ಶೀರ್ಷಿಕೆ : news and photo date: 14--07-2017
ಲಿಂಕ್ : news and photo date: 14--07-2017
news and photo date: 14--07-2017
ಮಧ್ಯಸ್ಥಿಕೆ ನಮ್ಮ ಸಂಸ್ಕøತಿಯ ಅವಿಭಾಜ್ಯ ಅಂಗ
******************************************
ಕಲಬುರಗಿ,ಜು.14.(ಕ.ವಾ.)-ಮಧ್ಯಸ್ಥಿಕೆ ವ್ಯವಸ್ಥೆ ನಮ್ಮ ಸಂಸ್ಕøತಿಯ ಅವಿಭಾಜ್ಯ ಅಂಗ. ಹಿಂದಿನ ಕಾಲದಲ್ಲಿ ವಿವಿಧ ವ್ಯಾಜ್ಯಗಳ ಪರಿಹಾರಕ್ಕಾಗಿ ಈ ಮಧ್ಯಸ್ಥಿಕೆ (ಪಂಚಾಯಿತಿ ಕಟ್ಟೆ) ವ್ಯವಸ್ಥೆಯನ್ನೇ ಬಳಸಲಾಗುತ್ತಿತ್ತು. ಈ ವ್ಯವಸ್ಥೆಯ ಮೂಲಕ ನ್ಯಾಯವಾದಿಗಳು ಉತ್ತಮ ಕೌಶಲ್ಯ, ಕಲೆಯ ಮೂಲಕ ಕಕ್ಷಿದಾರರ ವ್ಯಾಜ್ಯಗಳನ್ನು ಪರಿಹರಿಸಲು ಶ್ರಮಿಸಬೇಕೆಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಜಿ. ನರೇಂದ್ರ ತಿಳಿಸಿದರು.
ಅವರು ಶುಕ್ರವಾರ ಕಲಬುರಗಿ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿರುವ ಎ.ಡಿ.ಆರ್. ಸಭಾಭವನದಲ್ಲಿ ಬೆಂಗಳೂರು ಮತ್ತು ಕಲಬುರಗಿ ಮಧ್ಯಸ್ಥಿಕೆ ಕೇಂದ್ರಗಳ ಸಹಯೋಗದಲ್ಲಿ ಆಯೋಜಿಸಿದ ಮೂರು ದಿನಗಳ ಮಧ್ಯಸ್ಥಿಕೆದಾರರ ಪುನ:ಶ್ಚೇತನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಬಿ.ಎ. ಪಾಟೀಲ ಮಾತನಾಡಿ, ಮಧ್ಯಸ್ಥಿಕೆ , ಲೋಕ ಅದಾಲತ್ ಮತ್ತು ಕೌನ್ಸಿಲೇಶನ್ ಮೂಲಕ ನ್ಯಾಯಾಲಯಗಳಲ್ಲಿನ ವಿವಿಧ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಮೂಲಕ ಕ್ರಮ ಅನುಸರಿಸುತ್ತಿದೆ. ಕಕ್ಷಿದಾರರೇ ತಮ್ಮ ಸಮಸ್ಯೆ ಪರಿಹರಿಸಿಕೊಳ್ಳುವಲ್ಲಿ ಮಧ್ಯಸ್ಥಿಕೆ ಪ್ರಮುಖ ಪಾತ್ರ ವಹಿಸಲಿದೆ. ಮಧ್ಯಸ್ಥಿಕೆದಾರರು ಹೊಸ ಹೊಸ ಕಾನೂನು, ಆಲೋಚನೆ (ಐಡಿಯಾ) ಹಾಗೂ ಸಾಮಾನ್ಯ ತಿಳುವಳಿಕೆ (ಕಾಮನ್ ಸೆನ್ಸ್) ಮುಂತಾದವುಗಳ ಮೂಲಕ ಕಕ್ಷಿದಾರರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಮಧ್ಯಸ್ಥಿಕೆದಾರರು ಓರ್ವ ವೈದ್ಯ ಚಿಕಿತ್ಸಕರಂತೆ ಕಾರ್ಯನಿರ್ವಹಿಸಬೇಕಲ್ಲದೇ ಕಕ್ಷಿದಾರರ ಸಮಸ್ಯೆಗಳ ಪರಿಹಾರಕ್ಕಾಗಿ ಶಿಸ್ತು, ತಾಳ್ಮೆಯೊಂದಿಗೆ ಸಂಪೂರ್ಣ ಕಾನೂನು ಜ್ಞಾನದ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ವ್ಹಿ. ಪಾಟೀಲ ಮಾತನಾಡಿ, ಪರ್ಯಾಯ ವ್ಯಾಜ್ಯಗಳ ಇತ್ಯರ್ಥ ವ್ಯವಸ್ಥೆಯಲ್ಲಿ ಮಧ್ಯಸ್ಥಿಕೆ ಒಂದು ಉತ್ಕøಷ್ಟ ವ್ಯವಸ್ಥೆಯಾಗಿದೆ. ಮಧ್ಯಸ್ಥಿಕೆದಾರರು ಕಾಲ ಕಾಲಕ್ಕೆ ಬದಲಾಗುವ ಕಾನೂನುಗಳ ತಿಳುವಳಿಕೆ ಹಾಗೂ ಸಮರ್ಥ ಕೌಶಲ್ಯ ಪಡೆದು ಮಧ್ಯಸ್ಥಿಕೆಯಲ್ಲಿ ನಡೆಸುವ ಸಮಾಲೋಚನೆಯಲ್ಲಿ ಸಕ್ರಿಯ ಸಹಕಾರ ಕಲ್ಪಿಸುವುದರೊಂದಿಗೆ ಕಕ್ಷಿದಾರರೇ ತಮ್ಮ ಸಮಸ್ಯೆ ಪರಿಹರಿಸಿಕೊಳ್ಳುವ ವಾತಾವರಣ ಸೃಷ್ಟಿಸಬೇಕು. ಮಧ್ಯಸ್ಥಿಕೆದಾರರು ಮಧ್ಯಸ್ಥಿಕೆಯನ್ನು ಸಮರ್ಪಣಾ ಮನೋಭಾವದಿಂದ, ಪರಿಪೂರ್ಣತೆ, ಸಕಾರಾತ್ಮಕ ಭಾವನೆ ಮತ್ತು ರಚನಾತ್ಮಕ ಚಿಂತನೆಯಿಂದ ನಿರಂತರ ಪರಿಶ್ರಮಪಟ್ಟರೆ ಮಧ್ಯಸ್ಥಿಕೆಯಲ್ಲಿ ಶೇ. 100ರಷ್ಟು ಯಶಸ್ಸು ಸಾಧಿಸಬಹುದು ಎಂದರು.
ಗುಲಬರ್ಗಾ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ, ಹೈಕೋರ್ಟ್ ಪೀಠದ ಹೆಚ್ಚುವರಿ ರಜಿಸ್ಟ್ರಾರ್ ಜನರಲ್ ಕೆ.ಬಿ. ಅಸುದೆ, ಮಧ್ಯಸ್ಥಿಕೆ ಕೇಂದ್ರದ ತರಬೇತುದಾರರಾದ ಮಂಜುಳಾ ತೇಜಸ್ವಿ ಮತ್ತು ವೃಂದಾ ನಂದಕುಮಾರ, ಕರ್ನಾಟಕ ವಕೀಲರ ಪರಿಷತ್ತಿನ ಸದಸ್ಯ ಕಾಶೀನಾಥ ಮೋತಕಪಲ್ಲಿ ಮತ್ತಿತರರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಸ್ವಾಗತಿಸಿದರು. ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನವೀನ ವಂದಿಸಿದರು.
ಜುಲೈ 15ರಂದು ತಮಾಶಾ ನಾಟಕ ಪ್ರದರ್ಶನ
*****************************************
ಕಲಬುರಗಿ,ಜು.14.(ಕ.ವಾ.)-ಕಲಬುರಗಿ ರಂಗಾಯಣದಿಂದ ರಂಗಾರಂಗಿನ ಕಾರ್ಯಕ್ರಮ ಮತ್ತು ತಮಾಶಾ ನಾಟಕ ಪ್ರದರ್ಶನವನ್ನು ಕಲಬುರಗಿ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜುಲೈ 15ರಂದು ಮಧ್ಯಾಹ್ನ 2.45ಗಂಟೆಗೆ ಏರ್ಪಡಿಸಲಾಗಿದೆ.
ಹಿರಿಯ ಸಾಹಿತಿ ಚನ್ನಣ್ಣ ವಾಲೀಕಾರ ಕಾರ್ಯಕ್ರಮವನ್ನು ಉದ್ಘಾಟಿಸುವರು. ಬೆಂಗಳೂರಿನ ರಂಗ ಸಮಾಜದ ಸದಸ್ಯೆ ಡಾ. ಸುಜತಾ ಜಂಗಮಶೆಟ್ಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಿ.ಚಂದ್ರಕಾಂತ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿ ಸಿಂಗ್ ಠಾಕೂರ್ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಬೀದರ ಹಿರಿಯ ನಟರು ಹಾಗೂ ಸಂಘಟಕ ಚಂದ್ರಗುಪ್ತ ಚಾಂದಕವಠೆ, ಕಲಬುರಗಿ ಹಿರಿಯ ರಂಗ ಕರ್ಮಿಗಳು ಹಾಗೂ ಸಂಘಟಕ ಪ್ರಭಾಕರ್ ಸಾಥಖೇಡ, ಸುರಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಕಾಂತ ಕರದಳ್ಳಿ, ರಾಯಚೂರ ರಂಗ ಕರ್ಮಿ ಶಾಂತಾ ಕುಲಕರ್ಣಿ, ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ವೀರಪ್ಪಾ ಮಲ್ಲಪ್ಪಾ ನಿಂಗೋಜಿ, ಬಳ್ಳಾರಿ ಹಿರಿಯ ರಂಗ ಕಲಾವಿದ ರಮೇಶಗೌಡ ಪಾಟೀಲ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಕಲಬುರಗಿ ಖ್ಯಾತ ಸಾಹಿತಿಗಳು ಹಾಗೂ ಸ್ವಾಮಿ ರಮಾನಂದತೀರ್ಥ ಸಂಶೋಧನಾ ಸಂಸ್ಥೆ ಅಧ್ಯಕ್ಷ ಪ್ರೊ. ವಸಂತ ಕುಷ್ಟಗಿ ಅಧ್ಯಕ್ಷತೆ ನುಡಿಗಳನ್ನಾಡುವರು.
ಕಲಬುರಗಿ ರಂಗಾಯಣ ನಿರ್ದೇಶಕ ಮಹೇಶ ವಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡುವರು. ಸ್ವಾಮಿರಾವ್ ಕುಲಕರ್ಣಿ ರಚಸಿರುವ “ರಂಗಾ ರಂಗಿನ” ಕಾರ್ಯಕ್ರಮ ಹಾಗೂ ಧಾರವಾಡ ರಂಗಾಯಣ ಪ್ರಸ್ತುಪಡಿಸುವ ಹಾಗೂ ಪ್ರೊ. ಗಣೇಶ ಚೆಂದನಶಿವೆ ರಚಿಸಿ ನಿರ್ದೇಶಿಸಿದ ಮತ್ತು ಡಾ. ಡಿ.ಎಸ್. ಚೌಗಲೆ ಕನ್ನಡಕ್ಕೆ ಅನುವಾದಿಸಿದ “ತಮಾಶಾ” ನಾಟಕ ಪ್ರದರ್ಶನಗೊಳ್ಳಲಿದೆ.
ಜಿಲ್ಲೆಯ 1.07 ಲಕ್ಷ ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಯೋಜನೆಯ ಪ್ರಯೋಜನ
ಕಲಬುರಗಿ,ಜು.14.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ವಿವಿಧ ಮಾಸಿಕ ಪಿಂಚಣಿ ಯೋಜನೆಗಳಡಿ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 107871 ಫಲಾನುಭವಿಗಳಿಗೆ ವಿವಿಧ ಪಿಂಚಣಿ ಯೋಜನೆಗಳ ಪ್ರಯೋಜನ ಕಲ್ಪಿಸಲಾಗಿದೆ. ವಿವಿಧ ಪಿಂಚಣಿ ಯೋಜನೆಗಳ ಪ್ರಯೋಜನ ಪಡೆದ ಫಲಾನುಭವಿಗಳ ವಿವರ ಇಂತಿದೆ. ಸಂಧ್ಯಾ ಸುರಕ್ಷಾ ವೇತನ-51923, ವೃದ್ಧಾಪ್ಯ ವೇತನ-9530, ನಿರ್ಗತಿಕ ವಿಧವಾ ವೇತನ-26537, ಅಂಗವಿಕಲ ವೇತನ-18429, ಮನಸ್ವಿನಿ-1396 ಮತ್ತು ಮೈತ್ರಿ-56. ಒಂದು ಬಾರಿ ಪಡೆಯುವ ಯೋಜನೆಗಳ ಪ್ರಯೋಜನ ಪಡೆದವರ ವಿವರ ಇಂತಿದೆ. ಅಂತ್ಯ ಸಂಸ್ಕಾರ-3632, ರಾಷ್ಟ್ರೀಯ ಕುಟುಂಬ ನೆರವು-3915 ಮತ್ತು ಆದರ್ಶ ವಿವಾಹ-1179.
ಜಿಲ್ಲೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಡಿ ಪ್ರಯೋಜನ ಪಡೆಯ ಬಯಸುವ ಹಾಗೂ ಸಮಸ್ಯೆಗಳನ್ನು ಎದುರಿಸುತ್ತಿರುವ ಫಲಾನುಭವಿಗಳು ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಲು ಅನುವಾಗುವಂತೆ ಆಯಾ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಹೋಬಳಿ ಮಟ್ಟದಲ್ಲಿ ಆಯೋಜಿಸಿದ ಪಿಂಚಣಿ ಅದಾಲತ್‍ಗಳ ಮೂಲಕ ಒಟ್ಟು 13791 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.
ಕಲಬುರಗಿ ಜಿಲ್ಲೆಯ ಎಲ್ಲ ತಾಲೂಕು ಮತ್ತು ವಿಶೇಷ ತಹಶೀಲ್ದಾರರ ಕಚೇರಿಗಳಲ್ಲಿ “ಪಡಸಾಲೆ” ಯೋಜನೆಯನ್ನು 2015ರ ಫೆಬ್ರವರಿಯಿಂದ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿ ಪಡಿತರ ಚೀಟಿ ಅರ್ಜಿ, ಪಹಣಿ ಮತ್ತು ವರ್ಗಾವಣೆ ಪ್ರತಿಗಳನ್ನು, ಭೂಮಾಪನ ಇಲಾಖೆಗೆ ಸಂಬಂಧಿಸಿದ ಮತ್ತು ಪಿಂಚಣಿ ಯೋಜನೆಗಳ ಅರ್ಜಿಗಳ, ಆಧಾರ ನೋಂದಣಿ ಅರ್ಜಿಗಳನ್ನು ಸ್ವೀಕರಿಸಿ ಆದ್ಯತೆಯ ಮೇಲೆ ಇತ್ಯರ್ಥಪಡಿಸಲಾಗುತ್ತಿದೆ.
ಸರ್ವರಿಗೂ ಸಾಮಾಜಿಕ ಭದ್ರತೆ ನೀಡುವುದು ಸರ್ಕಾರದ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಮನಗಂಡು ಅವರ ಸಮಸ್ಯೆಗಳಿಗೆ ಸ್ಪಂದಿಸಿ ಬದುಕು ಕಟ್ಟಿಕೊಳ್ಳಲು ಸರ್ಕಾರ ಮೈತ್ರಿ ಯೋಜನೆ ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 56 ಲಿಂಗತ್ವ ಅಲ್ಪಸಂಖ್ಯಾತರಿಗೆ ತಲಾ 500 ರೂ. ಮಾಸಾಶನ ಮಂಜೂರು ಮಾಡಲಾಗಿದೆ.
ನಿರ್ಲಕ್ಷಿತ ಮಹಿಳೆಯರಿಗೆ ನಿರಂತರ ಸಾಂತ್ವನ. ವಿಚ್ಚೇದಿತ ಮತ್ತು ಅವಿವಾಹಿತ ಮಹಿಳೆಯರು ಸ್ವಾವಲಂಬಿ ಮತ್ತು ಸುಭದ್ರ ಬದುಕು ಕಟ್ಟಲು ರೂಪಿಸಿದ “ಮನಸ್ವಿನಿ”ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 1396 ನಿರ್ಲಕ್ಷಿತ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಈ ಪೈಕಿ 2013-14 ರಲ್ಲಿ 146 ಮತ್ತು 2014-15ರಲ್ಲಿ 422 ಮತ್ತು 2015-16ರಲ್ಲಿ 506 ಫಲಾನುಭವಿಗಳಿಗೆ ಹಾಗೂ 2016-17ರಲ್ಲಿ 322 ಫಲಾನುಭವಿಗಳಿಗೆ ಪ್ರಯೋಜನ ಕಲ್ಪಿಸಲಾಗಿದೆ.
ಅಂಚೆ ಇಲಾಖೆಯಿಂದ ರಾಜ್ಯ-ರಾಷ್ಟ್ರಮಟ್ಟದ ಪತ್ರ ಲೇಖನ ಸ್ಪರ್ಧೆ
*******************************************************
ಕಲಬುರಗಿ,ಜು.14.(ಕ.ವಾ.)-ಭಾರತೀಯ ಅಂಚೆ ಇಲಾಖೆಯು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪತ್ರಲೇಖನ ಸ್ಪರ್ಧೆಯನ್ನು ಏರ್ಪಡಿಸಲಿದೆ. ಪ್ರತಿಯೊಬ್ಬ ಭಾರತೀಯರು ಯಾವುದೇ ವಯೋಮಿತಿ ನಿರ್ಬಂಧವಿಲ್ಲದೆ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಕಲಬುರಗಿ ವಿಭಾಗದ ವರಿಷ್ಠ ಅಂಚೆ ಅಧೀಕ್ಷಕ ಎನ್. ಪ್ರಕಾಶ ತಿಳಿಸಿದ್ದಾರೆ.
“ಮಹಾಪುರುಷ (ಮಹಾತ್ಮ ಗಾಂಧೀಜಿ) ನೀವು ನಮ್ಮ ಸ್ಫೂರ್ತಿ” (ಈ ವಿಷಯ ಸಂತ ಕಬೀರರ “ಢಾಯಿ ಅಕ್ಷರ ಪ್ರೇಮ ರಾ” ಇವರಿಂದ ಆಧಾರಿತವಾಗಿದೆ) ಸ್ಪರ್ಧೆಯ ವಿಷಯವಾಗಿದೆ. ಸ್ಪರ್ಧೆಯ ಪತ್ರವನ್ನು ಇಂಗ್ಲೀಷ, ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಬರೆಯಬಹುದಾಗಿದೆ. ಪತ್ರ ಲೇಖನವು ಎ-4 ಸೈಜ್ ಪೇಪರಿನಲ್ಲಿ ಗರಿಷ್ಠ 1000 ಪದಗಳಿಗೆ ಮೀರದಂತೆ ಮತ್ತು ಇನ್‍ಲ್ಯಾಂಡ್ ಲೇಟರಿನಲ್ಲಿ 500 ಪದಗಳಿಗೆ ಮೀರದಂತೆ ಬರೆಯಬೇಕು. ಸ್ಪರ್ಧೆಯು 18 ವರ್ಷದ ವಯೋಮಿತಿ ಕೆಳಗಿನವರಿಗಾಗಿ ಮತ್ತು 18 ವರ್ಷ ವಯೋಮಿತಿ ಮೇಲ್ಪಟವರಿಗಾಗಿ ಎರಡು ವಿಭಾಗಗಳಲ್ಲಿ ನಡೆಯುತ್ತದೆ.
ರಾಜ್ಯಮಟ್ಟದಲ್ಲಿ ಪುರಸ್ಕøತಗೊಂಡ ಪತ್ರವನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ರಾಜ್ಯಮಟ್ಟದ ಪ್ರಥಮ ಬಹುಮಾನಕ್ಕೆ 25,000 ರೂ., ದ್ವಿತೀಯ ಬಹುಮಾನ 10,000ರೂ., ತೃತೀಯ ಬಹುಮಾನ 5,000ರೂ. ಹಾಗೂ ರಾಷ್ಟ್ರಮಟ್ಟದ ಪ್ರಥಮ ಬಹುಮಾನಕ್ಕೆ 50,000 ರೂ., ದ್ವಿತೀಯ ಬಹುಮಾನ 25,000 ರೂ. ಹಾಗೂ ತೃತೀಯ ಬಹುಮಾನ 10,000 ರೂ. ನೀಡಲಾಗುವುದು.
18 ವರ್ಷ ಕೆಳಗಿನವರು ಹಾಗೂ 18 ವರ್ಷ ಮೇಲ್ಪಟ್ಟನವರು ಎಂದು ಕಡ್ಡಾಯವಾಗಿ ನಮೂದಿಸಿ ಪತ್ರ ಲೇಖನ ಸ್ಪರ್ಧೆಯ ಪತ್ರವನ್ನು ಚೀಫ್ ಪೋಸ್ಟ್ ಮಾಸ್ಟರ್ ಸೆಂಟ್ರಲ್, ಕರ್ನಾಟಕ ಸರ್ಕಲ್, ಬೆಂಗಳೂರು ಕಚೇರಿಗೆ 2017ರ ಆಗಸ್ಟ್ 15ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದು ಅವರು ಕೋರಿದ್ದಾರೆ.
ಹೀಗಾಗಿ ಲೇಖನಗಳು news and photo date: 14--07-2017
ಎಲ್ಲಾ ಲೇಖನಗಳು ಆಗಿದೆ news and photo date: 14--07-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo date: 14--07-2017 ಲಿಂಕ್ ವಿಳಾಸ https://dekalungi.blogspot.com/2017/07/news-and-photo-date-14-07-2017.html
0 Response to "news and photo date: 14--07-2017"
ಕಾಮೆಂಟ್ ಪೋಸ್ಟ್ ಮಾಡಿ