NEWS AND PHOTO DATE: 12-7-2017

NEWS AND PHOTO DATE: 12-7-2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS AND PHOTO DATE: 12-7-2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS AND PHOTO DATE: 12-7-2017
ಲಿಂಕ್ : NEWS AND PHOTO DATE: 12-7-2017

ಓದಿ


NEWS AND PHOTO DATE: 12-7-2017

ಅಕ್ಟೋಬರ್ 2ರವರೆಗೆ
*******************
ಜಿಲ್ಲೆಯ 200 ಗ್ರಾಮಗಳನ್ನು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಘೋಷಿಸಲು ಯೋಜನೆ
**************************************************************************
ಕಲಬುರಗಿ,ಜು.12.(ಕ.ವಾ.)-“ಈಗ ಮನ್ಯಾಗ್ ಒಂದ ಸಂಡಾಸ್ ಇರೋದ್ರಿಂದ್ ಭಾಳ್ ಅನುಕೂಲ್ಯಾಗ್ಯಾದ. ಹುಳಾ-ಹುಪ್ಡಿ, ಕಳ್ಳ ಕಾಕರ ಭಯವಿಲ್ಲ. ದೂರ ಹೋಗುವ ಸಮಸ್ಯೆ ದೂರಾಗ್ಯಾದ. ಇದೊಂದು ಒಳ್ಳೆ ಕಾರ್ಯಕ್ರಮ. ಒಮ್ಮೊಮ್ಮೆ ರಾತ್ರಿ ಹೊತ್ನಾಗ ಸಂಡಾಸ್ ಬರತೈತಿ, ರಾತ್ರಿ ಹೊರ್ಗ್ ಹೋಗ್ಲಾಕ್ ಅಂಜ್ಕಿ ಆಗತೈತ್ರೀ. ಹಗಲಿನಾಗಂತೂ ಊರ ಹೊರಗ ಹೋಗಬೇಕ್ರೀ. ಹೊಟ್ಲಿದ್ದಾಗ ಹೊಲಸ್ನಾಗ ತಿರಗಾಡಬಾರದ್ರೀ. ಇದರ್ ತೊಂದರಿ ಇರಾದಿಲ್ರೀ” ಎಂದು ಗರ್ಭಿಣಿ ಮಹಿಳೆಯರಾದ ಮಹಾದೇವಿ, ಸಂಗೀತಾ ಮತ್ತು ನಿರ್ಮಲಾ ಅಭಿಪ್ರಾಯಪಟ್ಟರು.
ಅವರು ಬುಧವಾರ ಕಲಬುರಗಿ ತಾಲೂಕಿನ ಆಲಗುಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇರೂರ ಗ್ರಾಮದಲ್ಲಿ ಏರ್ಪಡಿಸಲಾದ 2017-18ನೇ ಸಾಲಿನ ಕೂಸು ಸೀಮಂತ ಕಾರ್ಯಕ್ರಮದಲ್ಲಿ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, ಕಲಬುರಗಿ ಜಿಲ್ಲೆಯಲ್ಲಿ 2017ರ ಮೇ 13ರಂದು ಗರ್ಭಿಣಿಯರ ಆರೋಗ್ಯದ ಹಿತದೃಷ್ಟಿಯಿಂದ ಸ್ವಚ್ಛ ಭಾರತ ಮಿಷನ್ ಅಡಿ ಕೂಸು ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಈ ಕಾರ್ಯಕ್ರಮದಡಿ ಕಲಬುರಗಿ ಜಿಲ್ಲೆಯಲ್ಲಿ 10000 ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಈಗಾಗಲೇ 11000 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ಕಾರ್ಯಕ್ರಮದ ಅನುಷ್ಠಾನದಲ್ಲಿ ಕಲಬುರಗಿ ತಾಲೂಕು ಜಿಲ್ಲೆಯಲ್ಲಿಯೇ ಮೊದಲನೇ ಸ್ಥಾನದಲ್ಲಿದೆ. ಈ ಕಾರ್ಯಕ್ರಮ ಇಡೀ ದೇಶದಲ್ಲೇ ಮೊದಲನೇ ಹಾಗೂ ವಿನೂತನವಾಗಿದೆ. ಗರ್ಭಿಣಿಯರ ಮನೆಗಳಲ್ಲಿ ಶೌಚಾಲಯ ನಿರ್ಮಿಸಿ ಗರ್ಭಿಣಿಗೆ ಅನುಕೂಲ ಮಾಡಿಕೊಟ್ಟಲ್ಲಿ ಅಂಥ ಗರ್ಭಿಣಿಯರಿಗೆ ಗ್ರಾಮ ಪಂಚಾಯಿತಿಯಿಂದ ಸೀಮಂತ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಬರುವ ಅಕ್ಟೋಬರ್ 2ರವರೆಗೆ ಕಲಬುರಗಿ ಜಿಲ್ಲೆಯ 200 ಗ್ರಾಮಗಳನ್ನು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಘೋಷಿಸಲು ಯೋಜಿಸಲಾಗಿದೆ. ಜಿಲ್ಲೆಯ ಎಲ್ಲ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ 6ರಿಂದ ಪಿಯುಸಿ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಮನೆಗಳಲ್ಲಿಯೂ ಶೌಚಾಲಯ ನಿರ್ಮಿಸುವ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಪ್ರತಿಯೊಬ್ಬರೂ ಮಹಿಳೆಯರನ್ನು ಗೌರವಿಸುವುದರೊಂದಿಗೆ ಅವರನ್ನು ಮುಖ್ಯ ವಾಹಿನಿಗೆ ತರಲು ಸಹಕರಿಸಬೇಕೆಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಹಿಳೆಯರ ಗೌರವವಿದ್ದಲ್ಲಿ ದೇಶದ ಭವಿಷ್ಯವಿದೆ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಗೀತಾ ಸುಧಾಕರ ಅಧ್ಯಕ್ಷತೆಹಿಸಿದ್ದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಶಿವರಾಜ ಸಜ್ಜನ್, ಸದಸ್ಯರಾದ ರಶೀದ್ ಪಟೇಲ್ ಹಾಗೂ ಪಾರ್ವತಿ ಸಲಗರ, ಬಿ.ಕೆ.ಡಿ.ಬಿ. ಸದಸ್ಯ ವೈಜನಾಥ ತಡಕಲ್, ಓಕಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ, ಉಪ ಕಾರ್ಯದರ್ಶಿ ಸಂಪತ್‍ಕುಮಾರ ಪಾಟೀಲ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣಾ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಾನಪ್ಪ ಕಟ್ಟಿಮನಿ, ಸಹಾಯಕ ಇಂಜಿನಿಯರ್ ಸಿದ್ರಾಮಪ್ಪ ದಂಡಗೂರು, ಸ್ವಚ್ಛ ಭಾರತ ಅಭಿಯಾನದ ರಾಜ್ಯ ಸಮನ್ವಯಾಧಿಕಾರಿ ಅನ್ನಪೂರ್ಣ ಉಪ್ಪಿನ, ಜಿಲ್ಲಾ ಸಮನ್ವಯಾಧಿಕಾರಿ ಅನ್ನಪೂರ್ಣ ಗುರುಬಾಯಿ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕಲಬುರಗಿ ಹಾಗೂ ಗ್ರಾಮ ಪಂಚಾಯಿತಿ ಆಲಗೂಡ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಕಾಂತ ಜೇವಣಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಬರುವ ಆಗಸ್ಟ್ 15ರೊಳಗೆ ಕಲಬುರಗಿ ತಾಲೂಕಿನ 41 ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಘೋಷಿಸಲಾಗುವುದು. ಕೇರೂರು ಗ್ರಾಮದಲ್ಲಿರುವ 165 ಕುಟುಂಬಗಳ ಪೈಕಿ ಈಗಾಗಲೇ 125 ಕುಟುಂಬಗಳು ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದು, ಬರುವ ಆಗಸ್ಟ್ 15ರೊಳಗೆ ಉಳಿದ 40 ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಕೇರೂರು ಗ್ರಾಮವನ್ನು ಸಹ ಬಯಲು ಬಹಿರ್ದೆಸೆ ಮುಕ್ತ ಗ್ರಾಮವೆಂದು ಘೋಷಿಸಲಾಗುವುದು ಎಂದು ಹೇಳಿದರು.




ಹೀಗಾಗಿ ಲೇಖನಗಳು NEWS AND PHOTO DATE: 12-7-2017

ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 12-7-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 12-7-2017 ಲಿಂಕ್ ವಿಳಾಸ https://dekalungi.blogspot.com/2017/07/news-and-photo-date-12-7-2017.html

Subscribe to receive free email updates:

0 Response to "NEWS AND PHOTO DATE: 12-7-2017"

ಕಾಮೆಂಟ್‌‌ ಪೋಸ್ಟ್‌ ಮಾಡಿ