ಕಿರುಗಾಲುವೆ, ಕಂದಕದೊಂದಿಗೆ ಬದುಗಳ ನಿರ್ಮಾಣ, ಕೃಷಿ ಹೊಂಡದ ಕಾಮಗಾರಿಗಳನ್ನು ಎಲ್.ಆರ್.ಐ. ಮಾಹಿತಿ ಆಧರಿಸಿ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಕೋಡ್ಲಿ ಸುಕ್ಷೇತ್ರ ಪೂಜ್ಯ ಬಸವಲಿಂಗ ಶಿವಾಚಾರ್ಯರು ಹಾಗೂ ಸೂಗುರ ಕೆ. ಗ್ರಾಮದ ಪೂಜ್ಯ ಶಿವಾನಂದ ದೇವರು ದಿವ್ಯ ಸಾನಿಧ್ಯವಹಿಸಿದ್ದ ಈ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ರಮೇಶ ಯಾಕಾಪುರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಅನುಸೂಯಾ ಶರಣಪ್ಪ ತಳವಾರ, ಗೌತಮ ಪಾಟೀಲ್, ಎ.ಪಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ, ತಾಲೂಕು ಪಂಚಾಯಿತಿ ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ, ತಾಲೂಕು ಪಂಚಾಯಿತಿ ಸದಸ್ಯ ಬಸವಣ್ಣಪ್ಪ ಕುಡ್ಡಹಳ್ಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಜೀವರೆಡ್ಡಿ ಬಕ್ಕಾ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಭÀುಶೆಟ್ಟಿ, ಗಣ್ಯರಾದ ವಿಠ್ಠಲರಾವ ಕುಲಕರ್ಣಿ, ಶರಣಪ್ಪ ತಳವಾರ, ಗಂಗಯ್ಯ ಸ್ವಾಮಿ, ಮತ್ತಿತರ ಗಣ್ಯರು ಭಾಗವಹಿಸಿದ್ದರು. ಉಪ ಕೃಷಿ ನಿರ್ದೇಶಕ ಸಮದ್ ಪಟೇಲ್ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುನೀಲಕುಮಾರ ರಾಠೋಡ ಸ್ವಾಗತಿಸಿದರು.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಹಿರಿಯ ವಿಜ್ಞಾನಿ ಡಾ|| ಸತೀಶಕುಮಾರ ಯು. ಮತ್ತು ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್. ಮೊಕಾಶಿ ಮಾತನಾಡಿ, ಸುಜಲಾ-3 ಯೋಜನೆಯಡಿ ಭೂಸಾರ ಸಂರಕ್ಷಣೆಗಾಗಿ 663989 ಮೀ. ಕಂದಕದೊಂದಿಗೆ ಬದು, 681 ಹೆಕ್ಟೇರ್ ಬೆಂಚ್ ಟೆರೆಸಿಂಗ್, 105 ಕೃಷಿ ಹೊಂಡ, 54 ಗೋಕಟ್ಟೆ, 23 ತಡೆ ಆಣೆ, 12 ನಾಲಾ ಬಂಡ, 40 ಗ್ಯಾಬಿಯನ್, 49 ಗಲ್ಲಿಪ್ಲಗ್, 957 ಮೀ. ರಬಲ್/ ಬೋಲ್ಡರ್ ತಡೆ, 29568 ಮೀ. ನಾಲಾ ರಿವೀಟ್‍ಮೆಂಟ್/ಕಿರುಗಾಲುವೆ/ ನಾಲಾ ಹೂಳೆತ್ತುವ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು. ಖುಷ್ಕಿ ತೋಟಗಾರಿಕೆಯಿಂದ ಮಾವು, ಸಪೋಟಾ, ಪೇರಲ್ ಹಣ್ಣು, ಸಿತಾಫಲ ಹಣ್ಣುಗಳ ಹಾಗೂ ನುಗ್ಗೆ, ಕರಿಬೇವು, ಗುಲಾಬಿ, ಸೇವಂತಿಗೆ, ತರಕಾರಿ, ಹೂ ಸಸಿಗಳ ನಾಟಿ ಕಾರ್ಯ ಕೈಗೊಳ್ಳಲಾಗುತ್ತದೆ. ಕೃಷಿ ಅರಣ್ಯ ಘಟಕದಡಿ ಬೇವು, ಹೊಂಗೆ, ಸಾಗುವಾನಿ ಮುಂತಾದ ರೈತೋಪಯೋಗಿ ಮರಗಳ ಸಸಿ ನಾಟಿ ಮಾಡಲಾಗುವುದು. ಇದರಿಂದ ಶೇ. 10ರಷ್ಟು ಕೃಷಿ ತೋಟಗಾರಿಕೆ, ಕೃಷಿ ಅರಣ್ಯ ಬೆಳೆಸುವ ನೀರನ್ನು ಜಮೀನಿನಲ್ಲಿ ಇಂಗಿಸಿ ಗಿಡಗಳಿಗೆ ಲಭ್ಯವಾಗುವಂತೆ ಮಾಡುವುದು. ಶೇ. 8ರಿಂದ 10ರಷ್ಟು ಉತ್ಪಾದನೆ, ಅಂತರ್ಜಲಮಟ್ಟ ಮತ್ತು ಜನರ ಆರ್ಥಿಕ ಸ್ಥಿತಿ, ಗೊಳಿಸಲಾಗುವುದು ಎಂದÀು ವಿವರಿಸಿದರು. ಉಪ ಕೃಷಿ ನಿರ್ದೇಶಕ ಸಮದ್ ಪಟೇಲ್ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುನೀಲಕುಮಾರ ರಾಠೋಡ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಚಿವರು ಕೃಷಿ ಇಲಾಖೆಯ ವಿವಿಧ ಯೋಜನೆಗಳಡಿಯಲ್ಲಿ ಆಯ್ದ ಫಲಾನುಭವಿಗಳಿಗೆ ಎರಡು ರಾಶಿ ಯಂತ್ರ, ಎರಡು ಡಿಸೇಲ್ ಪಂಪ್‍ಸೆಟ್, ತಲಾ ಒಂದು ನೇಗಿಲು ಮತ್ತು ಸ್ಪ್ರೆಯರ್ ವಿತರಿಸಿದರು. ಇದಲ್ಲದೇ ಕೃಷಿ ಭಾಗ್ಯ ಯೋಜನೆಯಡಿ ಐದು ಕೃಷಿ ಹೊಂಡ ನಿರ್ಮಿಸಿಕೊಂಡ ರೈತ ಫಲಾನುಭವಿಗಳಿಗೆ ಸಹಾಯಧನದ ಚೆಕ್‍ಗಳನ್ನು ಹಾಗೂ ಸ್ಪ್ರಿಂಕ್ಲರ್ ನೀರಾವರಿ ಯೋಜನಾ ಸೌಲಭ್ಯಗಳನ್ನು ವಿತರಿಸಿದರು. ಇದಲ್ಲದೇ ಅರಣ್ಯ ಇಲಾಖೆಯಿಂದ ಉಚಿತ ಸಸಿಗಳನ್ನು ವಿತರಿಸಿದರಲ್ಲದೇ ಕೂಸು ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಂಡ ಮಹಿಳೆಯರಿಗೆ ಗೌರವಿಸಿದರು. ಇದಕ್ಕೂ ಮುನ್ನ ಶಾಲಾ ಮಕ್ಕಳಿಗೆ ಬೈಸಿಕಲ್ ವಿತರಿಸಿದರು.
ಹೀಗಾಗಿ ಲೇಖನಗಳು news and photo date: 25-7-2017
ಎಲ್ಲಾ ಲೇಖನಗಳು ಆಗಿದೆ news and photo date: 25-7-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo date: 25-7-2017 ಲಿಂಕ್ ವಿಳಾಸ https://dekalungi.blogspot.com/2017/07/news-and-photo-date-25-7-2017.html
0 Response to "news and photo date: 25-7-2017"
ಕಾಮೆಂಟ್ ಪೋಸ್ಟ್ ಮಾಡಿ